ಈ ದೇಹದ ಹೊರ ಭಾಗದ ಮೇಲೆ ಹುಣ್ಣು ಅಥವಾ ಗಾಯವಾದರೆ ಅದಕ್ಕೆ ಮುಲಾಮು ಅಥವಾ ಸ್ವಲ್ಪ ಡೇಟಾಲ್ ಸಹಾಯದಿಂದ (Help) ಅದನ್ನು ಆಗಾಗ ಸ್ವಚ್ಛ ಮಾಡಿಕೊಂಡು ಡ್ರೆಸಿಂಗ್ (Dressing) ಮಾಡಿಸಿಕೊಳ್ಳಬಹುದು. ಆದರೆ ಈ ದೇಹದ ಒಳಗೆ ಆಗುವ ಹುಣ್ಣುಗಳ ನೋವನ್ನು ತಾಳುವುದು ಕಷ್ಟ ಮತ್ತು ಅವುಗಳನ್ನು ಬೇಗನೆ ಗುಣಪಡಿಸಿಕೊಳ್ಳುವುದು ಸಹ ಸ್ವಲ್ಪ ಕಷ್ಟ ಅಂತಾನೆ ಹೇಳಬಹುದು. ಅದರಲ್ಲೂ ಈ ಮೂಗಿನ ಒಳಗೆ, ಬಾಯಿಯ (Mouth) ಒಳಗೆ, ಕಿವಿಯ ಒಳಗಿನ ಚರ್ಮ ತುಂಬಾನೇ ಮೃದುವಾಗಿದ್ದು, ಹುಣ್ಣುಗಳಾದರೆ ಆ ನೋವನ್ನು (Pain) ಸಹಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಬಿಡಿ. ಹೌದು ಈ ಬಾಯಿಯಲ್ಲಿ ಆಗುವ ಹುಣ್ಣುಗಳು ತುಂಬಾನೇ ನೋವು ಕೊಡುತ್ತವೆ.
ಬಾಯಿಯಲ್ಲಿ ಆಗುವ ಹುಣ್ಣುಗಳು ಅತ್ಯಂತ ನೋವಿನಿಂದ ಕೂಡಿದ್ದು, ಆಹಾರವನ್ನು ತಿನ್ನಲು, ನೀರನ್ನು ಮತ್ತು ಪಾನೀಯಗಳನ್ನು ಕುಡಿಯಲು ಮತ್ತು ಸರಿಯಾಗಿ ಮಾತನಾಡಲು ಸಹ ತುಂಬಾನೇ ಕಷ್ಟವಾಗುತ್ತದೆ.
ಈ ರೀತಿಯ ಬಾಯಿ ಹುಣ್ಣುಗಳಿಗೆ ವೈದ್ಯರ ಬಳಿ ಹೋಗಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಅದರ ಜೊತೆಗೆ ನಿಮ್ಮ ಬಾಯಿಗೆ ಹಿತ ಅಂತ ಅನ್ನಿಸುವ ಆಹಾರವನ್ನು ಸೇವಿಸುವುದು ಸಹ ಬಹಳ ಮುಖ್ಯ. ಪೌಷ್ಟಿಕ ತಜ್ಞೆ ರೂಪಾಲಿ ದತ್ತಾ ಅವರು "ನಿಮ್ಮ ಬಾಯಿ ಎಂತಹ ಆಹಾರವನ್ನು ತಿನ್ನಲು ಆಸ್ಪದ ನೀಡುತ್ತದೆ ಅಂತ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ” ಅಂತ ಹೇಳುತ್ತಾರೆ.
ಹೀಗೆ ನಿಮ್ಮ ಬಾಯಿಯಲ್ಲಿ ಹುಣ್ಣಾದರೆ, ನೀವು ದೂರವಿರಬೇಕಾದ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನೀವು ಬಾಯಿಯ ಹುಣ್ಣು ನೋವಿನಿಂದ ಬಳಲುತ್ತಿದ್ದರೆ, ಈ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.
ಬಾಯಿಯಲ್ಲಿ ಹುಣ್ಣಿದ್ದರೆ ಈ ರೀತಿಯ ಆಹಾರಗಳಿಂದ ದೂರವಿರಿ..
ಬಾಯಿಯಲ್ಲಿ ಹುಣ್ಣಾಗಿದ್ದಾಗ ಮೊದಲನೆಯದಾಗಿ, ನಿಮ್ಮ ಆರಾಮದಾಯಕ ಆಹಾರ ಯಾವುದು ಅಂತ ಕಂಡು ಹಿಡಿಯುವುದು ಮುಖ್ಯ. ಇದು ನಿಮ್ಮ ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಉಂಟು ಮಾಡದ ಯಾವುದೇ ಆಹಾರವಾಗಿರಬಹುದು. ನುಂಗಲು ಸುಲಭವಾದ ಮತ್ತು ಮೃದುವಾದ ಆಹಾರವನ್ನು ತಿನ್ನಲು ಸೂಚಿಸಲಾಗಿದೆ. ಸೂಪ್, ಮೊಸರು, ದಾಲ್ ಮತ್ತು ಖಿಚಡಿ ಈ ಸಮಯದಲ್ಲಿ ನಿಮ್ಮ ಊಟದಲ್ಲಿ ನೀವು ಸೇವಿಸಬಹುದಾದ ಕೆಲವು ಆಹಾರಗಳಾಗಿವೆ.
ಇದಲ್ಲದೆ, ಸಾಕಷ್ಟು ನೀರನ್ನು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ನೀರು ಸುಡುವ ಸಂವೇದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಬಾಯಿ ಹುಣ್ಣಿಗೆ ಮನೆಮದ್ದುಗಳಿಂದ ಚಿಕಿತ್ಸೆ ನೀಡಬಹುದೇ?
ಹೆಚ್ಚಿನ ಸಂದರ್ಭಗಳಲ್ಲಿ, ಬಾಯಿ ಹುಣ್ಣುಗಳು ಯಾವುದೇ ಚಿಕಿತ್ಸೆಯಿಲ್ಲದೆ ಸ್ವಾಭಾವಿಕವಾಗಿ ಗುಣವಾಗುತ್ತವೆ. ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳುವುದು ತುಂಬಾನೇ ಉಪಯುಕ್ತವಾಗಿದೆ. ಮನೆಯಲ್ಲಿ ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು. ಒಂದು ಚಮಚ ಉಪ್ಪನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸಿ.
ಲವಣಯುಕ್ತ ನೀರಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಪರಿಹಾರವನ್ನು ನೀಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇಷ್ಟಾದರೂ ಬಾಯಿಯಲ್ಲಿನ ಹುಣ್ಣು ಕಡಿಮೆಯಾಗದೆ ಇದ್ದರೆ, ವೈದ್ಯರಿಂದ ಸಲಹೆ ಪಡೆಯಿರಿ.
ಬಾಯಿಯಲ್ಲಿ ಹುಣ್ಣಾದಾಗ ಈ 6 ಆಹಾರಗಳನ್ನು ಸೇವಿಸಬೇಡಿ..
1. ಖಾರವಾದ ಮಸಾಲೆಯುಕ್ತ ಆಹಾರ
ಖಾರವಾದ ಮತ್ತು ಮಸಾಲೆಯುಕ್ತ ಆಹಾರವು ಬಾಯಿಯಲ್ಲಿ ಕಿರಿಕಿರಿ ಮತ್ತು ಉರಿಯೂತವನ್ನು ಉಂಟು ಮಾಡುವ ಮೂಲಕ ಬಾಯಿ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತವೆ. ಮಸಾಲೆಯುಕ್ತ ಆಹಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ವ್ಯಕ್ತಿಯ ನೋವು ಇನ್ನಷ್ಟು ಜಾಸ್ತಿ ಆಗುವ ಅವಕಾಶಗಳು ತುಂಬಾನೇ ಇರುತ್ತವೆ. ಕೆಂಪು ಮೆಣಸಿನಕಾಯಿ, ಮಸಾಲೆಯುಕ್ತ ಚಟ್ನಿಗಳು ಮತ್ತು ಹೆಚ್ಚು ಮಸಾಲೆ ಭಕ್ಷ್ಯಗಳಿಂದ ದೂರವಿರುವುದು ಉತ್ತಮ.
2. ಸಿಟ್ರಸ್ ಇರುವ ಆಹಾರ ಪದಾರ್ಥಗಳು
ಸಿಟ್ರಸ್ ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಬಾಯಿಯಲ್ಲಿ ಹುಣ್ಣು ಆಗಿರುವಾಗ ಈ ಆಹಾರಗಳನ್ನು ಆದಷ್ಟು ದೂರವಿಡಿ. ಸಿಟ್ರಸ್ ಹಣ್ಣುಗಳು ಮತ್ತು ತರಕಾರಿಗಳು, ವಿಶೇಷವಾಗಿ ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಈ ಹಣ್ಣುಗಳು ನಿಮ್ಮ ಬಾಯಿಯ ಹುಣ್ಣು ಮತ್ತು ಗುಳ್ಳೆಗಳಿಗೆ ಗಂಭೀರ ಕಿರಿಕಿರಿಯನ್ನು ಉಂಟು ಮಾಡಬಹುದು.
3. ಕಾರ್ಬೊನೇಟೆಡ್ ಪಾನೀಯಗಳು
ಫಿಜಿ, ಸೋಡಾ ಪಾನೀಯಗಳು ಬಾಯಿ ಹುಣ್ಣುಗಳಿಗೆ ಕಾರಣವಲ್ಲ. ಕಾರ್ಬೊನೇಟೆಡ್ ಪಾನೀಯಗಳು ಆಮ್ಲವನ್ನು ಹೊಂದಿರುತ್ತವೆ, ಅದು ನಿಮ್ಮ ಬಾಯಿಯ ಮೃದು ಅಂಗಾಂಶಗಳನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಹುಣ್ಣುಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಅವುಗಳಲ್ಲಿರುವ ಹೆಚ್ಚಿನ ಸಕ್ಕರೆ ಅಂಶವು ಸೋಂಕುಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
4. ಕೆಫೀನ್ ಇರುವ ಕಾಫಿ
ಕಾಫಿ ಪ್ರಿಯರು, ವಿಶೇಷವಾಗಿ ಅವರ ಬಾಯಿಯಲ್ಲಿ ನೋವಿನ ಹುಣ್ಣುಗಳಿದ್ದರೆ, ಕಾಫಿ ಸೇವನೆಯಿಂದ ದೂರವಿರುವುದು ಒಳ್ಳೆಯದು. ಕಾಫಿಯಲ್ಲಿ ಸ್ಯಾಲಿಸಿಲೇಟ್ ಗಳು ಅಧಿಕವಾಗಿರುವುದರಿಂದ, ಇದು ನಿಮ್ಮ ಒಸಡುಗಳು ಮತ್ತು ನಾಲಿಗೆಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ನೀವು ತುಂಬಾನೇ ಕಾಫಿ ಕುಡಿಯವವರಾಗಿದ್ದರೆ, ಅದನ್ನು ಕಡಿಮೆ ಮಾಡುವುದು ಒಳ್ಳೆಯದು.
5. ಆಲ್ಕೋಹಾಲ್ ನಿಂದ ದೂರವಿರಬೇಕು
ಆಲ್ಕೋಹಾಲ್ ಕುಡಿಯುವುದರಿಂದ ಯಾರಿಗೂ ಎಂದಿಗೂ ಏನೂ ಪ್ರಯೋಜನಗಳು ಆಗಿಲ್ಲ. ಆಲ್ಕೋಹಾಲ್ ನಮ್ಮ ಬಾಯಿಯನ್ನು ಇನ್ನಷ್ಟು ಒಣಗಿಸುತ್ತದೆ ಮತ್ತು ನಮ್ಮ ಬಾಯಿಯಲ್ಲಿರುವ ರಕ್ಷಣಾತ್ಮಕ ಪದರವನ್ನು ಹಾನಿಗೊಳಿಸುತ್ತದೆ. ಇದು ಗುಣಪಡಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಹೆಚ್ಚುವರಿಯಾಗಿ ನೋವು ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ.
6. ಅತ್ಯಂತ ಬಿಸಿ ಮತ್ತು ತಂಪಾದ ಆಹಾರ
ಬಾಯಿ ಹುಣ್ಣುಗಳಿಗೆ ತುಂಬಾ ಬಿಸಿ ಆಹಾರ ಅಥವಾ ತುಂಬಾ ತಂಪಾದ ಆಹಾರವು ಸೂಕ್ತವಾಗಿರುವುದಿಲ್ಲ, ಏಕೆಂದರೆ ಅವು ಹೆಚ್ಚು ಸೂಕ್ಷ್ಮವಾಗಿರುತ್ತವೆ. ಮಧ್ಯಮ ತಾಪಮಾನದಲ್ಲಿ ಆಹಾರವನ್ನು ಸೇವಿಸುವುದು ಉತ್ತಮ, ಇದು ಹುಣ್ಣನ್ನು ಪ್ರಚೋದಿಸುವುದಿಲ್ಲ. ಐಸ್ ಕ್ರೀಮ್, ಕುಲ್ಫಿಗಳು, ತುಂಬಾ ಬಿಸಿ ಸೂಪ್ ಇತ್ಯಾದಿಗಳಿಂದ ಸಹ ಸ್ವಲ್ಪ ದೂರವಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ