• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Arranged Marriage: ಅರೇಂಜ್ಡ್​​ ಮ್ಯಾರೇಜ್​​ನಲ್ಲಿ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

Arranged Marriage: ಅರೇಂಜ್ಡ್​​ ಮ್ಯಾರೇಜ್​​ನಲ್ಲಿ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರೇಂಜ್ಡ್​ ಮ್ಯಾರೇಜ್ ನಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಜನರಿಗೆ ಸಹಾಯ ಮಾಡುವ ಕೆಲವು ಟಿಪ್ಸ್​ಗಳಿವೆ ಇಲ್ಲಿದೆ.

  • Share this:

ಮದುವೆಗಳು (Marriage) ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಅಂತ ಹಿರಿಯರು ಹೇಳುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಎಂದರೆ ಆ ದೇವರು ಒಂದು ಗಂಡಿಗೆ ಈ ಹೆಣ್ಣು, ಒಂದು ಹೆಣ್ಣಿಗೆ ಈ ಗಂಡು ಅಂತ ಮೊದಲೇ ನಿಶ್ಚಯ ಮಾಡಿರುತ್ತಾನೆ ಅಂತ ಅರ್ಥ. ನಾವಿಲ್ಲಿ ಎರಡು ವಿಧಗಳ ಮದುವೆಗಳನ್ನು ನೋಡುತ್ತೇವೆ, ಒಂದು ಹಿರಿಯರೆಲ್ಲರೂ ಮಾತುಕತೆ (Conversation) ನಡೆಸಿ, ಇಬ್ಬರ ಜಾತಕಗಳನ್ನು ಹೊಂದಿಸಿ ನೋಡಿ, ಆನಂತರ ಮದುವೆ ಮಾಡಿಸುವುದು. ಇದನ್ನು ನಾವೆಲ್ಲಾ ಅರೇಂಜ್ಡ್ ಮ್ಯಾರೇಜ್ (Arranged Marriage) ಅಂತ ಕರೀತಿವಿ. ಇನ್ನೊಂದು ಬಗೆಯ ಮದುವೆ ಎಂದರೆ ಹುಡುಗ ಮತ್ತು ಹುಡುಗಿ ಇಬ್ಬರು ಪರಸ್ಪರ ಇಷ್ಟ ಪಟ್ಟು ಪ್ರೇಮ ವಿವಾಹವಾಗುವುದು. ಇದರಲ್ಲಿ ಹಿರಿಯರ ಒಪ್ಪಿಗೆ ಇರಲೂ ಬಹುದು ಅಥವಾ ಇಲ್ಲದೆ ಸಹ ಇರಬಹುದು.


ಹೆಚ್ಚಾಗಿ ಮನೆಯಲ್ಲಿ ಹಿರಿಯರು ಈ ಅರೇಂಜ್ಡ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್ ಗಳ ಬಗ್ಗೆ ತುಂಬಾನೇ ಮಾತಾಡುತ್ತಿರುತ್ತಾರೆ. ಎಂದರೆ ಅರೇಂಜ್ಡ್ ಮ್ಯಾರೇಜ್ ಆದರೆ ಅಲ್ಲಿ ಸಂಬಂಧ ಗಟ್ಟಿಯಾಗಿರುತ್ತದೆ, ಅದೇ ಲವ್ ಮ್ಯಾರೇಜ್ ಆದರೆ ಅಲ್ಲಿ ಏನೇ ಸಮಸ್ಯೆ ಆದರೂ ಸಹ ಇಬ್ಬರು ಗಂಡ ಮತ್ತು ಹೆಂಡತಿಯೇ ಬಗೆಹರಿಸಿಕೊಳ್ಳಬೇಕು ಅಂತೆಲ್ಲಾ ಮಾತಾಡುವುದನ್ನು ನಾವೆಲ್ಲಾ ಕೇಳಿರುತ್ತೇವೆ.


ಅರೇಂಜ್ಡ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್ ಎರಡು ತುಂಬಾನೇ ಡಿಫರೆಂಟ್


ಆದರೆ ಮದುವೆ ಎಂದರೆ ಕೆಲವರು ಗಂಡ ಹೆಂಡತಿ ಇಬ್ಬರು ಇಷ್ಟಪಟ್ಟರೆ ಸಾಕು ಅಂತ ಹೇಳಿದರೆ, ಇನ್ನೂ ಕೆಲವರು ಮದುವೆ ಎನ್ನುವುದು ಎರಡು ಕುಟುಂಬಗಳನ್ನು ಜೋಡಿಸುವ ಬಂಧವಾಗಿರಬೇಕು ಅಂತ ಹೇಳ್ತಾರೆ. ಲವ್ ಮ್ಯಾರೇಜ್ ನಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರು ತುಂಬಾ ಸಮಯ ಒಟ್ಟಿಗೆ ಕಳೆದಿರುತ್ತಾರೆ ಮತ್ತು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿರುತ್ತಾರೆ ಅಂತೆಲ್ಲಾ ಹೇಳುತ್ತಾರೆ.


ಇದನ್ನೂ ಓದಿ: ನಮಗೆ ಇನ್ನೊಬ್ಬರ ಮೇಲೆ ಕ್ರಶ್​ ಆಗೋಕೇ ಇದೇ ಕಾರಣಗಳಂತೆ! ನಾಚಿಕೊಳ್ಬೇಡಿ, ಇಲ್ಲಿ ಓದಿ

ಆದರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ನೀವು ಬಹುತೇಕ ಅಪರಿಚಿತರನ್ನು ಮದುವೆಯಾಗುತ್ತಿರುವುದರಿಂದ ಇದು ಸ್ವಲ್ಪ ಜಟಿಲವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಜನರು ಮದುವೆಯಾಗುವ ಮೊದಲು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಬಯಸುತ್ತಾರೆ.


“ಅನೇಕ ಹುಡುಗ ಮತ್ತು ಹುಡುಗಿಯರಿಗೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ತನಗೆ ಸರಿ ಹೊಂದುವ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟಕರವಾಗಿರುತ್ತದೆ, ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಅತ್ಯಗತ್ಯ" ಎಂದು ಗೇಟ್ವೇ ಆಫ್ ಹೀಲಿಂಗ್ ನ ನಿರ್ದೇಶಕಿಯಾದ ಡಾ. ಚಾಂದಿನಿ ತುಗ್ನೈಟ್ ಹೇಳುತ್ತಾರೆ.


ಅರೇಂಜ್ಡ್ ಮ್ಯಾರೇಜ್ ನಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಹುಡುಕಲು ಇಲ್ಲಿದೆ ಟಿಪ್ಸ್


ಅರೇಂಜ್ಡ್​ ಮ್ಯಾರೇಜ್ ನಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಜನರಿಗೆ ಸಹಾಯ ಮಾಡುವ ಡಾ. ಚಾಂದನಿ ಅವರ ಆರು ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.


1. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ: ನಿಮ್ಮ ಜೀವನ ಸಂಗಾತಿಯ ಬಗ್ಗೆ ನಿಮ್ಮ ಮೌಲ್ಯಗಳು, ಗುರಿಗಳು ಮತ್ತು ನಿರೀಕ್ಷೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮೊಂದಿಗೆ ಹೊಂದಿಕೆಯಾಗುವ ಮತ್ತು ಒಂದೇ ರೀತಿಯ ಆಕಾಂಕ್ಷೆಗಳನ್ನು ಹೊಂದಿರುವ ಯಾರನ್ನಾದರೂ ಗುರುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.


2. ಸಂಭಾವ್ಯ ಸಂಗಾತಿಯೊಂದಿಗೆ ಚೆನ್ನಾಗಿ ಮಾತನಾಡಿ: ಆರಂಭಿಕ ಸಭೆಗಳಲ್ಲಿ ನಿಮ್ಮ ಸಂಭಾವ್ಯ ಸಂಗಾತಿಯೊಂದಿಗೆ ನೀವು ಎಷ್ಟು ಚೆನ್ನಾಗಿ ಸಂವಹನ ನಡೆಸಬಹುದು ಎಂಬುದರ ಬಗ್ಗೆ ಗಮನ ಹರಿಸಿ ಮತ್ತು ನಿಮ್ಮನ್ನು ನೀವು ಸಂಪೂರ್ಣವಾಗಿ ವ್ಯಕ್ತಪಡಿಸಿಕೊಳ್ಳಿ. ಯಶಸ್ವಿ ಸಂಬಂಧದಲ್ಲಿ ಸಂವಹನವು ತುಂಬಾನೇ ಅತ್ಯಗತ್ಯವಾಗುತ್ತದೆ, ವಿಶೇಷವಾಗಿ ಇಂತಹ ಅರೇಂಜ್ಡ್ ಮ್ಯಾರೇಜ್ ನಲ್ಲಿ. ನಿಮಗೆ ಹೇಳಿಕೊಳ್ಳಲು ತುಂಬಾನೇ ಕಷ್ಟಕರ ಅಂತ ಅನ್ನಿಸುವ ವಿಷಯಗಳನ್ನು ನಿಧಾನವಾಗಿ ಮತ್ತು ಮುಕ್ತವಾಗಿ ಚರ್ಚಿಸಬಹುದು.


3. ರೂಪಕ್ಕಿಂತ ವ್ಯಕ್ತಿತ್ವಕ್ಕೆ ಮಣೆ ಹಾಕಿ: ದೈಹಿಕ ಆಕರ್ಷಣೆಯು ಮುಖ್ಯವಾಗಿದ್ದರೂ, ವ್ಯಕ್ತಿಯಲ್ಲಿನ ಪ್ರಾಮಾಣಿಕತೆ, ಗೌರವ ಮತ್ತು ದಯೆಯಂತಹ ಗುಣಲಕ್ಷಣಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅತ್ಯಗತ್ಯವಾಗುತ್ತದೆ.



ಸಾಂದರ್ಭಿಕ ಚಿತ್ರ

4. ನಿಮ್ಮ ಆಸಕ್ತಿಗಳು ಮತ್ತು ಮೌಲ್ಯಗಳ ಬಗ್ಗೆ ಹೇಳಿಕೊಳ್ಳಿ: ನಿಮ್ಮ ಬಂಧವನ್ನು ಬಲಪಡಿಸಲು ಮತ್ತು ಹೆಚ್ಚು ತೃಪ್ತಿದಾಯಕ ಸಂಬಂಧವನ್ನು ನಿರ್ಮಿಸಲು ಪರಸ್ಪರರ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಹೇಳಿಕೊಳ್ಳಿ. ಸಂಬಂಧದ ಆರಂಭದಲ್ಲಿ ಹಂಚಿಕೊಂಡ ಮೌಲ್ಯಗಳನ್ನು ಚರ್ಚಿಸುವುದು ಭವಿಷ್ಯದ ಸಂಘರ್ಷಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಭಾವ್ಯ ಸಂಗಾತಿಯ ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ತಿಳಿಯಿರಿ.


5. ಜೀವನದಲ್ಲಿನ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿ: ನಿಮ್ಮ ಜೀವನದಲ್ಲಿನ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಆರಂಭದಲ್ಲಿಯೇ ನಿಮ್ಮ ಸಂಭಾವ್ಯ ಸಂಗಾತಿಯೊಂದಿಗೆ ಚರ್ಚಿಸುವುದು ಒಳ್ಳೆಯದು. ಇದು ನಿಮ್ಮ ಮತ್ತು ಅವರ ಯೋಜನೆಗಳು ಮತ್ತು ಗುರಿಗಳೊಂದಿಗೆ ಹೊಂದಿಕೊಳ್ಳುತ್ತವೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಸ್ಥಿರತೆ ಮತ್ತು ಸಾಮರಸ್ಯಕ್ಕಾಗಿ ಒಂದೇ ರೀತಿಯ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.


6. ಸಮಯ ತೆಗೆದುಕೊಳ್ಳಿ, ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ: ನಿರ್ಧಾರಕ್ಕೆ ಆತುರ ಪಡಬೇಡಿ, ನಿಮ್ಮ ಸಂಭಾವ್ಯ ಸಂಗಾತಿಯನ್ನು ತಿಳಿದುಕೊಳ್ಳುವಲ್ಲಿ ತಾಳ್ಮೆಯಿಂದಿರಿ. ಸಂಬಂಧದ ಹೊಂದಾಣಿಕೆ ಮತ್ತು ಸೂಕ್ತತೆಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಗುವಂತೆ ಹಲವಾರು ಭೇಟಿಗಳನ್ನು ಆಯೋಜಿಸಿ.


 


“ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಯಶಸ್ಸಿನ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಧಾರವಾಗಿದೆ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡಲು ಸಮಯ ಮತ್ತು ಪ್ರಯತ್ನವನ್ನು ತೆಗೆದುಕೊಳ್ಳುವುದು ಸಂತೋಷದ ಮತ್ತು ಸಂತೃಪ್ತಿಯ ಜೀವನಕ್ಕೆ ಕಾರಣವಾಗಬಹುದು" ಎಂದು ಡಾ. ಚಾಂದಿನಿ ಹೇಳುತ್ತಾರೆ.


top videos
    First published: