HOME » NEWS » Lifestyle » ASHWAGANDHA HAS SEVERAL HEALTH BENEFITS AND SIDE EFFECTS TOO STG AE

ಗಿಡಮೂಲಿಕೆ ಅಶ್ವಗಂಧದ ಬಳಕೆಯಿಂದ ಎದುರಾಗುತ್ತವೆ ಈ ಅಡ್ಡಪರಿಣಾಮಗಳು

ಆರ್ಯುವೇದದಲ್ಲಿ ಔಷಧಿಯ ಗುಣ ಹೊಂದಿರುವ ಗಿಡಮೂಲಕೆಯಾಗಿರವ ಅಶ್ವಗಂಧದ ಬಳಕೆಯಿಂದ ಕೆಲವು ಅಡ್ಡ ಪರಿಣಾಮಗಳೂ ಆಗುತ್ತವೆ. ಅದಕ್ಕೆ ಇದನ್ನು ಬಳಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದೂ ಉತ್ತಮ.

Trending Desk
Updated:July 21, 2021, 9:32 PM IST
ಗಿಡಮೂಲಿಕೆ ಅಶ್ವಗಂಧದ ಬಳಕೆಯಿಂದ ಎದುರಾಗುತ್ತವೆ ಈ ಅಡ್ಡಪರಿಣಾಮಗಳು
ಅಶ್ವಗಂಧ
  • Share this:
ಅಶ್ವಗಂಧ (ವಿಥಾನಿಯಾ ಸೋಮ್ನಿಫೆರಾ) ಇದು ಆಯುರ್ವೇದ ಪದ್ಧತಿಯಲ್ಲಿ ಮೇರು ಸ್ಥಾನ ಹೊಂದಿರುವ ಸಸ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಸಸ್ಯವಾದ ಇದನ್ನು ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ. ಹಿರಿಯರ ಹಿರೇಮದ್ದು ಎಂದೆನಿಸಿಕೊಂಡಿರುವ ಅಶ್ವಗಂಧ ಸೇವಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ, ಗಾಯಗಳು ಬೆಗನೆ ಮಾಗಲು ಕರಣವಾಗುತ್ತದೆ, ಮೆದುಳಿನ ಸವೆತವನ್ನು ಕಡಿಮೆ ಮಾಡುತ್ತದೆ. ನಿದ್ದೆಯ ತೊಂದರೆಗಳನ್ನು ನಿವಾರಿಸುತ್ತದೆ. ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ಚಚೆಯ ಕಾಂತಿಗೆ ಕಾರಣವಾಗುತ್ತದೆ. ಕೂದಲ ಆರೋಗ್ಯ ವೃದ್ಧಿಸುತ್ತದೆ. ಇನ್ನು ಹಲವಾರು ಅನುಕೂಲತೆಗಳನ್ನು ಹೊಂದಿರುವ ಇದರಿಂದ ಕೆಲವು ಅಡ್ಡಪರಿಣಾಮಗಳೂ ಆಗುತ್ತವೆ.  

ಆರ್ಯುವೇದದಲ್ಲಿ ಔಷಧಿಯ ಗುಣ ಹೊಂದಿರುವ ಗಿಡಮೂಲಕೆಯಾಗಿರವ ಅಶ್ವಗಂಧದ ಬಳಕೆಯಿಂದ ಕೆಲವು ಅಡ್ಡ ಪರಿಣಾಮಗಳೂ ಆಗುತ್ತವೆ. ಅದಕ್ಕೆ ಇದನ್ನು ಬಳಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದೂ ಉತ್ತಮ.

ಅಶ್ವಗಂಧವು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಲು ಐದು ಕಾರಣಗಳು ಇಲ್ಲಿವೆ:

1. ಹೆಚ್ಚು ನಿದ್ರೆ ಉಂಟು ಮಾಡುತ್ತದೆ
ಇದರಲ್ಲಿ ನಿದ್ರೆಯನ್ನು ಭರಿಸುವ ಗುಣಗಳಿವೆ. ಆದ್ದರಿಂದ ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಹೆಚ್ಚು ನಿದ್ದೆ ಮಾಡುತ್ತಾರೆ. ಹಾಗಾಗಿ ಅಶ್ವಗಂಧ ಸೇವನೆಯನ್ನು ತ್ಯಜಿಸಬೇಕು. ಇದನ್ನು ಹೆಚ್ಚಾಗಿ ನೈಸರ್ಗಿಕ ನಿದ್ರಾಜನಕಗಳಲ್ಲಿ ಸೇರಿಸಲಾಗುತ್ತದೆ. ಆದಾಗ್ಯೂ, ನಿದ್ರಾಹೀನತೆಯನ್ನು ಹೊಂದಿರುವ ಜನರು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸೇವಿಸಬೇಕು.

ಇದನ್ನೂ ಓದಿ: Kotigobba 3 Release Date: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್​

2. ಸ್ವಯಂ-ಪ್ರತಿರಕ್ಷಣಾ ಅಸ್ವಸ್ಥತೆಗಳುಅಶ್ವಗಂಧವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ, ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಇದು ಸಮಸ್ಯೆಯಾಗಬಹುದು. ರೋಗನಿರೋಧಕ ವ್ಯವಸ್ಥೆಯು ರೋಗಾಣುಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ವಿರುದ್ಧ ರಕ್ಷಣೆ ನೀಡುವ ಬದಲು ದೇಹದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದಾಗ ಸ್ವಯಂ-ಪ್ರತಿರಕ್ಷಣಾ ಅಸ್ವಸ್ಥಗೊಳ್ಳುತ್ತವೆ. ಬಿಳಿ ರಕ್ತ ಕಣಗಳು ಸ್ವಯಂಚಾಲಿತವಾಗಿ ಗುಣಿಸಲು ಪ್ರಾರಂಭಿಸುತ್ತವೆ, ಇದು ಪ್ಲೇಕ್ ಸೋರಿಯಾಸಿಸ್ ರಚನೆಗೆ ಕಾರಣವಾಗುತ್ತದೆ. ಆದ್ದರಿಂದ ಅಶ್ವಗಂಧದಿಂದ ದೂರವಿರಬೇಕು.

3. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ
ಅಶ್ವಗಂಧವು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು 15% ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ಆದ್ದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಇರುವವರು ಇದನ್ನು ಸೇವಿಸಬಾರದು.

4. ಹೈಪೋಟೆನ್ಷನ್‍
ಅಶ್ವಗಂಧ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕಡಿಮೆ ರಕ್ತದೊತ್ತಡದ ವೈದ್ಯಕೀಯ ಸ್ಥಿತಿಯಾದ ಹೈಪೋಟೆನ್ಷನ್‍ನಿಂದ ಬಳಲುತ್ತಿರುವ ರೋಗಿಗಳು ಅಶ್ವಗಂಧ ಸೇವನೆಯಿಂದ ದೂರವಿರುವುದು ತುಂಬಾ ಒಳ್ಳೆಯದು.

5. ಥೈರಾಯ್ಡ್:
ಹೈಪರ್ ಥೈರಾಯ್ಡಿಸಮ್ ಅಥವಾ ಹೈಪೋಥೈರಾಯ್ಡಿಸಂನಿಂದ ಬಳಲುತ್ತಿರುವ ರೋಗಿಗಳು ಅಶ್ವಗಂಧ ಸೇವಿಸಬಾರದು. ಏಕೆಂದರೆ ಇದು ಥೈರಾಯ್ಡ್ ಹಾರ್ಮೋನ್ ಅನ್ನು ಸಮತೋಲನಗೊಳಿಸುವ ಬದಲು ಇನ್ನಷ್ಟು ಸಮಸ್ಯೆ ತಂದೊಡ್ಡುತ್ತದೆ.

ಇದನ್ನೂ ಓದಿ: Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

ರೋಗಿಗಳಿಗೆ ಸ್ನಾಯು ಮತ್ತು ತೂಕವನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರಮುಖ ಅಂಶವಾಗಿ ಅನೇಕ ಬೆಳವಣಿಗೆಯ ವರ್ಧಕವಾಗಿ ಅಶ್ವಗಂಧ ಕೆಲಸ ಮಾಡುತ್ತದೆ. ಆದ್ದರಿಂದ, ಬೊಜ್ಜು ಹೆಚ್ಚಾಗಿರುವ ಜನರು ಅಶ್ವಗಂಧ ತೆಗೆದುಕೊಳ್ಳಬಾರದು. ಏಕೆಂದರೆ ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ಹೊಂದಿರುವ ಪುರುಷರು ಅಶ್ವಗಂಧವನ್ನು ತ್ಯಜಿಸಬೇಕು, ಏಕೆಂದರೆ ಇದು ಹಾರ್ಮೋನ್ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಹೆಚ್ಟಿ) ಗೆ ಕಾರಣವಾಗುತ್ತದೆ, ಇದು ಅತಿಬೇಗನೆ ಬೋಳು ತಲೆ ಉಂಟಾಗಲು ಕಾರಣವಾಗುತ್ತದೆ.

ಸೇವಿಸುವುದು ಹೇಗೆ?
ಅಶ್ವಗಂಧವು ಕ್ಯಾಪ್ಸುಲ್, ಟ್ಯಾಬ್ಲೆಟ್ ಮತ್ತು ಪುಡಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಒಬ್ಬ ಮನುಷ್ಯನ ದೇಹಕ್ಕೆ 500 ಗ್ರಾಂ ಡೋಸ್ ಸಾಕಾಗುತ್ತದೆ. ಇದನ್ನು ಒಂದು ಲೋಟ ಹಾಲು ಅಥವಾ ನೀರಿನ ಮೂಲಕ 500 ಗ್ರಾಂ ಟ್ಯಾಬ್ಲೆಟ್ ರೂಪದಲ್ಲಿ ಸೇವಿಸಬೇಕು.
Published by: Anitha E
First published: July 21, 2021, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories