• Home
  • »
  • News
  • »
  • lifestyle
  • »
  • Health Care: ಕೃತಕ ಸಿಹಿ ಆರೋಗ್ಯಕ್ಕೆ ಉತ್ತಮವೇ? ಮಧುಮೇಹಿಗಳು ಇದನ್ನು ಬಳಸಬಹುದೇ?

Health Care: ಕೃತಕ ಸಿಹಿ ಆರೋಗ್ಯಕ್ಕೆ ಉತ್ತಮವೇ? ಮಧುಮೇಹಿಗಳು ಇದನ್ನು ಬಳಸಬಹುದೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೃತಕ ಸಿಹಿಕಾರಕ ವಸ್ತುಗಳು ಅತ್ಯಂತ ಕಡಿಮೆ ಕ್ಯಾಲೋರಿಯ ರಾಸಾಯನಿಕ ಪದಾರ್ಥ ಹೊಂದಿವೆ. ಇದನ್ನು ನೈಸರ್ಗಿಕ ಸಿಹಿ ಬದಲಿಗೆ ಬಳಕೆ ಮಾಡಲಾಗುತ್ತದೆ. ಇದು ಪದಾರ್ಥದ ರುಚಿ ಸಿಹಿ ಹೆಚ್ಚಿಸುತ್ತದೆ. ಇದನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಆದರೆ ಕೃತಕ ಸಿಹಿಕಾರಕಗಳು ಆರೋಗ್ಯಕ್ಕೆ ಒಳ್ಳೆಯದೇ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ...

ಮುಂದೆ ಓದಿ ...
  • Share this:

    ಮಧುಮೇಹಿಗಳು (Diabetics) ಸಕ್ಕರೆ (Sugar) ಸೇವನೆ ಮಾಡುವುದು ನಿಷಿದ್ಧ. ಅವರು ಚಹಾ (Tea) ಸೇವಿಸುವಾಗ ಶುಗರ್ ಫ್ರೀ ಅಂತಾ ಹೇಳುವುದನ್ನು ನೀವು ಕೇಳಿರಬಹುದು. ಇನ್ನು ಕೆಲವರು ಚಹಾದಲ್ಲಿ ಶುಗರ್ ಫ್ರೀ ಮಾತ್ರೆ (Medicine) ಹಾಕಿ ಸೇವನೆ ಮಾಡ್ತಾರೆ. ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗಲ್ಲ. ಇದನ್ನ ಆಹಾರ (Food) ಮತ್ತು ಜೀವನಶೈಲಿಯಿಂದ ನಿಯಂತ್ರಣದಲ್ಲಿ ಇಡಬಹುದು. ಆಹಾರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ. ಈ ಪ್ರಮುಖ ಬದಲಾವಣೆಗಳಲ್ಲಿ ಆಹಾರದಲ್ಲಿ ಸಿಹಿಯನ್ನು ಕಡಿಮೆ ಮಾಡುವುದು ಕೂಡ ಸೇರಿದೆ. ಮಧುಮೇಹ ನಿಯಂತ್ರಿಸಲು ಕೆಲವರು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸುತ್ತಾರೆ.


    ಸಕ್ಕರೆ ಮುಕ್ತ ಮಾತ್ರೆ ಅಥವಾ ಕೃತಕ ಸಿಹಿಕಾರಕ ಮಧುಮೇಹಿಗಳಿಗೆ ಆರೋಗ್ಯಕರವೇ?


    ಇನ್ನು ಕೆಲವರು ಸಕ್ಕರೆ ಮುಕ್ತ ಮಾತ್ರೆಗಳು ಅಥವಾ ಕೃತಕ ಸಿಹಿಕಾರಕ ಸೇವನೆ ಮಾಡ್ತಾರೆ. ಆದರೆ ಇದು ನಿಜವಾಗಿಯೂ ಆರೋಗ್ಯಕರವೇ? ಎಂಬ ಪ್ರಶ್ನೆ ಮೂಡುತ್ತದೆ. ವಾಸ್ತವದಲ್ಲಿ ತಜ್ಞರು, ಸಕ್ಕರೆ ಮುಕ್ತ ಮಾತ್ರೆಗಳ ಮಿತಿ ಮೀರಿದ ಸೇವನೆ ಆರೋಗ್ಯಕ್ಕೆ ಅಪಾಯಕರ ಅಂತಾ ಹೇಳ್ತಾರೆ.


    ಕೃತಕ ಸಿಹಿಕಾರಕಗಳು ಯಾವುವು?


    ಕೃತಕ ಸಿಹಿಕಾರಕಗಳು ಅತ್ಯಂತ ಕಡಿಮೆ ಕ್ಯಾಲೋರಿ ರಾಸಾಯನಿಕ ಪದಾರ್ಥ ಹೊಂದಿವೆ. ಇದನ್ನು ಸಿಹಿಯ ಬದಲಿಗೆ ಬಳಕೆ ಮಾಡಲಾಗುತ್ತದೆ. ಇದು ಪದಾರ್ಥದ ರುಚಿ, ಸಿಹಿ ಹೆಚ್ಚಿಸುತ್ತದೆ. ಇದನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ.




    ಪೌಷ್ಟಿಕತಜ್ಞೆ ನೇಹಾ ರಂಗ್ಲಾನಿ ಪ್ರಕಾರ, ಕೃತಕ ಸಿಹಿಕಾರಕಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಇದು ಉರಿಯೂತ ಉಂಟು ಮಾಡುತ್ತದೆ. ಮತ್ತು ಯಕೃತ್ತನ್ನು ದುರ್ಬಲಗೊಳಿಸುತ್ತದೆ. ಏಕೆಂದರೆ ಅವು ರಾಸಾಯನಿಕಗಳು. ಕೃತಕ ಸಿಹಿಕಾರಕಗಳು ಸಕ್ಕರೆ ಮಟ್ಟ ನಿಯಂತ್ರಿಸುವುದಿಲ್ಲ ಎಂದಿದ್ದಾರೆ.


    ಸಕ್ಕರೆ ಮುಕ್ತ ಮಾತ್ರೆ ಅಥವಾ ಕೃತಕ ಸಿಹಿಕಾರಕಗಳ ಅಡ್ಡ ಪರಿಣಾಮಗಳು


    ಇನ್ಸುಲಿನ್ ಪ್ರತಿರೋಧ ಹದಗೆಡಿಸುತ್ತದೆ


    ಮಧುಮೇಹಿಗಳಿಗೆ ಕೃತಕ ಸಿಹಿಕಾರಕಗಳು ಉತ್ತಮ ಆಯ್ಕೆ ಅನ್ನೋದು ಸಾಮಾನ್ಯ ನಂಬಿಕೆ. ಆದರೆ ಇದು ನಿಜವಲ್ಲ. ಬದಲಿಗೆ ಇದು ಮಧುಮೇಹಕ್ಕೆ ಕಾರಣ ಆಗುತ್ತೆ. ಕೃತಕ ಸಿಹಿಕಾರಕಗಳು ರಕ್ತದ ಸಕ್ಕರೆ ನಿಯಂತ್ರಿಸುವ ದೇಹದ ಸಾಮರ್ಥ್ಯಕ್ಕೆ ಅಡ್ಡಿ ಪಡಿಸುತ್ತವೆ.


    ಇದು ಚಯಾಪಚಯಕ್ಕೆ ಅಡ್ಡಿ ಉಂಟು ಮಾಡುತ್ತದೆ. ನೈಸರ್ಗಿಕ ಸಿಹಿಯ ಬದಲಿಗೆ ಕೃತಕ ಸಿಹಿಕಾರಕಗಳ ಅತಿಯಾದ ಸೇವನೆ ಮಧುಮೇಹ ಹೆಚ್ಚಿಸಲು ಪ್ರಮುಖ ಕಾರಣ ಆಗಿದೆ. ಹಾಗಾಗಿ ಅದರ ಸೇವನೆ ಉತ್ತಮವಲ್ಲ.


    ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಹೆಚ್ಚುತ್ತದೆ


    ಕೃತಕ ಸಿಹಿಕಾರಕಗಳು ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಉಂಟು ಮಾಡುತ್ತವೆ. ಇವುಗಳಲ್ಲಿ ಅಧಿಕ ರಕ್ತದೊತ್ತಡ, ಹೆಚ್ಚಿದ ಸಕ್ಕರೆ ಮಟ್ಟ, ಹೊಟ್ಟೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.


    ತೂಕ ಹೆಚ್ಚಳ


    ನೀವು ಕೃತಕ ಸಿಹಿ ಸೇವಿಸಿದಾಗ ಮೆದುಳು ಕ್ಯಾಲೋರಿ ಕಡಿಮೆ ಎಂದು ಭಾವಿಸುತ್ತದೆ. ಆಗ ನೀವು ಹೆಚ್ಚು ತಿನ್ನುತ್ತೀರಿ ಅಂತಾರೆ ತಜ್ಞರು. ಕೃತಕ ಸಿಹಿಕಾರಕಗಳು ನಿಮ್ಮ ಹಸಿವನ್ನು ಹೆಚ್ಚಿಸುತ್ತವೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.


    ಇದನ್ನೂ ಓದಿ: ಮುಖದಲ್ಲಿ ಪದೇ ಪದೇ ಮೊಡವೆ ಉಂಟಾಗುತ್ತಾ? ಈ ಸಮಸ್ಯೆಗೆ ಕಾರಣ ಏನು ಗೊತ್ತಾ?


    ಅಧಿಕ ರಕ್ತದೊತ್ತಡದ ಅಪಾಯ


    ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಮತ್ತು ಪರಿಧಮನಿಯ ಹೃದಯ ಕಾಯಿಲೆ ಅಪಾಯ ಹೆಚ್ಚಾಗುತ್ತದೆ. ಕೃತಕ ಸಿಹಿಕಾರಕಗಳಿಂದ ತಯಾರಿಸಿದ ಪಾನೀಯ ಎರಡಕ್ಕಿಂತ ಹೆಚ್ಚು ಬಾರಿ ಸೇವಿಸಿದರೆ ಸಮಸ್ಯೆ ಹೆಚ್ಚುತ್ತದೆ.


    ಆರೋಗ್ಯಕರ ಆಯ್ಕೆ ಯಾವುದು?


    ಖರ್ಜೂರ, ಒಣದ್ರಾಕ್ಷಿ ಮತ್ತು ಜೇನುತುಪ್ಪ, ಬೆಲ್ಲ ನೈಸರ್ಗಿಕ ಆಯ್ಕೆ ಬಳಸಿ. ಇದು ಸಿಹಿ ಕಡುಬಯಕೆ ಪೂರೈಸುತ್ತದೆ.

    Published by:renukadariyannavar
    First published: