• Home
  • »
  • News
  • »
  • lifestyle
  • »
  • Arthritis Problem: ಸಂಧಿವಾತ ಸಮಸ್ಯೆ ನಿವಾರಿಸುವ ಪದಾರ್ಥಗಳಿವು, ಹೀಗೆ ಸೇವಿಸಿದರೆ ಮಾತ್ರ ಪ್ರಯೋಜನ

Arthritis Problem: ಸಂಧಿವಾತ ಸಮಸ್ಯೆ ನಿವಾರಿಸುವ ಪದಾರ್ಥಗಳಿವು, ಹೀಗೆ ಸೇವಿಸಿದರೆ ಮಾತ್ರ ಪ್ರಯೋಜನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರುವ ಸಂಧಿವಾತವೂ ಸಾಕಷ್ಟು ನೋವಿನಿಂದ ಕೂಡಿರುತ್ತದೆ. ಸಂಧಿವಾತ ಸಮಸ್ಯೆಯು ಕೀಲುಗಳು ಅಥವಾ ಮೊಣಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೀಲುಗಳು ಅಥವಾ ಮೊಣಕಾಲುಗಳಲ್ಲಿ ಉರಿಯೂತ ಉಂಟಾದಾಗ ಸಂಧಿವಾತ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

  • Share this:

    ಚಳಿಗಾಲದಲ್ಲಿ (Winter) ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ (Health Problems) ಸಂಧಿವಾತ ಸಮಸ್ಯೆ (Arthritis Problem) ಸಹ ಒಂದಾಗಿದೆ. ಸಂಧಿವಾತ ಸಮಸ್ಯೆ ಹೆಚ್ಚಾಗಿ ತಂಪು (Cold) ವಾತಾವರಣವಿದ್ದಾಗ ಶುರುವಾಗುತ್ತದೆ. ಸಂಧಿವಾತವು ಜನರನ್ನು (People) ತುಂಬಾ ಬಾಧಿಸುತ್ತದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲೂ ಈ ಸಂಧಿವಾತ ಸಮಸ್ಯೆ ಕಾಡುತ್ತಿದೆ. ದೀರ್ಘಕಾಲ ಕುಳಿತೇ ಇರುವುದು, ದೈಹಿಕ ಚಟುವಟಿಕೆ ಕೊರತೆ ಸಂಧಿವಾತ ಸಮಸ್ಯೆ ಬೇಗ ಅಂಟಿಕೊಳ್ಳುವಂತೆ ಮಾಡುತ್ತದೆ. ಸಂಧಿವಾತ ಸಮಸ್ಯೆ ಇದ್ದಾಗ ವ್ಯಕ್ತಿಯು ತುಂಬಾ ನೋವು ಅನುಭವಿಸಬೇಕಾಗುತ್ತದೆ. ದೇಹದ ಸಂಧಿಗಳಲ್ಲಿ ಉಂಟಾಗುವ ಈ ಸಂಧಿವಾತ ನೋವು ನಡೆದಾಡಲು, ಕೆಲಸ ಮಾಡಲು ತೊಂದರೆ ಉಂಟು ಮಾಡುತ್ತದೆ.


     ಕೀಲು ಮತ್ತು ಮೊಣಕಾಲು ನೋವಿನ ಸಮಸ್ಯೆ


    ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರುವ ಸಂಧಿವಾತವೂ ಸಾಕಷ್ಟು ನೋವಿನಿಂದ ಕೂಡಿರುತ್ತದೆ. ಸಂಧಿವಾತ ಸಮಸ್ಯೆಯು ಕೀಲುಗಳು ಅಥವಾ ಮೊಣಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೀಲುಗಳು ಅಥವಾ ಮೊಣಕಾಲುಗಳಲ್ಲಿ ಉರಿಯೂತ ಉಂಟಾದಾಗ ಸಂಧಿವಾತ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


    ಸಂಧಿವಾತ ಸಮಸ್ಯೆಗಳಲ್ಲಿ ಕೆಲವು ವಿಧಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಅಸ್ಥಿಸಂಧಿವಾತ ಆಗಿದೆ. ಹಾಗಿದ್ರೆ ಅಸ್ಥಿಸಂಧಿವಾತ ಉಂಟಾದಾಗ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ? ಅಸ್ಥಿಸಂಧಿವಾತಕ್ಕೆ ಕಾರಣಗಳು ಯಾವವು? ಎಂದು ನೋಡೋಣ.




    ಅಸ್ಥಿಸಂಧಿವಾತ ಉಂಟಾದಾಗ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ?


    ಅಸ್ಥಿಸಂಧಿವಾತ ಉಂಟಾದಾಗ ಕೀಲುಗಳಲ್ಲಿ ನೋವು, ಬಿಗಿತ, ದೌರ್ಬಲ್ಯ, ಕ್ರ್ಯಾಕ್ಲಿಂಗ್ ಶಬ್ದ, ಉಬ್ಬುವುದು ಮತ್ತು ಮೂಳೆಗಳಲ್ಲಿ ಊತ, ಮೊಣಕಾಲುಗಳು ಮತ್ತು ಕೀಲುಗಳಲ್ಲಿ ಸಾಕಷ್ಟು ನೋವು, ನಡೆಯಲು, ಕೂರಲು, ಏಳಲು ತೊಂದರೆ ಉಂಟಾಗುತ್ತದೆ.


    ಮೊಣಕಾಲು ಬೆಂಬಲಿಸುವ ಕಾರ್ಟಿಲೆಜ ಗೆ ಹಾನಿ ಉಂಟಾದಾಗ ಅಸ್ಥಿಸಂಧಿವಾತ ಸಮಸ್ಯೆ ಉಂಟಾಗುತ್ತದೆ. ಅಸ್ಥಿಸಂಧಿವಾತ ಸಮಸ್ಯೆಗೆ ಮುಖ್ಯ ಕಾರಣ ಅಂದ್ರೆ ಉರಿಯೂತ ಆಗಿದೆ.


    ಯಾವೆಲ್ಲಾ ಆಹಾರ ಪದಾರ್ಥ ಸೇವನೆಯಿಂದ ಸಂಧಿವಾತ ಸಮಸ್ಯೆ ಹೆಚ್ಚಾಗುತ್ತದೆ?


    ಡಾ. ಜೋಶ್ ಅವರ ಪ್ರಕಾರ, ಸಂಧಿವಾತ ಸಮಸ್ಯೆ ಉಂಟು ಮಾಡುವ ಕೆಲವು ಪದಾರ್ಥಗಳನ್ನು ಹೆಸರಿಸಿದ್ದಾರೆ. ಇವುಗಳ ಸೇವನೆ ಸಂಧಿವಾತ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.


    ಕರಿದ ಆಹಾರಗಳು, ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌, ಆಲ್ಕೋಹಾಲ್, ಕೃತಕ ಸಿಹಿಕಾರಕಗಳ ಸೇವನೆ, ಸಸ್ಯಜನ್ಯ ಎಣ್ಣೆಗಳು ಮತ್ತು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಸೇವನೆ ಮಾಡಿದರೆ ಉರಿಯೂತ ಹೆಚ್ಚುತ್ತದೆ. ಇದು ಸಂಧಿವಾತ ಸಮಸ್ಯೆ ಹೆಚ್ಚಿಸುತ್ತದೆ.


    ಸಾಂದರ್ಭಿಕ ಚಿತ್ರ


    ಸಂಧಿವಾತ ಸಮಸ್ಯೆ ಗುಣಪಡಿಸುವುದು ಹೇಗೆ?


    ಸಂಧಿವಾತ ಸಮಸ್ಯೆ ಗುಣಪಡಿಸಲು ಮೊದಲು ಉರಿಯೂತ ಸಮಸ್ಯೆ ತೊಡೆದು ಹಾಕಬೇಕಾಗುತ್ತದೆ. ತಜ್ಞರ ಪ್ರಕಾರ, ಉರಿಯೂತ ನಿವಾರಣೆಗೆ ನೈಸರ್ಗಿಕ ಉರಿಯೂತ ವಿರೋಧಿ ಆಹಾರ ಸೇವನೆ ಮಾಡುವುದು ಮುಖ್ಯ ಎಂದಿದ್ದಾರೆ. ಹಾಗಾದ್ರೆ ಯಾವ ನೈಸರ್ಗಿಕ ಪದಾರ್ಥದ ಸೇವನೆಯು ಉರಿಯೂತ ನಿವಾರಣೆ ಮಾಡುತ್ತದೆ ಎಂದು ಇಲ್ಲಿ ತಿಳಿಯೋಣ.


    ಸಂಧಿವಾತ ಸಮಸ್ಯೆ ನಿವಾರಣೆಗೆ ಅರಿಶಿನ ಬಳಕೆ ಮಾಡುವುದು ಹೇಗೆ?


    ಸಂಧಿವಾತ ನೋವು ಸಮಸ್ಯೆ ನಿವಾರಣೆ ಮಾಡಲು ಅರಿಶಿನ ಪ್ರಯೋಜನ ನೀಡುತ್ತದೆ. ಇದು ಉರಿಯೂತ ವಿರೋಧಿ ಗುಣಲಕ್ಷಣ ಹೊಂದಿದೆ. ಮೊಣಕಾಲು ನೋವು ಹೋಗಲಾಡಿಸಲು, ಒಂದು ಚಮಚ ಅರಿಶಿನ ಪುಡಿ ಮತ್ತು ಅರ್ಧ ಚಮಚ ಕರಿಮೆಣಸನ್ನು ಎರಡು ಕಪ್ ನೀರಿನಲ್ಲಿ ಕುದಿಸಿ. ತಣ್ಣಗಾಗಿಸಿ ನಂತರ ಸೇವನೆ ಮಾಡಿ.


    ಶುಂಠಿ ಸೇವನೆ ಮೊಣಕಾಲು ನೋವಿಗೆ ಹೇಗೆ ಪರಿಹಾರ ನೀಡುತ್ತದೆ?


    ಮೊಣಕಾಲು ನೋವು ಕಡಿಮೆ ಮಾಡಲು ಶುಂಠಿ  ಪ್ರಯೋಜನಕಾರಿ ಆಗಿದೆ ಅಂತಾರೆ ತಜ್ಞರು. ಈ ಉರಿಯೂತ ನಿವಾರಕ ಪದಾರ್ಥವನ್ನು ಖಾದ್ಯಗಳಲ್ಲಿ ಸೇರಿಸುವ ಮೂಲಕ ಸೇವನೆ ಮಾಡಿ. ತುರಿದ ಶುಂಠಿಯನ್ನು ಒಂದು ಕಪ್ ನೀರಿಗೆ ಹಾಕಿ, ಕುದಿಸಿ ನಂತರ ಉಗುರು ಬೆಚ್ಚಗಿನ ನೀರು ಕುಡಿಯಿರಿ.


    ಇದನ್ನೂ ಓದಿ: ಕೂದಲ ಆರೈಕೆಗೆ ಕರಿಬೇವಿನ ಎಲೆ ಹೇಗೆ ಪ್ರಯೋಜನಕಾರಿ?


    ಜಂಟಿ ನೋವು ಕಡಿಮೆ ಮಾಡುವ ಆಹಾರಗಳಿವು


    ಮಶ್ರೂಮ್, ರೋಸ್ಮರಿ, ಗ್ಯಾಲಂಗಲ್ ರೂಟ್, ಸ್ಕಲ್ಕ್ಯಾಪ್, ಮೈರ್, ಇತ್ಯಾದಿ ಪದಾರ್ಥಗಳು ಕೀಲು ನೋವು ನಿವಾರಣೆಗೆ ಸಹಕಾರಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು