Betel Leaf: ಕೆಮ್ಮು, ಕಫ, ಅಸ್ತಮಾ. ಶೀತಕ್ಕೆ ಮದ್ದು: ವೀಳ್ಯದೆಲೆ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಪಾನ್ ಉಷ್ಣಾಂಶ ಹೊಂದಿದ್ದರೂ ಸಹ ಗುಲ್ಕನ್‌, ತೆಂಗಿನಕಾಯಿ ಮತ್ತು ಫೆನ್ನೆಲ್ ಬೀಜಗಳನ್ನು ಹೊಂದಿರುವ ಪಾನ್ ಸೇವಿಸುವುದರಿಂದ ಬೇಸಿಗೆಯಲ್ಲಿ ನಿಮ್ಮನ್ನು ತಂಪುಗೊಳಿಸುತ್ತದೆ.

ವಿಳ್ಯದೆಲೆ

ವಿಳ್ಯದೆಲೆ

  • Share this:
ಭಾರತೀಯ ಸಂಸ್ಕೃತಿ(Indian Culture)ಯಲ್ಲಿ ವೀಳ್ಯದೆಲೆ (Betel Leaf) ದೈವಿಕ ಸ್ಥಾನವನ್ನು ಹೊಂದಿದೆ ಮತ್ತು ಧಾರ್ಮಿಕ ಸಮಾರಂಭಗಳು (Religious Functions), ಮದುವೆಗಳು (Marriage) ಮತ್ತು ಪೂಜೆ(Pooja)ಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಪೈಪೆರೇಸಿಯ ಕುಟುಂಬಕ್ಕೆ ಸೇರಿದ ಈ ಎಲೆ ಹೃದಯದ ಆಕಾರದ, ಆಳವಾದ ಹಸಿರು ಬಣ್ಣದ ಎಲೆಯಾಗಿದೆ. ವೀಳ್ಯದೆಲೆಯನ್ನು ಭಾರತದಲ್ಲಿ ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತದೆ. ಆದ್ದರಿಂದ ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಕೇವಲ ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರವಲ್ಲ, ಪಾನ್ (Pan) ಎಂದೂ ಕರೆಯಲ್ಪಡುವ ವೀಳ್ಯದೆಲೆಯನ್ನು ಊಟದ ನಂತರ ತಿನ್ನಲು ಬಳಸಲಾಗುತ್ತದೆ. ಅದರ ಪರಿಮಳಯುಕ್ತ ಸುವಾಸೆಯು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಅದೆಷ್ಟೋ ಭಾರತೀಯ ಮನೆಗಳಲ್ಲಿ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಿಕೆ ಜಗಿಯುತ್ತಾರೆ. ಇದರಿಂದ ಜೀರ್ಣಕ್ರಿಯೆ(Digestion)ಯು ಸರಾಗವಾಗಿ ಆಗುವುದು ಎನ್ನುವುದು ನಂಬಿಕೆ.

ಇಷ್ಟೇ ಅಲ್ಲದೇ ಆಯುರ್ವೇದವು ಧಾರ್ಮಿಕ ವೀಳ್ಯದೆಲೆಯ ಔಷಧೀಯ ಗುಣಗಳನ್ನು ಹೇಳುತ್ತದೆ. ಪಾನ್ ಅಥವಾ ವೀಳ್ಯದೆಲೆಯ ಅದ್ಭುತ ಪ್ರಯೋಜನಗಳ ಬಗ್ಗೆ ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ”ಇದನ್ನು ಪ್ರಾರ್ಥನೆಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಬಳಸುವುದರಿಂದ ಹಿಡಿದು ಅದನ್ನು ‘ಪಾನ್’ ರೂಪದಲ್ಲಿ ತಿನ್ನುವವರೆಗೆ, ವೀಳ್ಯದೆಲೆ ದಶಕಗಳಿಂದ ಭಾರತೀಯರ ಮೆಚ್ಚಿನವುಗಳ ಪಟ್ಟಿಯಲ್ಲಿದೆ. ಆಯುರ್ವೇದವು ವೀಳ್ಯದೆಲೆಗಳ ಅನೇಕ ಆರೋಗ್ಯ ಪ್ರಯೋಜನಗಳನ್ನು ಉಲ್ಲೇಖಿಸಿದೆ” ಎಂದಿದ್ದಾರೆ.

ಚಿಕಿತ್ಸೆಯಲ್ಲಿ ವಿಳ್ಯದೆಲೆ ಬಳಕೆ

ಪ್ರಯೋಜನ ಮತ್ತು ಪೋಷಕಾಂಶಗಳುದೀಕ್ಷಾ ಭಾವಸರ್ ಹೇಳುವ ಪ್ರಕಾರ "ಕೆಮ್ಮು, ಆಸ್ತಮಾ, ತಲೆನೋವು, ಶೀತ, ಸಂಧಿವಾತದ ಕೀಲು ನೋವು, ಅನೋರೆಕ್ಸಿಯಾ ಇತ್ಯಾದಿಗಳ ಚಿಕಿತ್ಸೆಯಲ್ಲಿ ವೀಳ್ಯದೆಲೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ನೋವು, ಉರಿಯೂತ ಮತ್ತು ಊತವನ್ನು ನಿವಾರಿಸುತ್ತದೆ. ಇದನ್ನು ಕಫ, ಅಸ್ವಸ್ಥತೆಗಳಂತಹ ಸಮಸ್ಯೆಗಳನ್ನು ನಿವಾರಿಸಲು ಉತ್ತಮವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Health Tips: ಸಾವಯವ ಆಹಾರ ಸೇವನೆಯ ಆರೋಗ್ಯ ಪ್ರಯೋಜನ ತಿಳಿಯಿರಿ

ವೀಳ್ಯದೆಲೆ ಅಥವಾ ಪಾನ್ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ.

ವಿಳ್ಯದೆಲೆಯಲ್ಲಿ ಏನೆಲ್ಲಾ ಇರುತ್ತೆ?

ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ. ಮತ್ತು ಈ ಎಲೆಗಳು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳಿಂದ ತುಂಬಿವೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ವೀಳ್ಯದೆಲೆಯು ಸುಗಂಧಭರಿತ ಬಳ್ಳಿಯಾಗಿರುವುದರಿಂದ, ನೀವು ಅದನ್ನು ನಿಮ್ಮ ಮನೆಗಳಲ್ಲಿ ಅಲಂಕಾರಿಕ ಸಸ್ಯವಾಗಿ ಸುಲಭವಾಗಿ ಬೆಳೆಸಬಹುದು ಮತ್ತು ಗರಿಷ್ಠ ಆರೋಗ್ಯವನ್ನು ಪಡೆಯಬಹುದು ಎನ್ನುತ್ತಾರೆ ದೀಕ್ಷಾ.

ಪಾನ್ ಸೇವನೆಯ ಪ್ರಯೋಜನಗಳು

ನೀವು ಪಾನ್ ತಿನ್ನಲು ಇಷ್ಟಪಡದಿದ್ದರೂ ಅದರ ಶಕ್ತಿಯುತವಾದ ಪರಿಮಳವನ್ನು ಅನುಭವಿಸಲು ಮತ್ತು ಅದರ ಅದ್ಭುತ ಪ್ರಯೋಜನಗಳನ್ನು ಪಡೆಯಲು ಪಾನ್ ಅನ್ನು ತಿನ್ನಲೇ ಬೇಕು. ಬೇಸಿಗೆಯಲ್ಲಿಯೂ ಸಹ ಉತ್ತಮವಾದ ಬಾಯಲ್ಲಿ ನೀರೂರಿಸುವ ಪಾನ್ ಮಾಡುವ ವಿಧಾನ ಇಲ್ಲಿದೆ.

ಪಾನ್ ಉಷ್ಣಾಂಶ ಹೊಂದಿದ್ದರೂ ಸಹ ಗುಲ್ಕನ್‌, ತೆಂಗಿನಕಾಯಿ ಮತ್ತು ಫೆನ್ನೆಲ್ ಬೀಜಗಳನ್ನು ಹೊಂದಿರುವ ಪಾನ್ ಸೇವಿಸುವುದರಿಂದ ಬೇಸಿಗೆಯಲ್ಲಿ ನಿಮ್ಮನ್ನು ತಂಪುಗೊಳಿಸುತ್ತದೆ.

ಇದನ್ನೂ ಓದಿ:  Health Tips: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಕಡಲೆಕಾಯಿ ಕೊಡಿ; ಗರ್ಭಿಣಿಯರು ಶೇಂಗಾವನ್ನು ತಿನ್ನಬಹುದಾ?

ಪಾನ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು

4 ವೀಳ್ಯದೆಲೆ,

4 ಟೀಸ್ಪೂನ್ ಗುಲ್ಕನ್‌

1 ಟೀಸ್ಪೂನ್ ಫೆನ್ನೆಲ್ ಬೀಜಗಳು

1 ಟೀಸ್ಪೂನ್ ತುರಿದ ತೆಂಗಿನಕಾಯಿ

1 ಚಮಚ ಕಲ್ಲು ಸಕ್ಕರೆ/ಮಿಸ್ರಿ

1/4 ಕಪ್ ನೀರು

ವಿಧಾನ:

* ಮೊದಲು ವೀಳ್ಯದೆಲೆಗಳನ್ನು ಮಿಕ್ಸಿಯಲ್ಲಿ ಹಾಕಿ.

* ನಂತರ ನೀರನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಅವುಗಳನ್ನು ಮಿಶ್ರಣ ಮಾಡಿ.
ನಂತರ ನೀರು ಸೇರಿಸಿ ಮತ್ತು ನಯವಾಗಿ ರುಬ್ಬಿಕೊಂಡರೆ ಮುಗಿಯಿತು ಅದ್ಭುತವಾದ ಪಾನ್ ಶಾಟ್‌ ಗಳು ರೆಡಿ.
Published by:Mahmadrafik K
First published: