ಪ್ರವಾಸ ಕೈಗೊಳ್ಳುವಲ್ಲಿ ಪಾಶ್ಚಾತ್ಯರಿಗಿಂತ ಏಷ್ಯನ್ನರು ಮುಂದೆ

news18
Updated:August 25, 2018, 3:26 PM IST
ಪ್ರವಾಸ ಕೈಗೊಳ್ಳುವಲ್ಲಿ ಪಾಶ್ಚಾತ್ಯರಿಗಿಂತ ಏಷ್ಯನ್ನರು ಮುಂದೆ
news18
Updated: August 25, 2018, 3:26 PM IST
-ನ್ಯೂಸ್ 18 ಕನ್ನಡ

ಪ್ರವಾಸ ಮತ್ತು ಪ್ರಯಾಣ ಎಂಬುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪಾಶ್ಚಾತ್ಯರು ತಮ್ಮ ದುಡಿಮೆಯ ಒಂದು ಭಾಗವನ್ನು ಪ್ರವಾಸಕ್ಕಾಗಿ ಮೀಸಲಿಡುತ್ತಾರೆ ಎಂಬುದನ್ನು ಕೇಳಿರುತ್ತೀರಿ. ಆದರೆ ಪಾಶ್ಚಿಮಾತ್ಯರಿಗಿಂತ ಏಷ್ಯಾದವರು ಹೆಚ್ಚು ಪ್ರವಾಸ ಕೈಗೊಳ್ಳುತ್ತಾರೆ ಎಂಬುದು ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ. ಆನ್​ಲೈನ್ ಪ್ರವಾಸ ಸೈಟ್ Agoda.com ನಡೆಸಿರುವ 'ಫ್ಯಾಮಿಲಿ ಟ್ರಾವೆಲ್ ಟ್ರೆಂಡ್ಸ್ 2018' ಸಮೀಕ್ಷೆಯಲ್ಲಿ ಪ್ರವಾಸದ ಕೆಲ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿದೆ.

ಈ ಸಮೀಕ್ಷೆಯನ್ನು ಆನ್​ಲೈನ್ ಮೂಲಕ ನಡೆಸಲಾಗಿದ್ದು, ಯುಎಸ್, ಯುಕೆ, ಆಸ್ಟ್ರೇಲಿಯಾ, ಸಿಂಗಪೂರ್, ಮಲೇಷ್ಯಾ, ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಚೀನಾದ ಜನರು ಭಾಗವಹಿಸಿದ್ದರು. ಇದರಲ್ಲಿ 10,784 ಮಂದಿ ತಮ್ಮ ಪ್ರವಾಸದ ಅಭಿಪ್ರಾಯವನ್ನು ಆನ್​ಲೈನ್​ ಮೂಲಕ ಹಂಚಿಕೊಂಡಿದ್ದಾರೆ.

ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದ ಕುಟುಂಬಗಳು ವರ್ಷಕ್ಕೆ 2 ಎರಡು ಬಾರಿ ಪ್ರವಾಸ ಮಾಡಿದರೆ, ಏಷ್ಯಾದವರು ಐದು ಬಾರಿ ಪ್ರವಾಸ ಹೋಗುತ್ತಾರೆ. ಅದರಲ್ಲೂ ಏಷ್ಯಾದ ಪ್ರವಾಸಿಗರು ಒಂದರಿಂದ ಮೂರು ದಿನಗಳ ಪ್ರವಾಸವನ್ನು ಹೆಚ್ಚಾಗಿ ಕೈಗೊಳ್ಳುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

ಥಾಯ್ಲೆಂಡ್​ನ ಶೇ.77 ರಷ್ಟು ಕುಟುಂಬಗಳು ಐದು ಅಥವಾ ಅದಕ್ಕಿಂತ ಹೆಚ್ಚಿನ ಪ್ರವಾಸ ಕೈಗೊಂಡಿದ್ದಾರೆ. ಹಾಗೆಯೇ ವರ್ಷಕ್ಕೆ ಐದಕ್ಕಿಂತ ಹೆಚ್ಚಿನ ಟೂರ್​ಗಳನ್ನು ಶೇ.62ರಷ್ಟು ಫಿಲಿಪೈನ್ಸ್​ನವರು ಕೂಡ ಮಾಡುತ್ತಾರೆ. ಶೇ.34 ರಷ್ಟು ಬ್ರಿಟಿಷ್ ಪ್ರವಾಸಿಗರಿಗೆ ಹೋಲಿಸಿದರೆ ಕೇವಲ ಒಂದು ಕುಟುಂಬದ ಮಾತ್ರ ರಜಾದಿನಗಳಿಗಾಗಿ ಹೊರ ಹೋಗುತ್ತಾರೆ. ಅಲ್ಲದೆ ಏಷ್ಯಾದವರು ತಮ್ಮ ಪ್ರವಾಸ ವೇಳೆ ಅಜ್ಜಿಯಂದಿರನ್ನು ಸೇರಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಶೇ.66 ರಷ್ಟು ಜನರು ತಮ್ಮ ಕೌಟುಂಬಿಕ ಪ್ರವಾಸದ ವೇಳೆ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾರೆ. ಇಂಡೋನೇಷ್ಯಾದವರು ಇದರಲ್ಲಿ ಮೊದಲ ಸ್ಥಾನದಲ್ಲಿದ್ದು, ಶೇ.54ರಷ್ಟು ಮಂದಿ ತಮ್ಮ ಪ್ರವಾಸದ ವೇಳೆ ಅಜ್ಜಿ ಸೇರಿದಂತೆ ಕುಟುಂಬ ವರ್ಗವನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಯುಕೆ ಪ್ರವಾಸಿಗರು ಕೂಡ ಇದ್ದಾರೆಂದು ಸಮೀಕ್ಷೆ ತಿಳಿಸಿದೆ.

ಏಷ್ಯಾದವರು ಕುಟುಂಬದ ಆಪ್ತರೊಂದಿಗೆ ಪ್ರಯಾಣಿಸಲು ಹೆಚ್ಚು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ಫಿಲಿಪೈನ್ಸ್​ನವರು ಫ್ಯಾಮಿಲಿ ಫ್ರೆಂಡ್ಸ್​ ಟೂರ್​ಗೆ ಆದ್ಯತೆ ನೀಡಿದ್ದಾರೆ. ಅದೇ ರೀತಿ ವಿಯೆಟ್ನಂ, ಮಲೇಷ್ಯಾ ಪ್ರವಾಸಿಗರು ಕೂಡ ಕುಟುಂಬ ವರ್ಗದವರೊಂದಿಗೆ ಗುಂಪಾಗಿ ಪ್ರವಾಸವನ್ನು ಕೈಗೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...