ಅರಶಿನದ ಫೇಸ್‍ ಪ್ಯಾಕ್ ಬಳಸುವಾಗ ಈ ಐದು ತಪ್ಪುಗಳನ್ನು ಮಾಡಲೇ ಬೇಡಿ..!

ಅರಶಿನ ಒಂದು ಅತ್ಯುತ್ತಮ ಸಾಮಾಗ್ರಿ. ಆದರೆ, ಅದರ ಜೊತೆ ಬೇರೇನನ್ನು ಮಿಶ್ರಣ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಅರಿವು ಇರಬೇಕು. ಅನಗತ್ಯ ಸಾಮಾಗ್ರಿಗಳನ್ನು ಮಿಶ್ರ ಮಾಡಿದರೆ ಅವು ಅರಸಿನದ ಜೊತೆ ಪ್ರತಿಕ್ರಿಯಿಸಿ, ಚರ್ಮಕ್ಕೆ ಹಾನಿ ಉಂಟು ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ದಿನಗಳಲ್ಲಿ ಎಲ್ಲರೂ ನೈಸರ್ಗಿಕ ವಿಧಾನಗಳ ಮೂಲಕ ತಮ್ಮ ಚರ್ಮ , ಕೂದಲು ಮತ್ತು ಒಟ್ಟಾರೆ ಸೌಂದರ್ಯದ ಕಾಳಜಿಯನ್ನು ಮಾಡಬೇಕು ಎಂದು ಬಯಸುತ್ತಾರೆ. ನೈಸರ್ಗಿಕ ಸಾಮಾಗ್ರಿಗಳ ಮಹತ್ವವನ್ನು ಜನರು ಅರಿತುಕೊಂಡಿದ್ದು, ರಾಸಾಯನಿಕ ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಸಾವಿರಾರು ರೂಪಾಯಿ ವೆಚ್ಚ ಮಾಡುವ ಬದಲು, ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಂಡು ತಮ್ಮ ಚರ್ಮದ ಆರೈಕೆ ಮಾಡಿಕೊಳ್ಳತೊಡಗಿದ್ದಾರೆ. ಅಂತಹ ನೈಸರ್ಗಿಕ ಸಾಮಾಗ್ರಿಗಳಲ್ಲಿ ಅರಶಿನ ಕೂಡ ಒಂದು.

“ಈ ಸುವರ್ಣ ಮಸಾಲೆಯನ್ನು ಕೇವಲ ನಮ್ಮ ಊಟದ ಪರಿಮಳ ಹೆಚ್ಚಿಸಲು ಮಾತ್ರವಲ್ಲ, ಹಲವಾರು ಚರ್ಮ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ತ್ವಚೆಗೆ ಹೊಳಪು ನೀಡಲು ಬಳಸುತ್ತೇವೆ” ಜೋವ್ಸ್‍ನ ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರಾಖಿ ಅಹುಜಾ.ಆದರೆ ಕೆಲವರು ತಮ್ಮ ಚರ್ಮಕ್ಕೆ ಅರಶಿನವನ್ನು ಹಚ್ಚಿಕೊಳ್ಳುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಅರಿಶಿನ


ಅನಾವಶ್ಯಕ ಸಾಮಾಗ್ರಿಗಳನ್ನು ಮಿಶ್ರಣ ಮಾಡುವುದು

ಅರಶಿನ ಒಂದು ಅತ್ಯುತ್ತಮ ಸಾಮಾಗ್ರಿ. ಆದರೆ, ಅದರ ಜೊತೆ ಬೇರೇನನ್ನು ಮಿಶ್ರಣ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಅರಿವು ಇರಬೇಕು. ಅರಶಿನದ ಜೊತೆ ಮಿಶ್ರ ಮಾಡಬಹುದಾದ ಸಾಮಾಗ್ರಿಗಳು ರೋಸ್ ವಾಟರ್, ಹಾಲು ಮತ್ತು ನೀರು. “ ಅನಗತ್ಯ ಸಾಮಾಗ್ರಿಗಳನ್ನು ಮಿಶ್ರ ಮಾಡಿದರೆ ಅವು ಅರಸಿನದ ಜೊತೆ ಪ್ರತಿಕ್ರಿಯಿಸಿ, ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಅದರಲ್ಲಿ ಕಕ್ರ್ಯುಮಿನ್ ಎಂಬ ಪದಾರ್ಥ ಇರುತ್ತದೆ. ಅದು ಅತ್ಯುತ್ತಮ ಉರಿಯೂತ ನಿವಾರಕ” ಎನ್ನುತ್ತಾರೆ ಅಹುಜ.

ಇದನ್ನೂ ಓದಿ: RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!

ಚರ್ಮಕ್ಕೆ ದೀರ್ಘ ಕಾಲದ ವರಗೆ ಹಚ್ಚಿಕೊಂಡಿರುವುದು

ಅರಶಿನವನ್ನು ಎಲ್ಲಿಗೆ ಹಚ್ಚಿದರೂ ಆ ಜಾಗ ಹಳದಿಯಾಗುತ್ತದೆ. ಹಾಗಾಗಿ, ನೀವು ಅದನ್ನು ಎಷ್ಟು ಕಾಲದವರೆಗೆ ಮುಖಕ್ಕೆ ಹಚ್ಚಿಕೊಂಡಿರಬೇಕು ಎಂಬ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮುಖಕ್ಕೆ ಹಚ್ಚುವ ಎಲ್ಲಾ ಫೇಸ್‍ಪ್ಯಾಕ್‍ಗಳನ್ನು 20 ನಿಮಿಷದ ಒಳಗೆ ತೆಗೆದು ಬಿಡಬೇಕು. ಅರಶಿನ ಇದಕ್ಕೆ ಹೊರತಾಗಿಲ್ಲ. ಅದಕ್ಕಿಂತ ಹೆಚ್ಚು ಕಾಲ ಮುಖಕ್ಕೆ ಅರಶಿನ ಹಚ್ಚಿಕೊಂಡರೆ ಮುಖದಲ್ಲಿ ಹಳದಿ ಕಲೆಗಳು ಆಗಬಹುದು. ಅದರಿಂದ ಮೊಡವೆಗಳು ಕೂಡ ಮೂಡಬಹುದು.

ಸರಿಯಾಗಿ ತೊಳೆಯದಿರುವುದು

ಮುಖಕ್ಕೆ ಅರಶಿನ ಹಚ್ಚಿದ ನಂತರ, ಕೊಠಡಿಯ ತಾಪಮಾನಕ್ಕೆ ಅನುಗುಣವಾದ ಅಥವಾ ತಣ್ಣಗಿನ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಬೇಕು. ಮುಖದ ಎಲ್ಲಾ ಭಾಗವನ್ನೂ ಸರಿಯಾಗಿ ತೊಳೆಯಿರಿ. ಅದಾದ ಬಳಿಕ ಮುಖಕ್ಕೆ ತೆಳುವಾದ ಮಾಯಿಶ್ಚರೈಸರ್ ಹಚ್ಚಿರಿ.

ಸೋಪ್ ಬಳಕೆ

ಹೆಚ್ಚಿನವರು ಮಾಡುವ ತಪ್ಪೆಂದರೆ ಫೇಸ್‍ಪ್ಯಾಕ್ ಹಚ್ಚಿದ ನಂತರ ಸೋಪ್ ಹಾಕಿ ಮುಖ ತೊಳೆಯುವುದು. ಫೇಸ್ ಪ್ಯಾಕ್ ಹಚ್ಚಿದ ಮೇಲೆ ಮುಖ ತೊಳೆಯಲು ಸೋಪ್ ಬಳಸಬೇಡಿ ಅಂತೆಯೇ 24 ರಿಂದ 48 ಗಂಟೆಗಳವರೆಗೆ ಸೋಪ್ ಬಳಕೆ ಮಾಡದಿರಿ.

ಇದನ್ನೂ ಓದಿ: Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

ಸರಿಯಾಗಿ ಹಚ್ಚದಿರುವುದು

ನಾವು ಅವಸರದಲ್ಲಿ ಅರಶಿನ ಫೇಸ್‍ ಪ್ಯಾಕನ್ನು ಒಟ್ಟಾರೆ ಹಚ್ಚಿಕೊಳ್ಳುತ್ತೇವೆ. ಹಾಗೆ ಮಾಡಬಾರದು. ಮುಖದ ಎಲ್ಲ ಜಾಗಗಳಿಗೂ ಸಮ ಪ್ರಮಾಣದಲ್ಲಿ ಮತ್ತು ತೆಳುವಾಗಿ ಪ್ಯಾಕ್ ಹಚ್ಚಬೇಕು. ಕತ್ತಿಗೂ ಫೇಸ್‍ ಪ್ಯಾಕ್ ಹಚ್ಚುವುದನ್ನು ಮರೆಯಬೇಡಿ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: