• Home
  • »
  • News
  • »
  • lifestyle
  • »
  • Breast Cancer: ಲಕ್ಷಣವಿಲ್ಲದೇ ಬರಬಹುದು ಈ ರೀತಿಯ ಸ್ತನ ಕ್ಯಾನ್ಸರ್! ಇದನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ?

Breast Cancer: ಲಕ್ಷಣವಿಲ್ಲದೇ ಬರಬಹುದು ಈ ರೀತಿಯ ಸ್ತನ ಕ್ಯಾನ್ಸರ್! ಇದನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ?

ಸ್ತನ ಕ್ಯಾನ್ಸರ್​

ಸ್ತನ ಕ್ಯಾನ್ಸರ್​

ರೋಗ ಪತ್ತೆ ಹಾಗೂ ಸಂಶೋಧನೆಯ ರಾಷ್ಟ್ರೀಯ ಕೇಂದ್ರದ ಮೂಲಕ ನಡೆಸಲಾದ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಪ್ರೊಗ್ರಾಮ್ ತಿಳಿಸಿರುವಂತೆ 2020 ರಲ್ಲಿ ಅಂದಾಜಿಸಲಾದ ಮಹಿಳೆಯರಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳು ಸುಮಾರು 2 ಲಕ್ಷ ಎಂದು ಅಂದಾಜಿಸಲಾಗಿದ್ದು 2025 ರ ವೇಳೆಗೆ ಇದೇ ಪ್ರಮಾಣ 2.3 ಲಕ್ಷಕ್ಕೆ ಏರಲಿದೆ ಎಂದು ಊಹಿಸಲಾಗಿದೆ.

ಮುಂದೆ ಓದಿ ...
  • Share this:

ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ (Breast Cancer) ಜೀವವನ್ನೇ ಕಸಿದುಕೊಳ್ಳುವಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿದೆ. ಸಮೀಕ್ಷೆಯ ಪ್ರಕಾರ ಈ ಪ್ರಾಣಾಂತಕಾರಿ ಸ್ತನ ಕ್ಯಾನ್ಸರ್‌ಗೆ ಅದೆಷ್ಟೋ ಲಕ್ಷಾಂತರ ಮಹಿಳೆಯರು ಬಲಿಯಾಗಿದ್ದಾರೆ. ಅದಾಗ್ಯೂ ಅಧ್ಯಯನಕಾರರು ಸ್ತನ ಕ್ಯಾನ್ಸರ್ ಹಾನಿಕಾರಕವಾಗಿದ್ದರೂ ಅದು ಉಲ್ಭಣಗೊಳ್ಳುವ (Exciting) ಮೊದಲು ತಡೆಗಟ್ಟಿದಲ್ಲಿ ಸ್ತನ ಕ್ಯಾನ್ಸರ್ ಉಂಟುಮಾಡುವ ಹಾನಿಯಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ರೋಗ ಪತ್ತೆ ಹಾಗೂ ಸಂಶೋಧನೆಯ ರಾಷ್ಟ್ರೀಯ ಕೇಂದ್ರದ ಮೂಲಕ ನಡೆಸಲಾದ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಪ್ರೊಗ್ರಾಮ್ ತಿಳಿಸಿರುವಂತೆ 2020 ರಲ್ಲಿ ಅಂದಾಜಿಸಲಾದ ಮಹಿಳೆಯರಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳು ಸುಮಾರು 2 ಲಕ್ಷ ಎಂದು ಅಂದಾಜಿಸಲಾಗಿದ್ದು 2025 ರ ವೇಳೆಗೆ ಇದೇ ಪ್ರಮಾಣ 2.3 ಲಕ್ಷಕ್ಕೆ ಏರಲಿದೆ ಎಂದು ಊಹಿಸಲಾಗಿದೆ.


ಸ್ತನ ಕ್ಯಾನ್ಸರ್ ಉಲ್ಭಣಗೊಳ್ಳಲು ಪ್ರಮುಖ ಕಾರಣವೆಂದರೆ ಈ ರೋಗದ ಬಗ್ಗೆ ರೋಗಿಗಳಿಗೆ ತಿಳುವಳಿಕೆ ಇಲ್ಲದಿರುವುದು. ಹೀಗಾಗಿ ರೋಗ ಉಲ್ಬಣಗೊಂಡು ಅದು ಪ್ರಾಣಾಂತಿಕವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ರೋಗನಿರ್ಣಯ: ಲಕ್ಷಣರಹಿತ ಸ್ತನ ಕ್ಯಾನ್ಸರ್


ಹೆಸರೇ ಸೂಚಿಸುವಂತೆ ಲಕ್ಷಣ ರಹಿತ ಸ್ತನ ಕ್ಯಾನ್ಸರ್ ಅಥವಾ ಅಸಿಮ್ಟೊಮ್ಯಾಟಿಕ್ ಕ್ಯಾನ್ಸರ್ ಸಂದರ್ಭದಲ್ಲಿ ರೋಗಿಯು ಯಾವುದೇ ರೋಗಲಕ್ಷಣಗಳಿಗೆ ಒಳಗಾಗುವುದಿಲ್ಲ. ಈ ಸಮಯದಲ್ಲಿ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಕ್ಷಿಪ್ರವಾಗಿ ಹರಡುತ್ತದೆ. ಆಗ ಅದು ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಈ ವಿಧಾನದ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಅವಕಾಶಗಳೂ ಇದ್ದು ಆರಂಭಿಕ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ರೋಗಿಯು ಒಳಗಾಗಬೇಕಾಗುತ್ತದೆ.


ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತಂತೆ


40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಕ್ಲಿನಿಕಲ್ ಸ್ತನ ಕ್ಯಾನ್ಸರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಎರಡು ವರ್ಷಗಳಿಗೊಮ್ಮೆ ಮ್ಯಾಮೊಗ್ರಫಿಯನ್ನು ಮಾಡಿಸಬೇಕು.


ಎಷ್ಟು ಬಾರಿ ಪರೀಕ್ಷೆಗೆ ಒಳಗಾಗಬೇಕು?


ಮುಂಬೈನ ಲೆ ನೆಸ್ಟ್ ಹಾಸ್ಪಿಟಲ್ ಮಲಾಡ್‌ನ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ ಮುಖೇಶ್ ಗುಪ್ತಾ ಹೇಳುವಂತೆ ಪ್ರಕರಣವು ಹೆಚ್ಚು ಅಪಾಯಕಾರಿಯಾಗಿರುವಾಗ ಸ್ಕ್ರೀನಿಂಗ್ ಹೆಚ್ಚು ಪರಿಣಾಮಕಾರಿಯಾಗಿರಬೇಕು ಅಂತೆಯೇ ವೈದ್ಯರೊಂದಿಗೆ ಸಮಾಲೋಚನೆ ಕೂಡ ನಡೆಸಬೇಕು ಎಂದು ತಿಳಿಸಿದ್ದಾರೆ.


ಎಕ್ಸರೆ, ಮ್ಯಾಮೊಗ್ರಫಿ, ಸ್ತನ ಅಲ್ಟ್ರಾಸೌಂಡ್ ಮೊದಲಾದ ಇಮೇಜಿಂಗ್ ಪರಿಶೀಲನೆಯ ಸಮಯದಲ್ಲಿ ಸ್ತನದಲ್ಲಿರುವ ಮಾರಣಾಂತಿಕ ಕ್ಯಾನ್ಸರ್ ಅಂಶಗಳನ್ನು ಪತ್ತೆಹಚ್ಚಬಹುದಾಗಿದೆ ಎಂಬುದು ಮುಖೇಶ್ ಹೇಳಿಕೆಯಾಗಿದೆ.


ಕ್ಯಾನ್ಸರ್ 2 ರಿಂದ 5 ವರ್ಷಗಳವರೆಗೆ ಪತ್ತೆಯಾಗದೇ ದೇಹದಲ್ಲಿ ಉಳಿಯುವ ಸಾಧ್ಯತೆ ಕೂಡ ಇರುವುದರಿಂದ ಕ್ಯಾನ್ಸರ್ ಲಕ್ಷಣಗಳು ಕಂಡುಬರದೇ ಇರುವ ಮಹಿಳೆಯರಲ್ಲಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸುವುದು ಮುಖ್ಯ ಎಂದು ಡಾ ಮುಖೇಶ್ ಗುಪ್ತಾ ತಿಳಿಸಿದ್ದಾರೆ.


ರೋಗನಿರ್ಣಯ: ರೋಗಲಕ್ಷಣವಿರುವ ಅಸಿಮ್ಟೊಮ್ಯಾಟಿಕ್ ಸ್ತನ ಕ್ಯಾನ್ಸರ್


ಸ್ತನ ಕ್ಯಾನ್ಸರ್‌ನಲ್ಲಿ ರೋಗನಿರ್ಣಯವು ರೋಗಿಯಲ್ಲಿ ಕ್ಯಾನ್ಸರ್ ಅಂಶಗಳನ್ನು ಸುಧಾರಿಸುವಲ್ಲಿ ಪ್ರಮುಖ ಅಂಶವಾಗಿದೆ. ರೋಗವನ್ನು ಪತ್ತೆಹಚ್ಚಿದೊಡನೆ ಅದು ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಗಟ್ಟುವ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಹಲವಾರು ರೋಗಲಕ್ಷಣಗಳಿದ್ದು ತಿಂಗಳಿಗೊಮ್ಮೆ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮುಖೇಶ್ ಹೇಳಿದ್ದಾರೆ.


ಇದನ್ನೂ ಓದಿ: ಕೊಬ್ಬಿನ ಯಕೃತ್ತಿನ ಸಮಸ್ಯೆ ನಿವಾರಣೆಗೆ ಯಾವ ಪದಾರ್ಥ ತಿನ್ನಬೇಕು?


ಸ್ವಯಂ ಸ್ತನ ಪರೀಕ್ಷೆಮಾಡಿಕೊಳ್ಳುವುದು ಹೇಗೆ?


20 ರ ಹರೆಯದವರು ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೆಂಗಳೆಯರು ಸ್ವಯಂ ಆಗಿ ಸ್ತನ ಪರೀಕ್ಷೆಯನ್ನು ಮಾಡಬೇಕು. ಸ್ತನವನ್ನು ಸ್ಪರ್ಷಿಸುವಾಗ ಗಡ್ಡೆ ಇದ್ದಂತಹ ಅನುಭವ, ಬಾಹ್ಯ ಬದಲಾವಣೆ, ತ್ವಚೆಯ ಉಬ್ಬುವಿಕೆ, ಸ್ತನದ ಊತ, ಮೊಲೆತೊಟ್ಟಿನಲ್ಲಿ ಬದಲಾವಣೆ ಮೊದಲಾದ ಅಂಶಗಳನ್ನು ಸ್ವಯಂ ಪರೀಕ್ಷೆಯ ಸಮಯದಲ್ಲಿ ಗಮನಿಸಬೇಕು. ಸ್ತನದಿಂದ ದ್ರವ ವಿಸರ್ಜನೆ, ರಕ್ತದ ಛಾಯೆ, ರಕ್ತ ಸ್ರವಿಕೆ ಕಂಡುಬಂದಲ್ಲಿ ಇದನ್ನು ಎಚ್ಚರಿಕೆಯ ಚಿಹ್ನೆ ಎಂದೇ ಭಾವಿಸಬೇಕು. ಈ ಸಮಯದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು.


ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಹಾಗೂ ನಿರ್ವಹಣೆ


ಸ್ತನ ಕ್ಯಾನ್ಸರ್‌ನ ವಿಧ, ಹಂತ ಹಾಗೂ ಹರಡುವಿಕೆಯನ್ನು ಆಧರಿಸಿ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಮತ್ತು ಹಾರ್ಮೋನ್ ಥೆರಪಿಗಳಲ್ಲಿ ಯಾವುದಾದರೂ ಒಂದು ಚಿಕಿತ್ಸೆಯನ್ನು ಪರಿಗಣಿಸಲಾಗುತ್ತದೆ ಎಂದು ಗುಪ್ತಾ ಹೇಳಿದ್ದಾರೆ.


ಆರಂಭಿಕ ರೋಗನಿರ್ಣಯ: ಭರವಸೆಯ ಬೆಳಕು


ವಿಶ್ವದಲ್ಲಿಯೇ ಸ್ತನ ಕ್ಯಾನ್ಸರ್ ಕ್ಷಿಪ್ರವಾಗಿ ಹರಡುತ್ತಿದೆ. ಕ್ಯಾನ್ಸರ್ ಪತ್ತೆಹಚ್ಚಲು ಆರಂಭದಲ್ಲಿಯೇ ರೋಗನಿರ್ಣಯ ಮಾಡುವುದು ಇದರಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವ ಭರವಸೆಯ ಬೆಳಕಾಗಿದೆ. ಆರಂಭಿಕ ರೋಗನಿರ್ಣಯ, ಸ್ಕ್ರೀನಿಂಗ್ ಪರೀಕ್ಷೆಗಳು, ನಿಯಮಿತವಾಗಿ ವೈದ್ಯರ ಸಲಹೆಗಳನ್ನು ಪಾಲಿಸುವುದು ಮತ್ತು ಉತ್ತಮ ಚಿಕಿತ್ಸೆಯು ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ಸುಧಾರಣೆಯನ್ನುಂಟು ಮಾಡಲು ಸಹಕಾರಿಯಾಗಿದೆ.


ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಏನು ಮಾಡಬಹುದು?


ಈ ಅಪಾಯವನ್ನು ತಗ್ಗಿಸಲು ಮದ್ಯಪಾನದಂತಹ ದುಶ್ಚಟಗಳನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದಾಗಿದೆ ಎಂದೇ ವೈದ್ಯರು ಸಲಹೆ ನೀಡುತ್ತಾರೆ. ನಿತ್ಯವೂ ವ್ಯಾಯಾಮ ಮಾಡುವುದು ಹಾಗೂ ಆರೋಗ್ಯಕರ ತೂಕವನ್ನು ನಿರ್ವಹಿಸುವುದು ಮುಖ್ಯವಾಗಿದೆ. ಮಗುವಿಗೆ ಹಾಲುಣಿಸುವುದು ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಾಗಿದೆ.

First published: