Sleeping Tips:ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಬೇಕಾದರೆ ಈ ಆಹಾರಗಳನ್ನ ತಿನ್ನಬೇಡಿ

Foods To Avoid : ನಿದ್ದೆ ಸರಿಯಾಗಿ ಆಗಿಲ್ಲ ಎಂದಾದರೆ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತೆ. ಕಿರಿಕಿರಿ, ಆತಂಕ, ಆಲಸ್ಯ ಇಂತಹ ಸಮಸ್ಯೆಗಳು ಎದುರಾಗುತ್ತವೆ. ನಿಮಗೆ ತಿಳಿಯದ ಹಾಗೇ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿರುತ್ತೆ. ಹೀಗಾಗಿ ಮನುಷ್ಯ ಹುಮ್ಮಸ್ಸಿನಿಂದ, ಆಕ್ಟೀವ್(Active)​ನಿಂದ ಇರಲು ರಾತ್ರಿ ನಿದ್ದೆ ಬಹಳ ಮುಖ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈ ಡಿಜಿಟಲೀಕರಣದ ಯುಗದಲ್ಲಿ ನಿದ್ದೆ(Sleep) ಬರುತ್ತಿಲ್ಲ ಎನ್ನುವುದನ್ನ ಎಲ್ಲರ ಬಾಯಲ್ಲೂ ಕೇಳಿರುತ್ತೆವೆ. ಕೆಲಸದ ಒತ್ತಡ(Work Stress) , ಜೀವನ ಶೈಲಿ(Life Style) ಎಲ್ಲ ಬದಲಾಗಿ ಹೋಗಿದೆ. ರಾತ್ರಿಯಾದರೆ ಸರಿಯಾಗಿ ನಿದ್ದೆ ಬರುವುದಿಲ್ಲ ಎನ್ನುವುದನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರ ಬಹುದೊಡ್ಡ ಸಮಸ್ಯೆಯಾಗಿದೆ. ನಿದ್ದೆ ಸರಿಯಾಗಿ ಆಗಿಲ್ಲ ಎಂದಾದರೆ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತೆ. ಕಿರಿಕಿರಿ, ಆತಂಕ, ಆಲಸ್ಯ ಇಂತಹ ಸಮಸ್ಯೆಗಳು ಎದುರಾಗುತ್ತವೆ. ನಿಮಗೆ ತಿಳಿಯದ ಹಾಗೇ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿರುತ್ತೆ. ಹೀಗಾಗಿ ಮನುಷ್ಯ ಹುಮ್ಮಸ್ಸಿನಿಂದ, ಆಕ್ಟೀವ್(Active)​ನಿಂದ ಇರಲು ರಾತ್ರಿ ನಿದ್ದೆ ಬಹಳ ಮುಖ್ಯ. ಉತ್ತಮ ನಿದ್ರೆಗಾಗಿ, ಆರೋಗ್ಯಕರ ಆಹಾರ (Food for better sleep), ಪೋಷಕಾಂಶಗಳು ಇರುವ ಆಹಾರಗಳನ್ನೇ ಸೇವಿಸಬೇಕು. ರಾತ್ರಿ ಹೊತ್ತು ನೀವು ಏನು ತಿನ್ನುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತೆ. ಹಾಗಿದ್ದರೆ ರಾತ್ರಿ ಯಾವ ಆಹಾರವನ್ನ ಸೇವಿಸಿದರೆ ನಿದ್ದೆ ಚೆನ್ನಾಗಿ ಬರುತ್ತೆ ಅಂತ ಇಲ್ಲಿದೆ ಸಂಪೂರ್ಣ ವಿವರ.

    ರಾತ್ರಿ ಮಲಗುವ ಮುನ್ನ ಇವುಗಳನ್ನ ಸೇವಿಸಬೇಡಿ

    1. ಮಲಗುವ ಮುನ್ನ ಭಾರೀ ಆಹಾರಗಳು ಬೇಡ
    ಹೌದು ನೀವು ಮಲಗುವ ಮುನ್ನ ನಿಮ್ಮ ಹೊಟ್ಟೆಗ ಭಾರ ಎನಿಸುವ ಆಹಾರಗಳನ್ನು ಸೇವಿಸಬೇಡಿ. ಭಾರೀ ಆಹಾರಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೆ. ಕೊಬ್ಬಿನಾಂಶ ಹೆಚ್ಚಿರುವ ಆಹಾರ, ಪನೀರ್​​ ಹಾಗೂ ಕರಿದ ಆಹಾರಗಳು ಅಜೀರ್ಣವನ್ನು ಉಂಟುಮಾಡುತ್ತದೆ. ಈ ರೀತಿಯಾದಗ ರಾತ್ರಿ ಪದೇ ಪದೇ ನೀವು ಎಚ್ಚರಗೊಳ್ಳಬಹುದು. ಚೀಸ್​ ಐಟಂಗಳು, ಫ್ರೈಸ್​, ಜಂಕ್​ ಪುಡ್​ಗಳನ್ನ ರಾತ್ರಿ ಹೊತ್ತು ತಿನ್ನುವುದನ್ನ ಬಿಟ್ಟುಬಿಡಿ.

    2. ನೀರಿನಾಂಶ ಹೆಚ್ಚಿರುವ ಆಹಾರ ಬೇಡ

    ಇದನ್ನೂ ಓದಿ: ತ್ವಚೆಯ ಕಾಂತಿಗೆ ಮೊಸರಿನ ಮ್ಯಾಜಿಕ್ ಫೇಸ್​ ಪ್ಯಾಕ್ ಬಳಸಿ

    ನೀರಿನಾಂಶ ಹೆಚ್ಚಿರುವ ಆಹಾರವನ್ನ ಮಲಗುವ ಮುನ್ನ ತಿಂದರೆ ಪದೇ ಪದೇ ಮೂತ್ರ ವಿಸರ್ಜನಗೆ ಪದೇ ಪದೇ ಏಳಬೇಕಾಗುತ್ತೆ. ಇದರಿಂದ ನಿಮ್ಮ ನಿದ್ದೆ ಅರ್ಧದಲ್ಲೇ ಹೋಗುತ್ತೆ. ಸಾಕಷ್ಟು ನೀರು ಕುಡಿಯುವುದು ಆರೋಗ್ಯವನ್ನು ಚೆನ್ನಾಗಿಡಲು ಪ್ರಮುಖ ಕಾರಣವಾಗಿದೆ. ಆದರೆ ರಾತ್ರಿ ಹೊತ್ತು ನಿದ್ದು ಹಾಳಾಗದಂತೆ ತಡೆಯಲು ರಾತ್ರಿ ಆಹಾರದಲ್ಲಿ ನೀರಿನಾಂಶ ಹೆಚ್ಚಿರುವ ಪದಾರ್ಥಗಳಿಂದ ದೂರವಿರುವುದು ಉತ್ತಮ.

    3. ಮದ್ಯಪಾನ ಮಾಡಲೇ ಬೇಡಿ
    ಬಿಯರ್​​, ಹಾಗೂ ವೈನ್ ಕುಡಿದರೆ ನಿದ್ರೆ ಚೆನ್ನಾಗಿ ಬರುತ್ತೆ ಕೆಲವುರು ಹೇಳುತ್ತಾರೆ. ಇದನ್ನ ಕೇಳಿ ನೀವು ಈ ಚಟಗಳಿಗೆ ದಾಸರಾಗಬೇಡಿ.ರಾತ್ರಿ ಹೊತ್ತು ನಿದ್ದೆಗಾಗಿ ಮದ್ಯದ ಮೊರೆ ಹೋಗುವುದು ತಪ್ಪು. ಆಲ್ಕೊಹಾಲ್​ ಸೇವನೆಯಿಂದ ನಿದ್ದೆಯೇನೋ ಬರಬಹುದು. ಆದರೆ ಇದೇ ಚಟವಾಗಿ ಬಿಟ್ಟರೆ ನಂತರ ನೈಸರ್ಗಿಕವಾಗಿ ನಿದ್ದೆ ಬರುವುದು ಕಷ್ಟವಾಗಿ ಬಿಡುತ್ತೆ. ನಿದ್ದೆ ಮಾಡಬೇಕು ಅಂದರೆ ಆಲ್ಕೊಹಾಲ್​ ಬೇಕು ಅನಿಸಲು ಶುರುವಾಗುತ್ತೆ.

    4. ಕಾಫಿ, ಟೀ ಸಿಹಿತಿಂಡಿಗಳನ್ನ ಸೇವಿಸಬೇಡಿ
    ಅನೇಕ ಆಹಾಗಳಲ್ಲಿ ಕೆಫೀನ್​ ಇರುತ್ತೆ. ಟೀ, ಸೋಡಾಗಳಲ್ಲಿ ಸಾಮನ್ಯವಾಗಿ ಕೆಫೀನ್​ ಇದ್ದೆ ಇರುತ್ತೆ. ಕೆಲ ಐಸ್​ ಕ್ರೀಮ್​ ಮತ್ತು ಸಿಹಿ ತಿಂಡಿಗಳಲ್ಲಿ ಎಸ್ಪ್ರೆಸೊ, ಕಾಫಿ ಅಥವಾ ಚಾಕೊಲೇಟ್ ಇರುತ್ತದೆ. ಚಾಕೊಲೇಟ್‌ಗಳು (chocolate) ಇತರ ಕೆಫೀನ್ ಭರಿತ ಆಹಾರಗಳಂತೆಯೇ ಕೆಲಸ ಮಾಡುತ್ತದೆ. ಇದು ನಿಮ್ಮ ನಿದ್ದೆಗೆ ಅಡ್ಡಿಯಾಗಬಹುದು.

    5. ಮಸಾಲೆಯುಕ್ತ ಆಹಾರ ಮುಟ್ಟಲೇ ಬೇಡಿ
    ಮಸಾಲೆಯುಕ್ತ ಆಹಾರವು ರಾತ್ರಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನೈಸರ್ಗಿಕವಾಗಿ, ನಿಮ್ಮ ದೇಹದ ಉಷ್ಣತೆಯು ನಿದ್ರೆಯ ಸಮಯದಲ್ಲಿ ಕಡಿಮೆ ಇರಬೇಕು. ಆದರೂ ಮಸಾಲೆ ಪದಾರ್ಥಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಮಸಾಲೆ ಆಹಾರವನ್ನು (spicy food) ಸೇವಿಸಲೇ ಬೇಕೆಂದಿದ್ದರೆ ಅದನ್ನು ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಸೇವಿಸಿ. ರಾತ್ರಿ ಊಟಕ್ಕೆ ಬೇಡ.

    ಇದನ್ನೂ ಓದಿ: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?

    ಉಳಿದಂತೆ ಸ್ವೀಟ್ಸ್​ಗಳನ್ನು ಸೇವಿಸಬೇಡಿ ನಿಮ್ಮ ನಿದ್ದೆ ಸಮಯಕ್ಕೂ ಹಾಗೂ ಊಟದ ಸಮಯಕ್ಕೆ ಕನಿಷ್ಠ ಎರಡು ತಾಸುಗಳ ಅಂತರವಿರಲಿ.

    ವರದಿ - ವಾಸುದೇವ್​. ಎಂ
    Published by:Sandhya M
    First published: