ಅಳಿವಿನ ಅಂಚಿನಲ್ಲಿರುವ ಕೋಲಾ ಕರಡಿಗಳ ಸಂರಕ್ಷಣೆಗೆ ಮುಂದಾದ ಆಸ್ಟ್ರೇಲಿಯಾ ಸರ್ಕಾರ

news18
Updated:May 10, 2018, 5:29 PM IST
ಅಳಿವಿನ ಅಂಚಿನಲ್ಲಿರುವ ಕೋಲಾ ಕರಡಿಗಳ ಸಂರಕ್ಷಣೆಗೆ ಮುಂದಾದ ಆಸ್ಟ್ರೇಲಿಯಾ ಸರ್ಕಾರ
news18
Updated: May 10, 2018, 5:29 PM IST
ನ್ಯೂಸ್ 18 ಕನ್ನಡ

ಅಳಿವಿನ ಅಂಚಿನಲ್ಲಿರುವ ಕೋಲಾ ಕರಡಿಗಳನ್ನು ರಕ್ಷಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ವನ್ಯಜೀವಿಯನ್ನು ಸಂರಕ್ಷಿಸುವ ಸಲುವಾಗಿ 34 ಮಿಲಿಯನ್ ಡಾಲರ್ ಮೊತ್ತದ​ ಯೋಜನೆಯನ್ನು ಪ್ರಾರಂಭಿಸಲಾಗಿದೆ.

1788 ರಲ್ಲಿ ಯುರೋಪ್ ಖಂಡದಲ್ಲಿ 10 ದಶಲಕ್ಷಕ್ಕೂ ಹೆಚ್ಚಿನ ಕೋಲಾ ಕರಡಿಗಳಿದ್ದವು. ಆದರೆ ಈಗ ಆಸೀಸ್ ದೇಶದ ಕಾಡುಗಳಲ್ಲಿ ಕೇವಲ 43 ಸಾವಿರ ಕೋಲಾ ಕರಡಿಗಳು ಉಳಿದಿದೆ ಎಂದು ಆಸ್ಟ್ರೇಲಿಯಾ ಕೋಲಾ ಫೌಂಡೇಶನ್ ಹೇಳಿದೆ.

ಕೋಲಾಗಳು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಪ್ರಧಾನಿ ಗ್ಲಾಡಿಸ್ ಬೆರೆಜಿಕ್ಲಿಯನ್ ಇದರ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಜಾರಿಗೆ ತರಲಿದ್ದಾರೆ.

ಹವಾಮಾನದ ಬದಲಾವಣೆ, ನಾಯಿಗಳ ದಾಳಿ, ಕಾಯಿಲೆ ಮತ್ತು ಕಾರಿನ ಚಕ್ರಗಳಿಗೆ ಸಿಲುಕಿ ಕೋಲಾ ಕರಡಿಗಳು ವಿನಾಶದಂಚಿನಲ್ಲಿದ್ದು, ಕಳೆದ 15-20 ವರ್ಷಗಳಲ್ಲಿ ನ್ಯೂ ಸೌತ್ ವೇಲ್ಸ್ ಭಾಗದಲ್ಲಿ ಕೋಲಾ ಕರಡಿಗಳ ಸಂಖ್ಯೆಯು ಶೇ.26ರಷ್ಟು ಕುಸಿತ ಕಂಡಿದೆ. ಆಸೀಸ್ ದೇಶದ ಇತರೆ ಭಾಗಗಳಿಕ್ಕಿಂತ ಈ ರಾಜ್ಯದಲ್ಲೇ ಅತಿ ಹೆಚ್ಚು ಕೋಲಾಗಳು ನಾಶವಾಗಿದೆ. ರಾಷ್ಟ್ರೀಯ ಸಂಕೇತದಂತಿರುವ ಈ ಪ್ರಾಣಿಯನ್ನು ಸಂರಕ್ಷಿಸದೇ ನಿರ್ಲಕ್ಷ್ಯವಹಿಸಿರುವುದು ನಿಜಕ್ಕೂ ಅವಮಾನ ಎಂದು ಅಧ್ಯಯನ ತಂಡ ತಿಳಿಸಿದೆ.

ಅಪರೂಪದ ಈ ಕರಡಿ ಸಂತತಿಗಳಲ್ಲಿ ಕುರುಡುತನ ಮತ್ತು ಬಂಜೆತನ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಯೋಜನೆಯ ಬಹುಪಾಲು ಹಣವನ್ನು ಕೋಲಾಗಳ ಚಿಕಿತ್ಸೆಗಾಗಿ ಮೀಸಲಿಡಲಾಗುತ್ತದೆ, ಅಲ್ಲದೆ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅನಾರೋಗ್ಯ ಮತ್ತು ಗಾಯಗೊಂಡ ಕೋಲಾ ಕರಡಿಗಳ ಚಿಕಿತ್ಸೆಗಾಗಿ ಹೊಸ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿ ತಿಳಿಸಿರುವ ಆಸೀಸ್ ಸರ್ಕಾರವು ತೊಂದರೆಗೆ ಒಳಗಾದ ಕೋಲಾಗಳ  ಬಗ್ಗೆ ಮಾಹಿತಿ ನೀಡಲು ಹಾಟ್​ಲೈನ್ ಸೇವೆಯನ್ನು ಸಹ ಪ್ರಾರಂಭಿಸಲಿದೆ.
Loading...

 
First published:May 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...