HOME » NEWS » Lifestyle » ASK THE DOCTOR WHAT HAPPENS IF A COVID 19 POSITIVE PATIENT TAKES THE VACCINE STG LG

Ask The Doctor: ಕೋವಿಡ್-19 ಸೋಂಕಿತ ಲಸಿಕೆ ತೆಗೆದುಕೊಂಡರೆ ಏನಾಗುತ್ತದೆ? ಕೊರೋನಾ ಸಂಬಂಧಿತ ಪ್ರಶ್ನೆಗಳಿಗೆ ವೈದ್ಯರ ಉತ್ತರ

ಆರ್‌ಟಿ ಪಿಸಿಆರ್ ಪರೀಕ್ಷೆ ವೈರಸ್‌ನ ವಂಶವಾಹಿಗಳನ್ನು ಪತ್ತೆ ಮಾಡುತ್ತದೆ. ಕೋವಿಡ್ ಸೋಂಕು ಎಂದು ಕರೆಯಲು ಕನಿಷ್ಠ ಎರಡು ಜೀನ್‌ಗಳು ಪಾಸಿಟಿವ್‌ ಎಂದು ಬರುವ ಅಗತ್ಯವಿದೆ.

news18-kannada
Updated:April 12, 2021, 1:26 PM IST
Ask The Doctor: ಕೋವಿಡ್-19 ಸೋಂಕಿತ ಲಸಿಕೆ ತೆಗೆದುಕೊಂಡರೆ ಏನಾಗುತ್ತದೆ? ಕೊರೋನಾ ಸಂಬಂಧಿತ ಪ್ರಶ್ನೆಗಳಿಗೆ ವೈದ್ಯರ ಉತ್ತರ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್‌ ಸಾಂಕ್ರಾಮಿಕ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸಾಮೂಹಿಕ ಜೀವನವನ್ನು ಧ್ವಂಸಗೊಳಿಸಿದೆ. ಈಗಲೂ ನಮ್ಮ ಸಮಾಜಕ್ಕೆ ಕೋವಿಡ್ - 19 ನಿಂದ ಭಯ ಮತ್ತು ಅಭದ್ರತೆ ಸೆಳೆಯುತ್ತಿದೆ. ಇದರ ಪರಿಣಾಮವಾಗಿ, ಕಾಡ್ಗಿಚ್ಚಿನಂತೆ ತಪ್ಪು ಮಾಹಿತಿ ಹರಡುವುದನ್ನು ನಾವು ನೋಡಿದ್ದೇವೆ ಮತ್ತು ಅನೇಕರು ವೈರಸ್‌ನೊಂದಿಗೆ ವ್ಯವಹರಿಸುವ ವಿಲಕ್ಷಣ ಮತ್ತು ತಪ್ಪಾದ ವಿಧಾನಗಳನ್ನು ಆಶ್ರಯಿಸಿದ್ದಾರೆ. ಪ್ರತಿ ಭಾನುವಾರ ಪ್ರಕಟವಾಗಲಿರುವ ಈ ಅಂಕಣದೊಂದಿಗೆ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ನಮ್ಮ ಓದುಗರು ಹೊಂದಿರಬಹುದಾದ ಯಾವುದೇ ಆರೋಗ್ಯ ಅಥವಾ ಲಸಿಕೆ ಸಂಬಂಧಿತ ಪ್ರಶ್ನೆಯನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಈ ವಾರದ ಅಂಕಣದಲ್ಲಿ, ICMR-NARI ಮಾಜಿ ನಿರ್ದೇಶಕ ಮತ್ತು ಐಸಿಎಂಆರ್‌ ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಂವಹನ ರೋಗಗಳ ಮಾಜಿ ಮುಖ್ಯಸ್ಥ ಡಾ. ರಮಣ್‌ ಗಂಗಖೇಡ್ಕರ್ ಓದುಗರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

1) ಕೋವಿಡ್ ಪಾಸಿಟಿವ್‌ ಬಂದಿರುವ ವ್ಯಕ್ತಿ ಲಸಿಕೆ ತೆಗೆದುಕೊಂಡರೆ ಏನಾಗುತ್ತದೆ..?

ನೀವು ಕೋವಿಡ್ ಸೋಂಕಿಗೆ ಒಳಗಾಗಿದ್ದರೆ, ನಿಮ್ಮ ದೇಹವು ಅದರ ವಿರುದ್ಧ ಪ್ರತಿಕಾಯಗಳನ್ನು ಅಥವಾ ಆ್ಯಂಟಿ ಬಾಡಿಗಳನ್ನು ಉತ್ಪಾದಿಸುತ್ತದೆ. ಈ ಸಂದರ್ಭದಲ್ಲಿ, ನೀವು ಲಸಿಕೆ ತೆಗೆದುಕೊಂಡಾಗ, ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ತೇಜಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ.

2) ಹೊಸ ಕೋವಿಡ್ - 19 ಸ್ಟ್ರೈನ್ ಮಕ್ಕಳ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತದೆಯೇ..?

ಮಕ್ಕಳು ಸಾಮಾನ್ಯವಾಗಿ ಮನೆಯಲ್ಲೇ ಇರಲಿ ಅಥವಾ ಶಾಲೆಯಲ್ಲಿರಲಿ, ತಮ್ಮ ಸುತ್ತಲಿನ ವಯಸ್ಕರಿಂದ ವೈರಾಣು ಸೋಂಕನ್ನು ಪಡೆಯುತ್ತಾರೆ. ಅವರು ಮನೆಯಲ್ಲಿದ್ದ ಕಾರಣ ಕಳೆದ ವರ್ಷ ಹೆಚ್ಚಿನ ಮಕ್ಕಳು ಸೋಂಕಿಗೆ ಒಳಗಾಗಲಿಲ್ಲ. ಆದರೆ, ನಂತರ ಶಾಲೆಗಳು ಮತ್ತೆ ಓಪನ್ ಆದಾಗ ಕಿರಿಯ ವಯಸ್ಕರು ಮತ್ತು ಮಕ್ಕಳು ಸಹ ಸೋಂಕನ್ನು ಪಡೆಯಲು ಪ್ರಾರಂಭಿಸಿದರು. ಆದರೂ, ರೋಗದ ತೀವ್ರತೆಯು ಮಕ್ಕಳಲ್ಲಿ ಕಡಿಮೆ ಇರುತ್ತದೆ. ಹೆಚ್ಚಿನ ಮಕ್ಕಳು ಲಕ್ಷಣರಹಿತವಾಗಿರುತ್ತಾರೆ.

Maski By Election: ಬಿಜೆಪಿ ಅಭ್ಯರ್ಥಿಗೆ ಕೊರೋನಾ ಪಾಸಿಟಿವ್; ಘಟಾನುಘಟಿ ನಾಯಕರಿಂದ ಭರ್ಜರಿ ಪ್ರಚಾರವೈರಾಣು ಸೋಂಕು ಸಾಂಕ್ರಾಮಿಕ ರೂಪದಲ್ಲಿ ಬಂದಾಗ, ಅದು ಮೊದಲು ಹೆಚ್ಚು ಚಲಿಸುವ ಜನಸಂಖ್ಯೆಯ ಮೇಲೆ ಅಂದರೆ ಮೂಲಭೂತವಾಗಿ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಸಮಯ ಕಳೆದಂತೆ ಅದು ಕಿರಿಯ ಜನಸಂಖ್ಯೆಗೆ ಹರಡುತ್ತದೆ. ಹೀಗಾಗಿ ಇದು ಸ್ಥಳೀಯವಾಗಿ ಪರಿಣಮಿಸುತ್ತದೆ ಎಂಬುದರ ಸಂಕೇತವಾಗಿದೆ. ಬಹಳ ಕಡಿಮೆ ಪ್ರಮಾಣದ ಮಕ್ಕಳು ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಗೊಳಗಾಗಬಹುದು. ಆದರೆ ಇದು ವಿರಳ ಅಥವಾ ಅಪರೂಪದ ಅಭಿವ್ಯಕ್ತಿಯಾಗಿ ಮುಂದುವರೆದಿದೆ.

3) ಕೊರೊನಾ ಲಸಿಕೆಯ ಅಡ್ಡ ಪರಿಣಾಮಗಳು ಮೊದಲ ಡೋಸ್‌ ತೆಗೆದುಕೊಂಡ ನಂತರ ಹೆಚ್ಚು ತೀವ್ರವಾಗಿದೆಯೇ..? ಅಥವಾ 2ನೇ ಡೋಸ್‌ ಪಡೆದುಕೊಂಡ ಬಳಿಕ ತೀವ್ರವಾಗಿದೆಯೇ..?

ಲಸಿಕೆಯ ಎರಡನೇ ಡೋಸ್ ನಂತರದ ಅಡ್ಡಪರಿಣಾಮಗಳು ಕಡಿಮೆ ತೀವ್ರತೆಯನ್ನು ಹೊಂದಿರುತ್ತವೆ ಮತ್ತು ಮೊದಲ ಡೋಸ್‌ಗೆ ಹೋಲಿಸಿದರೆ ಕಡಿಮೆ ಅವಧಿಯವರೆಗೆ ಇರುತ್ತದೆ.

4) ಕೋ-ವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಯಾರಾದರೂ ತನ್ನ ಮೊದಲ ಅಥವಾ ಎರಡನೆಯ ವ್ಯಾಕ್ಸಿನೇಷನ್ ದಿನಾಂಕವನ್ನು ತಪ್ಪಿಸಿಕೊಂಡರೆ ಏನಾಗುತ್ತದೆ..?

ನೀವು ಮೊದಲ ಡೋಸ್‌ ಅನ್ನು ತಪ್ಪಿಸಿಕೊಂಡರೆ ಮರು-ನೋಂದಾಯಿಸಿಕೊಳ್ಳಲು ಒಂದು ಆಯ್ಕೆ ಇದೆ. ಅಲ್ಲದೆ, ನಿಮ್ಮ ಎರಡನೆಯ ಡೋಸ್‌ ಅನ್ನು ತೆಗೆದುಕೊಳ್ಳಲು ತಪ್ಪಿಸಿಕೊಂಡರೂ ಸಹ ಮತ್ತೆ ಶೆಡ್ಯೂಲ್‌ ಮಾಡಿಕೊಳ್ಳಲು ನಿಮಗೆ ಅವಕಾಶವಿದೆ.

5) ವಯಸ್ಸಿನ ಮಿತಿಯ ಆಧಾರದ ಮೇಲೆ ಲಸಿಕೆಗಳಿಗೆ ಅನರ್ಹರಾಗಿರುವ ಹೆಚ್ಚಿನ ಸಂಖ್ಯೆಯ ಜನರು ಸಹ ಲಸಿಕೆ ಪಡೆಯಲು ಅನ್ಯ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಏನು ಮಾಡುತ್ತಿದೆ..?

ಇತ್ತೀಚೆಗೆ ದೆಹಲಿಯ ಎರಡು ಸಂಸ್ಥೆಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆರೋಗ್ಯ ಕಾರ್ಯಕರ್ತರು ಎಂದು ಹೇಳಿಕೊಂಡು ಕೋವಿಡ್ ಲಸಿಕೆ ನೀಡುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಲಸಿಕೆಯ ದುರುಪಯೋಗವನ್ನು ತಡೆಯಲು, ಸರ್ಕಾರವು ಕೋ-ವಿನ್ ಪೋರ್ಟಲ್ ಮೂಲಕ ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರ ನೋಂದಣಿಯನ್ನು ನಿಲ್ಲಿಸಿದೆ. ಬದಲಾಗಿ, ಈಗ ಅವರು ಸರ್ಕಾರದ ಅಧಿಕೃತ ಸ್ಥಳದಲ್ಲಿ ನೋಂದಾಯಿಸಿಕೊಳ್ಳಬಹುದು. ಅಲ್ಲಿ ಅವರು ಆರೋಗ್ಯ ಸೇವೆ ಅಥವಾ ಮುಂಚೂಣಿ ಕೆಲಸಗಾರರು ಎಂಬುದನ್ನು ಪ್ರೂವ್‌ ಮಾಡಲು ದಾಖಲೆಗಳನ್ನು ತೋರಿಸಬೇಕಾಗುತ್ತದೆ.

6) ಆಸ್ಟ್ರಾಜೆನೆಕಾ ಲಸಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ನಡುವಿನ ಸಂಬಂಧವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ. ಈ ನಡುವೆ ರೋಗಿಗಳು ತಮ್ಮ ರಕ್ತನಾಳಗಳು / ಶ್ವಾಸಕೋಶಗಳು / ಹೃದಯ ಅಥವಾ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಗುರುತಿಸುವ ಕೆಲವು ವಿಧಾನಗಳು / ಲಕ್ಷಣಗಳು ಯಾವುವು..?

ಮೊದಲನೆಯದಾಗಿ, ಅಸ್ಟ್ರಾಜೆನೆಕಾ ಲಸಿಕೆ ಶ್ವಾಸಕೋಶ ಅಥವಾ ಹೃದಯದ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಸೆರೆಬ್ರಲ್ ಥ್ರಂಬೋಸಿಸ್‌ನೊಂದಿಗೆ ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸಂಬಂಧಿಸಿದೆ. ಅಂತಹ ಸಂದರ್ಭಗಳಲ್ಲಿ, ಲಸಿಕೆಯ ಡೋಸ್‌ ತೆಗೆದುಕೊಂಡ ನಂತರ ರೋಗಿಗಳು ಸಾಮಾನ್ಯವಾಗಿ ತೀವ್ರ ತಲೆನೋವು ಪಡೆಯುತ್ತಾರೆ ಮತ್ತು ವ್ಯಕ್ತಿಯು ತಲೆಯನ್ನು ಬಗ್ಗಿಸಲು ಪ್ರಯತ್ನಿಸಿದರೆ ತಲೆನೋವಿನ ತೀವ್ರತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ, ಈ ಘಟನೆ ಭಾರತೀಯರಲ್ಲಿ ನಿಜವಾಗಿಯೂ ಅಪರೂಪವಾಗಿದೆ.

7) ಕೆಲವು ಸಂದರ್ಭಗಳಲ್ಲಿ ಕೆಲವು ರೋಗಿಗಳ ಆರ್‌ಟಿ ಪಿಸಿಆರ್ ಪರೀಕ್ಷಾ ವರದಿಯು ನಕಾರಾತ್ಮಕವಾಗಿದ್ದರೂ ಸಹ, ಕೋವಿಡ್ - 19 ವೈರಸ್‌ನಿಂದ ಅವರ ಶ್ವಾಸಕೋಶವು ತೀವ್ರವಾಗಿ ಹಾನಿಯಾಗಿದೆ ಎಂದು ಕಂಡುಬಂದಿದೆ. ಸಾಕಷ್ಟು ಸುಳ್ಳು ನಿರಾಕರಣೆಗಳ ವರದಿಗಳು ಬಂದಿರುವ ಹಿನ್ನೆಲೆ ಹೊಸ ವೈರಾಣುವಿನ ತಳಿಗಳಿಗೆ ಆರ್‌ಟಿ ಪಿಸಿಆರ್ ನಿಖರವಾಗಿಲ್ಲವೇ..?

ಆರ್‌ಟಿ ಪಿಸಿಆರ್ ಪರೀಕ್ಷೆ ವೈರಸ್‌ನ ವಂಶವಾಹಿಗಳನ್ನು ಪತ್ತೆ ಮಾಡುತ್ತದೆ. ಕೋವಿಡ್ ಸೋಂಕು ಎಂದು ಕರೆಯಲು ಕನಿಷ್ಠ ಎರಡು ಜೀನ್‌ಗಳು ಪಾಸಿಟಿವ್‌ ಎಂದು ಬರುವ ಅಗತ್ಯವಿದೆ.

ವೈರಸ್ ಅನೇಕ ರೂಪಾಂತರಗಳಿಗೊಳಗಾದರೆ ವೈರಾಣುಗಳಿದ್ದರೂ ಸಹ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಋಣಾತ್ಮಕವಾಗಿ ಅಥವಾ ನೆಗೆಟಿವ್‌ ಬರುವ ಸಾಧ್ಯತೆಯಿದೆ. ಆದರೆ, ಈವರೆಗೆ ಆರ್‌ಟಿ ಪಿಸಿಆರ್ ಪರೀಕ್ಷೆ ವಿಧಾನದ ವಿಶ್ವಾಸಾರ್ಹತೆ ಮುಂದುವರಿದಿದೆ. ಏಕೆಂದರೆ ವರದಿಯಾದ ರೂಪಾಂತರಗಳು ಅಂತಹ ಸಮಸ್ಯೆಯನ್ನು ಉಂಟುಮಾಡುವಷ್ಟು ಇನ್ನೂ ಹೆಚ್ಚು ಬದಲಾಗಿಲ್ಲ.8) ವೈರಸ್ ತುಂಬಾ ಹರಡುತ್ತಿರುವಾಗ, ವ್ಯಕ್ತಿಯು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬಹುದು..?

ವೈರಾಣು ನಿರೋಧಕ ಕ್ರಮಗಳನ್ನು ಅನುಸರಿಸುವುದರ ಮೂಲಕ ಅಂತಹ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ನೀವು ಸೋಂಕಿಗೆ ಒಳಗಾದಾಗಲೂ ಮಾಸ್ಕ್‌ ಅನ್ನು ಸರಿಯಾಗಿ ಧರಿಸಿದರೆ, ಅದನ್ನು ಬೇರೆಯವರಿಗೆ ಹರಡುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ನೀವು ಆರೋಗ್ಯವಂತರಾಗಿದ್ದು ಮತ್ತು ಮಾಸ್ಕ್‌ ಧರಿಸುತ್ತಿದ್ದರೆ, ನಿಮಗೆ ರೋಗ ಹರಡುವ ಸಾಧ್ಯತೆ ಕಡಿಮೆ. ಅಲ್ಲದೆ, ಜನಸಂದಣಿಯನ್ನು ತಪ್ಪಿಸಬೇಕು, ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ತೀವ್ರ ರೋಗದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಅರ್ಹರಾಗಿದ್ದರೆ ಲಸಿಕೆ ತೆಗೆದುಕೊಳ್ಳಬೇಕು.
Published by: Latha CG
First published: April 12, 2021, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories