ದೇಹವು (Body) ಆಂತರಿಕವಾಗಿ ಆರೋಗ್ಯದಿಂದ (Inner Health) ಇದ್ದಾಗ ಮಾತ್ರ ಬಾಹ್ಯವಾಗಿಯೂ ನಾವು ಆರೋಗ್ಯವಾಗಿರಲು ಸಾಧ್ಯ. ಆಂತರಿಕ ಆರೋಗ್ಯದ ಪರಿಣಾಮ ಚರ್ಮ (Skin) ಮತ್ತು ಕೂದಲಿನ (Hair) ಮೇಲೆ ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾಗಿ ನಾವು ಏನು ತಿನ್ನುತ್ತೇವೆ, ಕುಡಿಯುತ್ತೇವೆ? ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಸಹ ಮುಖ್ಯ. ಯಾರು ಮಧುಮೇಹ ರೋಗಿಗಗಳಾಗಿದ್ದಾರೋ ಅವರು ತಮ್ಮ ಆಹಾರದ ಬಗ್ಗೆ ಅಧಿಕವಾಗಿ ಜಾಗ್ರತೆ ವಹಿಸಬೇಕು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆ ಆಹಾರ ಸೇವನೆ ಅವರ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಇದು ಅಪಾಯಕಾರಿ ಪರಿಣಾಮಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು ಮತ್ತು ತಜ್ಞರು.
ಮಧುಮೇಹಿಗಳ ಆಂತರಿಕ ಆರೋಗ್ಯಕ್ಕಾಗಿ ಆವಕಾಡೋ
ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಆಹಾರದ ಬಗ್ಗೆ ಸಕ್ಕರೆ ರೋಗಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಮೇಲೆ ಗಮನ ಹರಿಸಬೇಕು. ಹಾಗಿದ್ದರೆ ಮಧುಮೇಹಿಗಳು ತಮ್ಮ ಆಂತರಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುವ ಹಣ್ಣು ಇದೆ. ಮಧುಮೇಹ ರೋಗಿಗಳಿಗೆ ಸುರಕ್ಷಿತ ಆಹಾರ ಅಂದ್ರೆ ಅದು ಆವಕಾಡೊ ಅಂದ್ರೆ ಬೆಣ್ಣೆ ಹಣ್ಣು.
ಬೆಣ್ಣೆ ಹಣ್ಣು ಬೆರ್ರಿ ಜಾತಿಯ ಹಣ್ಣು ಆಗಿದೆ. ಪೋಷಕಾಂಶಗಳಿಂದ ತುಂಬಿದೆ. ಇದು ವಿಟಮಿನ್ ಸಿ, ಇ, ಕೆ ಮತ್ತು ಬಿ 16, ಫೋಲೇಟ್, ಪ್ಯಾಂಟೊಥೆನಿಕ್ ಆಮ್ಲ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಜೊತೆಗೆ ಲುಟೀನ್, ಬೀಟಾ ಕ್ಯಾರೋಟಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲ.
ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?
ಅಪೂರ್ಣ ಆಕ್ಸಿಡೀಕರಣ ತಡೆಯುತ್ತದೆ
2019 ರಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನವು ಆವಕಾಡೊದಲ್ಲಿ ಕಂಡು ಬರುವ ಕೊಬ್ಬಿನ ಅಣುವಾದ ಅವೊಕಾಟಿನ್ ಬಿ (AvoB) ಅಸ್ಥಿಪಂಜರದ ಸ್ನಾಯುಗಳು ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿನ ಅಪೂರ್ಣ ಆಕ್ಸಿಡೀಕರಣ ತಡೆಯುತ್ತದೆ ಎಂದು ತಿಳಿಸಿದೆ. ಇದು ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ. ಕೇವಲ ಒಂದು ಗ್ರಾಂ ಸಕ್ಕರೆ ಇದರಲ್ಲಿದೆ. ಒಟ್ಟಾರೆ ಆಹಾರದ ಗುಣಮಟ್ಟ ಸುಧಾರಿಸುತ್ತದೆ.
ಆವಕಾಡೋದಲ್ಲಿನ ಗುಣ ಲಕ್ಷಣಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಮತ್ತು ಸುರಕ್ಷಿತವಾಗಿದೆ. ಈ ಹಣ್ಣನ್ನು ಚರ್ಮ ಮತ್ತು ಕೂದಲಿಗೆ ಸಹ ಬಳಸಬಹುದು. ಚರ್ಮ ಮತ್ತು ಕೂದಲಿಗೆ ಬಳಸುವ 4 ಸುಲಭ ಮಾರ್ಗಗಳನ್ನು ತಿಳಿಯೋಣ.
ಕೂದಲಿಗಾಗಿ ಆವಕಾಡೋ ಮತ್ತು ಜೇನುತುಪ್ಪ
ಆವಕಾಡೊ ಅರ್ಧ ಕತ್ತರಿಸಿ. ನಂತರ ಸಿಪ್ಪೆಯನ್ನು ತೆಗೆದು ಹಾಕಿ. ಸಿಪ್ಪೆ ತೆಗೆದ ಭಾಗವನ್ನು ಒಂದು ಪಾತ್ರೆಯಲ್ಲಿ ಹಾಕಿ ಮ್ಯಾಶ್ ಮಾಡಿ. ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಸ್ವಲ್ಪ ಒದ್ದೆಯಾದ ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ. ಮೊದಲು ಸರಳ ನೀರಿನಿಂದ ತೊಳೆಯಿರಿ. ನಂತರ ಮೃದುವಾದ ಶಾಂಪೂ ಬಳಸಿ ನೆತ್ತಿಯನ್ನು ಸ್ವಚ್ಛಗೊಳಿಸಿ.
ಒಣ ಕೂದಲಿಗೆ ಹೇರ್ ಮಾಸ್ಕ್
ತುಂಬಾ ಒಣ ಕೂದಲು ಹೊಂದಿದ್ದರೆ, ಆವಕಾಡೊವನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಒಂದು ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ. ಮಿಶ್ರಣವನ್ನು ನೆತ್ತಿಯಿಂದ ಕೂದಲಿಗೆ ಅನ್ವಯಿಸಿ. ಶವರ್ ಕ್ಯಾಪ್ ಹಾಕಿ 30 ನಿಮಿಷಗಳ ಕಾಲ ಇರಿಸಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ ಮತ್ತು ನೈಸರ್ಗಿಕವಾಗಿ ಒಣಗಲು ಬಿಡಿ.
ಮುಖಕ್ಕೆ ಮಾಸ್ಕ್
ಮುಖಕ್ಕೆ ಮಾಸ್ಕ್ ಮಾಡಲು ಅರ್ಧ ಆವಕಾಡೊ, ಒಂದು ಚಮಚ ಜೇನುತುಪ್ಪ ಮತ್ತು ಹೆಪ್ಪುಗಟ್ಟಿದ ತೆಂಗಿನ ಎಣ್ಣೆಯನ್ನು ಬ್ಲೆಂಡರ್ನಲ್ಲಿ ಹಾಕಿ. ನಯವಾದ ದಪ್ಪ ಪೇಸ್ಟ್ ಮಾಡಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಅನ್ವಯಿಸಿ ಮತ್ತು 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ
ಹಾಲು ಸೇರಿಸಿದ ಫೇಸ್ ಪ್ಯಾಕ್
ಆವಕಾಡೊವನ್ನು ಬಟ್ಟಲಿನಲ್ಲಿ ಹಾಕಿ ಮತ್ತು ಕೈಯಿಂದ ಮ್ಯಾಶ್ ಮಾಡಿ. ಎರಡು ಚಮಚ ಹಾಲು, ಒಂದು ಚಮಚ ಜೇನುತುಪ್ಪ ಮತ್ತು ತೆಂಗಿನ ಎಣ್ಣೆ ಸೇರಿಸಿ. ಮುಖಕ್ಕೆ ಹಚ್ಚಿ, 30 ನಿಮಿಷಗಳ ನಂತರ ಚೆನ್ನಾಗಿ ತೊಳೆಯಿರಿ. ಒರೆಸಿ, ಮಾಯಿಶ್ಚರೈಸರ್ ಅನ್ವಯಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ