ಮಹಿಳೆಯರು ಯಾವ ವಯಸ್ಸಲ್ಲಿ ಹೆಚ್ಚು ಲೈಂಗಿಕ ತೃಪ್ತಿ ಪಡೆಯುತ್ತಾರೆ? ಈ ಸಮೀಕ್ಷೆಯಲ್ಲಿದೆ ಉತ್ತರ

ಈ ಸಂಶೋಧನೆಯಲ್ಲಿ 23 ವರ್ಷದ ಯುವತಿಯರು, 25 ರಿಂದ ಮೂವತ್ತು ವರ್ಷದ ಮಹಿಳೆಯರು ಹಾಗೂ 30 ರಿಂದ 36 ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ ಹೆಂಗಸರು ಪಾಲ್ಗೊಂಡಿದ್ದರು

news18
Updated:March 23, 2019, 3:26 PM IST
ಮಹಿಳೆಯರು ಯಾವ ವಯಸ್ಸಲ್ಲಿ ಹೆಚ್ಚು ಲೈಂಗಿಕ ತೃಪ್ತಿ ಪಡೆಯುತ್ತಾರೆ? ಈ ಸಮೀಕ್ಷೆಯಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
  • News18
  • Last Updated: March 23, 2019, 3:26 PM IST
  • Share this:
ಮಹಿಳೆಯರಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ತೃಪ್ತಿ ಸಿಗುತ್ತದೆ ಎಂಬುದರ ಬಗ್ಗೆ ಹಲವು ಸಂಶೋಧನೆಗಳು ನಡೆದಿತ್ತು. ಆದರೆ ಯಾವುದೇ ಅಧ್ಯಯನದಲ್ಲೂ ನಿಖರವಾದ ಉತ್ತರ ಮಾತ್ರ ಲಭಿಸಿರಲಿಲ್ಲ. ಆದರೆ ಇದೀಗ ಹೊಸ ಸಂಶೋಧಕರು ಮಹಿಳೆಯರು ಲೈಂಗಿಕ ಸಂತೃಪ್ತಿಯನ್ನು ಪಡೆಯುವ ವಯಸ್ಸನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಅಧ್ಯಯನದ ಪ್ರಕಾರ ಮಹಿಳೆಯರಿಗೆ ತಮ್ಮ 36ನೇ ವಯಸ್ಸಿನಲ್ಲಿ ಸಂಪೂರ್ಣ ಲೈಂಗಿಕ ಸುಖ ಸಿಗುತ್ತದೆ ಎಂದು ತಿಳಿಸಿದೆ. ನ್ಯಾಚುರಲ್‌ ಸೈಕಲ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ 2600 ಮಹಿಳೆಯರು ತಮ್ಮ ಲೈಂಗಿಕ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಲೈಂಗಿಕ ಪರಾಕಾಷ್ಠೆ, ಸಂಗಾತಿಯೊಂದಿಗಿನ ಮಿಲನ, ಲೈಂಗಿಕ ಬಂಧದ ಅನುಭವ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಸಂಶೋಧನೆಯಲ್ಲಿ 23 ವರ್ಷದ ಯುವತಿಯರು, 25 ರಿಂದ ಮೂವತ್ತು ವರ್ಷದ ಮಹಿಳೆಯರು ಹಾಗೂ 30 ರಿಂದ 36 ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ ಹೆಂಗಸರು ಪಾಲ್ಗೊಂಡಿದ್ದರು. ಈ ವೇಳೆ ಹೆಚ್ಚಿನ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅಧಿಕ ಮಂದಿ 36ನೇ ವಯಸ್ಸಿನಲ್ಲಿ ಹೆಚ್ಚು ಸುಖ ಪಡೆದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಜೀವನದಲ್ಲಿ ಯಶಸ್ಸು ಕಾಣಲು ಇಲ್ಲಿವೆ ಕೆಲ ಸೂತ್ರಗಳು!

ಇದರಲ್ಲಿ ಶೇ 86 ರಷ್ಟು ಶೇಕಡಾ ವಯಸ್ಕ ಮಹಿಳೆಯರು ತಾವು ಕಳೆದ ತಿಂಗಳಲ್ಲಿ ಹೆಚ್ಚು ಲೈಂಗಿಕ ಸುಖ ಅನುಭವಿಸಿದ್ದೇವೆ ಎಂದರೆ, ಶೇ. 76 ರಷ್ಟು ಮಧ್ಯಮ ವಯಸ್ಕರು ಹಾಗೂ ಶೇ. 56 ರಷ್ಟು ಸಣ್ಣ ವಯಸ್ಸಿನ ಮಹಿಳೆಯರು ಲೈಂಗಿಕ ಸುಖ ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ತುಲನೆ ಮಾಡಿದಾಗ 36ನೇ ವಯಸ್ಸಿನಲ್ಲಿ ಹೆಚ್ಚು ಸುಖ ಸಿಕ್ಕಿರುವುದಾಗಿ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯ ಪರಾಕಾಷ್ಠೆ ಮಹಿಳೆಯನ್ನು ಆಸ್ಪತ್ರೆ ಸೇರುವಂತೆ ಮಾಡಿತು..!

ಇದರರ್ಥ ಮಹಿಳೆಯರು 36ನೇ ವಯಸ್ಸಿನಲ್ಲಿ ದೇಹದ ಮೇಲೆ ಹೆಚ್ಚು ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಅಲ್ಲದೆ ಲೈಂಗಿಕ ಕ್ರಿಯೆಯ ಬಗೆಗಿನ ತಪ್ಪು ಕಲ್ಪನೆ, ಮುಜುಗರದಿಂದ ಮುಕ್ತಿಯಾಗಿರುತ್ತಾರೆ. ಹೀಗಾಗಿ ಈ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪರಾಕಾಷ್ಠೆ ಪ್ರವೇಶಿಸಿ ಹೆಚ್ಚಿನ ಸುಖ ಪಡೆಯುತ್ತಾರೆ ಎಂದು ತಿಳಿಸಿದೆ.
First published: March 23, 2019, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading