Benefits of Cloves: ಪ್ರತಿದಿನ ಮಲಗುವ ಮುನ್ನ 2 ಲವಂಗ ತಿಂದ್ರೆ ಈ ಪ್ರಯೋಜನಗಳು ನಿಮ್ಮದಾಗುತ್ತದೆ

ಅನೇಕ ಆಯುರ್ವೇದ ಔಷಧಿಗಳಲ್ಲಿ ಲವಂಗವನ್ನು ಬಳಸುತ್ತಾರೆ  ಅದೇ ರೀತಿ ಇದರ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಡುಗೆ ಕೋಣೆಯಲ್ಲಿ ಒಂದು ಚಿಕ್ಕ ಡಬ್ಬಿಯಲ್ಲಿ ಪ್ರತಿದಿನ ಲವಂಗವನ್ನು (Clove) ನಾವು ನೋಡಿರುತ್ತೇವೆ. ಹೌದು ಇದು ನಾವು ಮಾಡುವ ಅಡುಗೆ ಘಮ್ಮೆಂದು ಪರಿಮಳ (Smell) ನೀಡಿ ರುಚಿ ಆಗಿರಲಿ ಎಂದು ಬಳಸುತ್ತೇವೆ. ಚೆಕ್ಕೆ ಮತ್ತು ಲವಂಗ ಹಾಕಿ ತಯಾರಿಸಿದ ಯಾವುದೇ ಅಡುಗೆಯಾದರೂ ಬಾಯಿಗೆ ರುಚಿ ಕೊಡುವ ಜೊತೆಗೆ ಆರೋಗ್ಯಕ್ಕೂ (Health) ಸಹಕಾರಿಯಾಗಿದೆ. ಪ್ರತಿದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ  ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ಆಯುರ್ವೇದದಲ್ಲಿ ನಂಬಿಕೆ ಇದೆ. ಅನೇಕ ಆಯುರ್ವೇದ (Ayurveda) ಔಷಧಿಗಳಲ್ಲಿ ಲವಂಗವನ್ನು ಬಳಸುತ್ತಾರೆ. ಅದೇ ರೀತಿ ಇದರ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಬನ್ನಿ ಲವಂಗದಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿಯೋಣ.

    ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ

    ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲವಂಗ ರಾಮಬಾಣವಾಗಿ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ 2 ಲವಂಗ ತಿಂದು ನಂತರ ಒಂದು ಬಿಸಿನೀರನ್ನು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೊಟ್ಟೆ ಉರಿ ಸಮಸ್ಯೆಯಿಂದ ಪಾರಾಗಬಹುದು.

    ಇದನ್ನೂ ಓದಿ: Heart Attack Risk: ವಿವಾಹಿತರಿಗೆ ಹೃದಯಾಘಾತ ಆಗೋದು ಕಡಿಮೆ! ಈ ಕಾರಣಕ್ಕಾದ್ರೂ ಮದುವೆ ಆಗುತ್ತಾರಾ ಪುರುಷರು?

    ಬಾಯಿಯ ಕೆಟ್ಟ ವಾಸನೆಯನ್ನೂ ಲವಂಗ ತೆಗೆದುಹಾಕುತ್ತದೆ

    ಬಾಯಿಂದ ಬರುವ ದುರ್ವಾಸನೆಯನ್ನು ತೆಗೆದುಹಾಕಲು ಲವಂಗವು ಸಹಕಾರಿಯಾಗಿದೆ. ಅದೇ ರೀತಿ ಅಧ್ಯಯನ ಪ್ರಕಾರ ಲವಂಗದ ಎಣ್ಣೆಯನ್ನು ಹಲ್ಲಿನ ಅರಿವಳಿಕೆ ಎಂದು ಅನುಮೋದಿಸಲಾಗಿದೆ. ಹಲ್ಲು ಮತ್ತು ವಸಡುಗಳು ಆರೋಗ್ಯಯುತವಾಗಿರಲು ಲವಂಗವನ್ನು ನಾವು ಬಳಸುವ ಟೂತ್ ಪೇಸ್ಟ್ ‌ನಲ್ಲಿ ಕೂಡ ಬಳಸುತ್ತಾರೆ. ಇನ್ನು ಕೆಲವರು ಹಲವು ನೋವಾದಾಗ ನೋವಿರುವ ಭಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುತ್ತಾರೆ ಇದರಿಂದ ನೋವು ಶೀಘ್ರವಾಗಿ ಶಮನವಾಗುವುದು.

    ಪಿತ್ತಜನಕಾಂಗದ ಅನೇಕ ಕಾಯಿಲೆಗಳಿಗೆ ಲವಂಗ ಉಪಕಾರಿ

    ಪಿತ್ತಜನಕಾಂಗದ ಸಿರೋಸಿಸ್ ಮತ್ತು ಪಿತ್ತಜನಕಾಂಗದ ಕಾಯಿಲೆಗಳನ್ನು ಕಡಿಮೆ ಮಾಡಲು ಲವಂಗ ಸಹಾಯಮಾಡುತ್ತದೆ. ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಪಿತ್ತಜನಕಾಂಗವನ್ನು ಆರೋಗ್ಯವಾಗಿರಲು ಸಹಾಯಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.

    ಗಂಟಲು ನೋವು ನಿವಾರಣೆಗೆ ಸಹಕಾರಿ

    ರಾತ್ರಿ ಮಲಗುವ ಮುನ್ನ ಎರಡು ಲವಂಗವನ್ನು 1 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು. ಗಂಟಲು ನೋವು ಗಂಟಲಲ್ಲಿ ಕಫ ಕಟ್ಟಿದ್ದರೆ ಈ ರೀತಿ ಮಾಡುವುದರಿಂದ ಶೀಘ್ರವಾಗಿ ಶಮನಗೊಳ್ಳುವುದು.

    ಮೈಗ್ರೇನ್ ಮತ್ತು ತಲೆ ನೋವಿಗೆ ಲವಂಗದ ಎಣ್ಣೆ ಮದ್ದು

    ಸಾಮಾನ್ಯವಾಗಿ ಎಲ್ಲಾ‌ ವಯಸ್ಕರು ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ಲವಂಗ ಎಣ್ಣೆಯಲ್ಲಿ ಫ್ಲೇವೊನೈಡ್ಸ್ ಇದ್ದು, ಇದು ಮೈಗ್ರೇನ್, ತಲೆ ನೋವು, ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ತಲೆ ನೋವಿಗೆ ಈ ಎಣ್ಣೆಯಲ್ಲಿ ಎರಡು ಚಿಟಿಕೆ ಉಪ್ಪನ್ನು ಬೆರೆಸಿ ಮತ್ತು ಹಣೆಗೆ ಮಸಾಜ್ ಮಾಡಿ. ಊತ ಮತ್ತು ಗಾಯದ ನೋವು ಇದ್ದರೆ, ಇದಕ್ಕೆ ಈ ಎಣ್ಣೆಯಿಂದ ಮಸಾಜ್ ಮಾಡಿ.

    ಜೀರ್ಣಕ್ರಿಯೆಗೆ ಲಿವಂಗ  ಸಹಕಾರಿಯಾಗಿದೆ

    ಲವಂಗದಲ್ಲಿ ಜೀರ್ಣಕಾರಿ ಕಿಣ್ವಗಳು ಸ್ರವಿಸುವಿಕೆ ಗುಣ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಲವಂಗವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಯನ್ನು ಪರಿಹಾರ ಮಾಡುತ್ತವೆ. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Healthy Lifestyle: ಪುರುಷರೇ ಈ ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

    ಲವಂಗದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುವ ಗುಣಗಳು ಅಡಗಿವೆ

    ಲವಂಗದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುವ ಗುಣಗಳು ಅಡಗಿವೆ. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡ ನಿವಾರಣೆಯಾದರೆ ನಮ್ಮ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.  ಅದೇ ರೀತಿ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸಲು‌ ಇದು ಸಹಕಾರಿಯಾಗಿದೆ.
    Published by:Swathi Nayak
    First published: