Cardamom Benefits: ಏಲಕ್ಕಿಯಲ್ಲಿ ಅಡಕವಾಗಿರುವ ಅದ್ಭುತ ಔಷಧೀಯ ಗುಣಗಳು ಇವುಗಳೇ ನೋಡಿ!

ಏಲಕ್ಕಿಯಲ್ಲಿರುವ ಪೊಟಾಷಿಯಂ ಮತ್ತು ಫೈಬರ್​ ಅಂಶಗಳು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರಲಿದೆ. ಏಲಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಯೂರಿನ್ ಇಂಫೆಕ್ಷನ್​ ಅನ್ನು ದೂರ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಆಹಾರ ಪದಾರ್ಥಗಳಲ್ಲಿ ಏಲಕ್ಕಿ (Cardamom) ಕೂಡ ಒಂದು. ಈ ಪುಟ್ಟ ಸಾಂಬಾರು ಪದಾರ್ಥ ಆಯುರ್ವೇದದಲ್ಲಿ ದಿವ್ಯೌಷಧವಾಗಿ ಏಲಕ್ಕಿಯೂ ಕಾರ್ಯ ನಿರ್ವಹಿಸುತ್ತದೆ. ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ. ಸಿಪ್ಪೆಯಿಂದ ಆವೃತವಾಗಿರುವ ಈ ಸಾಂಬಾರು ಪದಾರ್ಥ ಮಾಡುವ ಜಾದೂ ನಂಬಿಕೆಗೆ ಮಿಗಿಲಾದುದು. ಅಷ್ಟೇ ಅಲ್ಲದೆ ಏಲಕ್ಕಿಯಲ್ಲಿರುವ ಪೊಟಾಷಿಯಂ ಮತ್ತು ಫೈಬರ್ (Fiber)​ ಅಂಶಗಳು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ (Blood Pressure) ಕೂಡ ನಿಯಂತ್ರಣದಲ್ಲಿರಲಿದೆ. ಏಲಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಯೂರಿನ್ ಇಂಫೆಕ್ಷನ್​ (Urine Infection) ಅನ್ನು ದೂರ ಮಾಡಬಹುದು.

    ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿ

    ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ. ಸಿಪ್ಪೆಯಿಂದ ಆವೃತವಾಗಿರುವ ಈ ಸಾಂಬಾರು ಪದಾರ್ಥ ಮಾಡುವ ಜಾದೂ ನಂಬಿಕೆಗೆ ಮಿಗಿಲಾದುದು. ಇದರಲ್ಲಿರುವ ಸಿಟ್ರಸಿ ಖಾರ ರೋಗವನ್ನು ಹೊಡೆದೋಡಿಸುವ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ.

    ಇದನ್ನೂ ಓದಿ: Panjabi Lassi: ಮನೆಯಲ್ಲಿಯೇ ತಯಾರಿಸಿ ಕ್ಲಾಸಿಕ್ ಪಂಜಾಬಿ ಲಸ್ಸಿ, ಇಲ್ಲಿದೆ ಸಿಂಪಲ್ ಟಿಪ್ಸ್

    ಹಲ್ಲಿನ ಸ್ವಾಸ್ಥ್ಯವನ್ನು ಕಾಪಾಡುವುದು

    ಏಲಕ್ಕಿಯಲ್ಲಿ ಆಂಟಿ ಮೈಕ್ರೋಬಿಯಲ್ ಗುಣ ಅಧಿಕವಾಗಿದೆ ಅದೇ ರೀತಿ ಸಾಮಾನ್ಯವಾಗಿ ಹಲವರನ್ನು ಕಾಡುವ ಹಲ್ಲಿನ ನೈರ್ಮಲ್ಯದ ಜೊತೆಗೆ ಕೆಟ್ಟ ಉಸಿರನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಏಲಕ್ಕಿ ಎಣ್ಣೆಯಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣವು ಬ್ಯಾಕ್ಟೀರಿಯವನ್ನು ನಾಶ ಪಡಿಸಲು ಸಹಾಯ ಮಾಡುವುದು. ಹಲ್ಲಿನಲ್ಲಿ ಕುಳ್ಳಿ ನೀಡುವುದು ಹಾಗೂ ಅನುಚಿತವಾಗಿ ಹುಟ್ಟುವ ಹಲ್ಲುಗಳನ್ನು ತಡೆಯಲು ಸಹಕಾರಿ.

    ದುಶ್ಚಟಗಳಿಂದ ದೂರವಿರಲು ಸಹಾಯಮಾಡುತ್ತದೆ

    ಹೌದು ಏಲಕ್ಕಿ ಸೇವನೆ ಮಾಡಿರುವುದರಿಂದ ದುಶ್ಚಟಗಳಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಮದ್ಯಪಾನ ಹಾಗೂ ಧೂಮಪಾನಗಳಿಗೆ ಅಡಿಕ್ಟ್ ಆಗಿರುವವರಿಗೆ ಅದರಿಂದ ಹೊರಬರಲು ಇದು ಸಹಾಯಮಾಡುತ್ತದೆ. ಏಲಕ್ಕಿಯನ್ನು ಆಗಾಗ ಸೇವನೆ ಮಾಡುವುದರಿಂದ ನಿಕೋಟಿನ್,ಚಡಪಡಿಕೆ,ಕಿರಿಕಿರಿ ಮತ್ತು ಆತಂಕದ ಹಂಬಲವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಇದು ನಿದ್ರೆಯ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ.

    ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ

    ಇದು ಹಲವಾರು ರೀತಿಯ ವೈರಲ್ ಮತ್ತು ಜ್ವರದ ಸೋಂಕಿನ ವಿರುದ್ಧ ಹೋರಾಡುವುದು ಮತ್ತು ದೇಹಕ್ಕೆ ರಕ್ಷಣೆ ನೀಡುವುದು. ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಲ್ಲಿ ಏಲಕ್ಕಿ ನೀರು ಪ್ರಮುಖ ಪಾತ್ರವಹಿಸುವುದು. ಗಂಟಲಿನ ಸೋಂಕು ಉಂಟಾಗಿದ್ದರೂ ನೀವು ಇದನ್ನು ಏಲಕ್ಕಿ ನೀರಿನಿಂದ ನಿವಾರಣೆ ಮಾಡಬಹುದು. ಶ್ವಾಸನಾಳಗಳ ಒಳಪೊರೆಯ ಉರಿಯೂತ ತಡೆಯುವುದು.

    ಇದನ್ನೂ ಓದಿ: Pineapple Side Effects: ಅತಿಯಾಗಿ ಅನಾನಸ್​ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ತಪ್ಪಿದಲ್ಲ

    ಫೈಬರ್​ ಮತ್ತು ಕ್ಯಾಲ್ಸಿಯಂ ತೂಕವನ್ನು ನಿಯಂತ್ರಿಸುತ್ತದೆ.

    ಏಲಕ್ಕಿಯಲ್ಲಿ ಪೊಟಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ಹಾಗೆಯೇ ಇದರಲ್ಲಿರುವ ಫೈಬರ್​ ಮತ್ತು ಕ್ಯಾಲ್ಸಿಯಂ ತೂಕವನ್ನು ನಿಯಂತ್ರಿಸುತ್ತದೆ. ಏಲಕ್ಕಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಎದುರಾಗದಂತೆ ಕಾಪಾಡಿಕೊಳ್ಳಬಹುದು. ಆರೋಗ್ಯಕರ ಜೀವನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಏಲಕ್ಕಿ ಸೇವನೆಯನ್ನು ಮಾಡಿದರೆ ಒಳ್ಳೆಯದು.

    ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

    ಏಲಕ್ಕಿ ಯಲ್ಲಿ ಅಡಕವಾಗಿರುವ ಆಂಟಿಆಕ್ಸಿಡೆಂಟ್ ಗುಣವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಇದು ಹೃದಯಾಘಾತವನ್ನು ತಪ್ಪಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಆದುದರಿಂದ ಹೃದಯದ ಚಟುವಟಿಕೆಗಳನ್ನು ಹೆಚ್ಚಿಸಲು ಏಲಕ್ಕಿಯನ್ನು ಸೇವನೆ ಮಾಡಬಹುದು. ದೇಹದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿಯನ್ನು ನಿಯಮಿತವಾಗಿ ಸೇವಿಸಬಹುದು. ಇದರಿಂದ ದೇಹದಲ್ಲಿನ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ಅಂಶ ದೂರವಾಗುತ್ತದೆ ಜತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ.
    Published by:Swathi Nayak
    First published: