Diabetes: ಕೇವಲ 15 ದಿನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಿಂಪಲ್ ಟಿಪ್ಸ್

ದೇಹವನ್ನು ದುರ್ಬಲಗೊಳಿಸಿ ನಂತರ ಹಂತ ಹಂತವಾಗಿ ಮಾರಣಾಂತಿಕ ಕಾಯಿಲೆಗಳನ್ನು ಹೊತ್ತು ತರಬಹುದು. ಆದ್ದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಿ ಉತ್ತಮ ಜೀವನ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಯುರ್ವೇದ ತಜ್ಞ ಡಾ ದಿಕ್ಸಾ ಭಾವ್ಸಾರ್ ಅವರು 15 ದಿನಗಳಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (sugar level) ನಿಯಂತ್ರಿಸಬೇಕೆಂದರೆ ನಿಮ್ಮ ಜೀವನಶೈಲಿಯ ಬದಲಾವಣೆಗಳ ಕುರಿತು ಚರ್ಚೆ ನಡೆಸಿದ್ದಾರೆ. ರಾತ್ರಿ ಮಾಡಬೇಕಿರುವ ಊಟವನ್ನು ಆದಷ್ಟು ಬೇಗ ಸೇವಿಸುವುದು ಮತ್ತು ಸಮಯಕ್ಕೆ ಸರಿಯಾಗಿ ನಿದ್ರೆ (Sleep) ಮಾಡುವುದರಿಂದ ನಿಮ್ಮ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಕ್ರಮೇಣ ಕಡಿಮೆ ಮಾಡುವ ಅದ್ಭುತಗಳು ನಡೆಯುವಲ್ಲಿ ಈ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಧುಮೇಹವು (Diabetes) ರೋಗಿಗಳಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ಅವರ ಆರೋಗ್ಯವನ್ನು ಇನ್ನು ಹದಗೆಡಿಸಬಹುದು. ಇದರಿಂದ ಮಧುಮೇಹವಿರುವ ವ್ಯಕ್ತಿಗಳ ದೇಹಕ್ಕೆ ಅನೇಕ ಆರೋಗ್ಯ ಸಮಸ್ಯೆಗಳು (Health Problems) ಕಾಣಿಸಿಕೊಳ್ಳಬಹುದು. ಮಧುಮೇಹವೂ ಜಾಸ್ತಿಯಾಗಿ ದೇಹದಲ್ಲಿರುವ ಎಲ್ಲ ಅಂಗಗಳ ಮೇಲೂ ದುಷ್ಟಪರಿಣಾಮ ಬೀರಬಹುದು.

ಇದು ದೇಹವನ್ನು ದುರ್ಬಲಗೊಳಿಸಿ ನಂತರ ಹಂತ ಹಂತವಾಗಿ ಮಾರಣಾಂತಿಕ ಕಾಯಿಲೆಗಳನ್ನು ಹೊತ್ತು ತರಬಹುದು. ಆದ್ದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಿ ಉತ್ತಮ ಜೀವನ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು. ಹಾಗಿದ್ದರೆ ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹೇಗೆ ಮಧುಮೇಹವನ್ನು ಸಂಪೂರ್ಣವಾಗಿ ದೂರ ಮಾಡುವುದು ಎಂದು ತಿಳಿಯೋಣ ಬನ್ನಿ.

ಔಷಧಿ ಜೊತೆಗೆ ದಿನನಿತ್ಯದ ಜೀವನಶೈಲಿಯನ್ನು ಬದಲಾಯಿಸಬೇಕು
ಮೊದಲಿಗೆ ನೀವು ಮಧುಮೇಹಕ್ಕೆ ಔಷಧಿ ಏನಾದರೂ ಸೇವನೆ ಮಾಡುತ್ತಿದ್ದರೆ ಅದು ಅಷ್ಟೆ ಮಾಡಿದರೇ ನಿಮ್ಮ ಮಧುಮೇಹ ರೋಗ ನಿಯಂತ್ರಣಕ್ಕೆ ಖಂಡಿತ ಬರುವುದಿಲ್ಲ. ಔಷಧಿಗಳ ಜೊತೆಗೆ ನೀವು ನಿಮ್ಮ ದಿನನಿತ್ಯದ ಜೀವನಶೈಲಿಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳಬೇಕಿರುವುದು ಅನಿವಾರ್ಯ ಆಗಿದೆ. ಈಗ ನಾವೆಲ್ಲ ತುಂಬಾ ವೇಗವಾದ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ. ಅಲ್ವಾ.

ಇದನ್ನೂ ಓದಿ:  Dry Fruits And Health: ಡ್ರೈಫ್ರೂಟ್ಸ್ ಅತಿಯಾದ್ರೆ ತೂಕ ಹೆಚ್ಚೋ ಅಪಾಯ, ಯಾವ ಟೈಂನಲ್ಲಿ ಎಷ್ಟು ತಿನ್ನಬೇಕು?

ಕೇವಲ ಫಾಸ್ಟ್ ಪುಡ್ ಸೇವನೆ ಮಾಡುವುದು. ತಡ ರಾತ್ರಿ ಮಲಗುವುದು. ವ್ಯಾಯಾಮ ಮಾಡದೇ ಯಾವಾಗಲೂ ಗ್ಯಾಜೆಟ್ ಗಳನ್ನು ಬಳಸ್ತಾ ಒಂದು ಕಡೆ ಜಡವಾಗಿ ಕುಳಿತುಕೊಳ್ಳುವುದು ಹೀಗೆ ನಮ್ಮ ಜೀವನ ಶೈಲಿಯೂ ತುಂಬಾ ಬೋರಿಂಗ್ ಆಗಿರುತ್ತದೆ. ಆದರೆ ಈ ಜೀವನ ಶೈಲಿಯನ್ನೆ ಸ್ವಲ್ಪ ಮಟ್ಟಿಗೆ ಬದಲಿಸಿಕೊಳ್ಳಬೇಕು.

ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಮನೆಮದ್ದುಗಳು
ಡಾ ದಿಕ್ಸಾ ಭಾವ್ಸಾರ್ ಅವರು ತಮ್ಮ ಇತ್ತೀಚಿನ ಇನ್ಸ್ಟಾ ಗ್ರಾಮ್ ಪೋಸ್ಟ್‌ನಲ್ಲಿ ಕೇವಲ 15 ದಿನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಮನೆಮದ್ದುಗಳ ಬಗ್ಗೆ ಪೋಸ್ಟ್ ಮಾಡಿದ್ದರು. ಅವುಗಳ ಕುರಿತು ತಿಳಿಯೋಣ ಬನ್ನಿ.

ಪ್ರತಿದಿನ ಆಮ್ಲಾ ಮತ್ತು ಅರಿಶಿನ ಸೇವನೆ
ಈ ಆಯುರ್ವೇದ ತಜ್ಞರು ಪ್ರತಿದಿನ ಆಮ್ಲಾ ಮತ್ತು ಅರಿಶಿನವನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೆ ಇದು ತುಂಬಾ ಸಹಾಯಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಅವರು ವಾರಕ್ಕೆ ಎರಡು ಬಾರಿ ಉಪಹಾರ ಅಥವಾ ಊಟಕ್ಕೆ ಲೌಕಿ-ಮೊರಿಂಗಾ ಸೂಪ್ ಕುಡಿಯಲು ಸಲಹೆ ನೀಡುತ್ತಾರೆ.

ಕರಿದ ಆಹಾರ, ಸಕ್ಕರೆ ಬಳಕೆ ಕಡಿಮೆ ಮಾಡುವುದು
ಹೆಚ್ಚು ಕರಿದ ಆಹಾರ, ಸಕ್ಕರೆ ಬಳಕೆಯನ್ನು ಕಡಿಮೆಗೊಳಿಸಿ, ನೀವು ಬಳಸುವ ಹಿಟ್ಟನ್ನು ಬದಲಾಯಿಸಿ- ಸಕ್ಕರೆ, ಮೊಸರು, ಹುರಿದ ಆಹಾರ, ಹುದುಗಿಸಿದ ಆಹಾರ ಮತ್ತು ಬಿಳಿ ಹಿಟ್ಟನ್ನು ಬಳಸುವುದನ್ನು ಕಡಿಮೆಮಾಡಿ ಎಂದು ಡಾ ಭಾವಸರ್ ಸಲಹೆ ನೀಡುತ್ತಾರೆ. ಊಟದಲ್ಲಿ ಬೇಸನ್, ರಾಗಿ ಮತ್ತು ಜೋಳದ ಹಿಟ್ಟು ಇರಲಿ ಇವು ಆರೋಗ್ಯಕರವಾಗಿರುತ್ತವೆ.

ಊಟದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಊಟದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ -ಊಟದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳುವುದು ಪ್ರಯೋಜನಕಾರಿ.

ಊಟದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಿರಲಿ
ಪಾಲಕ್, ಮೇಥಿ, ಲೌಕಿ, ಟೊಮ್ಯಾಟೊ, ಕರೇಲ, ಮೊರಿಂಗಾ ಮುಂತಾದ ತರಕಾರಿಗಳು ಮತ್ತು ನೇರಳೆ, ಸೇಬು, ಆಮ್ಲಾ, ಪಪ್ಪಾಯಿ, ದಾಳಿಂಬೆ, ಪಪ್ಪಾಯಿ ಮತ್ತು ಕಿವಿ ಮುಂತಾದ ಹಣ್ಣುಗಳನ್ನು ಸೇವಿಸುವುದು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ ಯೋಗಾಸನಗಳನ್ನು ಪ್ರತಿನಿತ್ಯ ಮಾಡಿ
ಮಧುಮೇಹಕ್ಕೆ ಯೋಗ-ಮಂಡೂಕಾಸನ, ಶಶಾಂಕಾಸನ, ಭುಜಂಗಾಸನ, ಬಾಲಾಸನ, ಮತ್ತು ಧನುರಾಸನದಂತಹ ಯೋಗಾಸನಗಳನ್ನು ಮಧುಮೇಹ ರೋಗಿಗಳು ಕಡ್ಡಾಯವಾಗಿ ಅಭ್ಯಾಸ ಮಾಡಬೇಕು ಎಂದು ಡಾ ಭಾವಸರ್ ಹೇಳುತ್ತಾರೆ, ಇವುಗಳ ಜೊತೆ ಕಪಾಲಭಾತಿ ಮತ್ತು ಅನುಲೋಮ-ವಿಲೋಮದಂತಹ ಪ್ರಾಣಾಯಾಮಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: High Blood Cholesterol: ಅಧಿಕ ರಕ್ತದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಹಾರ ಪದ್ಧತಿಯಲ್ಲಿ ಈ ಪದಾರ್ಥಗಳ ಸೇರ್ಪಡೆ ಮಾಡಿ!

ಸಾಧ್ಯವಾದಷ್ಟು ವಾಕಿಂಗ್ ಮಾಡಿ
ಪ್ರತಿದಿನ ಕನಿಷ್ಠ 5,000 ಹೆಜ್ಜೆಗಳನ್ನು ನಡೆಯುವುದು ಒಳ್ಳೆಯದು ಆದರೆ, 10,000 ಹೆಜ್ಜೆಗಳನ್ನು ನಡೆಯುವುದು ಉತ್ತಮವಾದ ಆರೋಗ್ಯ ಪಡೆಯಲು ಸಹಾಯಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲ ವಿಷಯಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ದಿನನಿತ್ಯ ಇವುಗಳನ್ನು ಫಾಲೋ ಮಾಡುವುದರಿಂದ ಮಧುಮೇಹ ರೋಗ ಕ್ರಮೇಣ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
Published by:Ashwini Prabhu
First published: