Valentine's Day 2022: ಜ್ಯೋತಿಷ್ಯದ ಪ್ರಕಾರ ದಂಪತಿಗಳು ವ್ಯಾಲೆಂಟೈನ್ಸ್​ ಡೇಯನ್ನು ಹೀಗೆ ಆಚರಿಸಬೇಕಂತೆ

Ideas For Special Day: ಗುಲಾಬಿಗಳು ಶುಕ್ರನ ಸಂಕೇತವಾಗಿದೆ, ವಾಸ್ತು ಪ್ರಕಾರ, ಕೆಂಪು ಬಣ್ಣವು ಬೆಂಕಿಯ ಸಂಕೇತವಾಗಿದೆ. ಆದ್ದರಿಂದ ಕೆಂಪು ಗುಲಾಬಿಗಳು ಅವರ ಹೃದಯದಲ್ಲಿ ಪ್ರೀತಿಯ ಬೆಂಕಿಯನ್ನು ಸೃಷ್ಟಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೇಮಿಗಳ ದಿನವು  (Valentines Day) ನಿಮ್ಮ ಸಂಗಾತಿಗೆ (Partner)  ವಿಶೇಷ ಕಾಳಜಿ ಮತ್ತು ನಿಮ್ಮ ಪ್ರೀತಿಯನ್ನು (Love)  ವ್ಯಕ್ತಪಡಿಸಲು ವಿಶೇಷ ದಿನವಾಗಿದೆ. ಈ ದಿನ ಪ್ರೀತಿ, ಒಗ್ಗಟ್ಟು ಮತ್ತು ಭರವಸೆಯನ್ನು ಸೂಚಿಸುತ್ತದೆ. ಈ ಸುಂದರ ದಿನವು ವಿವಾಹಿತ ದಂಪತಿಗಳ (Marriage Life) ಜೀವನವನ್ನು ಪ್ರೀತಿ ಮತ್ತು ಉತ್ಸಾಹದಿಂದ ತುಂಬುತ್ತದೆ. ಇದು ಪ್ರೀತಿ ಮತ್ತು ಸಂಬಂಧಗಳ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರೀತಿ ಇಬ್ಬರು ವ್ಯಕ್ತಿಗಳ ನಡುವಿನ ದಾರದಂತಿದೆ ಆದರೆ ಈ ದಾರವನ್ನು ಕತ್ತರಿಸುವ ವಿಚ್ಛೇದನ, ವಿವಾಹೇತರ ಸಂಬಂಧ, ಕುಟುಂಬದ ಸದಸ್ಯರೊಂದಿಗಿನ ಕೆಟ್ಟ ಸಂಬಂಧದಂತಹ ಹಲವು ಸಮಸ್ಯೆಗಳಿವೆ. ಆದರೆ ವಿವಾಹಿತ ದಂಪತಿಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ಜ್ಯೋತಿಷ್ಯವು (Astrology) ಪ್ರಮುಖ ಪಾತ್ರ ವಹಿಸುತ್ತದೆ. ದಂಪತಿಗಳು ನೈಋತ್ಯ ವಲಯದ ಮೇಲೆ ಕೇಂದ್ರೀಕರಿಸಬೇಕು. ಏಕೆಂದರೆ ಅದು ಸಂಬಂಧದ ವಲಯವಾಗಿದೆ. ಪ್ರೇಮಿಗಳ ದಿನದಂದು ದಂಪತಿಗಳು ತಮ್ಮ ವೈವಾಹಿಕ ಜೀವನವನ್ನು ಸುಧಾರಿಸುವ ಕೆಲವು ಸಲಹೆಗಳು ಇಲ್ಲಿದೆ.  

ನೈಋತ್ಯ ದಿಕ್ಕಿನ ಕಡೆ ಟ್ರಿಪ್ ಪ್ಲ್ಯಾನ್​ ಮಾಡಿ

ನೀವು ಪರಸ್ಪರ ಕೆಲವು ಗುಣಮಟ್ಟದ ಮತ್ತು ರೋಮ್ಯಾಂಟಿಕ್ ಸಮಯವನ್ನು ಕಳೆಯಲು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಮಯ ಇದು. ಆದರೆ ನೈಋತ್ಯ ದಿಕ್ಕಿನ ಕಡೆ ಪ್ರವಾಸಕ್ಕೆ ಹೋಗಲು ಪ್ರಯತ್ನಿಸಿ. ನಿಮ್ಮ ಸಂಬಂಧಗಳನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಕ್ಯಾಂಡಲ್ಲೈಟ್ ಡಿನ್ನರ್ ಮಾಡಿ

ಹೊಸದಾಗಿ ವಿವಾಹವಾದ ದಂಪತಿಗಳು ಕ್ಯಾಂಡಲ್​ಲೈಟ್​ ಡಿನ್ನರ್​ಗೆ ಹೋಗಲು ಇಷ್ಟಪಡುತ್ತಾರೆ. ಏಕೆಂದರೆ ಇದು ಕ್ಷಣವನ್ನು ವಿಶೇಷ ಮತ್ತು ಸ್ಮರಣೀಯವಾಗಿಸಲು ಉತ್ತಮ ಮಾರ್ಗ ಎನ್ನಲಾಗುತ್ತದೆ. ಆಗ್ನೇಯ ದಿಕ್ಕು ಒಟ್ಟಿಗೆ ಊಟ ಮಾಡಲು ಸೂಕ್ತ ಸ್ಥಳವಾಗಿದೆ. ಮೇಣದಬತ್ತಿಗಳು ಬೆಂಕಿಯ ಅಂಶವನ್ನು ಹೊಂದಿರುತ್ತವೆ ಮತ್ತು ಆಗ್ನೇಯ ವಲಯದಲ್ಲಿ ಎಲ್ಲಾ ತೊಂದರೆಗಳು, ನಿಮ್ಮ ನಡುವಿನ ಸಮಸ್ಯೆಗಳನ್ನು ಸುಡಲು ಇದು ಸಹಾಯ ಮಾಡುವುದರಿಂದ, ನಿಮ್ಮ ಬಂಧ ಗಟ್ಟಿಯಾಗುತ್ತದೆ.

ಗುಲಾಬಿ ಬಣ್ಣದ ಮೇಣದಬತ್ತಿಗಳನ್ನು ಬಳಸಿ

ಕ್ಯಾಂಡಲ್‌ಲೈಟ್ ಡಿನ್ನರ್‌ಗಳಲ್ಲಿ ಗುಲಾಬಿ ಪರಿಮಳದ ಸಾರವನ್ನು ಹೊಂದಿರುವ ಗುಲಾಬಿ ಬಣ್ಣದ ಮೇಣದಬತ್ತಿಯು ಅಗತ್ಯವಾಗಿರಬೇಕು. ಆಗ್ನೇಯ ದಿಕ್ಕಿನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ನಿಮ್ಮ ಸಂಗಾತಿಯ ಮುಂದೆ ಮನಬಿಚ್ಚಿ ಮಾತನಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಡಿನ್ನರ್​ ಸಮಯದಲ್ಲಿ ಕೇವಲ ಗುಲಾಬಿ ಬಣ್ಣದ ಕ್ಯಾಂಡಲ್​ ಬಳಸಿ.

ಇದನ್ನೂ ಓದಿ: ಸ್ಪೆಷಲ್​ ಡೇಗೆ ಈ ಗಿಫ್ಟ್​ಗಳನ್ನು ಕೊಟ್ರೆ ನಿಮ್ಮ ಸಂಗಾತಿ ಫಿದಾ ಆಗೋದು ಗ್ಯಾರೆಂಟಿ

ಪಿಂಕ್​ ಬಣ್ಣದ ಗಿಫ್ಟ್​ಗಳನ್ನು ನೀಡಿ

ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು, ಪುರುಷರು ತಮ್ಮ ಸಂಗಾತಿಗೆ ಗುಲಾಬಿ ಬಣ್ಣದ ಉಡುಗೊರೆಗಳನ್ನು ನೀಡಬಹುದು. ಮಹಿಳೆಯರು ಹಳದಿ ಮತ್ತು ನಿಂಬೆ ಬಣ್ಣದ ಉಡುಗೊರೆಗಳನ್ನು ನೀಡಿ ತಮ್ಮ ಪಾಲುದಾರರನ್ನು ಇಂಪ್ರೆಸ್​ ಮಾಡಬಹುದು. ಇದು ನಿಮ್ಮ ಸಂಬಂಧವನ್ನು ಅರ್ಥಪೂರ್ಣಗೊಳಿಸುತ್ತದೆ.

 ಡೈಮಂಡ್​ಗಳನ್ನು ಗಿಫ್ಟ್​ ನೀಡಿ

ಜ್ಯೋತಿಷ್ಯದ ಪ್ರಕಾರ, ವಜ್ರಗಳು ಪ್ರೀತಿ ಮತ್ತು ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಆಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಜ್ರವು ಶುಕ್ರನ ಸಂಕೇತವಾಗಿದೆ. ಆದ್ದರಿಂದ, ಪ್ರೇಮಿಗಳ ದಿನದಂದು ವಜ್ರಗಳನ್ನು ನೀಡುವುದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ದಂಪತಿಗಳ ಜೀವನದಲ್ಲಿ ಪ್ರಣಯವನ್ನು ಹೆಚ್ಚಿಸುತ್ತದೆ.

ತನ್ನ ಪ್ರೇಮಿಗೆ ವಜ್ರವನ್ನು ಉಡುಗೊರೆಯಾಗಿ ನೀಡುವ ವ್ಯಕ್ತಿಯು ಎಂದಿಗೂ ಬೇರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ವಜ್ರಗಳು ಕೀಳರಿಮೆಯನ್ನು ತೆಗೆದುಹಾಕಬಹುದು. ಇದು ಜೀವನದಲ್ಲಿ ಅದೃಷ್ಟ, ಪ್ರೀತಿ, ವಿಶ್ವಾಸ ಮತ್ತು ಸಮೃದ್ಧಿಯನ್ನು ತರುತ್ತದೆ. ಅದರಲ್ಲೂ ತುಲಾ ಮತ್ತು ಕನ್ಯಾರಾಶಿಯಲ್ಲಿ ಜನಿಸಿದವರು ವಜ್ರಗಳನ್ನು  ಧರಿಸಬೇಕು. ಇದು ಅವರ ಪ್ರೀತಿಯ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.

 ಗುಲಾಬಿ ಹೂವುಗಳನ್ನು ನೀಡಿ

ಪ್ರೀತಿಯ ಸಂಕೇತವಾದ ROSE ಇಲ್ಲದೆ ವ್ಯಾಲೆಂಟೈನ್ಸ್ ಡೇ ಅಪೂರ್ಣ ಎನ್ನಲಾಗುತ್ತದೆ. ನೀವು ನಿಮ್ಮ ಸಂಗಾತಿಗೆ ಗುಲಾಬಿ ಹೂಗಳನ್ನು ನೀಡಬಹುದು ಅಥವಾ ಗುಲಾಬಿ ಹೂಗಳ ಪರಿಮಳ ಹೊಂದಿರುವ ವಸ್ತುಗಳನ್ನು  ನೀಡಬಹುದು.  ಇದು ಪ್ರೀತಿಯ ಬಂಧವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಈ Valentine's Day ದಿನ ನಿಮ್ಮ ಪ್ರೇಯಸಿ ಜೊತೆ ಈ ಬೀಚ್‌ಗಳಿಗೆ ವಿಸಿಟ್ ಕೊಡಿ

ಗುಲಾಬಿಗಳು ಶುಕ್ರನ ಸಂಕೇತವಾಗಿದೆ, ವಾಸ್ತು ಪ್ರಕಾರ, ಕೆಂಪು ಬಣ್ಣವು ಬೆಂಕಿಯ ಸಂಕೇತವಾಗಿದೆ. ಆದ್ದರಿಂದ ಕೆಂಪು ಗುಲಾಬಿಗಳು ಅವರ ಹೃದಯದಲ್ಲಿ ಪ್ರೀತಿಯ ಬೆಂಕಿಯನ್ನು ಸೃಷ್ಟಿಸುತ್ತವೆ. ಆದ್ದರಿಂದ ನಿಮ್ಮ ಜೀವನದಲ್ಲಿ ಸಂತೋಷ ತರಲು, ಪ್ರೇಮಿಗಳ ದಿನದಂದು ಪ್ರೀತಿಪಾತ್ರರಿಗೆ ಗುಲಾಬಿ ಹೂವುಗಳನ್ನು ನೀಡುವುದು ಉತ್ತಮ.
Published by:Sandhya M
First published: