• Home
 • »
 • News
 • »
 • lifestyle
 • »
 • Breast Cancer: ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಂತೆ

Breast Cancer: ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರ ಸಾವಿಗೆ ಕಾರಣ ಆಗುತ್ತಿದೆ ಎಂದು ಹೇಳಲಾಗಿದೆ. ಸ್ತನ ಕ್ಯಾನ್ಸರ್ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲು ಅನೇಕ ಅಂಶಗಳು ಕಾರಣವಾಗಿವೆ. ಅದರಲ್ಲಿ ಪ್ರಮುಖ ಕಾರಣ ಅಂದ್ರೆ ಸ್ತನ ಕ್ಯಾನ್ಸರ್‌ ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಅರಿವಿನ ಕೊರತೆ.

ಮುಂದೆ ಓದಿ ...
 • Share this:

  ಜಗತ್ತಿನಲ್ಲಿ (World) ಹಲವು ತರಹದ ಕಾಯಿಲೆಗಳಿವೆ (Diseases). ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು (People) ಬಾಧಿಸುತ್ತಿರುವುದು ಹೃದಯ (Heart) ಸಂಬಂಧಿ ಕಾಯಿಲೆಗಳು ಮತ್ತು ವಿವಿಧ ರೀತಿಯ ಕ್ಯಾನ್ಸರ್ (Cancer) ಕಾಯಿಲೆಗಳು. ಅದರಲ್ಲೂ ಮಹಿಳೆಯರಲ್ಲಿ (Women’s) ಕ್ಯಾನ್ಸರ್ ರೋಗಿಗಳು ಹೆಚ್ಚುತ್ತಿದ್ದಾರೆ. ಮಹಿಳೆಯರಲ್ಲಿ ಹೆಚ್ಚಾಗಿ ಬ್ರೆಸ್ಟ್ ಕ್ಯಾನ್ಸರ್ ಅಂದ್ರೆ ಸ್ತನ ಕ್ಯಾನ್ಸರ್ (Breast Cancer) ಹೆಚ್ಚುತ್ತಿದೆ. ಸ್ತನ ಕ್ಯಾನ್ಸರ್ ಗೆ ಸಾಕಷ್ಟು ಮಹಿಳೆಯರು ಗುರಿಯಾಗಿದ್ದು, ಬಳಲುತ್ತಿದ್ದಾರೆ. ಸಾಮಾನ್ಯ ರೀತಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಆಗಿದೆ. ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರ ಸಾವಿಗೆ ಕಾರಣ ಆಗುತ್ತಿದೆ ಎಂದು ಹೇಳಲಾಗಿದೆ. ಸ್ತನ ಕ್ಯಾನ್ಸರ್ ಪ್ರಮಾಣವು ಕಾಲಾನಂತರದಲ್ಲಿ ವೇಗವಾಗಿ ಹೆಚ್ಚುತ್ತಿದೆ.


  ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲು ಕಾರಣವಾದ ಅಂಶಗಳು


  ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲು ಅನೇಕ ಅಂಶಗಳು ಕಾರಣವಾಗಿವೆ. ಅದರಲ್ಲಿ ಪ್ರಮುಖ ಕಾರಣ ಅಂದ್ರೆ ಸ್ತನ ಕ್ಯಾನ್ಸರ್‌ ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಅರಿವಿನ ಕೊರತೆ. WHO ಪ್ರಕಾರ 2020 ರಲ್ಲಿ ವಿಶ್ವದ ತುಂಬಾ 2.3 ಮಿಲಿಯನ್ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆ ಆಗಿದೆ. ಅದರಲ್ಲಿ 6,85,000 ಮಹಿಳೆಯರು ಸಾವು ಬದುಕಿನ ಮಧ್ಯೆ ಹೋರಾಡುವಂತೆ ಮಾಡಿದೆ ಎಂದು ತಿಳಿಸಿದೆ.


  ಲಕ್ಷಣ ರಹಿತ ಸ್ತನ ಕ್ಯಾನ್ಸರ್ ಎಂದರೇನು?


  ಲಕ್ಷಣ ರಹಿತ ಸ್ತನ ಕ್ಯಾನ್ಸರ್ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ರೋಗವು ಮೆಟಾಸ್ಟಾಸೈಸ್ ಆಗಬಹುದು. ಅಂದರೆ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುತ್ತದೆ. ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಮುಂದುವರಿದ ಹಂತದಲ್ಲಿ ರೋಗ ನಿರ್ಣಯ ಮಾಡುವುದು ಆಗಿದೆ.


  ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


  ಆಗ ಅಲ್ಲಿ ಚಿಕಿತ್ಸೆಯ ಆಯ್ಕೆಗಳು ಕಡಿಮೆ ಆಗಿರುತ್ತವೆ. ರೋಗಿಯು ಬದುಕುಳಿಯುವ ಸ್ಥಿತಿ ನಿರ್ಣಯಕ್ಕೆ ಬರಲಾಗಲ್ಲ. ಸ್ತನ ತಪಾಸಣೆಯಿಂದ ಈ ರೀತಿಯ ಕ್ಯಾನ್ಸರ್ ನ್ನು ತಪ್ಪಿಸಬಹುದು. ನೀವು 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಾಗಿದ್ದರೆ ಸ್ತನ ತಪಾಸಣೆ ಮಾಡಿಸಿ.


  ಸ್ತನ ಕ್ಯಾನ್ಸರ್ ತಪಾಸಣೆ ಎಷ್ಟು ಬಾರಿ ಮಾಡಬೇಕು?


  ಮುಂಬೈನ ಮಲಾಡ್‌ನ ಲೆನೆಸ್ಟ್ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಮುಕೇಶ್ ಗುಪ್ತಾ ಪ್ರಕಾರ, ವೈದ್ಯರ ಜೊತೆ ಸಮಾಲೋಚಿಸಿ 25 ನೇ ವಯಸ್ಸಿನಿಂದ ನಿಯಮಿತವಾಗಿ ಸ್ಕ್ರೀನಿಂಗ್ ಪ್ರಾರಂಭಿಸಬೇಕು. ಎಕ್ಸ್-ರೇ ಮ್ಯಾಮೊಗ್ರಫಿ, ಸ್ತನ ಅಲ್ಟ್ರಾಸೌಂಡ್, MRI, CT ಮತ್ತು PET ಸ್ಕ್ಯಾನ್‌ನಂತಹ ಇಮೇಜಿಂಗ್ ಪರೀಕ್ಷೆ ಮಾಡಿಸುವುದು ಸಮಯಕ್ಕೆ ಸರಿಯಾಗಿ ಸ್ತನ ದೋಷ ಪತ್ತೆ ಹಚ್ಚಲು ಸಹಕಾರಿ. ಇದು ಆರಂಭಿಕ ಹಂತದಲ್ಲಿ ರೋಗ ನಿರ್ಣಯಕ್ಕೆ ಸಹಕಾರಿ.


  ರೋಗ ಲಕ್ಷಣ ತೋರಿಸುವ ಸ್ತನ ಕ್ಯಾನ್ಸರ್ ನಿರ್ಣಯಿಸುವುದು ಹೇಗೆ?


  20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿ ಹೆಣ್ಣುಮಕ್ಕಳು ಪ್ರತಿ ತಿಂಗಳು ಸ್ವಯಂ ಸ್ತನ ಪರೀಕ್ಷೆ ಮಾಡಬೇಕು. ಇದು ಸ್ತನ ಕ್ಯಾನ್ಸರ್ ಪತ್ತೆಗೆ ಸಹಕಾರಿ. ಅದಾಗ್ಯೂ ನೀವು ಎದೆಯಲ್ಲಿ ಯಾವುದೇ ಗಡ್ಡೆ ಇದ್ದಂತೆ ಅನುಭವವಾದ್ರೆ, ಆಕಾರದಲ್ಲಿ ಬದಲಾವಣೆ,


  ಚರ್ಮದ ಡಿಂಪಲ್, ಮೊಲೆತೊಟ್ಟುಗಳ ಬದಲಾವಣೆ ಅಥವಾ ಸ್ರಾವ, ಊತ ಉಂಟಾದಾಗ ಎಚ್ಚರಿಕೆ ವಹಿಸಿ. ಇದು ಸ್ತನ ಕ್ಯಾನ್ಸರ್ ಸಂಕೇತ ಆಗಿರುವ ಸಾಧ್ಯತೆ ಹೆಚ್ಚು. ನಿಯಮಿತವಾಗಿ ಸ್ತನ ತಪಾಸಣೆ ಮಾಡಿ.


  40 ವರ್ಷ ದಾಟಿದ ನಂತರ ಸ್ಕ್ರೀನಿಂಗ್ ಡಯಾಗ್ನೋಸ್ಟಿಕ್ ಮತ್ತು ಇಮೇಜಿಂಗ್ ಪರೀಕ್ಷೆಗಳಾದ ಸ್ತನ ಅಲ್ಟ್ರಾಸೌಂಡ್ ಅಥವಾ ಮ್ಯಾಮೊಗ್ರಫಿ ಮತ್ತು ಅಗತ್ಯವಿದ್ದರೆ ಜೆನೆಟಿಕ್ ಕೌನ್ಸೆಲಿಂಗ್ ಗೆ ವೈದ್ಯರು ಸೂಚಿಸುತ್ತಾರೆ.


  ಸ್ತನ ಕ್ಯಾನ್ಸರ್ ಗುಣಪಡಿಸಬಹುದೇ?


  ಸ್ತನ ಕ್ಯಾನ್ಸರ್‌ ಗೆ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಕ್ಯಾನ್ಸರ್‌ನ ಪ್ರಕಾರ, ಹಂತ ಮತ್ತು ಹರಡುವಿಕೆ ಅವಲಂಬಿಸಿವೆ. ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸಾ ವಿಧಾನ ಶಿಫಾರಸು ಮಾಡಲಾಗುತ್ತದೆ.


  ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ, ಕೀಮೋಥೆರಪಿ, ವಿಕಿರಣ ಮತ್ತು ಹಾರ್ಮೋನ್ ಚಿಕಿತ್ಸೆ ನೀಡಲಾಗುತ್ತದೆ. ಸ್ತನ ಕ್ಯಾನ್ಸರ್ ತೆಗೆದು ಹಾಕಲು, ತಡೆಗಟ್ಟಲು ಮತ್ತು ಮರುಕಳಿಸುವಿಕೆ ತಡೆಯಲು ಈ ಆಯ್ಕೆಗಳ ಸಂಯೋಜನೆ ಬಳಸಿ.


  ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


  ಸ್ತನ ಕ್ಯಾನ್ಸರ್ ಹೇಗೆ ತಪ್ಪಿಸಬಹುದು?


  ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಆಲ್ಕೋಹಾಲ್ ಸೇವಿಸಬೇಡಿ. ದಿನವೂ ವ್ಯಾಯಾಮ, ಆರೋಗ್ಯಕರ ತೂಕ, ಮಧ್ಯಮ ಏರೋಬಿಕ್ ವ್ಯಾಯಾಮ  ಮಾಡಿ.

  Published by:renukadariyannavar
  First published: