Weight Loss Juice: ವೇಗವಾಗಿ ತೂಕ ಇಳಿಕೆಗೆ ಆಯುರ್ವೇದ ಗಿಡಮೂಲಿಕೆಗಳ ಸ್ಲಿಮ್ ಜ್ಯೂಸ್

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಿದ ಸ್ಲಿಮ್ ಜ್ಯೂಸ್ ನ್ನು ಕಪಿವಾ ಅಕಾಡೆಮಿ ಆಫ್ ಆಯುರ್ವೇದ ಪರಿಚಯಿಸಿದೆ. ಇದು ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಸಮಗ್ರ ಮತ್ತು ಆರೋಗ್ಯಕರ ರೀತಿಯಲ್ಲಿ ತೂಕವನ್ನು ನಿರ್ವಹಿಸಲು ಸಹಕಾರಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಪಿವಾ ಅಕಾಡೆಮಿ ಆಫ್ ಆಯುರ್ವೇದ (Kapiva Academy of Ayurveda), ಸಂಶೋಧನೆ (Research) ಮತ್ತು ವಿಜ್ಞಾನ-ಚಾಲಿತ ಸಂಸ್ಥೆ, ಜೀವನಶೈಲಿಯ (Lifestyle) ಸಮಸ್ಯೆ (Problem) ನಿವಾರಣೆಗೆ ಯತ್ನಿಸುತ್ತಿದೆ. ಹೆಚ್ಚುತ್ತಿರುವ ತೂಕ ಇಳಿಕೆ ಮತ್ತು ತೂಕ ನಿಯಂತ್ರಣ ಇದು ಗ್ರಾಹಕರ ಜೀವನದ ಪ್ರಮುಖ ಸಮಸ್ಯೆಯಾಗಿ ಇಂದಿನ ದಿನಗಳಲ್ಲಿ ಮಾರ್ಪಾಡಾಗುತ್ತಿದೆ. ಹೆಚ್ಚುತ್ತಿರುವ ತೂಕ ಇಳಿಸಲು ಹಲವರು ಹಲವು ರೀತಿಯ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಆಯುರ್ವೇದವು ತೂಕ ಇಳಿಕೆಗೆ ಹಲವು ಮಾರ್ಗ ತೋರಿಸಿಕೊಟ್ಟಿದೆ. ಆಯುರ್ವೇದ ನಿಧಾನ ಮತ್ತು ದೀರ್ಘ ಕಾಲದ ಚಿಕಿತ್ಸೆ ಆಗಿದೆ. ಇದು ತೂಕವನ್ನು ನಿಯಂತ್ರಿಸುವ ಪರಿಣಾಮಕಾರಿ ಮತ್ತು ಸಮರ್ಥನೀಯ ಮಾರ್ಗ ಎಂದು ಹಲವರು ನಂಬುತ್ತಾರೆ.

    ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಿದ ಸ್ಲಿಮ್ ಜ್ಯೂಸ್

    ಕ್ರ್ಯಾಶ್ ಡಯಟ್‌ ಅನುಸರಿಸುವ 10 ಜನರಲ್ಲಿ 8 ಜನರು ಒಂದು ತಿಂಗಳಲ್ಲಿ ಮತ್ತೆ ತೂಕ ಹೆಚ್ಚಾಗುತ್ತದೆ ಈ ಬಗ್ಗೆ ಅಧ್ಯಯನಗಳು ಹೇಳಿವೆ. ಆದರೆ ನಿಮ್ಮ ತೂಕ ನಿರ್ವಹಣೆ ಗುರಿ ಪೂರೈಸಲು ಆಹಾರ ಮತ್ತು ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ.

    ಹಾಗಾಗಿ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಿದ ಸ್ಲಿಮ್ ಜ್ಯೂಸ್ ನ್ನು ಕಪಿವಾ ಅಕಾಡೆಮಿ ಆಫ್ ಆಯುರ್ವೇದ ಪರಿಚಯಿಸಿದೆ. ಇದು ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಸಮಗ್ರ ಮತ್ತು ಆರೋಗ್ಯಕರ ರೀತಿಯಲ್ಲಿ ತೂಕವನ್ನು ನಿರ್ವಹಿಸಲು ಸಹಕಾರಿ ಆಗಿದೆ.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ಅಮೇರಿಕನ್ ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಶಿಯನ್ಸ್ ಹೇಳುವ ಪ್ರಕಾರ, ಕ್ರ್ಯಾಶ್ ಆಹಾರ ಸಾಮಾನ್ಯವಾಗಿ ತ್ವರಿತ ತೂಕ ನಷ್ಟಕ್ಕೆ ಭರವಸೆ ನೀಡುತ್ತವೆ. ಈ ಆಹಾರಗಳು ನೀವು ತಿನ್ನುವ ವಿಧಾನವನ್ನು ತೀವ್ರವಾಗಿ ಬದಲಾಯಿಸುತ್ತವೆ ಎನ್ನುತ್ತಾರೆ.

    ನಿಮ್ಮ ಆಹಾರ ಕ್ರಮದ ಬಗ್ಗೆ ಗಮನಹರಿಸಿ

    ತೂಕ ನಷ್ಟಕ್ಕೆ ಆಯುರ್ವೇದ ಪ್ರಯೋಜನಕಾರಿ. ಇದು 5000 ವರ್ಷಗಳಷ್ಟು ಹಳೆಯ ವೈದ್ಯಕೀಯ ವಿಜ್ಞಾನ. ತೂಕ ನಷ್ಟಕ್ಕೆ ಆಮ್ಲ, ಗೋಖ್ರು, ದಾರು ಹರಿದಾ, ಗಿಲೋಯ್, ಬಾಚ್, ಕುತ್, ವಿದಂಗ, ಹರದ್, ಗುಡ್ಮಾರ್, ಹಲ್ದಿ, ಕುಟ್ಕಿ, ಚಿತ್ರಕಾಮುಲ ಮುಂತಾದ ಪದಾರ್ಥಗಳನ್ನು ಒಳಗೊಂಡಿದೆ. ಅವುಗಳ ಸಂಯೋಜನೆಯು ಪರಿಣಾಮವನ್ನು ದೀರ್ಘ ಕಾಲದವರೆಗೆ ಮಾಡುತ್ತದೆ. ಕಪಿವಾ ಗೆಟ್ ಸ್ಲಿಮ್ ಜ್ಯೂಸ್ ಈ ಪದಾರ್ಥಗಳ ಪ್ರಬಲ ಸಂಯೋಜನೆಯಾಗಿದೆ.

    ಕಪಿವಾ ಗೆಟ್ ಸ್ಲಿಮ್ ಜ್ಯೂಸ್ ಎಂದರೇನು?

    ಕಪಿವಾ ಗೆಟ್ ಸ್ಲಿಮ್ ಜ್ಯೂಸ್ ತೂಕ ನಷ್ಟಕ್ಕೆ ವಿನ್ಯಾಸಗೊಳಿಸಲಾದ ಆಯುರ್ವೇದ ರಸ. ಈ ರಸವು 12 ಶಕ್ತಿಯುತ ಪದಾರ್ಥಗಳ ಸರಿಯಾದ ಸಂಯೋಜನೆ. ಸ್ಲಿಮ್ ಜ್ಯೂಸ್ ರಸದ ಕೆಲವು ಪ್ರಯೋಜನಗಳು ಹೀಗಿವೆ.

    ಇದು ನೈಸರ್ಗಿಕ ನಿರ್ವಿಶೀಕರಣ

    ಇದು ಕೊಬ್ಬಿನ ಶೇಖರಣೆ ತಡೆಯುತ್ತದೆ

    ಇದು ಚಯಾಪಚಯ ಹೆಚ್ಚಿಸುತ್ತದೆ

    ಇದು ಹಸಿವು ನಿಯಂತ್ರಿಸುತ್ತದೆ

    ಇದು ಜೀರ್ಣಕ್ರಿಯೆ ಪ್ರಕ್ರಿಯೆ ಸುಗಮಗೊಳಿಸುತ್ತದೆ

    ಇದು ಉರಿಯೂತ ಕಡಿಮೆ ಮಾಡುತ್ತದೆ

    ಆಯುರ್ವೇದ ಕಪಿವಾ ಅಕಾಡೆಮಿ ಆಯುರ್ವೇದಾಚಾರ್ಯ ಡಾ. ಕಲ್ಪನಾ ಡೋಂಗ್ರೆ ಪ್ರಕಾರ, ಸ್ಲಿಮ್ ಜ್ಯೂಸ್ ದೇಹದಿಂದ ಸಮಗ್ರ ರೀತಿಯಲ್ಲಿ ತೂಕವನ್ನು ಕಡಿಮೆ ಮಾಡುತ್ತದೆ. ಇದು ನೈಸರ್ಗಿಕ ಪದಾರ್ಥ. ಯಾವುದೇ ಅಡ್ಡಪರಿಣಾಮ ಇಲ್ಲ. ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದ  ಕ್ಯಾಲೊರಿ ವೇಗವಾಗಿ ಸುಡುತ್ತದೆ.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    ಆಯುರ್ವೇದ ಗಿಡಮೂಲಿಕೆಗಳ ಸಂಯೋಜನೆ, ವಿಶೇಷವಾಗಿ ತೊಡೆ ಮತ್ತು ಹೊಟ್ಟೆಯ ಸುತ್ತಲ ಕೊಬ್ಬಿನ ಶೇಖರಣೆ ತಡೆಯುತ್ತದೆ. ದೇಹದಿಂದ ಕಲ್ಮಶ ತೆಗೆದು ಹಾಕುವ ಮೂಲಕ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನವಶ್ಯಕ ಹಸಿವನ್ನು ನಿಯಂತ್ರಿಸುತ್ತದೆ. ಜಂಕ್ ಕಡುಬಯಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
    Published by:renukadariyannavar
    First published: