ಹೃದಯಾಂತರಾಳದಿಂದ ತಮ್ಮ ಕನಸಿನ ಮನೆ ನಿರ್ಮಿಸಿಕೊಂಡ ಸೆಲೆಬ್ರಿಟಿಗಳ ಸ್ಫೂರ್ತಿದಾಯಕ ಗಾಥೆ ನೋಡೋಣ

ಸೆಲೆಬ್ರಿಟಿಗಳು

ಸೆಲೆಬ್ರಿಟಿಗಳು

ಇದಕ್ಕಾಗಿಯೇ Asian Paintsನ ‘Where The Heart Is’ ಶೋ ನಿಮ್ಮ ಮುಂದಿದೆ. ತಮ್ಮ ಮನೆಯಲ್ಲಿ ಇಷ್ಟವಾದ ಜಾಗ, ಕಲಾಸೌಂದರ್ಯ, ಬಣ್ಣಗಳ ಜತೆಗೆ ಇಡೀ ಮನೆಯನ್ನು ಕಟ್ಟಿದ ಬಗೆಯನ್ನು ಸೆಲೆಬ್ರಿಟಿಗಳ ಬಾಯಿಂದಲೇ ಕೇಳುವುದು ಎಷ್ಟು ಸುಂದರ ಅನುಭವ ಅಲ್ಲವೇ?!. ಈ ಹೃದಯಸ್ಪರ್ಷಿ ಸರಣಿಯನ್ನು ನೋಡಿ,

ಮುಂದೆ ಓದಿ ...
 • Share this:

  ಸುಂದರ ಮನೆಗಳನ್ನು ನೋಡುವುದರಲ್ಲಿ ಏನೋ ಸಂತೋಷ ಇರುತ್ತದೆ. ದೃಢ ಸಂಕಲ್ಪ ಮೂಡಿಸಿ ನಮ್ಮ ಸುತ್ತಲೂ ಬದಲಾವಣೆಯನ್ನು ತರಲು ಅದು ಸ್ಫೂರ್ತಿ ನೀಡಬಲ್ಲದು. ಲಾಕ್‌ಡೌನ್‌ ರೀತಿಯ ನಿರ್ಬಂಧಗಳು ದೇಶಾದ್ಯಂತ ನಮ್ಮನ್ನು ಕಟ್ಟಿಹಾಕಿರುವ ಈ ಸಮಯದಲ್ಲಿ ಅಂತಹ ಮನೆಗಳನ್ನು ನೋಡಿ ಪ್ರೇರಣೆ ಪಡೆಯೋಣ. ನಮ್ಮ ಮನೆಯೂ ಹಾಗೆಯೇ ಇರಲಿ ಎಂದು ಕಲ್ಪಿಸಿಕೊಳ್ಳುವ ಭಾವನಾಲೋಕಕ್ಕಿಂತ ಉತ್ತಮವಾದದ್ದು ಇನ್ನೇನಿದೆ?


  ಇದಕ್ಕಾಗಿಯೇ Asian Paintsನ ‘Where The Heart Is’ ಶೋ ನಿಮ್ಮ ಮುಂದಿದೆ. ತಮ್ಮ ಮನೆಯಲ್ಲಿ ಇಷ್ಟವಾದ ಜಾಗ, ಕಲಾಸೌಂದರ್ಯ, ಬಣ್ಣಗಳ ಜತೆಗೆ ಇಡೀ ಮನೆಯನ್ನು ಕಟ್ಟಿದ ಬಗೆಯನ್ನು ಸೆಲೆಬ್ರಿಟಿಗಳ ಬಾಯಿಂದಲೇ ಕೇಳುವುದು ಎಷ್ಟು ಸುಂದರ ಅನುಭವ ಅಲ್ಲವೇ?!. ಈ ಹೃದಯಸ್ಪರ್ಷಿ ಸರಣಿಯನ್ನು ನೋಡಿ, ಆಗಲೇ ಇದು ನಾಲ್ಕನೇ ಸೀಸನ್‌ನಲ್ಲಿದೆ.


   ರಾಜಕುಮಾರ್‌ ರಾವ್‌:


  ಮಣ್ಣಿನ ಕಲಾವಂತಿಕೆ ಜತೆಗೆ ರೋಮಾಂಚಕ ಬಣ್ಣಗಳ ಅಚ್ಚುಕಟ್ಟಾದ ಮಿಶ್ರಣ ಹೊಂದಿರುವ ನಟ ರಾಜಕುಮಾರ್‌ ರಾವ್‌ ಮನೆ ನಿಮ್ಮಲ್ಲಿ ಲವಲವಿಕೆ ಮೂಡಿಸುವುದು. ನೈಸರ್ಗಿಕ ಬೆಳಕಿಂದ ಕಂಗೊಳಿಸುವ ಮನೆಗೆ ಆಗಮಿಸಿದ ಕೂಡಲೆ ಹೊರಗಿನ ಜಂಜಾಟಗಳಿಂದ ದೂರವಾಗಿಸಿ ಮನಃಶಾಂತಿ ನೀಡುತ್ತದೆ.


  ತಮನ್ನಾ ಭಾಟಿಯಾ:


  ಮಂದ ಬಣ್ಣದ ಟೆಕ್ಸಚರ್ಡ್‌ ಗೋಡೆಗಳು ಹಾಗೂ ನೆಲದಿಂದ ಕಂಗೊಳಿಸುವ ತಮನ್ನಾ ಭಾಟಿಯಾ ಅವರ ಮನೆ, ನಿಜವಾಗಿಯೂ ಸೌಂದರ್ಯ ಹಾಗೂ ಸರಳತೆಯ ಉತ್ತುಂಗವೇ ಸರಿ. ಸಿನಿಮಾದ ಗ್ಲಾಮರ್‌ ಪಾತ್ರಗಳಿಂದ ಇದು ದೂರವೇ ಸರಿ. ಮನೆಯ ಪ್ರತಿ ಭಾಗದ ನಿರ್ಮಾಣದಲ್ಲೂ ವಹಿಸಿರುವ ಕಾಳಜಿ ಹಾಗೂ ಕಲಾವಂತಿಕೆ ಯಾರನ್ನಾದರೂ ಬೆಕ್ಕಸಬೆರಗಾಗಿಸುವುದಂತೂ ಸತ್ಯ.


  ಅನಿತಾ ಡೋಂಗ್ರೆ:


  ಅನಿತಾ ಡೋಂಗ್ರೆ ಅವರ ಮನೆ ತನ್ನ ನೈಸರ್ಗಿಕ ಬೆಳಕು, ಹಚ್ಚ ಹಸಿರಿನ ಗಾರ್ಡನ್‌ ಹಾಗೂ ಸರಳವಾಗಿಯೇ ಕಣ್ಸೆಳೆಯುವ ಅಲಂಕಾರಗಳಿಂದ ನೆಮ್ಮದಿ ಹಾಗೂ  ಶಾಂತಿಯನ್ನು ಹೊಮ್ಮಿಸುತ್ತದೆ. ಫ್ಯಾಷನ್‌ ಸೆಲೆಬ್ರಿಟಿ ಎಂದ ಮೇಲೆ ಅವರ ವಿಶಾಲ ಬಂಗಲೆ ಸ್ವತಃ ಒಂದು ಕಲಾಕೃತಿ ಆಗಿರಲೇಬೇಕು ಅಲ್ಲವೇ?!


  ಶಂಕರ್​ ಮಹದೇವನ್‌:


  ನಿಸರ್ಗದ ನಡುವೆ ಇರುವ ಗಾಯಕ ಶಂಕರ್​ ಮಹದೇವನ್‌ ಅವರ ರಜಾಕಾಲದ ವಿಶ್ರಾಂತಿ ಗೃಹದ ಬಳಿಯೇ ಹೊಳೆಯೊಂದು ಹರಿಯುತ್ತಿದೆ. ಎತ್ತರದ ಸೀಲಿಂಗ್‌ಗಳ ಈ ನೆಮ್ಮದಿಯ ವಾಸಸ್ಥಾನದ ಮಿಶ್ರ ಮತ್ತು ಹೊಂದಿಕೆಯಾಗುವ ಬಣ್ಣಗಳ ಜತೆಗೆ ಪೃೀತಿಪಾತ್ರವಾದ ಎರಡು ನಾಯಿಗಳು. ಇದು ಅಕ್ಷರಶಃ ಶಂಕರ್ ಮಹದೇವನ್‌ ಅವರ ಕಂಠಸಿರಿಯಷ್ಟೆ ಅದ್ಭುತ.


  ಸ್ಮೃತಿ ಮಂದಣ್ಣ:


  ಭಾರತೀಯ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂದಣ್ಣ ತಮ್ಮ ಅಭಿರುಚಿಗೆ ತಕ್ಕಂತೆ ನಿರ್ಮಿಸಿಕೊಂಡಿರುವ ಮಂದ ಬೆಳಕಿನ, ಟೆಕ್ಸ್‌ಚರ್ಡ್‌ ಗೋಡೆಗಳ, ನೀಳ ಗೆರೆಗಳ ಮನೆ ಸರಳತೆಯ ಜತೆಗೆ ಪ್ರಶಾಂತತೆಯನ್ನು ನೀಡುತ್ತದೆ. ಪ್ರತಿ ಮೂಲೆಯನ್ನೂ ಆಸಕ್ತಿ ವಹಿಸಿ ನಿರ್ಮಿಸಿರುವ ಕಲಾಕೃತಿಯಂತಿರುವ ಮನೆಯು ಕ್ರೀಡಾ ಬದುಕು ಹಾಗೂ ಕುಟುಂಬದ ವಾಸಕ್ಕೆ ಸಮತೋಲನದಂತಿದೆ. ಹಳೆಯ ನೆನಪುಗಳು ಮತ್ತು ಸಾಧನೆಯ ಸ್ಫೂರ್ತಿ ತಾಣವಾಗಿದ್ದು, ಇಲ್ಲಿ ಹೆಜ್ಜೆ ಹಾಕುವುದೇ ಒಂದು ಖುಷಿ.


  ಶಕ್ತಿ ಮೋಹನ್‌ & ಮುಕ್ತಿ ಮೋಹನ್‌:


  ನೃತ್ಯ ಅಭ್ಯಾಸದ ದೊಡ್ಡ ಹಾಲ್‌ನಿಂದ ಟೆರೇಸ್‌ವರೆಗೆ ಹಾಗೂ ವೈಯಕ್ತಿಕ ಕೊಠಡಿವರೆಗೂ ಬೆರಗುಗಣ್ಣಿನ ಕಲಾವಿದೆಯರಾದ ಶಕ್ತಿ ಹಾಗೂ ಮುಕ್ತಿ ಮೋಹನ್‌ ಮನೆ, ಅವರಂತೆಯೇ ಆತ್ಮೀಯ ಹಾಗೂ ವಿಶೇಷವಾದದ್ದು. ಮೌನ ಬಣ್ಣಗಳ ಜತೆಗೆ ಮಣ್ಣಿನ ವರ್ಣದ ನೋಟದಿಂದ ಭರಿತ ಮನೆ, ಕಲಾವಿದರಿಬ್ಬರ ಮಿಂಚಿನ ಪ್ರದರ್ಶನಕ್ಕೆ ತದ್ವಿರುದ್ಧವಾಗಿದೆ.


  ಕೋವಿಡ್‌-19 ಎರಡನೇ ಅಲೆಯನ್ನು ಎದುರಿಸಲು ನಮ್ಮ ಮನೆಯ ನಾಲ್ಕು ಗೋಡೆಗಳ ನಡುವೆ ಸಿಲುಕಿರುವ ಸಮಯದಲ್ಲಿ, ಸೆಲೆಬ್ರಿಟಿ ಆಗಿರಲಿ ಅಥವಾ ಸಾಮಾನ್ಯರೇ ಆಗಿರಲಿ, ನಮ್ಮ ಮನೆ ಎಷ್ಟು ಸುಂದರ ಹಾಗೂ ಶಾಂತಿಯಿಂದ ಇರಬಹುದು ಎಂಬುದನ್ನು ಈ ಸರಣಿಯ ಪ್ರತಿ ಮನೆಯೂ ನೆನಪಿಸುತ್ತದೆ.
  ಹಾಗಾದರೆ ಈಗಲೇ ತ್ವರೆ ಮಾಡಿ ಮತ್ತು ‘Where The Heart Is’ ಸಂಪೂರ್ಣ ಸರಣಿಯನ್ನು ಇಲ್ಲಿ ವೀಕ್ಷಿಸಿ.

  Published by:Harshith AS
  First published: