ವಿಶ್ವದ ಅತ್ಯಂತ ಕಡಿಮೆ ಅಂತರದ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸಿದ ಅರುಬಾ ಏರ್​ಲೈನ್ಸ್​​

news18
Updated:May 25, 2018, 4:15 PM IST
ವಿಶ್ವದ ಅತ್ಯಂತ ಕಡಿಮೆ ಅಂತರದ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸಿದ ಅರುಬಾ ಏರ್​ಲೈನ್ಸ್​​
news18
Updated: May 25, 2018, 4:15 PM IST
ನ್ಯೂಸ್ 18 ಕನ್ನಡ

ಅರುಬಾ ಏರ್​ಲೈನ್ಸ್​ ವಿಶ್ವದ ಅತ್ಯಂತ ಕಡಿಮೆ ಅಂತರದ ಅಂತರರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಿದೆ. ವೆನೆಜುವೆಲಾದಿಂದ ಅರುಬಾಗೆ ಕೇವಲ 10 ನಿಮಿಷಗಳಲ್ಲಿ ಈ ವಿಮಾನದ ಮೂಲಕ ಪ್ರಯಾಣಿಸಬಹುದಾಗಿದೆ.

ಅರುಬಾ ದೇಶ ವೆನೆಜುವೆಲಾದಿಂದ 24.ಕಿ.ಮೀ ದೂರದಲ್ಲಿದೆ. ಪ್ರಯಾಣಿಗರ ಅನುಕೂಲಕ್ಕಾಗಿ ಹೊಸ ಅಂತರಾಷ್ಟ್ರೀಯ ವಿಮಾನಯಾನ ಆರಂಭಿಸಿರುವ ಈ ದೇಶಗಳ ವಿಮಾನ ನಿಲ್ದಾಣ ಕೇವಲ 80 ಕಿ.ಮೀ ಅಂತರದಲ್ಲಿದೆ.

ವಾರದಲ್ಲಿ ಸೋಮವಾರ ಮತ್ತು ಶುಕ್ರವಾರ ಹಾರಾಡಲಿರುವ ಈ ವಿಮಾನ ಕ್ಯುರಾಕೊ, ಬೊನೈರ್ ಮತ್ತು ಮಿಯಾಮಿ ನಗರಗಳನ್ನು ಸಂಪರ್ಕಿಸುತ್ತದೆ.

ವಿಶ್ವದ ಅತೀ ಚಿಕ್ಕ ದೇಶಿಯ ವಿಮಾನಯಾನವು ಸ್ಕಾಟ್​ಲ್ಯಾಂಡ್​​ನ ಆರ್ಕ್ನಿ ದ್ವೀಪ ಮತ್ತು ಪಾಪಾ ವೆಸ್ಟ್ರೆ ನಡುವೆ ಹಾರುತ್ತದೆ. ಈ ಪ್ರಯಾಣವು ಕೇವಲ 2.74 ಕಿ.ಮೀ ದೂರವನ್ನು  ಹೊಂದಿದೆ.

ಇದೀಗ ವಿಶ್ವದ ಅತ್ಯಂತ ಕಡಿಮೆ ಅಂತರದ ಅಂತರಾಷ್ಟ್ರೀಯ ವಿಮಾನಯಾನ ಎಂಬ  ಗಿನ್ನಿಸ್ ವರ್ಲ್ಡ್​ ರೆಕಾರ್ಡ್​​ ಅರುಬಾ ಮತ್ತು ವೆನೆಜುವೆಲಾ ಪಾಲಾಗಲಿದೆ.
First published:May 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...