• Home
  • »
  • News
  • »
  • lifestyle
  • »
  • Heart Health: ನಿಮ್ಮ ಹೃದಯ ಸೇಫ್ ಆಗಿರ್ಬೇಕು ಅಂದ್ರೆ ಈ ಆಯುರ್ವೇದ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

Heart Health: ನಿಮ್ಮ ಹೃದಯ ಸೇಫ್ ಆಗಿರ್ಬೇಕು ಅಂದ್ರೆ ಈ ಆಯುರ್ವೇದ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ayurvedic Habits For Heart: ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಚೆನ್ನಾಗಿ ನಿದ್ರೆ ಮಾಡುವುದು ಸಹ ತುಂಬಾನೇ ನಿರ್ಣಾಯಕ ಅಂಶವಾಗಿದೆ. ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ಉತ್ತಮ ನಿದ್ರೆಯನ್ನು ಮಾಡಬೇಕು.

  • Share this:

ಈಗಂತೂ ಈ ಹೃದ್ರೋಗ ಸಮಸ್ಯೆಗಳಿಂದಾಗಿ (Heart Problem) ಅನೇಕರು ಹಠಾತ್ತನೆ ಸಾವನ್ನಪ್ಪುತ್ತಿದ್ದು, ಈ ವಯಸ್ಸಿನವರಿಗೆ ಈ ಹೃದ್ರೋಗಗಳು ಕಾಡಬಹುದು ಅಂತ ಊಹಿಸುವುದಕ್ಕೂ ಸಹ ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ಹೃದ್ರೋಗ ಸಮಸ್ಯೆಗಳು ಮನುಷ್ಯನನ್ನು ಕಾಡುತ್ತಿವೆ ಅಂತ ಹೇಳಬಹುದು. ಹೃದಯ ಬಡಿತ ಕೆಲವೊಮ್ಮೆ ಜಾಸ್ತಿಯಾದರೂ ಸಹ ನಮ್ಮ ಆರೋಗ್ಯದ (Health Care) ಮೇಲೆ ಭೀಕರ ಪರಿಣಾಮಗಳನ್ನು ಬೀರಬಹುದು, ಆದ್ದರಿಂದ, ಹೃದಯದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಆಯುರ್ವೇದ (Ayurveda)  ತಜ್ಞರ ಪ್ರಕಾರ, ನಿಮ್ಮ ಹೃದಯವು ಅಪಾಯಕ್ಕೆ ಸಿಲುಕಬಹುದಾದ ಯಾವುದೇ ರೀತಿಯ ತೊಡಕುಗಳನ್ನು ತಡೆಗಟ್ಟಲು ಸಹಾಯ ಮಾಡುವ ಕೆಲವು ಅಭ್ಯಾಸಗಳು ಇಲ್ಲಿವೆ ನೋಡಿ.


ಆಯುರ್ವೇದದ ಪ್ರಕಾರ, ಯಾವುದೇ ಕಾಯಿಲೆಗೆ ಮುಖ್ಯ ಕಾರಣವೆಂದರೆ 'ಇಚ್ಚೆಯಂತೆ ತಿನ್ನುವುದು', ಇದು ನಾವೆಲ್ಲರೂ ಆಗಾಗ್ಗೆ ಮಾಡುತ್ತಲೇ ಇರುತ್ತೇವೆ. ಹೆಚ್ಚಿನ ಕೊಲೆಸ್ಟ್ರಾಲ್ ಆಹಾರಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ, ಏಕೆಂದರೆ ಇದು ಚಯಾಪಚಯ ಕ್ರಿಯೆಯನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


ತಜ್ಞರು ಹೇಳುವುದೇನು ಗೊತ್ತೇ?


ಕಪಿವಾದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಡಾ.ಕೃತಿ ಸೋನಿ ಅವರು ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ "ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರದ ಆಯ್ಕೆಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ, ಆದಾಗ್ಯೂ, ಜೀವನಶೈಲಿಯಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡುವ ಮೂಲಕ ಇದೆಲ್ಲವನ್ನೂ ತಪ್ಪಿಸಬಹುದು. ಈ ಅಭ್ಯಾಸಗಳು ಎಲ್ಲಾ ಹೃದಯದ ಕಾಯಿಲೆಗಳು ಮತ್ತು ಅದರೊಂದಿಗೆ ಬರುವ ಸಂಭಾವ್ಯ ಅಪಾಯಗಳಿಂದ ನಿಮ್ಮನ್ನು ದೂರವಿರಿಸುತ್ತದೆ" ಎಂದು ಹೇಳಿದರು.


ನೀವು ಎಂದಾದರೂ ನಿಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರೆ ಮತ್ತು ನಿಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಲು ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಲು ನೋಡುತ್ತಿದ್ದರೆ, ಡಾ. ಕೃತಿ ಸೋನಿ ನಿಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳ ಪಟ್ಟಿಯನ್ನು ಇಲ್ಲಿ ನೀಡಿದ್ದಾರೆ ನೋಡಿ.
1. ಆಯುರ್ವೇದ ಗಿಡಮೂಲಿಕೆಗಳನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ


ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಆಯುರ್ವೇದ ಗಿಡಮೂಲಿಕೆಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಮನೆಯಲ್ಲಿಯೇ ಸಿಗುವಂತಹ ಅರಿಶಿನ, ನೆಲ್ಲಿಕಾಯಿ ಮತ್ತು ಮೆಂತ್ಯ ಬೀಜಗಳಂತಹ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.


ನಿಶಾ ಅಮಲ್ಕಿಯನ್ನು ಹೆಚ್ಚಿನ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯುತ್ತಮ ಆಯುರ್ವೇದ ಸೂತ್ರೀಕರಣ ಎಂದು ಕರೆಯಲಾಗುತ್ತದೆ. ಈ ಮ್ಯಾಜಿಕ್ ಕಷಾಯವನ್ನು ನೆಲ್ಲಿಕಾಯಿ ಪುಡಿ ಮತ್ತು ಅರಿಶಿನ ಪುಡಿಯ ಸಮಾನ ಭಾಗಗಳೊಂದಿಗೆ ತಯಾರಿಸಲಾಗುತ್ತದೆ.


ಇದನ್ನು ಪ್ರತಿದಿನ ಸೇವಿಸಿದರೆ ತುಂಬಾನೇ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ, ಜಾಮೂನ್ ಮತ್ತು ಕರೇಲಾದ ಮಿಶ್ರಣದಿಂದ ತಯಾರಿಸಿದ ರಸಗಳು ಹೃದಯದ ಸಮಸ್ಯೆಗಳ ಅಪಾಯದಲ್ಲಿರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಇವುಗಳು ಮಾರುಕಟ್ಟೆಯಲ್ಲಿ ಸಹ ಸುಲಭವಾಗಿ ಲಭ್ಯವಿರುತ್ತವೆ.


2. ನಿಯಮಿತವಾಗಿ ವ್ಯಾಯಾಮ ಮಾಡಿ, ಫಿಟ್ ಆಗಿರಿ


ಯಾವುದೇ ರೋಗವನ್ನು ತಡೆಗಟ್ಟುವ ವಿಷಯಕ್ಕೆ ಬಂದಾಗ ವ್ಯಾಯಾಮ ಮಾಡುವುದು ತುಂಬಾನೇ ಸಹಾಯವಾಗುತ್ತದೆ ಅಂತ ಹೇಳಬಹುದು. ಪ್ರತಿದಿನ ವ್ಯಾಯಾಮ ಮಾಡುವುದು ಒಟ್ಟಾರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಅಂತಾನೆ ಹೇಳಬಹುದು.


ಇದನ್ನೂ ಓದಿ: ಈರುಳ್ಳಿ ಸಿಪ್ಪೆ ಬಿಸಾಡದೇ ಈ ರೀತಿ ಬಳಸಿದ್ರೆ ಕೊಲೆಸ್ಟ್ರಾಲ್​ ಕಡಿಮೆಯಾಗುತ್ತದೆ


ಅಷ್ಟೇ ಅಲ್ಲದೆ, ವ್ಯಾಯಾಮ ಹೃದಯ ಮತ್ತು ದೇಹವನ್ನು ಸಂತೋಷವಾಗಿರಿಸುತ್ತದೆ. ಜಿಮ್, ಯೋಗ ಅಥವಾ ಪ್ರಾಣಾಯಾಮ ಯಾವುದೇ ರೀತಿಯ ವ್ಯಾಯಾಮವು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಮತ್ತು ಮೇದೋಜ್ಜೀರಕ ಗ್ರಂಥಿಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


3. ಬಿಳಿ ಸಕ್ಕರೆಯನ್ನು ಬಳಸಬೇಡಿ ಮತ್ತು ನೈಸರ್ಗಿಕ ಸಕ್ಕರೆಗಳನ್ನು ಬಳಸಿ


ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಬಳಸುವ ಬಿಳಿ ಸಕ್ಕರೆಯು ಯಾವುದೇ ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ ಮತ್ತು ಅದು ಕೇವಲ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ನೀವು ಪ್ರತಿದಿನ ತಿಂದರೂ ಸಹ ಆರೋಗ್ಯಕ್ಕೆ ಏನು ಒಳ್ಳೆಯದಾಗುವುದಿಲ್ಲ. ಹಣ್ಣುಗಳು, ಬೆಲ್ಲ ಅಥವಾ ಜೇನುತುಪ್ಪದಂತ ನೈಸರ್ಗಿಕ ಸಕ್ಕರೆಯನ್ನು ಸೇವಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ.


ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಮತ್ತು ಶತಾವರಿ, ಆರ್ಟಿಚೋಕ್, ಆವಕಾಡೊ, ಬ್ರೊಕೋಲಿ, ಎಲೆಕೋಸು ಮತ್ತು ಹೂಕೋಸಿನಂತಹ ಕಡಿಮೆ ಗ್ಲೈಸೆಮಿಕ್ ಲೋಡ್ ಗಳಿರುವ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯನ್ನು ಹೆಚ್ಚಿಸುವುದು ಒಳ್ಳೆಯದು.


4. ಬೇಗನೆ ಊಟ ಮಾಡಿ ಉತ್ತಮ ನಿದ್ರೆ ಮಾಡುವುದು


ಸರಿಯಾದ ಜೀವನಶೈಲಿ ಎಂದರೆ ಅದರಲ್ಲಿ ವ್ಯಾಯಾಮ, ನಾವು ಸೇವಿಸುವ ಆಹಾರ ಮತ್ತು ನಾವು ರೂಢಿಸಿಕೊಂಡ ಒಳ್ಳೆಯ ಅಭ್ಯಾಸಗಳ ಒಟ್ಟಾರೆ ಒಂದು ಮಿಶ್ರಣವೆ ಜೀವನಶೈಲಿ ಅಂತ ಹೇಳಬಹುದು.


ಈ ಜೀವನಶೈಲಿ ಎಂಬುದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಎಲ್ಲಾ ಊಟಗಳ ನಡುವೆ ಸರಿಯಾದ ಅಂತರವಿರಬೇಕು. ನಿಮ್ಮ ಎಲ್ಲಾ ಊಟಗಳ ನಡುವೆ ಮೂರು-ನಾಲ್ಕು ಗಂಟೆಗಳ ಅಂತರವನ್ನು ಇರಿಸಲು ಶಿಫಾರಸು ಮಾಡಲಾಗಿದೆ.


ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಚೆನ್ನಾಗಿ ನಿದ್ರೆ ಮಾಡುವುದು ಸಹ ತುಂಬಾನೇ ನಿರ್ಣಾಯಕ ಅಂಶವಾಗಿದೆ. ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ಉತ್ತಮ ನಿದ್ರೆಯನ್ನು ಮಾಡಬೇಕು. ಇದು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ, ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿರ್ವಹಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಹಾರ್ಮೋನುಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಸಾಬೀತಾಗಿದೆ.

Published by:Sandhya M
First published: