Health Tips: ನಿಮ್ಮ ಕಣ್ಣುಗಳಿಂದಲೇ ಸಂಧಿವಾತ ಇದ್ಯಾ ಅಂತ ಗೊತ್ತಾಗುತ್ತಂತೆ? ಹೇಗೆ ಅಂತೀರಾ!

ಸಂಧಿವಾತ ರೋಗಿಗಳು ಕಣ್ಣುಗಳಲ್ಲಿ ಶುಷ್ಕತೆಯನ್ನು ವರದಿ ಮಾಡುವ ಸಾಧ್ಯತೆಯಿದ್ದು, ಈ ಸ್ಥಿತಿಯನ್ನು ಸಾಮಾನ್ಯವಾಗಿ ‘ಡ್ರೈ ಐ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ರೋಗವು ನಮ್ಮನ್ನು ಸಂಪೂರ್ಣವಾಗಿ ಅವರಿಸುವ ಮುಂಚೆ ಕೆಲವು ರೋಗ ಲಕ್ಷಣಗಳನ್ನು (Disease) ಅದು ತೋರಿಸುತ್ತದೆ. ಆ ರೋಗದ ಆರಂಭಿಕ ರೋಗ ಲಕ್ಷಣಗಳು(Symptoms) ನಿಮ್ಮ ದೇಹದ ಯಾವುದೇ ಅಂಗಾಂಗಗಳಿಂದ ನೀವು ಅದನ್ನು ತಿಳಿದುಕೊಳ್ಳಬಹುದು. ಹಾಗೆ ಕಾಣಿಸಿದ ಆರಂಭಿಕ ರೋಗ ಲಕ್ಷಣಗಳನ್ನು ಗುರುತಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದರೆ ರೋಗವು ಉಲ್ಭಣಗೊಳ್ಳುವುದಿಲ್ಲ. ಇಲ್ಲಿ ಸಂಧಿವಾತವು (Arthritis) ನಿಮ್ಮ ಶರೀರದ ಕೀಲುಗಳಿಗೆ (Body's Joints) ಹಾನಿಯನ್ನು ಉಂಟು ಮಾಡುವ ಒಂದು ರೋಗವಾಗಿದ್ದು, ಅದನ್ನು ನೀವು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು (Treatment) ಶುರು ಮಾಡಬಹುದು.

ಈ ಸಂಧಿವಾತದಿಂದ ಬಳಲುತ್ತಿದ್ದ ರೋಗಿಗಳು ಒಂದು ಅಥವಾ ಹೆಚ್ಚು ಕೀಲುಗಳು ಉರಿಯೂತದಿಂದಾಗಿ ಉಬ್ಬಿಕೊಳ್ಳಬಹುದು ಮತ್ತು ಕೀಲು ನೋವು ಮತ್ತು ಬಿಗಿತವನ್ನು ಅನುಭವಿಸುವ ಸಾಧ್ಯತೆಯಿದೆ, ಇದು ವಯಸ್ಸಾದಂತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಎರಡು ವಿಧಗಳಿವೆ ಅವುಗಳು ‘ರುಮಟಾಯ್ಡ್ ಆರ್ಥೈಟಿಸ್’ ಮತ್ತು ಆಸ್ಟಿಯೋ ಆರ್ಥೈಟಿಸ್ ಆಗಿದೆ. ಮುಖ್ಯವಾಗಿ ಈ ಅಸ್ವಸ್ಥತೆಯು ಈ ಕೆಳಗಿನ ಅಪಾಯದ ಅಂಶಗಳಿಂದಾಗಿ ಬೆಳೆಯಬಹುದು.

1. ಬೊಜ್ಜು

2. ಕುಟುಂಬದಲ್ಲಿ ಸಂಧಿವಾತದಿಂದ ಬಳಲಿರುವ ಹಿನ್ನಲೆ

3. ಜೆನೆಟಿಕ್ಸ್

4. ವಯಸ್ಸು

5. ಗಾಯಗಳು

6. ದುರ್ಬಲ ಸ್ನಾಯುಗಳು

ಸಂಧಿವಾತದ ರೋಗ ಲಕ್ಷಣಗಳ ವಿಷಯಕ್ಕೆ ಬಂದಾಗ, ಜನರು ಸಾಮಾನ್ಯವಾಗಿ ಕೀಲುಗಳಲ್ಲಿ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ. ತಜ್ಞರ ಪ್ರಕಾರ, ಇದರ ಎಚ್ಚರಿಕೆಯ ಲಕ್ಷಣಗಳು ನಿಮ್ಮ ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: Eye Care Tips: ದಿನವಿಡೀ ಲ್ಯಾಪ್​ಟಾಪ್, ಫೋನ್ ಜೊತೆಗೇ ಕಾಲ ಕಳಿತೀರಾ? ಕಣ್ಣುಗಳ ರಕ್ಷಣಗೆ ತಪ್ಪದೇ ಈ ಕೆಲಸಗಳನ್ನು ಮಾಡಿ

ನೀವು ತಿಳಿದುಕೊಳ್ಳಬೇಕಾದ ಸಂಧಿವಾತದ ರೋಗ ಲಕ್ಷಣಗಳು

ಸಂಧಿವಾತ ರೋಗಿಗಳು ಕಣ್ಣುಗಳಲ್ಲಿ ಶುಷ್ಕತೆಯನ್ನು ವರದಿ ಮಾಡುವ ಸಾಧ್ಯತೆಯಿದ್ದು, ಈ ಸ್ಥಿತಿಯನ್ನು ಸಾಮಾನ್ಯವಾಗಿ ‘ಡ್ರೈ ಐ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಸೋಂಕಿಗೆ ಒಳಗಾಗುವಂತೆ ಮಾಡಬಹುದು ಮತ್ತು ಚಿಕಿತ್ಸೆ ನೀಡದಿದ್ದರೆ, ಕಾರ್ನಿಯಾವನ್ನು ಹಾನಿಗೊಳಿಸುವುದು. ಆರ್ಥೈಟಿಸ್ ಫೌಂಡೇಶನ್ ಪ್ರಕಾರ, ಕೊಲಾಜನ್ ಮೇಲೆ ಪರಿಣಾಮ ಬೀರುವ ರುಮಟಾಯ್ಡ್ ಆರ್ಥೈಟಿಸ್‌ನಂತಹ ಯಾವುದೇ ಉರಿಯೂತದ ಸ್ಥಿತಿಯು ಕಣ್ಣುಗಳ ಕಾರ್ನಿಯಾ ಮತ್ತು ಸ್ಕ್ಲೆರಾ (ಬಿಳಿ ಭಾಗ) ವನ್ನು ಹಾನಿಗೊಳಿಸಬಹುದು.

ಶುಷ್ಕ ಕಣ್ಣುಗಳ ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ಇವು ಸೇರಿವೆ:

1. ಕಣ್ಣು ನೋವು

2. ಕಣ್ಣು ಕೆಂಪಾಗುವಿಕೆ

3. ಕಣ್ಣುಗಳಲ್ಲಿ ಶುಷ್ಕತೆ

4. ಮಸುಕಾದ ದೃಷ್ಟಿ

5. ಬೆಳಕಿಗೆ ಸಂವೇದನಾಶೀಲತೆ ಕಡಿಮೆ ಆಗುವುದು

6. ಸಂಧಿವಾತವನ್ನು ಪತ್ತೆ ಹಚ್ಚುವುದು

ಸಂಧಿವಾತವನ್ನು ಪತ್ತೆ ಹಚ್ಚಲು, ರೋಗ ಲಕ್ಷಣಗಳನ್ನು ಗಮನಿಸುವ ಜೊತೆಗೆ, ವೈದ್ಯರು ಕೀಲುಗಳಲ್ಲಿ ಊತ ಮತ್ತು ಚಲನೆಯ ಸುಲಭತೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ. ಚಲಿಸಲು ಪ್ರಯತ್ನಿಸುವಾಗ ರೋಗಿಯು ಕೀಲುಗಳಲ್ಲಿ ಅನುಭವಿಸುವ ನೋವು ಅಥವಾ ಅಸ್ವಸ್ಥತೆಯ ತೀವ್ರತೆಯನ್ನು ವೈದ್ಯರು ಪರೀಕ್ಷಿಸುವ ಸಾಧ್ಯತೆಯಿದೆ. ರೋಗ ಲಕ್ಷಣಗಳಲ್ಲಿ ಆರಂಭಿಕ ಲಕ್ಷಣವಾಗಿ ‘ಡ್ರೈ ಐ ಸಿಂಡ್ರೋಮ್’ ರುಮಟಾಯ್ಡ್ ಆರ್ಥೈಟಿಸ್‌ಗೆ ಸಂಬಂಧಿಸಿದ ಅತ್ಯಂತ ಸಾಮಾನ್ಯ ಕಣ್ಣಿನ ಸಮಸ್ಯೆಯಾಗಿದೆ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನವರು ಹೇಳುತ್ತಾರೆ.

ರುಮಟಾಯ್ಡ್ ಆರ್ಥೈಟಿಸ್‌
ಪುರುಷರಿಗಿಂತ ಮಹಿಳೆಯರು ಅದರಿಂದ ಹೆಚ್ಚು ಬಾಧಿತರಾಗುವ ಸಾಧ್ಯತೆ ಇದೆಯಂತೆ ಎಂದು ಹೇಳಿದ್ದಾರೆ. 9 ಪಟ್ಟು ಹೆಚ್ಚು ಮತ್ತು ರುಮಟಾಯ್ಡ್ ಆರ್ಥೈಟಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಸಮಯೋಚಿತ ರೋಗ ನಿರ್ಣಯ ಮತ್ತು ನಿರ್ವಹಣೆಯು ಈ ಸ್ಥಿತಿಗೆ ಸಂಬಂಧಿಸಿದ ಕೀಲು ಹಾನಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Eye Donation: ನೀವೂ ನೇತ್ರದಾನ ಮಾಡಬೇಕಾ? ಹಾಗಾದ್ರೆ ಈ ರೀತಿ ಮಾಡಿ

ಆರ್ಥೈಟಿಸ್‌ ಫೌಂಡೇಶನ್ ಪ್ರಕಾರ, ಔಷಧ, ಶಸ್ತ್ರಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳು ಈ ಸಂಧಿವಾತ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಮಾಡಲು ಸಹಾಯಕವಾಗಬಹುದು. ಪೌಷ್ಟಿಕ ಆಹಾರವನ್ನು ಅನುಸರಿಸುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಇದು ದೇಹವನ್ನು ಪೋಷಿಸುವ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಸಂಧಿವಾತದ ಆರಂಭಿಕ ರೋಗ ಲಕ್ಷಣಗಳನ್ನು ಕಣ್ಣುಗಳಿಂದ ಪತ್ತೆ ಹಚ್ಚಿ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಶುರು ಮಾಡಬಹುದು.
Published by:vanithasanjevani vanithasanjevani
First published: