Asthma Problem: ಅಸ್ತಮಾ ರೋಗಿಗಳು ಏನು ತಿನ್ನಬೇಕು; ಏನು ತಿನ್ನಬಾರದು ಗೊತ್ತಾ?

ಅಸ್ತಮಾ ಗುಣಪಡಿಸಲಾಗದ ಕಾಯಿಲೆ ಆಗಿದೆ. ಆದರೆ ಅಸ್ತಮಾದ ರೋಗ ಲಕ್ಷಣಗಳನ್ನು ನಿಯಂತ್ರಣ ಮಾಡಬಹುದು. ಅಸ್ತಮಾ ಇದ್ದವರು ಏನು ತಿನ್ನಬೇಕು ಮತ್ತು ಯಾವ ಪದಾರ್ಥಗಳನ್ನು ಸೇವನೆ ಮಾಡಬಾರದು ಎಂಬ ಬಗ್ಗೆ ತಿಳಿಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೆಚ್ಚುತ್ತಿರುವ ವಾಯು ಮಾಲಿನ್ಯದ (Air Pollution) ಕಾರಣದಿಂದ ಅಸ್ತಮಾ (Asthma) ಪ್ರಕರಣಗಳು (Cases) ಅತ್ಯಂತ ವೇಗವಾಗಿ ಹೆಚ್ಚಳವಾಗುತ್ತಿವೆ. ಅಸ್ತಮಾ ನಿಮ್ಮ ಶ್ವಾಸನಾಳಗಳು ಸಂಕುಚಿತಗೊಳ್ಳಲು ಮತ್ತು ಊದಿಕೊಳ್ಳುವ ಸ್ಥಿತಿಯಾಗಿದೆ. ಅದರಲ್ಲಿ ಅತಿಯಾದ ಲೋಳೆಯ ಉತ್ಪಾದನೆ ಉಂಟಾಗಿ ಇದು ಉಸಿರಾಟವನ್ನು (Breathing) ಕಷ್ಟಕರವಾಗಿಸುತ್ತದೆ. ನೀವು ಉಸಿರು ಬಿಡುವಾಗ, ಕೆಮ್ಮುವಾಗ, ಶಿಳ್ಳೆ ಶಬ್ದ ಉಂಟಾಗುತ್ತದೆ. ಇದು ನಿಮ್ಮ ಉಸಿರಾಟದ ತೊಂದರೆ (Problem) ಇದೆ ಎಂಬುದನ್ನು ತೋರಿಸುತ್ತದೆ. ಅಸ್ತಮಾ ಇರುವ ರೋಗಿಗಳು ಅನೇಕ ರೀತಿಯ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಅಸ್ತಮಾ ಗುಣಪಡಿಸಲಾಗದ ಕಾಯಿಲೆ ಆಗಿದೆ. ಆದರೆ ಅಸ್ತಮಾದ ರೋಗ ಲಕ್ಷಣಗಳನ್ನು ನಿಯಂತ್ರಣ ಮಾಡಬಹುದು. ವಿಶ್ವ ಅಸ್ತಮಾ ದಿನದಂದು, ಅಸ್ತಮಾ ರೋಗಿಗಳಿಗೆ ಸೂಕ್ತ ಜಾಗೃತಿ ಮೂಡಿಸಲಾಗುತ್ತದೆ.

    ಅಸ್ತಮಾ ಇದ್ದ ಜನರು ತಾವು ಏನು ತಿನ್ನಬೇಕು ಮತ್ತು ಯಾವ ಪದಾರ್ಥಗಳನ್ನು ಸೇವನೆ ಮಾಡಬಾರದು ಎಂಬ ಬಗ್ಗೆ ತಿಳಿಯಬೇಕು. ಕೆಲವು ಸಂಶೋಧನೆಗಳ ಪ್ರಕಾರ, ತಾಜಾ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿ ಸೇವನೆ ಮೂಲಕ ಅಸ್ತಮಾ ಲಕ್ಷಣಗಳನ್ನು ನಿಯಂತ್ರಣ ಮಾಡಬಹುದು. ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

    ಅಸ್ತಮಾ ರೋಗಿಗಳು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು?

    ಅಸ್ತಮಾ ರೋಗಿಗಳು ಯಾವ ಆಹಾರ ಪದಾರ್ಥಗಳನ್ನು ಊಟದಲ್ಲಿ ಸೇರಿಸಬೇಕು?

    ವಿಟಮಿನ್ ಡಿ- ಸಾಕಷ್ಟು: ವಿಟಮಿನ್ ಡಿ ಪಡೆಯುವ ಮೂಲಕ 6 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಅಸ್ತಮಾ ಸಂಭವವನ್ನು ಕಡಿಮೆ ಮಾಡಬಹುದು.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ

    ವಿಟಮಿನ್ ಡಿ ಮೂಲಗಳು ಇವು

    - ಸಾಲ್ಮನ್ ಮೀನು

    - ಹಾಲು

    - ಕಿತ್ತಳೆ ರಸ

    - ಮೊಟ್ಟೆ

    ವಿಟಮಿನ್ ಎ:  2018 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆಸ್ತಮಾ ಇರುವವರಲ್ಲಿ ವಿಟಮಿನ್ ಎ ಕೊರತೆ ಇರುತ್ತದೆ. ವಿಟಮಿನ್ ಎ ಕೊರತೆ ಪೂರೈಸಿದರೆ ಶ್ವಾಸಕೋಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.

    ವಿಟಮಿನ್ ಎ ಇರುವ ಪದಾರ್ಥಗಳು ಇವು

    - ಕ್ಯಾರೆಟ್

    - ಸಿಹಿ ಆಲೂಗಡ್ಡೆ

    - ಹಸಿರು ತರಕಾರಿಗಳು

    - ಬ್ರೊಕೊಲಿ

    ಸೇಬು: ಪ್ರತಿನಿತ್ಯ ಒಂದು ಸೇಬು ತಿನ್ನುವುದರಿಂದ ರೋಗಗಳಿಂದ ದೂರ ಉಳಿಯಬಹುದು. ಅಸ್ತಮಾ ರೋಗಿಗಳಿಗೆ ಸೇಬು ತುಂಬಾ ಒಳ್ಳೆಯದು. ಇದು ಶ್ವಾಸಕೋಶ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಅಸ್ತಮಾ ಅಪಾಯವನ್ನು ಕಡಿಮೆ ಮಾಡುತ್ತದೆ.

    ಮೆಗ್ನೀಸಿಯಮ್- ಆಹಾರದಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವುದು ಅಸ್ತಮಾ ಸಮಸ್ಯೆ ನಿಯಂತ್ರಣ ಮಾಡುತ್ತದೆ.

    ಮೆಗ್ನೀಸಿಯಮ್ ಈ ವಸ್ತುಗಳಲ್ಲಿ ಕಂಡು ಬರುತ್ತದೆ

    ಪಾಲಕ

    - ಕುಂಬಳಕಾಯಿ ಬೀಜಗಳು

    - ಡಾರ್ಕ್ ಚಾಕೊಲೇಟ್

    - ಸಾಲ್ಮನ್

    ಅಸ್ತಮಾ ರೋಗಿಗಳು ಏನು ಸೇವಿಸಬಾರದು

    ಕೆಲವು ಆಹಾರಗಳು ಹೆಚ್ಚಿನ ಪ್ರಮಾಣದ ಸಲ್ಫೈಟ್‌ ಹೊಂದಿರುತ್ತವೆ. ಆದ್ದರಿಂದ ಅಸ್ತಮಾ ರೋಗಿಗಳು ಸಲ್ಫೈಟ್‌ ಯುಕ್ತ ಆಹಾರ ಸೇವನೆ ಮಾಡಬಾರದು.

    -ವೈನ್

    - ಒಣಗಿದ ಆಹಾರ

    - ಹುಳಿ ವಸ್ತುಗಳು

    - ನಳ್ಳಿ

    - ನಿಂಬೆ ರಸ ಅಥವಾ ನಿಂಬೆ ಪಾನೀಯ

    ಹೊಟ್ಟೆಯಲ್ಲಿ ಅನಿಲ ಉಂಟು ಮಾಡುವ ಆಹಾರಗಳು

    ಹೊಟ್ಟೆಯಲ್ಲಿ ಅನಿಲ ಉಂಟು ಮಾಡುವ ವಸ್ತುಗಳ ಸೇವನೆ ಮಾಡಬಾರದು. ಇವು ಡಯಾಫ್ರಾಮ್ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಇದರಿಂದ ಎದೆಯಲ್ಲಿ ಬಿಗಿತ ಉಂಟಾಗುತ್ತದೆ. ಇದು ಅಸ್ತಮಾ ಸಮಸ್ಯೆ ಹೆಚ್ಚಲು ಕಾರಣ.

    - ಬೀನ್ಸ್

    - ಎಲೆಕೋಸು

    - ಕಾರ್ಬೊನೇಟ್ ಪಾನೀಯ

    - ಈರುಳ್ಳಿ

    - ಬೆಳ್ಳುಳ್ಳಿ

    - ಹುರಿದ ಆಹಾರಗಳು

    ಇದನ್ನೂ ಓದಿ: Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?

    ಕೃತಕ ಆಹಾರಗಳು- ಬಣ್ಣ ಇತ್ಯಾದಿ ಬಳಸುವ ವಸ್ತುಗಳು, ಅಂತಹ ವಸ್ತುಗಳ ಸೇವನೆಯು ಅಸ್ತಮಾ ರೋಗಿಗಳ ಸಮಸ್ಯೆ ಹೆಚ್ಚಿಸುತ್ತದೆ. ಇದಲ್ಲದೆ, ಅಸ್ತಮಾ ರೋಗಿಗಳು ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು.
    Published by:renukadariyannavar
    First published: