• Home
  • »
  • News
  • »
  • lifestyle
  • »
  • Green Apple: ಅಸ್ತಮಾ ಸಮಸ್ಯೆ, ಯಕೃತ್ತಿನ ಆರೋಗ್ಯಕ್ಕೆ ಸೇವಿಸಿ ಗ್ರೀನ್ ಆ್ಯಪಲ್!

Green Apple: ಅಸ್ತಮಾ ಸಮಸ್ಯೆ, ಯಕೃತ್ತಿನ ಆರೋಗ್ಯಕ್ಕೆ ಸೇವಿಸಿ ಗ್ರೀನ್ ಆ್ಯಪಲ್!

ಗ್ರೀನ್ ಸೇಬು ಆರೋಗ್ಯ ಪ್ರಯೋಜನಗಳ ಬಗ್ಗೆ ಹೋಲಿಸ್ಟಿಕ್ ನ್ಯೂಟ್ರಿಷನ್ ಕೋಚ್ ಪ್ರಿಯಾಂಶಿ ಭಟ್ನಾಗರ್ ಹೇಳಿದ್ದಾರೆ. ಹಸಿರು ಸೇಬುಗಳು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಒಂದು ಸೂಪರ್‌ ಫುಡ್ ಎಂದು ಹೇಳುತ್ತಾರೆ. ಹಸಿರು ಸೇಬುಗಳು ಕೆಂಪು ಸೇಬಿನಷ್ಟೇ ಪೌಷ್ಟಿಕಾಂಶ ಹೊಂದಿವೆ. ರುಚಿಯಲ್ಲಿ ಸಿಹಿ ಮತ್ತು ಹುಳಿ ಆಗಿದೆ.

ಗ್ರೀನ್ ಸೇಬು ಆರೋಗ್ಯ ಪ್ರಯೋಜನಗಳ ಬಗ್ಗೆ ಹೋಲಿಸ್ಟಿಕ್ ನ್ಯೂಟ್ರಿಷನ್ ಕೋಚ್ ಪ್ರಿಯಾಂಶಿ ಭಟ್ನಾಗರ್ ಹೇಳಿದ್ದಾರೆ. ಹಸಿರು ಸೇಬುಗಳು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಒಂದು ಸೂಪರ್‌ ಫುಡ್ ಎಂದು ಹೇಳುತ್ತಾರೆ. ಹಸಿರು ಸೇಬುಗಳು ಕೆಂಪು ಸೇಬಿನಷ್ಟೇ ಪೌಷ್ಟಿಕಾಂಶ ಹೊಂದಿವೆ. ರುಚಿಯಲ್ಲಿ ಸಿಹಿ ಮತ್ತು ಹುಳಿ ಆಗಿದೆ.

ಗ್ರೀನ್ ಸೇಬು ಆರೋಗ್ಯ ಪ್ರಯೋಜನಗಳ ಬಗ್ಗೆ ಹೋಲಿಸ್ಟಿಕ್ ನ್ಯೂಟ್ರಿಷನ್ ಕೋಚ್ ಪ್ರಿಯಾಂಶಿ ಭಟ್ನಾಗರ್ ಹೇಳಿದ್ದಾರೆ. ಹಸಿರು ಸೇಬುಗಳು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಒಂದು ಸೂಪರ್‌ ಫುಡ್ ಎಂದು ಹೇಳುತ್ತಾರೆ. ಹಸಿರು ಸೇಬುಗಳು ಕೆಂಪು ಸೇಬಿನಷ್ಟೇ ಪೌಷ್ಟಿಕಾಂಶ ಹೊಂದಿವೆ. ರುಚಿಯಲ್ಲಿ ಸಿಹಿ ಮತ್ತು ಹುಳಿ ಆಗಿದೆ.

ಮುಂದೆ ಓದಿ ...
  • Share this:

    ಎಲ್ಲಾ ಸೀಸನ್ ನಲ್ಲೂ (Season) ಸೇಬು ಹಣ್ಣು ಸಿಗುತ್ತದೆ. ಸೇಬು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ (Health) ಸಾಕಷ್ಟು ಪ್ರಯೋಜನ (Benefits) ನೀಡುತ್ತದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ಜನರು ಸೇಬು ಹಣ್ಣು ತಿನ್ನುತ್ತಾರೆ. ಪೋಷಕರಿಂದ ಹಿಡಿದು ಪೌಷ್ಟಿಕ ತಜ್ಞರವರೆಗೆ ಎಲ್ಲರೂ ಸೇಬು ಹಣ್ಣಿನ ಗುಣಗಾನ ಮಾಡ್ತಾರೆ. ಕೆಂಪು ಸೇಬು ನೀವು ತಿಂದಿರುತ್ತೀರಿ. ಆದರೆ ವೈದ್ಯರು ಹೇಳೋದು, ಗ್ರೀನ್ ಸೇಬು (Green Apple) ಹಣ್ಣುಗಳ ಬಗ್ಗೆ. ಹಸಿರು ಸೇಬುಗಳು ತಮ್ಮ ಪೋಷಕಾಂಶಗಳಿಂದ ಹೆಸರುವಾಸಿ. ಗ್ರೀನ್ ಆಪಲ್ಸ್ ಎಂದೂ ಕರೆಯಲ್ಪಡುವ ಗ್ರ್ಯಾನಿ ಸ್ಮಿತ್ ಸೇಬು ಸೇವನೆ ಮಾಡಿದರೆ ಕರುಳಿನ ಆರೋಗ್ಯ ಮತ್ತು ಚರ್ಮ ಮತ್ತು ಕೂದಲಿನ ಮೇಲೆ ಧನಾತ್ಮಕ ಪರಿಣಾಮ ಸಿಗುತ್ತದೆ.


    ಗ್ರೀನ್ ಆಪಲ್‌ ನ ಪ್ರಯೋಜನಗಳು


    ಗ್ರೀನ್ ಸೇಬು ಆರೋಗ್ಯ ಪ್ರಯೋಜನಗಳ ಬಗ್ಗೆ ಹೋಲಿಸ್ಟಿಕ್ ನ್ಯೂಟ್ರಿಷನ್ ಕೋಚ್ ಪ್ರಿಯಾಂಶಿ ಭಟ್ನಾಗರ್ ಹೇಳಿದ್ದಾರೆ. ಹಸಿರು ಸೇಬುಗಳು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಒಂದು ಸೂಪರ್‌ ಫುಡ್ ಎಂದು ಹೇಳುತ್ತಾರೆ.


    ಹಸಿರು ಸೇಬುಗಳು ಕೆಂಪು ಸೇಬಿನಷ್ಟೇ ಪೌಷ್ಟಿಕಾಂಶ ಹೊಂದಿವೆ. ರುಚಿಯಲ್ಲಿ ಸಿಹಿ ಮತ್ತು ಹುಳಿ ಆಗಿದೆ. ಫೈಬರ್, ವಿಟಮಿನ್ ಸಿ, ವಿಟಮಿನ್ ಎ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಮತ್ತು ನಿಮ್ಮ ಚರ್ಮ ಮತ್ತು ಕೂದಲಿಗೆ ಅನೇಕ ಪ್ರಯೋಜನ ನೀಡುತ್ತದೆ.




    ಒಂದು ಮಧ್ಯಮ ಗಾತ್ರದ ಹಸಿರು ಸೇಬು ಕ್ಯಾಲೋರಿ 52, ಪ್ರೋಟೀನ್ 0.3 ಗ್ರಾಂ, ಕಾರ್ಬೋಹೈಡ್ರೇಟ್ಗಳು 14 ಗ್ರಾಂ, ಫೈಬರ್ 2.4 ಗ್ರಾಂ, ಕೊಬ್ಬು 0.2 ಗ್ರಾಂ ಹೊಂದಿದೆ.


    ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ


    ತೂಕ ನಿಯಂತ್ರಿಸಲು ಹಸಿರು ಸೇಬು ಸೇವನೆ ಮಾಡಿ. ಇದರಲ್ಲಿರುವ ಪಾಲಿಫಿನಾಲ್‌ಗಳು ಸ್ಥೂಲಕಾಯ ವಿರೋಧಿ ಗುಣ ಹೊಂದಿವೆ. ಮತ್ತು ದೇಹದಿಂದ ಸ್ವತಂತ್ರ ರಾಡಿಕಲ್‌ಗಳು ಮತ್ತು ಕೊಬ್ಬಿನ ಅಂಗಾಂಶ ತೆಗೆದು ಹಾಕುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


    ಚರ್ಮದ ಆರೋಗ್ಯಕ್ಕೆ ಒಳ್ಳೆಯದು


    ಹಸಿರು ಸೇಬಿನ ತಿರುಳು ಮಾತ್ರವಲ್ಲ, ಸಿಪ್ಪೆಯೂ ಸಹ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ಇದರಲ್ಲಿರುವ ಟ್ಯಾನಿನ್ ಉತ್ತಮ ಉತ್ಕರ್ಷಣ ನಿರೋಧಕ ಮಾತ್ರವಲ್ಲದೇ ಚರ್ಮಕ್ಕೆ ಸಂಕೋಚಕವಾಗಿಯೂ ಕೆಲಸ ಮಾಡುತ್ತದೆ. ಸಂಕೋಚಕಗಳು ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತವೆ. ಜೊತೆಗೆ ಚರ್ಮದಿಂದ ಹೆಚ್ಚುವರಿ ಎಣ್ಣೆಯ ಬಿಡುಗಡೆ ತಡೆಯುವಲ್ಲಿ ಇದು ಪರಿಣಾಮಕಾರಿ ಆಗಿದೆ.


    ಅಸ್ತಮಾ ಅಪಾಯ ಕಡಿಮೆ ಮಾಡುತ್ತದೆ


    ಎನ್‌ಸಿಬಿಐ ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಹಣ್ಣು ಮತ್ತು ತರಕಾರಿಗಳ ಸೇವನೆ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಶೇಕಡಾ 21 ರಷ್ಟು ಕಡಿಮೆ ಮಾಡುತ್ತದೆ. ಹಸಿರು ಸೇಬುಗಳಲ್ಲಿ ಕಂಡು ಬರುವ ಫ್ಲೇವೊನೈಡ್ಗಳು ಶ್ವಾಸಕೋಶದ ಕ್ಯಾನ್ಸರ್ ಈ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ.


    ಶ್ವಾಸಕೋಶವನ್ನು ಆರೋಗ್ಯವಾಗಿಡಲು ಪ್ರತಿದಿನ ಒಂದು ಹಸಿರು ಸೇಬು ತಿನ್ನಿರಿ. ಕ್ಯಾನ್ಸರ್‌ ನಂತಹ ಮಾರಣಾಂತಿಕ ಕಾಯಿಲೆಗಳಲ್ಲಿ ಮನೆಮದ್ದುಗಳ ಬದಲಿಗೆ ವೈದ್ಯಕೀಯ ಸಲಹೆ ಪಡೆಯಿರಿ.


    ಕೀಲುಗಳು ಸ್ಟ್ರಾಂಗ್ ಆಗುತ್ತವೆ


    ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ, ಪ್ರೋಟೀನ್, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಬೇಕು. ತಾಮ್ರ, ಸತು, ವಿಟಮಿನ್-ಎ ಮತ್ತು ವಿಟಮಿನ್-ಕೆ ಮುಂತಾದ ಕೆಲವು ಖನಿಜಗಳು ಸಹ ಮೂಳೆಗಳನ್ನು ಬಲಪಡಿಸುತ್ತವೆ. ಈ ಎಲ್ಲಾ ಪೋಷಕಾಂಶಗಳು ಹಸಿರು ಸೇಬಿನಲ್ಲಿವೆ. ಇದು ಮೂಳೆ ದ್ರವ್ಯರಾಶಿ ಹೆಚ್ಚಿಸಲು ಮತ್ತು ಮೂಳೆಗಳನ್ನು ಬಲವಾಗಿಡುತ್ತದೆ.


    ಯಕೃತ್ತನ್ನು ನಿರ್ವಿಷ ಮಾಡಲು ಸಹಕಾರಿ


    ಹಸಿರು ಸೇಬಿನಲ್ಲಿ ಅನೇಕ ವಿಧದ ಫೈಟೊಕೆಮಿಕಲ್‌ ಇವೆ. ಅವುಗಳಲ್ಲಿ ಒಂದು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಮತ್ತು ಅದನ್ನು ಆರೋಗ್ಯಕರವಾಗಿಡಲು ಪ್ರಯೋಜನಕಾರಿ.


    ಇದನ್ನೂ ಓದಿ: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ


    ಕೂದಲಿಗೆ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಉತ್ತಮ ದೃಷ್ಟಿಗೆ ಸಹಕಾರಿ.

    Published by:renukadariyannavar
    First published: