ಡೆಂಘಿ ಜ್ವರ ಕಾಣಿಸಿಕೊಳ್ಳದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಮನೆಮದ್ದುಗಳು

ಏಡೀಸ್ ಸೊಳ್ಳೆಗಳು ನಿಂತ ನೀರಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಒಂದು ಬಾರಿ ಈ ಸೊಳ್ಳೆಗಳು ಮೊಟ್ಟೆಯಿಟ್ಟರೆ ಒಣ ಸ್ಥಿತಿಯಲ್ಲಿಯೇ ವರ್ಷದವರೆಗೆ ಅದು ಉಳಿಯುತ್ತವೆ. ಹಾಗಾಗಿ ಇಂತಹದೊಂದು ಅವಕಾಶವನ್ನು ನೀವು ಸೊಳ್ಳೆಗಳಿಗೆ ಮಾಡಿಕೊಡಬೇಡಿ.

zahir | news18-kannada
Updated:August 15, 2019, 3:15 PM IST
ಡೆಂಘಿ ಜ್ವರ ಕಾಣಿಸಿಕೊಳ್ಳದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಮನೆಮದ್ದುಗಳು
ಡೆಂಗ್ಯೂ ಪ್ರಕರಣ
  • Share this:
ಡೆಂಘಿ ವೈರಸ್​ಗಳಿಂದ ಡೆಂಘಿ ಜ್ವರ ಹರಡುತ್ತದೆ. DENV1,DENV2,DENV3,DENV4 ಎಂಬ ನಾಲ್ಕು ವಿಧದ ವೈರಸ್‌ಗಳಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನ ಜ್ವರ ಅತ್ಯಂತ ಅಪಾಯಕಾರಿ ಎಂಬುದಾಗಿ ಪರಿಗಣಿಸಿರುವುದು ಇದರ ಗಂಭೀರತೆಯನ್ನು ತಿಳಿಸುತ್ತದೆ. ಸೊಳ್ಳೆಗಳ ಮೂಲಕ ಹರಡುವ ಈ ಜ್ವರದ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು.

ಸಾಮಾನ್ಯವಾಗಿ ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಸೊಳ್ಳೆ ಕಚ್ಚಿದ ಐದರಿಂದ ಎಂಟು ದಿನಗಳ ಬಳಿಕ ರೋಗ ಲಕ್ಷಣಗಳು ಕಾಣಿಸುತ್ತವೆ. ಇನ್ನು ಈ ಜ್ವರವಿರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆಯಿಂದ ಕೂಡ ಈ ವೈರಸ್ ಮತ್ತೊಬ್ಬರಿಗೆ ವ್ಯಾಪಿಸುತ್ತದೆ. ಹೀಗಾಗಿ ಜ್ವರ ಕಾಣಿಸಿಕೊಳ್ಳದಂತೆ ಮುಂಜಾಗ್ರತೆವಹಿಸುವುದು ಉತ್ತಮ. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.

ಬಟ್ಟೆ, ಸಾಕ್ಸ್‌ ಮತ್ತು ಶೂಸ್ ಧರಿಸಿ:

ಡೆಂಘಿ ಜ್ವರವನ್ನು ನಿವಾರಿಸಲು ನಿರ್ದಿಷ್ಟವಾದ ಲಸಿಕೆಗಳು ಲಭ್ಯವಿಲ್ಲ. ಹೀಗಾಗಿ ಸಾಧ್ಯವಾದಷ್ಟು ಇಂತಹ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಜಾಗ್ರತೆವಹಿಸಿಕೊಳ್ಳಬೇಕು. ಇದಕ್ಕಾಗಿ ನೀವು ಉದ್ದ ತೋಳಿನ ಬಟ್ಟೆ, ಸಾಕ್ಸ್, ಶೂಸ್​ಗಳನ್ನು ಧರಿಸಿ. ಇದರಿಂದ ಸೊಳ್ಳೆ ಕಚ್ಚುವಿಕೆಯನ್ನು ತಡೆಯಬಹುದು.

ನೀರುನಿಲ್ಲದಂತೆ ಎಚ್ಚರವಹಿಸಿ:
ಏಡೀಸ್ ಸೊಳ್ಳೆಗಳು ನಿಂತ ನೀರಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಒಂದು ಬಾರಿ ಈ ಸೊಳ್ಳೆಗಳು ಮೊಟ್ಟೆಯಿಟ್ಟರೆ ಒಣ ಸ್ಥಿತಿಯಲ್ಲಿಯೇ ವರ್ಷದವರೆಗೆ ಅದು ಉಳಿಯುತ್ತವೆ. ಹಾಗಾಗಿ ಇಂತಹದೊಂದು ಅವಕಾಶವನ್ನು ನೀವು ಸೊಳ್ಳೆಗಳಿಗೆ ಮಾಡಿಕೊಡಬೇಡಿ. ನಿಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸದಾ ಸ್ವಚ್ಛತೆಯಲ್ಲಿಡಿ. ಮುಖ್ಯವಾಗಿ ಹೂಕುಂಡಗಳು, ತೊಟ್ಟಿಗಳು, ಟೈರ್​ಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆವಹಿಸಿ. ಹೀಗೆ ಮಾಡುವುದರಿಂದ ಸಹ ಡೆಂಘಿ ಸೊಳ್ಳೆಗಳನ್ನು ನಿಯಂತ್ರಿಸಬಹುದು.

ವಿಪರೀತ ತಲೆನೋವು:ಡೆಂಘಿ ಜ್ವರ ಕಾಣಿಸಿಕೊಂಡಿದ್ದರೆ ವಿಪರೀತ ತಲೆನೋವಿನ ಸಮಸ್ಯೆ ತಲೆದೂರುತ್ತದೆ. ತ್ರೀವ್ರ ಜ್ವರದೊಂದಿಗೆ ತಲೆನೋವು ಕಾಣಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿ. ಮುಖ್ಯವಾಗಿ ನಿಮ್ಮ ರಕ್ತವನ್ನು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಪಡೆದುಕೊಳ್ಳಿ. ಕೆಲವೊಂದು ಈ ಜ್ವರ ಬಂದರೆ ಮೂಗಿನಿಂದ ರಕ್ತಸ್ರಾವ, ವಾಂತಿ, ಬೇಧಿ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ. ಇಂತಹ ಸಮಯದಲ್ಲಿ ನಿರ್ಲಕ್ಷ್ಯವಹಿಸದಿರಿ.

ಪಪ್ಪಾಯ ಹಣ್ಣು:
ಪಪ್ಪಾಯ ಎಂಬುದು ಡೆಂಘಿ ಜ್ವರಕ್ಕೆ ಮನೆಮದ್ದು. ಪಪ್ಪಾಯದಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶಗಳು ಡೆಂಘಿ ಜ್ವರವನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಹಣ್ಣಿನ ಬೀಜಗಳನ್ನು ಆಹಾರದಲ್ಲಿ ಬಳಸಿ ಸೇವಿಸಬಹುದು ಅಥವಾ ಪಪ್ಪಾಯ ಎಲೆಗಳ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಜ್ವರದ ತೀವ್ರತೆಯನ್ನು ಕಡಿಮೆ ಮಾಡಬಹುದು.

ರೋಗ ನಿರೋಧಕ ಶಕ್ತಿ:
ಸಾಮಾನ್ಯವಾಗಿ ಡೆಂಘಿ ಜ್ವರ ಕಾಣಿಸಿಕೊಂಡರೆ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದಕ್ಕಾಗಿ ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಹುಳಿ ಮಿಶ್ರಿತ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಚಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ.

ಬೇವಿನ ಎಲೆ:
ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದ ಸಹ ಡೆಂಘಿ ಜ್ವರದ ತೀವ್ರತೆಯನ್ನು ಇಳಿಸಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಡೆಂಘಿ ಜ್ವರದಿಂದ ವ್ಯಕ್ತಿಯ ರಕ್ತದಲ್ಲಿನ ಪ್ಲೇಟ್ಲೆಟ್​ಗಳು ಹಾಗೂ ಬಿಳಿರಕ್ತ ಕಣಗಳು ಕಡಿಮೆಯಾಗುತ್ತದೆ. ಆದರೆ ಬೇವಿನ ಎಲೆಯನ್ನು ಕುದಿಸಿ ಕುಡಿಯುವುದರಿಂದ ಪ್ಲೇಟ್ಲೆಟ್​ಗಳು ಹಾಗೂ ಬಿಳಿರಕ್ತ ಕಣಗಳು ಹೆಚ್ಚಾಗಿರುವುದು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಹೀಗಾಗಿ ಮನೆ ಔಷಧಿಯಾಗಿ ಬೇವಿನ ಎಲೆಗಳನ್ನು ಬಳಸಬಹುದು.


First published: August 15, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading