ಧಾವಂತದ ಜೀವನ (Life) ಮತ್ತು ಕೆಟ್ಟ ಜೀವನಶೈಲಿ (Bad Lifestyle) ಪ್ರತಿಯೊಬ್ಬರ ಜೀವನದ ಮೇಲೆ ಕೆಟ್ಟ ಪರಿಣಾಮ (Effect) ಬೀರುತ್ತಿದೆ. ಕೆಟ್ಟ ಜೀವನಶೈಲಿಯ ಪರಿಣಾಮ ಜನರು ಹಲವು ರೀತಿಯ ಆರೋಗ್ಯ ಸಮಸ್ಯೆ (Health Problem) ಎದುರಿಸುವಂತಾಗಿದೆ. ಈ ಸಮಸ್ಯೆಗಳಲ್ಲಿ ಒಂದು ಅಧಿಕ ರಕ್ತದೊತ್ತಡ ಸಮಸ್ಯೆ ಆಗಿದೆ. ಇದರ ಆರಂಭಿಕ ರೋಗ ಲಕ್ಷಣಗಳನ್ನು ಗುರುತಿಸಲು ತುಂಬಾ ಕಷ್ಟ. ಹೀಗಾಗಿಯೇ ಇದನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. NCBI ಯ ವರದಿಯ ಪ್ರಕಾರ ಭಾರತದಲ್ಲಿ ಶೇಕಡಾ 33 ರಷ್ಟು ನಗರ ಮತ್ತು ಶೇಕಡಾ 25 ರಷ್ಟು ಗ್ರಾಮೀಣ ಜನಸಂಖ್ಯೆಯು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದೆ.
ಅಧಿಕ ರಕ್ತದೊತ್ತಡ ನಿಯಂತ್ರಣ ಮತ್ತು ಅಡ್ಡ ಪರಿಣಾಮ ತಪ್ಪಿಸಲು ಸಲಹೆ
ಮೇ 17 ವಿಶ್ವ ಅಧಿಕ ರಕ್ತದೊತ್ತಡ ದಿನ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಅದರ ಅಡ್ಡಪರಿಣಾಮಗಳನ್ನು ತಪ್ಪಿಸಲು, ಆಯುರ್ವೇದ ವೈದ್ಯ ವಿಕಾಸ್ ಚಾವ್ಲಾ, ವೇದಾಸ್ ಕ್ಯೂರ್ ಸಂಸ್ಥಾಪಕ ಮತ್ತು ನಿರ್ದೇಶಕರು ಕೆಲವು ಸುಲಭವಾದ ಆಯುರ್ವೇದ ವಿಧಾನ ತಿಳಿಸಿದ್ದಾರೆ ನೋಡೋಣ ಬನ್ನಿ.
ಅಧಿಕ ರಕ್ತದೊತ್ತಡಕ್ಕೆ ಅರ್ಜುನ ಮರದ ತೊಗಟೆ ಉಪಯುಕ್ತ
ಅರ್ಜುನ ಮರದ ತೊಗಟೆ ಹಲವಾರು ಔಷಧೀಯ ಗುಣ ಹೊಂದಿದ. ಇದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಆಗುತ್ತದೆ. ಇದು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?
ಇದು ಕಫ ದೋಷ ಪರಿಹಾರ ಮಾಡುತ್ತದೆ. ಇದರ ಚಹಾದ ನಿಯಮಿತ ಸೇವನೆ ಅಧಿಕ ರಕ್ತದೊತ್ತಡ ಪರಿಹಾರ ನೀಡುತ್ತದೆ. ಅರ್ಜುನ ತೊಗಟೆಯ 3-6 ಗ್ರಾಂ ಪುಡಿಯನ್ನು ಸುಮಾರು 100 ಮಿಲಿ ನೀರಿನೊಂದಿಗೆ ತೆಗೆದುಕೊಳ್ಳಬಹುದು.
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್
ಬೀಟ್ರೂಟ್ ಉಪಯುಕ್ತ ಖನಿಜಗಳು ಮತ್ತು ನೈಟ್ರೇಟ್, ಪೊಟ್ಯಾಸಿಯಮ್, ಫೈಟೊಕೆಮಿಕಲ್ಸ್ ಮತ್ತು ಮೆಗ್ನೀಸಿಯಮ್ನಂತಹ ಉತ್ಕರ್ಷಣ ನಿರೋಧಕ ಹೊಂದಿದೆ. ಬೀಟ್ರೂಟ್ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.
ಇದರಲ್ಲಿ ಕಂಡುಬರುವ ನೈಟ್ರೇಟ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ರಕ್ತನಾಳಗಳು ಮತ್ತು ಕೋಶಗಳ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಅನ್ನು ದೈನಂದಿನ ಆಹಾರದಲ್ಲಿ ಸಲಾಡ್ ಆಗಿ ಸೇರಿಸಬಹುದು.
ತ್ರಿಫಲ ಚೂರ್ಣ
ಆಯುರ್ವೇದದಲ್ಲಿ ಪ್ರಮುಖ ಔಷಧಿ ತ್ರಿಫಲ. ಇದು ಹರದ್, ಆಮ್ಲಾ ಮತ್ತು ಬಹೇರಾ ಎಂಬ ಮೂರು ಔಷಧಿಗಳ ಸಂಯೋಜನೆ ಆಗಿದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತನಾಳಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.
ರಾತ್ರಿ ಊಟದ 2 ಗಂಟೆಗಳ ನಂತರ ಒಂದು ಚಮಚ ತ್ರಿಫಲ ಚೂರ್ಣ ಸೇವಿಸುವುದು ಪ್ರಯೋಜನಕಾರಿ. ಇದು ರಕ್ತದೊತ್ತಡ ನಿಯಂತ್ರಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
ಅಶ್ವಗಂಧದ ಸೇವನೆ
ಅಶ್ವಗಂಧ ಒತ್ತಡ ನಿವಾರಿಸುವ ಔಷಧೀಯ ಗುಣ ಹೊಂದಿದೆ. ಇದರ ಸೇವನೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಪ್ರತಿದಿನ ಒಂದು ಚಮಚ ಅಶ್ವಗಂಧವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬಹುದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ನಿಂಬೆ
ಅಧಿಕ ರಕ್ತದೊತ್ತಡ ದೂರವಿಡಲು ನಿಂಬೆ ಸೇವಿಸಿ. ಇದು ರಕ್ತನಾಳಗಳನ್ನು ಹೊಂದಿಕೊಳ್ಳುವ ಮತ್ತು ಮೃದುವಾಗಿಡಲು ಸಹಾಯಕ. ನಿಂಬೆ ರಸವು ಟ್ರೈಗ್ಲಿಸರೈಡ್ ಮಟ್ಟ ಕಡಿಮೆ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆ ಹಣ್ಣು ಹಾಕಿ ಸೇವಿಸಿ ಇದು ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ.
ಇದನ್ನೂ ಓದಿ: ನಿಮ್ಮ ಮಗು ಓದೋಕೆ ಉದಾಸೀನಾ ಮಾಡ್ತಿದ್ಯಾ? ಈ ಟ್ರಿಕ್ಸ್ ಸ್ವಲ್ಪ ಟ್ರೈ ಮಾಡಿ ನೋಡಿ
ದಾಲ್ಚಿನ್ನಿ
ದಾಲ್ಚಿನ್ನಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ, ಆಯುರ್ವೇದ ವೈದ್ಯರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಇದನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕುಡಿಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ