Health Tips: ನಿಮ್ಮ ಒತ್ತಡ ನಿವಾರಣೆಗೆ ಆಯುರ್ವೇದದಲ್ಲಿದೆ ಉಪಾಯ

Ayurveda Herbs: ನಮ್ಮ ದಿನನಿತ್ಯದ ಒತ್ತಡವನ್ನು ನಿವಾರಣೆ ಮಾಡಲು ನಾವು ಹಲವು ಉಪಾಯಗಳನ್ನು ಯೋಚನೆ ಮಾಡುತ್ತೇವೆ. ಆದರೆ ನಮ್ಮ ಆಯುರ್ವೇದದಲ್ಲಿನ ಹಲವಾರು ಮೂಲಿಕೆಗಳು ನಮ್ಮ ಒತ್ತಡ ನಿವಾರಣೆಗೆ ಪರಿಹಾರ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿರುವುದರಿಂದ ಹಿಡಿದು ಹೆಚ್ಚಿನ ಕೆಲಸದ ಒತ್ತಡಗಳ ಜೊತೆಗೆ ಆರೋಗ್ಯಕರ ಜೀವನವನ್ನು ನಡೆಸುವುದು ಸವಾಲಾಗಿ ಪರಿಣಮಿಸುತ್ತದೆ. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಕುಟುಂಬದವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಸ್ನೇಹಿತರ ಜೊತೆ ಸುತ್ತಾಡಲು ಸಾಧ್ಯವಾಗುತ್ತಿಲ್ಲ. ಈ ಕೊರೊನಾ ಪ್ರತಿಯೊಬ್ಬರ ಜೀವನದ ಮೇಲೂ ಹೆಚ್ಚು ಪರಿಣಾಮ ಬೀರಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು. ಕೆಲಸದಲ್ಲಿನ ಒತ್ತಡ ಹೆಚ್ಚಾಗಿದ್ದು, ಯಾವುದೂ ನಿಯಂತ್ರಣಕ್ಕೆ ಸಿಗದಂತೆ ಆಗಿದೆ. ಆದರೆ ನಮ್ಮ ನಮ್ಮ ಒತ್ತಡವನ್ನು ಹೇಗೆ ನಿಭಾಯಿಸುವುದು ಎಂಬುದನ್ನ ನಾವು ಅರಿತುಕೊಳ್ಳುವುದು ಬಹಳ ಮುಖ್ಯ.

ಒತ್ತಡವನ್ನು ಹೇಗೆ ನಿವಾರಿಸುವುದು ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಆಯುರ್ವೇದದಲ್ಲಿ ಉತ್ತರವಿದೆ. ಆಯುರ್ವೇದ ಗಿಡಮೂಲಿಕೆಗಳು ಎಲ್ಲ ರೋಗಗಳನ್ನು ಗುಣಪಡಿಸಲು ಹೆಸರುವಾಸಿಯಾಗಿದ್ದು ಅದು ಒತ್ತಡ ಮತ್ತು ಆತಂಕವನ್ನು ದೂರಮಾಡುವುದಲ್ಲದೆ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಒತ್ತಡ ಮತ್ತು ಆತಂಕವನ್ನು ನಿವಾರಿಸಲು, ನಿಮ್ಮ ಮನಸ್ಸನ್ನು ಆರಾಮಗೊಳಿಸಲು ಮತ್ತು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುವ ಕೆಲವು ಆಯುರ್ವೇದ ಗಿಡಮೂಲಿಕೆಗಳು ಇಲ್ಲಿವೆ.

ಬ್ರಾಹ್ಮಿ ಎಲೆ

3000 ವರ್ಷಗಳಿಂದಲೂ ವೈದ್ಯರು ಬಳಸುತ್ತಿರುವ ಪುರಾತನ ಮೂಲಿಕೆಯಾದ ಬ್ರಾಹ್ಮಿ ಎಲೆಯಲ್ಲಿನ ಸಾರಗಳು ಒತ್ತಡವನ್ನು ಎದುರಿಸಲು ಮತ್ತು ನೆನಪಿನ ಶಕ್ತಿಯುನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಈ ಮೂಲಿಕೆಯ ನಿಯಮಿತ ಬಳಕೆಯು ಒತ್ತಡ ಮತ್ತು ಆತಂಕವನ್ನು ಪರಿಣಾಮಕಾರಿಯಾಗಿ ದೂರವಿರಿಸುತ್ತದೆ. ಅಲ್ಲದೇ ಈ ಎಲೆಯ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದು ಸಹ ಒತ್ತಡ ನಿವಾರಣೆಗೆ ಇನ್ನೊಂದು ಉಪಾಯ.

ಅಶ್ವಗಂಧ

ಅತ್ಯಂತ ಹೆಚ್ಚು ಪೋಷಕಾಂಶಗಳಿರುವ ಮೂಲಿಕೆ ಅಶ್ವಗಂದ. ಇದು ಸಹ ನೆನಪಿನ ಶಕ್ತಿಯನ್ನು  ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು  ಮಟ್ಟವನ್ನು ನಿಯಂತ್ರಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುವ ಮೂಲಕ ಆತಂಕ ಮತ್ತು ಒತ್ತಡವನ್ನು ತಡೆಯುತ್ತದೆ. ಅಶ್ವಗಂಧವು ನಿದ್ರೆಯನ್ನು ಸಹ ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದನ್ನು ಮಾತ್ರೆಗಳಂತೆ, ಹಾಲು ಅಥವಾ ಬೆಚ್ಚಗಿನ ನೀರಿನ ಜೊತೆ ಪುಡಿ ಅಥವಾ ಕ್ಯಾಪ್ಸೂಲ್ ರೂಪದಲ್ಲಿ ಸೇವಿಸಬಹುದು. ಅಶ್ವಗಂಧವನ್ನು ಚಹಾದಂತೆ ಜೇನುತುಪ್ಪದ ಚಹಾದೊಂದಿಗೆ ಸಹ  ಸೇವಿಸಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಈ ಫೇಸ್ ಪ್ಯಾಕ್​ಗಳು ಉತ್ತಮ ಪರಿಹಾರ

ವಾಚಾ

ವಾಚಾ ಮೂಲಿಕೆಯ  ಸಾರಗಳು ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಇದು ಒತ್ತಡವನ್ನು ಶಾಂತಗೊಳಿಸುವ ಗುಣವನ್ನು ಹೊಂದಿರುವ ವಿಶೇಷ ಮೂಲಿಕೆ ಎಂದು ಹೇಳಲಾಗುತ್ತದೆ. ಒಳ್ಳೆಯ ಸಾರಗಳನ್ನು ಹೊಂದಿರುವ ಈ ಮೂಲಿಕೆ ನಿದ್ರೆಯ ಸಮಸ್ಯೆಯನ್ನು ನಿವಾರಿಸಿ ಒಳ್ಳೆಯ ನಿದ್ರೆ ಬರಲು ಕಾರಣವಾಗುತ್ತದೆ ಮತ್ತು ಆತಂಕವನ್ನು ಸಹ ನಿವಾರಣೆ ಮಾಡುತ್ತದೆ.

ಇದರ ಪುಡಿಯನ್ನು ಊಟದ ನಂತರ ನೀರಿನಲ್ಲಿ ಬೆರೆಸಿ ಸೇವಿಸಬಹುದು. ಒತ್ತಡವನ್ನು ದೂರ ಮಾಡಲು ವಾಚಾ ಪುಡಿಗೆ ನೀರನ್ನು ಬೆರೆಸಿ ಪೇಸ್ಟ್ ಮಾಡಿ,  ನಿಮ್ಮ ಹಣೆಯ ಮೇಲೆ ಕೂಡ ಹಚ್ಚಿದರೂ ಸಹ ಒಳ್ಳೆಯ ಪರಿಣಾಮ ನೀಡುತ್ತದೆ.



ಭೃಂಗರಾಜ್

ಚಹಾದ ಹಾಗೆ  ಸೇವಿಸಬಹುದಾದ ಅತ್ಯುತ್ತಮ ಮೂಲಿಕೆ ಈ  ಭೃಂಗರಾಜ್. ಇದು  ದೇಹದಲ್ಲಿರುವ ವಿಷವನ್ನು ಹೊರ ಹಾಕುವುದರ ಜೊತೆಗೆ ಆಮ್ಲಜನಕ ಪೂರೈಕೆಗೆ ಸಹಾಯ ಮಾಡುತ್ತದೆ. ಇದು ಮೆದುಳಿಗೆ ಆಮ್ಲಜನಕ ಪೂರೈಕೆಯ ಮೂಲಕ ಚೈತನ್ಯ ನೀಡುತ್ತದೆ.  ಜೊತೆಗೆ ಮೆದುಳಿಗೆ  ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು  ಆತಂಕವನ್ನು ಶಾಂತಗೊಳಿಸುವಲ್ಲಿ  ಪ್ರಮುಖ ಪಾತ್ರವಹಿಸುತ್ತದೆ. ಭೃಂಗರಾಜ್ ಎಣ್ಣೆಯು ಕೂದಲು ಉದುರುವುದು, ತಲೆಹೊಟ್ಟು, ಒಣ ನೆತ್ತಿ ಮತ್ತು ಬೂದು ಕೂದಲಿನ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ ಮತ್ತು ಕೂದಲ ಹೊಳಪು ಹೆಚ್ಚಿಸಿ ಆರೋಗ್ಯಕರವಾಗಿಸುತ್ತದೆ.
Published by:Sandhya M
First published: