Kids: ರಜೆ ದಿನದಲ್ಲಿ ನಿಮ್ಮ ಮಕ್ಕಳನ್ನು ಚಟುವಟಿಕೆಯಿಂದ ಇಡುವ ಅಭ್ಯಾಸಗಳು

Kids activity: ರಜೆ ದಿನದಲ್ಲಿ ನಿಮ್ಮ ಮಗು ಟಿವಿ ನೋಡುತ್ತಾ ಸಮಯ ವ್ಯರ್ಥಮಾಡುವ ಬದಲು, ಚಟುವಟಿಕೆಗಳಿಂದ ಇಡಲು ನಿಮ್ಮ ಮಕ್ಕಳಿಗೆ ಹೊಸತನವನ್ನು ಕಲಿಸಿರಿ.. ನೀವು ನಿಮ್ಮ ಮಗು ಸದಾ ದೈಹಿಕ ಹಾಗೂ ಮಾನಸಿಕ ಚಟುವಟಿಕೆಯಿಂದ ಕೂಡಿರಲು ನಿಮ್ಮ ಮಕ್ಕಳ ಜೊತೆಗೆ ನೀವು ಆಟ ಆಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇನ್ನೇನು ಶಾಲೆಗಳಲ್ಲಿ(School) ಪರೀಕ್ಷಾ(Exam) ಚಟುವಟಿಕೆಗಳು(Activity) ಆರಂಭವಾಗಿವೆ ಮಕ್ಕಳಿಗೆ(Children) ರಜೆ (Holiday) ನೀಡುವ ಸಮಯ ಬಂದೇಬಿಟ್ಟಿದೆ.. ಕಳೆದ ಕೆಲವು ತಿಂಗಳಿನಿಂದ ಶಾಲೆಯತ್ತ ಮುಖ ಮಾಡಿದ್ದ ಮಕ್ಕಳು ಪರೀಕ್ಷೆ ಮುಗಿಸಿ ಮತ್ತೆ ಮನೆಯಲ್ಲಿ ಪೋಷಕರೊಂದಿಗೆ (Parents)ಕಾಲಕಳೆಯಲು ಕ್ಷಣಗಣನೆ ಶುರುವಾಗಿದೆ.. ಮಾರ್ಚ್(March) ಅಂತ್ಯದ ವೇಳೆಗೆ ಬಹುತೇಕ ಶಾಲೆಗಳಿಗೆ ಬೀಗ ಹಾಕಿ ಮಕ್ಕಳು ತಮ್ಮ ರಜೆಯ ಮಜಾ ಅನುಭವಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.. ಆದರೆ ಮಕ್ಕಳಿಗೆ ರಜೆಯ ಮರಿಯಾ ಕುಷಿಯಾಗಿ ಪೋಷಕರಿಗೆ ಮಕ್ಕಳನ್ನು ಹೇಗೆ ಹಿಡಿದಿಡುವುದು ಎಂಬುದೇ ದೊಡ್ಡ ಚಿಂತೆ. ಏನೇ ಮಾಡಿದರೂ ರಜೆಯ ಸಮಯದಲ್ಲಿ ಮಕ್ಕಳನ್ನು ನಿಯಂತ್ರಣ ಮಾಡುವುದು ಪೋಷಕರಿಗೆ ದೊಡ್ಡ ಸವಾಲು.. ಕೆಲವು ಮಕ್ಕಳ ರಜೆ ಟಿವಿ ಹಾಗೂ ಕಂಪ್ಯೂಟರ್ ಮುಂದೆ ಸೀಮಿತವಾಗುತ್ತದೆ. ಹೀಗಾಗಿ ಈ ರಜೆಯ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ಕೆಲವೊಂದು ಹವ್ಯಾಸಗಳನ್ನು ಬೆಳೆಸುವ ಮೂಲಕ ಅವರನ್ನು ಕಂಟ್ರೋಲ್ ಮಾಡಬಹುದು.

    1) ಪೇಂಟಿಂಗ್: ಪುಟಾಣಿ ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚು.. ಹೀಗಾಗಿ ನೀವು ನಿಮ್ಮ ಮಕ್ಕಳನ್ನು ರಜೆಯ ದಿನಗಳಲ್ಲಿ ಪೇಂಟಿಂಗ್ ನತ್ತ ಆಸಕ್ತಿ ಹೊರಳುವಂತೆ ಮಾಡಿ. ಅದರಲ್ಲೂ ಪುಟ್ಟಮಕ್ಕಳು ಮಾರ್ಬಲ್ ಪೇಂಟಿಂಗ್ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಿ. ಹೀಗೆ ಮಾಡಿದ್ರೆ ನಿಮ್ಮ ಮಕ್ಕಳು ಉತ್ತಮವಾಗಿ ಪೇಂಟಿಂಗ್ ಕಲಿಯುವುದರ ಜೊತೆಗೆ ನಿಮಗೂ ಸಹ ಅನುಕೂಲ ಆಗಲಿದೆ..

    ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರು ಈ ಯೋಗಾಸನಗಳನ್ನು ಮಾಡುವುದು ಒಳಿತು..

    2) ವಿವಿಧ ಬಗೆಯ ಎಲೆಗಳ ಆರಿಸುವ ಚಟುವಟಿಕೆ: ಸಾಮಾನ್ಯವಾಗಿ ಒಂದರಿಂದ 12 ವರ್ಷದ ಮಕ್ಕಳಿಗೆ ಹೆಚ್ಚು ತಿಳಿದುಕೊಳ್ಳುವ ಹಂಬಲ ಇರುತ್ತದೆ. ನಿಮ್ಮ ಮಕ್ಕಳಿಗೆ ರಜೆಯ ದಿನದಲ್ಲಿ ಕಲಿಕೆಯ ಚಟುವಟಿಕೆಯನ್ನು ನೀಡಬೇಕು ಎಂದರೆ ನೀವು ಉದ್ಯಾನವನ ಅಥವಾ ಮನೆಯ ಹೊರಗೆ ಇದ್ದಾಗ ನಿಮ್ಮ ಮಕ್ಕಳಿಗೆ ವಿವಿಧ ಬಗೆಯ ಗಿಡಗಳ ಎಲೆಗಳನ್ನು ಸಂಗ್ರಹಿಸಲು ತಿಳಿಸಿ. ಇದರಿಂದ ನಿಮ್ಮ ಮಕ್ಕಳಿಗೆ ಆ ಗಿಡಗಳ ಪರಿಚಯವೂ ಆಗುತ್ತದೆ ರಜೆ ದಿನದಲ್ಲಿ ಹೊಸ ವಿಷಯ ಕಲಿತ ರೀತಿಯಲ್ಲೂ ಆಗುತ್ತದೆ.

    3) ಫ್ಯಾಮಿಲಿ ಟ್ರೀ: ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕುಟುಂಬದ ಪರಿಚಯ ಮಾಡುವುದು ಅಗತ್ಯ.. ಹೀಗಾಗಿ ರಜೆಯ ಸಂದರ್ಭದಲ್ಲಿ ನಿಮ್ಮ ಮಗು ಮನೆಯಲ್ಲಿದ್ದಾಗ ನಿಮ್ಮ ಮಗುವಿಗೆ ಫ್ಯಾಮಿಲಿ ಟ್ರೀ ಬಿಡಿಸುವುದು ಹೇಗೆ ಎಂದು ತಿಳಿಸಿ ಕೊಡಿ.. ಹೀಗಾಗಿ ಮಗು ನಿಮ್ಮ ವಂಶವಾಹಿನಿಯನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.. ಇದು ಅದಕ್ಕೆ ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಪರಿಚಯ ಸಿಗುತ್ತದೆ..

    4) ಟ್ರಾವೆಲ್ ಅಲ್ಫಬೆಟ್: ಅಕ್ಷರಗಳನ್ನು ಕಲಿಸುವುದರ ಜೊತೆಗೆ ವಿವಿಧ ತಾಣಗಳ ಪರಿಚಯ ಮಾಡಿಕೊಳ್ಳುವುದು ಉತ್ತಮ. ಹೀಗಾಗಿಯೇ ನೀವು ನಿಮ್ಮ ಮಕ್ಕಳ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಪ್ರತಿಯೊಂದು ಕ್ಷಣದಿಂದ ಶುರುವಾಗುವ ಊರುಗಳ ಹೆಸರನ್ನು ಹೇಳುವ ಆಟ ಆಡಿ..  ನಿಮ್ಮ ಮಕ್ಕಳಿಗೆ ಹೊಸ ಸ್ಥಳದ ಬಗ್ಗೆ ಅರಿವು ಮೂಡುತ್ತದೆ.. ಮತ್ತು ಸಂದರ್ಭದಲ್ಲಿ ಹೊಸ ವಿಷಯ ಕಲಿತಂತೆ ಆಗುತ್ತದೆ.

    5) ಕುಟುಂಬದ ಹಿರಿಯರ ಜೊತೆ ಬೆರೆಯಲು ಬಿಡಿ: ರಜೆ ದಿನಗಳಲ್ಲಿ ನಿಮ್ಮ ಮಕ್ಕಳನ್ನು ನಿಮ್ಮ ಪೋಷಕರ ಜೊತೆ ಹೆಚ್ಚಾಗಿ ಇರಲು ಬಿಡಿ.. ನಿಮ್ಮ ಪೋಷಕರು ಹೇಳುವ ಕಥೆಗಳು ನಿಮ್ಮ ಮಕ್ಕಳನ್ನು ಹೆಚ್ಚಾಗಿ ಅವರ ಜೊತೆ ಬೆರೆಯುವಂತೆ ಮಾಡಬಹುದು.. ಅಲ್ಲದೆ ನಿಮಗಿಂತ ನಿಮ್ಮ ಪೋಷಕರ ಜೊತೆ ನಿಮ್ಮ ಮಕ್ಕಳು ಹೆಚ್ಚಾಗಿ ಒಂದು ಕೊಳ್ಳುವುದರಿಂದ ಅವರ ಅನುಭವದ ಮಾತುಗಳು ನಿಮ್ಮ ಮಕ್ಕಳಿಗೂ ಸಿಗಲಿದೆ.

    6) ಅಕ್ಷರ ಆಧಾರದ ಮೇಲೆ ವಸ್ತು ಹುಡುಕುವುದು: ರಜೆ ದಿನದಲ್ಲಿ ನಿಮ್ಮ ಮಗು ಟಿವಿ ನೋಡುತ್ತಾ ಸಮಯ ವ್ಯರ್ಥಮಾಡುವ ಬದಲು, ಚಟುವಟಿಕೆಗಳಿಂದ ಇಡಲು ನಿಮ್ಮ ಮಕ್ಕಳಿಗೆ ಹೊಸತನವನ್ನು ಕಲಿಸಿರಿ.. ನೀವು ನಿಮ್ಮ ಮಗು ಸದಾ ದೈಹಿಕ ಹಾಗೂ ಮಾನಸಿಕ ಚಟುವಟಿಕೆಯಿಂದ ಕೂಡಿರಲು ನಿಮ್ಮ ಮಕ್ಕಳ ಜೊತೆಗೆ ನೀವು ಆಟ ಆಡಿ.. ಪ್ರಮುಖವಾಗಿ ಅಕ್ಷರಗಳ ಆಧಾರದ ಮೇಲೆ ವಸ್ತುಗಳನ್ನು ಹುಡುಕುವ ಚಟುವಟಿಕೆಯನ್ನು ನಿಮ್ಮ ಮಕ್ಕಳಿಗೆ ನೀಡಿ.. ಇದರಿಂದ ರಜೆಯ ಸಂದರ್ಭದಲ್ಲಿ ನಿಮ್ಮ ಮಕ್ಕಳು ಅಕ್ಷರದ ಸ್ಮರಣೆ ಮಾಡಿದಂತೆ ಆಗುತ್ತದೆ.

    ಇದನ್ನೂ ಓದಿ: ಒತ್ತಡದ ಜೀವನಶೈಲಿಯಿಂದ ಹೊರಬರಲು ತಪ್ಪದೇ ಈ ಹವ್ಯಾಸ ಬೆಳೆಸಿಕೊಳ್ಳಿ

    7) ಬಲೂನು ವಾಲಿಬಾಲ್: ಮಕ್ಕಳಿಗೆ ಆಟ ಆಡಿ ಎಂದುಬಿಟ್ಟರೆ ಕೇವಲ ಮಣ್ಣಿನಲ್ಲಿ ಆಟ ಆಡುತ್ತಾರೆ.. ಅಂದ್ರೆ ಮಕ್ಕಳಿಗೆ ಮಣ್ಣಿನಲ್ಲಿ ಆಟ ಆಡುವುದಕ್ಕಿಂತ ಬಲೂನ್ ಕಂಡರೆ ಏನೋ ಆಕರ್ಷಣೆ.. ಹೀಗಾಗಿಯೇ ನಿಮ್ಮ ಮಕ್ಕಳನ್ನು ಮನಸ್ಸನ್ನು ಉಲ್ಲಾಸಭರಿತರನ್ನಾಗಿ ಇಡಲು ಆಗು ಅವರಿಗೆ ದೈಹಿಕ ಚಟುವಟಿಕೆ ನೀಡಲು ನಿಮ್ಮ ಮಕ್ಕಳ ಜೊತೆಗೆ ಬಲೂನ್ ವಾಲಿಬಾಲ್ ಆಟ ಆಡಿ.. ಬಲೂನ್ ಹಿಡಿಯುವ ತವಕದಲ್ಲಿ ನಿಮ್ಮ ಮಕ್ಕಳು ಎಲ್ಲಾ ಕಡೆ ಓಡಾಡಿ ಅವರಿಗೆ ದೈಹಿಕ ಚಟುವಟಿಕೆ ಸಿಗುತ್ತದೆ..
    Published by:ranjumbkgowda1 ranjumbkgowda1
    First published: