ನೀವು ಎಂದಾದರೂ ಸ್ಕಿನ್‌ಕೇರ್ ಮಿಶ್ರಣ ಶಾಸ್ತ್ರದ (Skin Care Products) ಬಗ್ಗೆ ಕೇಳಿದ್ದೀರಾ? ಇಂದು ಸ್ಕಿನ್‌ಕೇರ್ ಮಾರ್ಕೆಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳಲ್ಲಿ ಇದೂ ಒಂದಾಗಿದೆ. ಅಂದರೆ ಸ್ಕಿನ್‌ಕೇರ್ ಪದಾರ್ಥಗಳನ್ನು ಮಿಶ್ರಣ ಮಾಡಿ ಸರಳವಾಗಿ ಅನ್ವಯಿಸುವುದಾಗಿದೆ. ಇಂಥದ್ದೊಂದು ಟ್ರೆಂಡ್‌ಅನ್ನು (Fashion Trend) ನೀವು ಫಾಲೋ ಮಾಡುವ ಮೊದಲು ಕೆಲವಷ್ಟು ಪ್ರಮುಖ ವಿಷಯಗಳನ್ನು ತಿಳಿದಿರಬೇಕು. ನೀವು ಬೇರೆ ಬೇರೆ ಪದಾರ್ಥಗಳನ್ನು ಒಟ್ಟಿಗೆ ಬಳಸುವ ಮೊದಲು ಅವು ಹೇಗೆ ಪ್ರತಿಕ್ರಿಯಿಸುತ್ತವೆ ಅನ್ನೋದನ್ನು ತಿಳಿದಿರಬೇಕು. ವಿಭಿನ್ನ ಸ್ಕಿನ್ ಕೇರ್ ಪ್ರಾಡಕ್ಟ್‌ಗಳನ್ನು ಬಳಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರೆ ನೀವು ಬೇರೆ ಬೇರೆ ಸ್ಕಿನ್ ಕೇರ್ (Skin Care) ಪದಾರ್ಥಗಳನ್ನು ಮಿಶ್ರಣ ಮಾಡುತ್ತೀರೆಂದಾದರೆ ಆ ಬಗ್ಗೆ ನೀವು ತಿಳಿದುಕೊಳ್ಳುವುದು ಒಳಿತು.
ಅಲ್ಲದೇ ಹೋದಲ್ಲಿ ನಿಮ್ಮ ತ್ವಚೆಯ ಮೇಲೆ ಇರಿಟೇಶನ್, ಶುಷ್ಕತೆ ಅಥವಾ ಒಡೆಯುವಿಕೆಯಂತಹ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ಯಾವುದರ ಕಾಂಬಿನೇಶನ್ ತ್ವಚೆಗೆ ಹೇಗೆ ಹಾನಿ ಮಾಡಬಹುದು ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ.
ಅಂಕಣಗಾರ್ತಿ ಹಾಗೂ ಮಾಜಿ ಮಿಸ್ ಇಂಡಿಯಾ ಕ್ವೀನಿ ಸಿಂಗ್ ಅವರು ನೀವು ಎಂದಿಗೂ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಲೇ ಬಾರದಂಥ ಸ್ಕಿನ್ ಕೇರ್ ಪದಾರ್ಥಗಳ ಬಗ್ಗೆ ಹೇಳಿದ್ದಾರೆ. ಹಾಗಿದ್ರೆ ಅವು ಯಾವವು ಅನ್ನೋದನ್ನು ನೋಡೋಣ.
1.ವಿಟಮಿನ್ ಸಿ ಮತ್ತು ರೆಟಿನಾಲ್ : ವಿಟಮಿನ್ ಸಿ ಹಾಗೂ ರೆಟಿನಾಲ್ ಚರ್ಮಕ್ಕೆ ಒಳ್ಳೆಯದೇ ಆದರೂ ಅವೆರಡರ ಕಾಂಬಿನೇಶನ್ ಚರ್ಮಕ್ಕೆ ಹಾನಿ ಉಂಟು ಮಾಡಬಹುದು.
ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಬಳಸುವುದರಿಂದ ತ್ವಚೆಯು ಕೆರಳಿ ಕೆಂಪಗಾಗಬಹುದು. ಅಲ್ಲದೇ ಈ ಎರಡೂ ಪದಾರ್ಥಗಳು ಉರಿಯೂತಕ್ಕೆ ಕಾರಣವಾಗಬಹುದು. ಹಾಗಾಗಿ ವಿಟಮಿನ್ ಸಿ ಅನ್ನು ಹಗಲಿನಲ್ಲಿ ಬಳಸಬೇಕು. ಆದ್ರೆ ರೆಟಿನಾಲ್ ರಾತ್ರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
2.ವಿಟಮಿನ್ ಸಿ ಮತ್ತು AHA/BHA: ಆಲ್ಫಾ ಹೈಡ್ರಾಕ್ಸಿ ಆಮ್ಲಗಳು (AHAs) ಮತ್ತು ಬೀಟಾ ಹೈಡ್ರಾಕ್ಸಿ ಆಮ್ಲಗಳು (BHAs) ಲ್ಯಾಕ್ಟಿಕ್, ಟಾರ್ಟಾರಿಕ್, ಮ್ಯಾಂಡಲಿಕ್ ಮತ್ತು ಗ್ಲೈಕೋಲಿಕ್ ಆಮ್ಲಗಳನ್ನು ಒಳಗೊಂಡಿರುವ ಹಣ್ಣಿನ ಆಮ್ಲಗಳ ಕುಟುಂಬಕ್ಕೆ ಸೇರಿವೆ.
ವಿಟಮಿನ್ ಸಿ ಕೂಡ ಆಮ್ಲವಾಗಿದೆ. ಈ ಎರಡೂ ಪದಾರ್ಥಗಳು pH ಮಟ್ಟವನ್ನು ಅವಲಂಬಿಸಿರುತ್ತದೆ. ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಎರಡು ಆಮ್ಲಗಳನ್ನು ಒಟ್ಟಿಗೆ ಬೆರೆಸುವುದು ಉತ್ತಮ ಆಯ್ಕೆಯಲ್ಲ.
ವಿಟಮಿನ್ ಸಿ ಅನ್ನು ಹಗಲಿನಲ್ಲಿ ಬಳಸಬೇಕು. ಹಾಗೆಯೇ AHA ಮತ್ತು BHA ಪದಾರ್ಥಗಳನ್ನು ರಾತ್ರಿಯಲ್ಲಿ ಬಳಸಬಹುದು.
3.ರೆಟಿನಾಲ್ ಮತ್ತು AHA/BHA: AHA ಮತ್ತು BHA ಗಳು ರೆಟಿನಾಲ್‌ನೊಂದಿಗೆ ಸಂಯೋಜಿಸಲ್ಪಟ್ಟ ಒಂದು ಟ್ರಿಕಿ ಸಂಯೋಜನೆಯಾಗಿದೆ. ಏಕೆಂದರೆ ಇದು ಚರ್ಮದ ಸಿಪ್ಪೆಸುಲಿಯುವಿಕೆ, ಕೆಂಪಾಗುವಿಕೆ, ಉರಿಯೂತ, ಕಿರಿಕಿರಿ ಮತ್ತು ಬಹುಶಃ ಶುಷ್ಕತೆಗೆ ಕಾರಣವಾಗಬಹುದು.
ರೆಟಿನಾಲ್ ಮತ್ತು AHA/BHA ಎರಡೂ ರಾತ್ರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ, ಒಂದು ರಾತ್ರಿ ರೆಟಿನಾಲ್ ಹಾಗೂ ಮತ್ತೊಂದು ರಾತ್ರಿ AHA/BHA ಹೀಗೆ ಪರ್ಯಾಯ ರಾತ್ರಿಗಳಲ್ಲಿ ಅವುಗಳನ್ನು ಬಳಸುವುದು ಒಳ್ಳೆಯದು.
4.ವಿಟಮಿನ್ ಸಿ ಮತ್ತು ನಿಯಾಸಿನಾಮೈಡ್: ನಿಯಾಸಿನಮೈಡ್ ಪ್ರಾಡಕ್ಟ್‌ಗಳು ಉರಿಯೂತ ನಿವಾರಕವಾಗಿದೆ. ಹಾಗೆಯೇ ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿದೆ.
ಈ ಎರಡನ್ನೂ ಒಟ್ಟಿಗೆ ಬಳಸಿದಾಗ, ಅವುಗಳು ನಿಮ್ಮ ತ್ವಚೆಗೆ ಅತ್ಯುತ್ತಮ ಫಲಿತಾಂಶ ನೀಡದೇ ಇರಬಹುದು. ಆದ್ದರಿಂದ ಕೆಲವು ನಿಮಿಷಗಳ ಅಂತರದಲ್ಲಿ ಅವುಗಳನ್ನು ಬಳಸಿ. ಆ ಪದಾರ್ಥ ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಕಾಯಿರಿ.
ಇದನ್ನೂ ಓದಿ: Almonds Benefits: ಮಧುಮೇಹಿಗಳು ಊಟಕ್ಕೂ ಮೊದಲು ಬಾದಾಮಿ ಸೇವಿಸಿದ್ರೆ ಏನಾಗುತ್ತೆ?
5.ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಮತ್ತು ಮೇಕಪ್: ಇತ್ತೀಚಿನ ದಿನಗಳಲ್ಲಿ ಸನ್‌ಸ್ಕ್ರೀನ್ , ಮಾಯಿಶ್ಚರೈಸರ್ ಮತ್ತು ಮೇಕ್ಅಪ್‌ಗೆ 3-ಇನ್-ಒನ್ ಪರಿಹಾರವನ್ನು ನೀಡುವ ಸೌಂದರ್ಯ ಉತ್ಪನ್ನಗಳ ಹುಡುಕಾಟದಲ್ಲಿದ್ದಾರೆ.
ಆದಾಗ್ಯೂ, ಈ ಮೂರೂ ಅಂಶಗಳ ಮಿಶ್ರಣವು ಅತ್ಯಂತ ಅಪಾಯಕಾರಿಯಾಗಿದೆ. ಈ ಉತ್ಪನ್ನಗಳನ್ನು ಬಳಸಲು ಯಾವುದೇ ಶಾರ್ಟ್‌ಕಟ್ ಇಲ್ಲ. ಪ್ರತಿ ಉತ್ಪನ್ನವನ್ನು ಪ್ರತ್ಯೇಕವಾಗಿ ಅನ್ವಯಿಸಿ ಮತ್ತು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಮಯವನ್ನು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ