Healthy Weight Gain: ಆರೋಗ್ಯಕರವಾಗಿ ತೂಕ ಹೆಚ್ಚಿಸಲು ಆಯುರ್ವೇದದ ಸಲಹೆ ಇಲ್ಲಿವೆ

ಆಯುರ್ವೇದದ ಪ್ರಕಾರ ತೂಕ ಹೆಚ್ಚಿಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಕೆಲವರು ಕೇವಲ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದಾಗಲೂ ತೂಕ ಹೆಚ್ಚಾಗಲ್ಲ. ಇದ್ರಿಂದ ಮತ್ತೆ ಹಲವು ವಿಧಾನಗಳನ್ನು ಟ್ರೈ ಮಾಡ್ತಾರೆ. ಆದರೆ ಅದಕ್ಕೆ ಕೆಲವು ಗಿಡಮೂಲಿಕೆಗಳು ಸಹ ಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಹಜವಾಗಿ ಹೆಚ್ಚಿನ ಜನರು (People) ಹೆಚ್ಚುತ್ತಿರುವ ತೂಕದಿಂದ (Weight) ತೊಂದರೆಗೆ (Problem) ಒಳಗಾಗಿದ್ದಾರೆ. ತೂಕ ಹೆಚ್ಚಳ ಅನೇಕ ಕಾಯಿಲೆಗಳಿಗೆ (Disease) ದೂಡುತ್ತದೆ. ದೀರ್ಘಕಾಲದ ಬೊಜ್ಜು (Obesity), ದೀರ್ಘಕಾಲದ ಕಾಯಿಲೆಗಳಿಂದ ನರಳುವಂತೆ ಮಾಡುತ್ತದೆ. ಕೆಲವರು ದಪ್ಪ ದೇಹದಿಂದ ಸಮಸ್ಯೆ ಅನುಭವಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ತೆಳ್ಳಗಿನ ದೇಹದಿಂದ ಸಾಕಷ್ಟು ಅನಾರೋಗ್ಯ, ಅತೃಪ್ತಿ ಹೊಂದಿದ್ದಾರೆ. ಅದೇ ರೀತಿ ತೂಕ ಹೆಚ್ಚಿಸಲಯ ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ತೂಕ ಹೆಚ್ಚಳ ಮಾಡೋದು ಓಕೆ. ಆದರೆ ಅದನ್ನ ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಬೇಕು. ಅದಕ್ಕಾಗಿ ನೀವು ಕೆಲವು ಆಯುರ್ವೇದ ಗಿಡಮೂಲಿಕೆಗಳನ್ನು ಸೇವನೆ ಮಾಡಬಹುದು.

    ತೂಕ ಹೆಚ್ಚಿಸಲು ಆಯುರ್ವೇದ ಪರಿಹಾರಗಳು

    ಆಯುರ್ವೇದ ಪ್ರಕಾರ, ತೂಕ ಹೆಚ್ಚಿಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಕೆಲವರು ಕೇವಲ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದಾಗಲೂ ತೂಕ ಹೆಚ್ಚಾಗಲ್ಲ. ಇದ್ರಿಂದ ಮತ್ತೆ ಹಲವು ವಿಧಾನಗಳನ್ನು ಟ್ರೈ ಮಾಡ್ತಾರೆ.

    ಆದರೆ ಅದಕ್ಕೆ ಕೆಲವು ಗಿಡಮೂಲಿಕೆಗಳು ಸಹ ಬೇಕಾಗುತ್ತದೆ. ಚರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್‌ನ ವೈದ್ಯಕೀಯ ಸಲಹೆಗಾರ ಡಾ. ಮನೀಶಾ ಮಿಶ್ರಾ ಗೋಸ್ವಾಮಿ, ಆ ಗಿಡಮೂಲಿಕೆಗಳ ಸೇವನೆ ಹೇಗೆ ತೂಕ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

    ತೂಕ ಹೆಚ್ಚಿಸಲು ಅಶ್ವಗಂಧ ಹೇಗೆ ಸಹಕಾರಿ?

    ಅಶ್ವಗಂಧವು ಪರಿಣಾಮಕಾರಿ ಒಂದು ಔಷಧಿಯಾಗಿದೆ. ಅದು ಬಹಳ ಜನಪ್ರಿಯವಾಗಿದೆ. ಅಶ್ವಗಂಧದ ಬೇರುಗಳು ಕುದುರೆಯಂತೆ ವಾಸನೆ ಬರುತ್ತವೆ. ಹಾಗಾಗಿ ಇದನ್ನು ಅಶ್ವಗಂಧ ಎಂದು ಕರೆಯುತ್ತಾರೆ. ಆಯುರ್ವೇದದ ಪ್ರಕಾರ ಅಶ್ವಗಂಧವನ್ನು ಅನೇಕ ರೋಗ ಗುಣಪಡಿಸಲು ಬಳಸುತ್ತಾರೆ.

    ಈ ಸಸ್ಯವು ಒತ್ತಡ, ಶಕ್ತಿಯ ಕೊರತೆ, ಆಲಸ್ಯ, ಹಸಿವಿನ ಕೊರತೆ, ನಿದ್ರಾಹೀನತೆ ಮತ್ತು ಆಯಾಸ ಮುಂತಾದ ಕಾಯಿಲೆ ತೆಗೆದು ಹಾಕುವಲ್ಲಿ ಪ್ರಯೋಜನಕಾರಿ ಆಗಿದೆ. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರದ ಜೊತೆ ಸೇವಿಸಿದರೆ ಖಂಡಿತವಾಗಿಯೂ ಅಶ್ವಗಂಧ ತೂಕ ಹೆಚ್ಚಿಸುತ್ತದೆ.

    ಇದರ ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ. ಮತ್ತು ಆಹಾರದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಾಗಾಗಿ ಕ್ರಮೇಣ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಶ್ವಗಂಧ ಹಾಲಿನೊಂದಿಗೆ ಸೇವಿಸುವುದು ತೂಕ ಹೆಚ್ಚಾಗಲು ಪರಿಣಾಮಕಾರಿ ಆಗಿದೆ.

    ತೂಕ ಹೆಚ್ಚಳಕ್ಕೆ ಶತಾವರಿ ಸೇವನೆ

    ಶತಾವರಿ ಒಂದು ಔಷಧವಾಗಿದೆ. ಇದರ ಬೇರುಗಳು ಬೆರಳುಗಳಂತೆ ಕಾಣುತ್ತವೆ ಮತ್ತು ಅವುಗಳ ಸಂಖ್ಯೆ ನೂರು ಅಥವಾ ನೂರಕ್ಕಿಂತ ಹೆಚ್ಚು. ಹಾಗಾಗಿ ಇದನ್ನು ಶತಾವರಿ ಎಂದು ಕರೆಯುತ್ತಾರೆ. ಆಯುರ್ವೇದ ಪ್ರಕಾರ, ಶತಾವರಿ ಮಹಿಳೆಯರಿಗೆ ಅತ್ಯುತ್ತಮ ಆಗಿದೆ. ಇದನ್ನು ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸಲು ಬಳಸುತ್ತಾರೆ.

    ಆದರೆ ಇದು ಪುರುಷರು ಮತ್ತು ಮಹಿಳೆಯರಿಗೆ ಪ್ರಯೋಜನಕಾರಿ ಆಗಿದೆ. ದೌರ್ಬಲ್ಯ, ಮೂಳೆ ದೌರ್ಬಲ್ಯ, ದುರ್ಬಲತೆ ಮತ್ತು ದೈಹಿಕ ದುರ್ಬಲತೆಗೆ ಶತಾವರಿ ಬಹಳ ಪ್ರಯೋಜನಕಾರಿ. ಶತಾವರಿ ಸ್ನಾಯುಗಳನ್ನು ಅಭಿವೃದ್ಧಿಪಡಿಸುತ್ತದೆ. ಹಾಗೆಯೇ ಹಸಿವನ್ನು ಹೆಚ್ಚಿಸುತ್ತದೆ. ಮಲಗುವ ವೇಳೆ ಹಾಲಿನ ಜೊತೆ ಶತಾವರಿ ಚೂರ್ಣ ಸೇವನೆ ತೂಕ ಹೆಚ್ಚಾಗಲು ತುಂಬಾ ಪರಿಣಾಮಕಾರಿ.

    ತೂಕ ಹೆಚ್ಚಿಸಲು ಗೋಖ್ರು ಸೇವನೆ

    ಆಯುರ್ವೇದ ಪ್ರಕಾರ ಗೋಖ್ರು ಅನೇಕ ರೋಗ ತಡೆಯುತ್ತದೆ. ಇದು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಬಕ್ವೀಟ್ ದೇಹದ ಶಕ್ತಿ ಹೆಚ್ಚಿಸುತ್ತದೆ ಮತ್ತು ದೌರ್ಬಲ್ಯ ತೆಗೆದು ಹಾಕುತ್ತದೆ. ಇದು ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಡುತ್ತದೆ. ಹಾಗೂ ನೈಸರ್ಗಿಕ ಪರಿಹಾರವಾಗಿದೆ.

    ತೂಕ ಹೆಚ್ಚಾಗಲು ಗೋಖ್ರು ಸೇವನೆ ಪ್ರಯೋಜನಕಾರಿ. ಗೋಖ್ರು ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ ಮತ್ತು ತೂಕ ಕೂಡ ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಲಿನೊಂದಿಗೆ ಗೋಖ್ರು ಸೇವನೆ ಕೆಲವೇ ದಿನಗಳಲ್ಲಿ ತೂಕ ಹೆಚ್ಚಿಸುತ್ತದೆ.

    ತೂಕ ಹೆಚ್ಚಿಸಲು ಮೂಲೇತಿ ಸೇವನೆ

    ಮೂಲೇತಿ ಒಂದು ಸಿಹಿ ಮರ. ಇದನ್ನು ಶೀತ, ಕೆಮ್ಮು ಮುಂತಾದ ಕಾಯಿಲೆ ನಿವಾರಣೆಗೆ ಬಳಸುತ್ತಾರೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿಸುತ್ತದೆ. ನೈಸರ್ಗಿಕ ಪದಾರ್ಥಗಳು ಇದರಲ್ಲಿವೆ. ಲೈಕೋರೈಸ್ ದೇಹದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ.

    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

    ಇದು ನಿಮ್ಮ ದೇಹದ  ಆರೋಗ್ಯ ಕಾಪಾಡುತ್ತದೆ. ಲೈಕೋರೈಸ್ ರೂಟ್ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ತೂಕ ಹೆಚ್ಚಳ ಮಾಡುತ್ತದೆ.
    Published by:renukadariyannavar
    First published: