• Home
  • »
  • News
  • »
  • lifestyle
  • »
  • Diabetes Problem: ಮಧುಮೇಹಕ್ಕೆ ಕಾರಣವಾಗುವ ಕೆಟ್ಟ ಜೀವನಶೈಲಿಯ ಈ ಚಟುವಟಿಕೆಗಳಿಂದ ದೂರವಿರಿ!

Diabetes Problem: ಮಧುಮೇಹಕ್ಕೆ ಕಾರಣವಾಗುವ ಕೆಟ್ಟ ಜೀವನಶೈಲಿಯ ಈ ಚಟುವಟಿಕೆಗಳಿಂದ ದೂರವಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಹಾರವು ದಿನದ ಮೊದಲ ಊಟ. ಹಾಗಾಗಿ ಅದನ್ನು ಸ್ಕಿಪ್ ಮಾಡಬೇಡಿ. ಬೆಳಗಿನ ಉಪಾಹಾರ ಸೇವನೆ ಮಾಡದೇ ಇರುವುದು ಆಯಾಸ ಮತ್ತು ಬಳಲಿಕೆಗೆ ಕಾರಣವಾಗುತ್ತದೆ. ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ಮಧುಮೇಹಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು.

  • Share this:

    ಭಾರತದಲ್ಲಿ ಮಧುಮೇಹವು (Diabetes) ಸಾಮಾನ್ಯ ಸಮಸ್ಯೆ (Problem) ಆಗಿದೆ. ಮತ್ತು ಇತ್ತೀಚಿನ ದಿನಗಳಲ್ಲಿ ರೋಗಿಗಳ (Patients) ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರ ಹಿಂದಿನ ದೊಡ್ಡ ಕಾರಣ (Cause) ಅಂದ್ರೆ ಕಳಪೆ ಜೀವನಶೈಲಿ (Bad Lifestyle) ಮತ್ತು ಆಹಾರ (Food) ಪದ್ಧತಿ. ಟೈಪ್ 1 ಡಯಾಬಿಟಿಸ್ ಆನುವಂಶಿಕವಾಗಿಯೂ ಆಗುತ್ತದೆ. ಆದರೆ ಟೈಪ್ 2 ಡಯಾಬಿಟಿಸ್ ಕಳಪೆ ಜೀವನಶೈಲಿ ಮತ್ತು ಆಹಾರ ಪದಾರ್ಥ ಸೇವನೆಯಿಂದ ಉಂಟಾಗುತ್ತದೆ. ನಾವು ಟೈಪ್ 1 ಮಧುಮೇಹ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಟೈಪ್ 2 ಮಧುಮೇಹವನ್ನು ನಿಯಂತ್ರಿಸಬಹುದು. ಅದಕ್ಕಾಗಿ ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಕಾಯಿಲೆ ನಿಯಂತ್ರಿಸಬಹುದು. ಮಧುಮೇಹಕ್ಕೆ ಕಾರಣವಾಗುವ ಕೆಲವು ಕೆಟ್ಟ ಅಭ್ಯಾಸಗಳು ಯಾವವು ಎಂಬುದನ್ನು ಮೊದಲು ತಿಳಿಯಿರಿ.


    ನೀವು ಫಾಲೋ ಮಾಡುವ ಕೆಟ್ಟ ಜೀವನಶೈಲಿ ಹಲವು ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ. ಮಧುಮೇಹ ಸೇರಿದಂತೆ ಅನೇಕ ಸಮಸ್ಯೆ ಉಂಟು ಮಾಡುತ್ತದೆ.


    ಬೆಳಗಿನ ಉಪಹಾರ ಸೇವಿಸದೇ ಇರುವುದು


    NCBI ಯ ಮಧುಮೇಹದ ಕುರಿತು 2017 ರ ಅಧ್ಯಯನದ ಪ್ರಕಾರ ಬೆಳಗಿನ ಉಪಹಾರವು ದಿನದ ಮೊದಲ ಊಟ. ಹಾಗಾಗಿ ಅದನ್ನು ಸ್ಕಿಪ್ ಮಾಡಬೇಡಿ. ಬೆಳಗಿನ ಉಪಾಹಾರ ಸೇವನೆ ಮಾಡದೇ ಇರುವುದು ಆಯಾಸ ಮತ್ತು ಬಳಲಿಕೆಗೆ ಕಾರಣವಾಗುತ್ತದೆ. ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ಮಧುಮೇಹಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ವ್ಯಾಯಾಮ ಮಾಡದೇ ಇರುವುದು


    ನಮ್ಮಲ್ಲಿ ಹೆಚ್ಚಿನವರು ಕಾರ್ಪೊರೇಟ್ ಉದ್ಯೋಗಿಗಳು. ಹೆಚ್ಚು ಗಂಟೆಗಳ ಕಾಲ ಕುಳಿತು ಕೆಲಸ ಮಾಡುತ್ತಾರೆ. ಇದು ಮಧುಮೇಹಕ್ಕೆ ಕಾರಣವಾಗಬಹುದು. 30 ನಿಮಿಷಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡದಿರುವುದು ಮತ್ತು ಕುಳಿತುಕೊಳ್ಳುವುದು ದೇಹದಲ್ಲಿ ಟೈಪ್ 2 ಮಧುಮೇಹದಂತಹ ಅನೇಕ ಸಮಸ್ಯೆ ಉಂಟು ಮಾಡುತ್ತದೆ ಎಂದು ವಿವಿಧ ಸಂಶೋಧನೆಗಳು ಹೇಳಿವೆ.


    ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ನೀವು ನಿಯಮಿತ ವ್ಯಾಯಾಮ ನಿಮ್ಮ ದಿನಚರಿಯ ಭಾಗವಾಗಿ ಮಾಡಲು ಮತ್ತು ಕೆಲಸದಲ್ಲಿ ವಿರಾಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.


    ತಡವಾಗಿ ಮಲಗುವುದು


    ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ಕಾರಣಗಳಿಂದ ತಡವಾಗಿ ಮಲಗುವ ಅಭ್ಯಾಸ ಹೊಂದಿದ್ದಾರೆ. ಇದು ಅನೇಕ ಸಮಸ್ಯೆಗೆ ಕಾರಣವಾಗಬಹುದು. ರಾತ್ರಿ ನಿರ್ದಿಷ್ಟ ಸಮಯದಲ್ಲಿ ನಿದ್ರಿಸುವುದು ಆರೋಗ್ಯಕ್ಕೆ ಉತ್ತಮ.


    ತಡರಾತ್ರಿಯವರೆಗೆ ಕೆಲಸ ಮಾಡುವವರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚು. ಇದು ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ನಿದ್ರಾಹೀನತೆ ಹೊಂದಿರುವ ಜನರು ಟೈಪ್ 2 ಮಧುಮೇಹ ಅಭಿವೃದ್ಧಿಪಡಿಸುವ ಸಾಧ್ಯತೆ 17 ಪ್ರತಿಶತ ಹೆಚ್ಚು ಎಂದು ಸಂಶೋಧನೆ ಹೇಳಿದೆ.


    ಸಂಸ್ಕರಿಸಿದ ಆಹಾರ ಸೇವನೆ


    ಸಂಸ್ಕರಿಸಿದ ಆಹಾರವು ಅನಾರೋಗ್ಯಕರ. ಸಂಸ್ಕರಿಸಿದ ಆಹಾರಗಳ ಸೇವನೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಸಂಸ್ಕರಿಸಿದ ಆಹಾರವು ಮಧುಮೇಹ ಅಪಾಯವನ್ನು ಶೇಕಡಾ 15 ರಷ್ಟು ಹೆಚ್ಚಿಸುತ್ತದೆ. ಕೆಂಪು ಮಾಂಸ ಮಧುಮೇಹವನ್ನು ಆಹ್ವಾನಿಸುತ್ತದೆ. ಆದ್ದರಿಂದ ನೀವು ಅದರ ಸೇವನೆ ತಪ್ಪಿಸಬೇಕು.


    ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ


    ಧೂಮಪಾನ ಮತ್ತು ಮದ್ಯಪಾನ ಸಹ ಮಧುಮೇಹ ಅಪಾಯ ಹೆಚ್ಚಿಸುತ್ತದೆ. ಧೂಮಪಾನಿಗಳು ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ 30 ರಿಂದ 40 ಪ್ರತಿಶತ ಹೆಚ್ಚು. ಧೂಮಪಾನ ಮತ್ತು ಮದ್ಯಪಾನ ಹೃದಯ ಸಮಸ್ಯೆಗೆ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ.


    ಅತಿಯಾದ ಸಕ್ಕರೆ ಸೇವನೆ


    ಮಧುಮೇಹ ಸಮಸ್ಯೆಯಿಂದ ಪಾರಾಗಬೇಕಾದರೆ ಸಕ್ಕರೆ ಸೇವನೆ ಮಾಡಬೇಡಿ. ಮಧುಮೇಹದಿಂದ ಬಳಲುತ್ತಿದ್ದರೆ, ನೀವು ಕಡಿಮೆ ಕಾರ್ಬ ಸಕ್ಕರೆ ಮುಕ್ತ ಆಹಾರ ಸೇವಿಸಿ. ಮಧುಮೇಹಿಗಳು ಡಾರ್ಕ್ ಚಾಕೊಲೇಟ್ ಅನ್ನು ತಿನ್ನಬಹುದು. ಇದು ಕಡಿಮೆ ಸಕ್ಕರೆ ಹೊಂದಿದೆ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಸಾಕಷ್ಟು ನೀರು ಕುಡಿಯದೇ ಇರುವುದು


    ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದಿನಕ್ಕೆ 5 ರಿಂದ 6 ಲೀಟರ್ ನೀರು ಕುಡಿಯಬೇಕು. ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಹೆಚ್ಚು ನೀರು ಕುಡಿಯುವವರಲ್ಲಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ. ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿ ನೀರಿನ ಕೊರತೆಯು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಇದು ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ.

    Published by:renukadariyannavar
    First published: