Brahmi Benefits: ಕ್ಯಾನ್ಸರ್, ಮಧುಮೇಹಕ್ಕೆ ಬ್ರಾಹ್ಮಿ ರಾಮಬಾಣ, ಬಳಕೆ ಹೇಗೆ?

ಅನೇಕ ಗಿಡಮೂಲಿಕೆಗಳಲ್ಲಿ ವಿಶಿಷ್ಟ ಗಿಡಮೂಲಿಕೆ ಅಂದ್ರೆ ಬ್ರಾಹ್ಮಿ. ಬ್ರಾಹ್ಮಿ ಗಿಡಮೂಲಿಕೆ ಕೂಡ ಬೇವು-ತುಳಸಿಯಂತಹ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಇಂಗ್ಲಿಷ್‌ನಲ್ಲಿ ವಾಟರ್‌ಹಿಸ್ಸಾಪ್ ಎಂದು ಕರೆಯುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪುರಾತನ ಕಾಲದಿಂದಲೂ ಆಯುರ್ವೇದವು (Ayurveda) ಅಸಂಖ್ಯಾತ ಕಾಯಿಲೆಗಳಿಗೆ (Disease) ಚಿಕಿತ್ಸೆ (Treatment) ನೀಡುತ್ತಿದೆ. ಎಷ್ಟೋ ಜನರು (People) ಈಗಲೂ ಆಯುರ್ವೇದವನ್ನೇ ಅವಲಂಬಿಸಿದ್ದಾರೆ. ಆಯುರ್ವೇದದಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಸಿ, ಔಷಧ ತಯಾರಿಸಲಾಗುತ್ತದೆ. ಇದು ಎಲ್ಲ ಜನರಿಗೆ ಸಮಾನಾಂತರವಾಗಿ ಚಿಕಿತ್ಸಕವಾಗಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಹಲವಾರು ಶಕ್ತಿಶಾಲಿ ಗಿಡಮೂಲಿಕೆಗಳು ಮತ್ತು ಸಸ್ಯಗಳನ್ನು ಆಯುರ್ವೇದ ಔಷಧದಲ್ಲಿ ಬಳಕೆ ಮಾಡುತ್ತಾರೆ. ಬೇವು ಮತ್ತು ತುಳಸಿ ಸೇರಿದಂತೆ ವಿವಿಧ ಆಯುರ್ವೇದ ಗಿಡಮೂಲಿಕೆಗಳನ್ನು ಅನೇಕ ಔಷಧಿಗಳು ಮತ್ತು ರೋಗ ನಿವಾರಣೆಗೆ ಬಳಸಲಾಗುತ್ತದೆ. ಅನೇಕ ಗಿಡಮೂಲಿಕೆಗಳಲ್ಲಿ ವಿಶಿಷ್ಟ ಗಿಡಮೂಲಿಕೆ ಅಂದ್ರೆ ಬ್ರಾಹ್ಮಿ.

    ರಸವತ್ತಾದ ಗಿಡಮೂಲಿಕೆ ಬ್ರಾಹ್ಮಿ

    ಬ್ರಾಹ್ಮಿ ಗಿಡಮೂಲಿಕೆ ಕೂಡ ಬೇವು-ತುಳಸಿಯಂತಹ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.  ಇದನ್ನು ಇಂಗ್ಲಿಷ್‌ನಲ್ಲಿ ವಾಟರ್‌ಹಿಸ್ಸಾಪ್ ಎಂದು ಕರೆಯುತ್ತಾರೆ. ಬ್ರಾಹ್ಮಿ ಒದ್ದೆಯಾದ ಮಣ್ಣು, ಆಳವಿಲ್ಲದ ನೀರು ಮತ್ತು ಜವುಗು ಪ್ರದೇಶಗಳಲ್ಲಿ ಬೆಳೆಯುವ ಒಂದು ಸಣ್ಣ ರಸವತ್ತಾದ ಗಿಡಮೂಲಿಕೆ ಆಗಿದೆ.

    ಬ್ರಾಹ್ಮಿ ಹೂವುಗಳನ್ನು ಒಳಗೊಂಡಂತೆ ಇಡೀ ಸಸ್ಯವನ್ನು ಔಷಧವಾಗಿ ಬಳಕೆ ಮಾಡುತ್ತಾರೆ. ಬ್ರಾಹ್ಮಿ ರುಚಿ ಕಹಿ ಮತ್ತು ಸಿಹಿಯಾಗಿರುತ್ತದೆ. ಕೇರಳ ಆಯುರ್ವೇದದ ಪ್ರಕಾರ, ಬ್ರಾಹ್ಮಿ ಅತ್ಯಂತ ಶಕ್ತಿಶಾಲಿ ಪ್ರಾಚೀನ ಆಯುರ್ವೇದ ಮೂಲಿಕೆಯಾಗಿದೆ.

    ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

    ಇದು ಮನಸ್ಸನ್ನು ಚುರುಕುಗೊಳಿಸಲು, ಸ್ಮರಣೆ ಹೆಚ್ಚಿಸಲು, ಲೈಂಗಿಕ ಶಕ್ತಿ ಹೆಚ್ಚಿಸಲು ಮತ್ತು ಆರೋಗ್ಯದ ಟಾನಿಕ್ ಆಗಿ ಬಳಸುತ್ತಾರೆ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

    ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ ಬ್ರಾಹ್ಮಿ

    ಬ್ರಾಹ್ಮಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುವ ಶಕ್ತಿಶಾಲಿ ಮೂಲಿಕೆಯಾಗಿದೆ. ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ, ನೀವು ಅದನ್ನು ಬಳಸಬೇಕು. ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಸಸ್ಯವು ಹಲವು ವಿಧಗಳಲ್ಲಿ ಪ್ರಯೋಜನಕಾರಿ.

    ಸ್ಮರಣ ಶಕ್ತಿ ವರ್ಧನೆಯಲ್ಲಿ ಸಹಕಾರಿ

    ಈ ಮೂಲಿಕೆಯು ಜ್ಞಾಪಕಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ಹಿಪೊಕ್ಯಾಂಪಲ್ ಭಾಗದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಆಲೋಚನೆ ಮತ್ತು ಸ್ಮರಣೆಗೆ ಕಾರಣ.

    ಒತ್ತಡ ಮತ್ತು ಚಿಂತೆ ಕಡಿಮೆ ಮಾಡುತ್ತದೆ

    ಬ್ರಾಹ್ಮಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬ್ರಾಹ್ಮಿ ಒತ್ತಡದ ಹಾರ್ಮೋನ್ ನಿಯಂತ್ರಿಸುತ್ತದೆ.

    ಕ್ಯಾನ್ಸರ್ ವಿರುದ್ಧ ಹೋರಾಡಲು ಪರಿಣಾಮಕಾರಿ

    ಬ್ರಾಹ್ಮಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಆರೋಗ್ಯಕರ ಜೀವನ ನಡೆಸಲು ಅವಶ್ಯಕ. ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

    ಸಂಧಿವಾತ ಮತ್ತು ಉರಿಯೂತಕ್ಕೆ ಪರಿಹಾರ

    ಸಂಧಿವಾತ ಮತ್ತು ಉರಿಯೂತ ಕಡಿಮೆ ಮಾಡುವಲ್ಲಿ ಬ್ರಾಹ್ಮಿ ಉತ್ತಮ ಪರಿಹಾರವಾಗಿದೆ. ಇದು ಗ್ಯಾಸ್ಟ್ರಿಕ್, ಅಲ್ಸರ್ ಅನ್ನು ಶಮನಗೊಳಿಸಲು ಮತ್ತು ಕೆರಳಿಸುವ ಕರುಳಿನ ಸಹಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಕಾರಿ.

    ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ

    ಬ್ರಾಹ್ಮಿ ಮಧುಮೇಹ ರೋಗಿಗಳಲ್ಲಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ ಮತ್ತು ಹೈಪೊಗ್ಲಿಸಿಮಿಯಾದ ಲಕ್ಷಣಗಳನ್ನು ಸುಧಾರಿಸಲು ಸಹಕಾರಿ.

    ಹೃದಯದ ಆರೋಗ್ಯಕ್ಕೆ ಬ್ರಾಹ್ಮಿ

    ಬ್ರಾಹ್ಮಿಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬ್ರಾಹ್ಮಿ ಸೇವನೆಯು ಹೃದಯದ ಆರೋಗ್ಯಕ್ಕೆ ಸಹಕಾರಿ.

    ಇದನ್ನೂ ಓದಿ: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

    ಕಫದ ಸಮಸ್ಯೆ ನಿವಾರಿಸುತ್ತದೆ ಬ್ರಾಹ್ಮಿ

    ಕಪ್ ಸಮಸ್ಯೆಯಿಂದ ನೀವು ತೊಂದರೆಗೆ ಒಳಗಾಗಿದ್ದರೆ, ನೀವು ಬ್ರಾಹ್ಮಿ ಸೇವಿಸಬಹುದು. ಬ್ರಾಹ್ಮಿಯ ಪುಡಿ ಬಳಕೆ ಮಾಡುವುದರಿಂದ ಕಫದ ಸಮಸ್ಯೆ ಹೋಗಲಾಡಿಸಬಹುದು.
    Published by:renukadariyannavar
    First published: