Dinner And Health: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

ಸಾಮಾನ್ಯವಾಗಿ ರಾತ್ರಿಯ ಊಟ ಸಂಪೂರ್ಣವಾಗಿ ಬಿಟ್ಟು ಬಿಡಬಹುದು ಎಂದು ಹಲವರು ಹೇಳ್ತಾರೆ. ರಾತ್ರಿಯ ಊಟ ದೇಹ ಮತ್ತು ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದನ್ನು ನೆನಪಿಡಿ. ಹೆಚ್ಚು ತಿನ್ನುವುದು ಅಥವಾ ರಾತ್ರಿ ತಿನ್ನದಿರುವುದು ಎರಡೂ ನಿಯಮಗಳು ತಪ್ಪಾಗಿವೆ. ರಾತ್ರಿ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಿನ ಉಪಾಹಾರವನ್ನು (Morning Breakfast) ದಿನದ ಮುಖ್ಯ ಊಟ (Dinner) ಎಂದು ಹೇಳುತ್ತಾರೆ. ಎಲ್ಲಾ ವೈದ್ಯರು ಮತ್ತು ತಜ್ಞರು (Experts) ಉಪಹಾರದ ಪ್ರಯೋಜನಗಳ (Benefits) ಬಗ್ಗೆ ಹೇಳಲು ಸಾಧ್ಯ ಆಗುತ್ತದೆ. ಸಹಜವಾಗಿ ದಿನವಿಡೀ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಉಪಹಾರ ಮಾಡುವುದು ತುಂಬಾ ಅವಶ್ಯಕ ಆಗಿದೆ. ಆದರೆ ಊಟ ಮತ್ತು ರಾತ್ರಿ ಊಟ ಸಮಾನವಾಗಿ ಮುಖ್ಯ ಆಗಿದೆ. ಚಿಂತಾಜನಕ ವಿಚಾರ ಅಂದ್ರೆ ಜನರು ಬೆಳಗಿನ ಉಪಾಹಾರವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತಾರೆ. ಅಥವಾ ರಾತ್ರಿ ಊಟ ಸೇವನೆ ಮಾಡಿದಾಗ ಅದನ್ನು ಬಿಟ್ಟು ಬಿಡುತ್ತಾರೆ. ಸಂಜೆ 7 ಗಂಟೆ ನಂತರ ಏನನ್ನಾದರೂ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.

    ರಾತ್ರಿ ಊಟ ಮಾಡದೇ ಇರುವುದು

    ಮತ್ತು ಸಾಮಾನ್ಯವಾಗಿ ರಾತ್ರಿಯ ಊಟ ಸಂಪೂರ್ಣವಾಗಿ ಬಿಟ್ಟು ಬಿಡಬಹುದು ಎಂದು ಹಲವರು ಹೇಳ್ತಾರೆ. ರಾತ್ರಿಯ ಊಟ ದೇಹ ಮತ್ತು ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದನ್ನು ನೆನಪಿಡಿ. ಹೆಚ್ಚು ತಿನ್ನುವುದು ಅಥವಾ ರಾತ್ರಿ ತಿನ್ನದಿರುವುದು, ಎರಡೂ ನಿಯಮಗಳು ತಪ್ಪಾಗಿವೆ. ಎರಡನೆ ನೀವು ರಾತ್ರಿಯಲ್ಲಿ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ.

    ರಾತ್ರಿ ಏನು ತಿನ್ನಬಾರದು?

    ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರ ಪ್ರಕಾರ, ಕೆಲವರು ರಾತ್ರಿ ಊಟದಲ್ಲಿ ಮಾಂಸ, ಕೋಳಿ, ಮೊಸರು ಮತ್ತು ಪರಾಠಾ ತಿನ್ನುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ಆಯುರ್ವೇದ ತಜ್ಞರು ಸೇರಿದಂತೆ ಎಲ್ಲಾ ಆಹಾರ ತಜ್ಞರು ರಾತ್ರಿಯ ಊಟ ಲಘು ಆಗಿರಬೇಕು.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಆದರೆ ಅದೇ ವೇಳೆ ಅದು ಆರೋಗ್ಯಕರ ಆಗಿರಬೇಕು ಎಂದು ಹೇಳುತ್ತಾರೆ. ನಿಸ್ಸಂಶಯವಾಗಿ ಆಯುರ್ವೇದ ಪ್ರಕಾರ ಕಫ ದೋಷದಲ್ಲಿ ಅಸಮತೋಲನ ಉಂಟು ಮಾಡುವ ಕಾರಣ ರಾತ್ರಿ ಯಾವ ಆಹಾರ ತಪ್ಪಿಸಬೇಕು ಎಂದು ತಿಳಿದುಕೊಳ್ಳಬಹುದು.

    ಗೋಧಿ

    ಆಯುರ್ವೇದ ಪ್ರಕಾರ, ಗೋಧಿ ಭಾರವೆಂದು ಪರಿಗಣಿಸಲಾಗಿದೆ. ಇದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ಗೋಧಿ ಮತ್ತು ಅದರ ಉತ್ಪನ್ನಗಳನ್ನು ಸೇವಿಸುವುದರಿಂದ ನಿಮ್ಮ ಅಮಾ ಅಂದರೆ ವಿಷಕಾರಿ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲು ಇದು ಕಾರಣ ಆಗಿದೆ.

    ಮೊಸರು

    ಅನೇಕ ಜನರು ರಾತ್ರಿ ಮೊಸರು ಸೇವಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆಯುರ್ವೇದದ ಪ್ರಕಾರ ಮೊಸರು ಕಫ ಮತ್ತು ಪಿತ್ತ ಹೆಚ್ಚಿಸುತ್ತದೆ. ಅಂದರೆ ಇದನ್ನು ಸೇವಿಸುವುದರಿಂದ ಕೆಮ್ಮು, ಗಂಟಲು ನೋವು ಮುಂತಾದ ಹಲವು ಸಮಸ್ಯೆಗಳು ಕಂಡು ಬರುತ್ತವೆ. ಇದರ ಬದಲು ಮಜ್ಜಿಗೆ ಕುಡಿಯಬಹುದು.

    ಹಿಟ್ಟಿನ ವಸ್ತುಗಳು

    ಮೈದಾ ಸಿಹಿ ವಿಷ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಇದರಲ್ಲಿ ಫೈಬರ್ ಇರಲ್ಲ. ಮತ್ತು ಅತಿಯಾದ ಸೇವನೆಯು ಮಲಬದ್ಧತೆ, ಪೈಲ್ಸ್ ಮುಂತಾದ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ರಾತ್ರಿ ವೇಳೆ ಮೈದಾದಿಂದ ಮಾಡಿದ ವಸ್ತುಗಳನ್ನು ಅರಗಿಸಿಕೊಳ್ಳುವುದು ಕೂಡ ಕಷ್ಟ.

    ಸಿಹಿ ಪದಾರ್ಥಗಳ ಸೇವನೆ ತಪ್ಪಿಸಿ

    ಊಟದ ನಂತರ ಸಿಹಿ ತಿನ್ನಲು ಇಷ್ಟಪಡುವ ಅನೇಕ ಜನರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಸಿಹಿ ತಿಂಡಿಗಳು ಅಥವಾ ಚಾಕೊಲೇಟ್‌ ಹೆಚ್ಚು ಸೇವಿಸಲಾಗುತ್ತದೆ. ಈ ವಸ್ತುಗಳು ಭಾರ. ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟಕರ. ಮತ್ತು ಇದು ಲೋಳೆಯ ರಚನೆಗೆ ಗುರಿಯಾಗುತ್ತದೆ.

    ಕಚ್ಚಾ ಸಲಾಡ್

    ಸಲಾಡ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನೀವು ರಾತ್ರಿ ತಿನ್ನುವುದನ್ನು ತಪ್ಪಿಸಿ. ಇದು ಶೀತ ಮತ್ತು ಶುಷ್ಕವಾಗಿ ಇರುತ್ತದೆ. ಇದು ವಾತ ಉಲ್ಬಣಗೊಳಿಸುತ್ತದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಆಯುರ್ವೇದ ಪ್ರಕಾರ ಈ ಆಹಾರಗಳ ಸೇವನೆ ಯಾಕೆ ಮಾಡಬಾರದು?

    ಜೀರ್ಣಾಂಗ ವ್ಯವಸ್ಥೆ ಅಂದ್ರೆ ಅಗ್ನಿಗೆ ಸಂಬಂಧಿಸಿದೆ. ಮತ್ತು ಅದು ರಾತ್ರಿಯಲ್ಲಿ ನಿಧಾನವಾಗುತ್ತದೆ. ಆಹಾರ ಜೀರ್ಣವಾಗದಿದ್ದರೆ ನಂತರ ವಿಷಕಾರಿ ಅಂಶಗಳು ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಇದನ್ನು ಅಮಾ ಅಂದ್ರೆ ವಿಷ ಎಂದು ಕರೆಯಲಾಗುತ್ತದೆ. ಇವುಗಳ ಸೇವನೆ ತೂಕ ಹೆಚ್ಚಾಗುವುದು, ಬೊಜ್ಜು, ಮಧುಮೇಹ, ಚರ್ಮ ರೋಗಗಳು, ಹೊಟ್ಟೆ ಸಮಸ್ಯೆ, ಹಾರ್ಮೋನ್ ಅಡಚಣೆಗೆ ಕಾರಣವಾಗುತ್ತದೆ.
    Published by:renukadariyannavar
    First published: