Diabetes: ಮನೆಯಲ್ಲಿಯೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳುತ್ತೀರಾ? ಈ ತಪ್ಪುಗಳನ್ನು ಮಾಡಬೇಡಿ..!

ನಿಖರವಾದ ರೀಡಿಂಗ್‌ಗಳನ್ನು ಪಡೆಯಲು ಮನೆಯಲ್ಲಿನ ಕಿಟ್‌ಗಳನ್ನು ಬಳಸುವ ಸೂಕ್ತ ವಿಧಾನ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಮನೆಯಲ್ಲಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸುವಾಗ ಜನರು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಜಾಸ್ತಿಯಾದಾಗ ಅಂತಹ ಅನಾರೋಗ್ಯಕರ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಈಗಂತೂ ಪ್ರತಿ ಮನೆಯಲ್ಲಿ ಒಬ್ಬರಿಗಂತೂ ಈ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವುದು ಸಾಮಾನ್ಯವಾಗಿದೆ. ಈ ಮಧುಮೇಹದಲ್ಲಿ ಮೂರು ವಿಧಗಳಿದ್ದು, ಅದರಲ್ಲಿ ಟೈಪ್ 1 ಮಧುಮೇಹ (Type 1 diabetes), ಟೈಪ್ 2 ಮಧುಮೇಹ ಮತ್ತು ಗರ್ಭಧಾರಣೆಯ ಮಧುಮೇಹ ಎಂದು ಹೇಳಲಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವಾಗ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕಾಗುತ್ತದೆ. ಈಗಂತೂ ಮನೆಯಲ್ಲಿಯೇ ಕುಳಿತು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು (Blood Sugar Level) ಪರೀಕ್ಷಿಸಿಕೊಳ್ಳಬಹುದು.

ಈಗಂತೂ ಅನೇಕ ಸಾಧನಗಳು ಬಂದಿದ್ದು, ಮನೆಯಲ್ಲಿಯೇ ಗ್ಲೂಕೋಸ್ ಮಟ್ಟವನ್ನು ನಾವು ಪರೀಕ್ಷಿಸಿಕೊಳ್ಳಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದು ತುಂಬಾನೇ ಮುಖ್ಯವಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಲು ಲ್ಯಾಬ್‌ಗೆ ಹೋಗುವುದು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಮನೆಯಲ್ಲಿಯೇ ಅನೇಕ ಪರೀಕ್ಷೆ ಮಾಡಿಕೊಳ್ಳುವ ಕಿಟ್‌ಗಳು ಬಂದಿವೆ.

ಸಾಂದರ್ಭಿಕ ಚಿತ್ರ


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳುವಾಗ ಆಗುವ ತಪ್ಪುಗಳು

ನಿಖರವಾದ ರೀಡಿಂಗ್‌ಗಳನ್ನು ಪಡೆಯಲು ಮನೆಯಲ್ಲಿನ ಕಿಟ್‌ಗಳನ್ನು ಬಳಸುವ ಸೂಕ್ತ ವಿಧಾನ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಮನೆಯಲ್ಲಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸುವಾಗ ಜನರು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಇಲ್ಲಿವೆ.

ಹಳೆಯ ಟೆಸ್ಟಿಂಗ್ ಸ್ಟ್ರೀಪ್ಸ್ ಬಳಸುವುದು:ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಇದು ಒಂದು. ವಾಸ್ತವವಾಗಿ ಟೆಸ್ಟಿಂಗ್ ಸ್ಟ್ರೀಪ್ಸ್ ಕೆಲವೊಮ್ಮೆ ಅವಧಿ ಮೀರಿದ ದಿನಾಂಕದೊಂದಿಗೆ ಬರುತ್ತವೆ ಎಂದು ಕೆಲವರಿಗೆ ತಿಳಿದಿಲ್ಲ. ಹಳೆಯ ಸ್ಟ್ರೀಪ್ಸ್ ಬಳಸಬಾರದು. ಏಕೆಂದರೆ ಅವು ನಿಖರವಲ್ಲದ ರೀಡಿಂಗ್‌ಗಳನ್ನು ಒದಗಿಸಬಹುದು.

ಪರೀಕ್ಷೆಯ ಸಮಯದ ಬಗ್ಗೆ ಜಾಗರೂಕರಾಗದೇ ಇರುವುದು:ತುಂಬಾ ಮುಂಚಿತವಾಗಿ ಅಥವಾ ತುಂಬಾ ತಡವಾಗಿ ಪರೀಕ್ಷೆ ಮಾಡಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ವ್ಯತ್ಯಾಸ ಉಂಟು ಮಾಡಬಹುದು. ವೈದ್ಯರು ನೀಡಿದ ಸೂಚನೆಗಳ ಪ್ರಕಾರ ಪರೀಕ್ಷಿಸಲು ಶಿಫಾರಸು ಮಾಡಲಾಗಿದ್ದರೂ, ನಿಖರವಾದ ಫಲಿತಾಂಶಗಳಿಗಾಗಿ ಬೆಳಗ್ಗೆಯ ಉಪಾಹಾರದ 2 ಗಂಟೆಗಳ ನಂತರ ಪರೀಕ್ಷಿಸಲು ವೈದ್ಯರು ಸೂಚಿಸುತ್ತಾರೆ.

ಇದನ್ನೂ ಓದಿ: Deepavali Sweets: ಈ ದೀಪಾವಳಿಗೆ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ, ಸುಲಭದ ರೆಸಿಪಿ ಇಲ್ಲಿದೆ

ಪರೀಕ್ಷೆ ಮಾಡಿಕೊಳ್ಳುವ ದಿನಚರಿಯಲ್ಲಿ ವ್ಯತ್ಯಾಸ:ಪ್ರತಿದಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಎಷ್ಟು ಮುಖ್ಯವೋ, ಅದರ ರೀಡಿಂಗ್ ಅನ್ನು ಸಹ ಅಷ್ಟೇ ಸ್ಥಿರವಾಗಿ ಮತ್ತು ಸಮಯೋಚಿತವಾಗಿ ಇಡುವುದು ಸಹ ಅತ್ಯಗತ್ಯ. ಅದಕ್ಕಾಗಿ ನೀವು ಪರೀಕ್ಷೆ ಮಾಡುವ ಸಮಯವನ್ನು ಬದಲಾಯಿಸಬೇಡಿ.

ಕೊಳಕು ಕೈಗಳನ್ನು ಹೊಂದಿರುವುದು: ಕೈಯ ಮೇಲ್ಮೈಯಲ್ಲಿರುವ ಕೊಳಕು, ಉಪ್ಪು, ಸಕ್ಕರೆ ಅಥವಾ ಇತರ ಕಣಗಳು ಪರೀಕ್ಷಿಸುವಾಗ ಫಲಿತಾಂಶಗಳನ್ನು ಹಾಳು ಮಾಡಬಹುದು. ನಿಖರವಾದ ಫಲಿತಾಂಶಗಳನ್ನು ಪಡೆಯಲು, ಕೈಗಳನ್ನು ತೊಳೆಯುವುದು ಮತ್ತು ಅವು ಸಂಪೂರ್ಣವಾಗಿ ಸ್ವಚ್ಛವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ.

ಪರೀಕ್ಷಾ ಕಿಟ್ ಅನ್ನು ಮನಸ್ಸಿಲ್ಲದೆ ಆಯ್ಕೆ ಮಾಡುವುದು:ಪರೀಕ್ಷಾ ಕಿಟ್ ಆರಿಸಿಕೊಳ್ಳುವಾಗ ಒಬ್ಬರ ಜೀವನಶೈಲಿ, ಆರೋಗ್ಯ ಮತ್ತು ಹೆಚ್ಚಿನವುಗಳ ಎಲ್ಲಾ ಅಂಶಗಳನ್ನು ಪರಿಗಣಿಸುವುದು ಮುಖ್ಯ. ವಿವಿಧ ಪರೀಕ್ಷಾ ಕಿಟ್ ಗಳು ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಅದು ವಿವಿಧ ಅವಶ್ಯಕತೆಗಳನ್ನು ಪೂರೈಸುತ್ತದೆ. ಉದಾಹರಣೆಗೆ, ಯಾವಾಗಲೂ ಬೇರೆ ಕಡೆಗೆ ಓಡಾಡುವ ವ್ಯಕ್ತಿಗೆ ಮನೆಯಲ್ಲಿ ಉಳಿಯುವ ವ್ಯಕ್ತಿಗೆ ಹೋಲಿಸಿದರೆ ಸಣ್ಣ ಗಾತ್ರದ ಪೋರ್ಟಬಲ್ ಕಿಟ್ ಬೇಕಾಗಬಹುದು.
Published by:Anitha E
First published: