ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನ ಯಾಕೆ ಮಾಡಬೇಕು? ಇಲ್ಲಿದೆ ಕಾರಣ

news18
Updated:July 27, 2018, 7:41 AM IST
ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನ ಯಾಕೆ ಮಾಡಬೇಕು? ಇಲ್ಲಿದೆ ಕಾರಣ
news18
Updated: July 27, 2018, 7:41 AM IST
ನ್ಯೂಸ್​ 18 ಕನ್ನಡ

ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಮಾಡದಿದ್ದರೂ, ಈ ಮಾಸದ ಶುಕ್ರವಾರಗಳು ಬಹು ವಿಶೇಷಗಳಿಂದ ಕೂಡಿರುತ್ತದೆ. ಆಷಾಢ ಶುಕ್ರವಾರದಲ್ಲಿಯಂತೂ ಚಾಮುಂಡೇಶ್ವರಿ ಸನ್ನಿಧನಗಳಲ್ಲಿ ಭಕ್ತ ಸಾಗರವೇ ಹರಿದು ಬರುತ್ತದೆ.

ಇನ್ನು ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಹರಿದು ಬರುವ ಭಕ್ತರು ಕಡಿಮೆ ಇಲ್ಲ. ಅದಕ್ಕೆಂದೇ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿಕೊಂಡಿರುತ್ತದೆ.

ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಯಾಕೆ ಅಷ್ಟು ಮಹತ್ವ ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಇದಕ್ಕೆ ಕಾರಣ ಎಂದರೆ ಚಾಮುಂಡೇಶ್ವರಿ ಜಯಂತಿ ಬರುವುದು ಇದೇ ಆಷಾಢದಲ್ಲಿ. ಇದೇ ಕಾರಣಕ್ಕಾಗಿ ದೇವಿ ದರ್ಶನ ಪಡೆಯಲು ಜನರು ಮುಂದಾಗುತ್ತಾರೆ.

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಿನದಂದು ದೇವಿಯ ವರ್ಧಂತಿ ಮಹೋತ್ಸವ ಆಚಾರಣೆ ಮಾಡಲಾಗುತ್ತದೆ. ಈ ವರ್ಧಂತಿ ಮಹೋತ್ಸವವನ್ನು ಆನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆಗಸ್ಟ್​ ಮೂರನೇ ವಾರದಲ್ಲಿ ಈ ಜಯಂತಿ ಬರಲಿದ್ದು, ಆ ಸಮಯದಲ್ಲಿ ವಿಶೇಷ ಪೂಜೆ ನಡೆಸಲಾಗುವುದು

ಈ ವೇಳೆ ಚಾಮುಂಡೇಶ್ವರಿಯ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಗಳು ನೇರವೇರುತ್ತವೆ ಎಂಬ ಕಾರಣದಿಂದ ದೇವಿಗೆ ನಿಂಬೆ ಹಣ್ಣಿನ ಆರತಿ ಸೇರಿದಂತೆ ವಿಶೇಷ ಪೂಜೆ ನಡೆಸಲಾಗುತ್ತದೆ.

ಆಷಾಢದಲ್ಲಿ ಪ್ರತಿ ಶುಕ್ರವಾರಗಳು ಕೂಡ ವಿಶೇಷ ವಾಗಿದ್ದು, ಈ ದಿನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆಗಳನ್ನು ಕೈಗೊಳ್ಳಲಾಗುವುದು.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...