ನಮ್ಮ ತ್ವಚೆ (Skin) ಬಗ್ಗೆ ಗಮನ ನೀಡಿದಷ್ಟು ಗಮನ ನಾವು ನಮ್ಮ ಉಗುರುಗಳಿಗೆ ನೀಡುವುದಿಲ್ಲ ಏಕೆ? ಈ ಉಗುರುಗಳು ನಮ್ಮ ಆರೋಗ್ಯ ಹೇಗಿದೆ? ಎಂಬ ಸೂಚನೆ ನೀಡುತ್ತವೆ ಆ ವಿಷಯ ನಿಮಗೆ ಗೊತ್ತೆ? ಹೌದು, ನಮ್ಮ ಉಗುರುಗಳು (Nails) ನಮ್ಮ ಆರೋಗ್ಯವನ್ನು ಬಿಂಬಿಸುವ ಸೂಚನಾ ಫಲಕಗಳು ಇದ್ದ ಹಾಗೆ ಎಂದು ವೈದ್ಯರು ಹೇಳುತ್ತಾರೆ. ಆದರೆ ನಮ್ಮ ತ್ವಚೆ, ಕೂದಲು (Hair) ಪಡೆಯುವಷ್ಟು ಕಾಳಜಿಯನ್ನು ಈ ಉಗುರುಗಳು ಪಡೆಯುವುದಿಲ್ಲ. ಅವುಗಳ ಕಡೆಗೆ ಅಷ್ಟೊಂದು ವಿಶೇಷ ಗಮನ ನಾವು ಯಾರು ನೀಡುವುದಿಲ್ಲ ಇದು ನಿಜಕ್ಕೂ ಸತ್ಯವಾದ ಮಾತಾಗಿದೆ. ನಮ್ಮ ಕೂದಲಿನಂತೆ, ಉಗುರುಗಳು ಸಹ ಕೆರಾಟಿನ್ (Keratin) ಅಂಶವನ್ನು ಹೊಂದಿವೆ. ಈ ಉಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿಂದು ನೋಡೋಣ ಬನ್ನಿ.
ಉಗುರುಗಳಿಂದಲೂ ಗೊತ್ತಾಗುತ್ತೆ ಆರೋಗ್ಯದ ಗುಟ್ಟು
ನಮ್ಮ ಕೂದಲಿನಂತೆ ಉಗುರುಗಳು ಕೆರಾಟಿನ್‌ನಿಂದ ಮಾಡಲ್ಪಟ್ಟಿವೆ. ಇವುಗಳಿಗೆ ವಿಶೇಷ ಕಾಳಜಿ ಮಾಡುವ ಅಗತ್ಯ ಕೂಡ ಇದೆ. ಅಯ್ಯೋ ನಾವು ಅವುಗಳಿಗೆ ನೆಲ್ ಪಾಲಿಶ್ ಮಾಡಿ ಅಲಂಕಾರ ಮಾಡ್ತಿವಿ ಎಂದು ಮಾತ್ರ ಹೇಳಬೇಡಿ. ಈ ಉಗುರುಗಳಿಗೆ ಸಾಕಷ್ಟು ಪೋಷಣೆಯನ್ನು ನೀಡದಿದ್ದರೆ ಅವು ಸುಲಭವಾಗಿ, ಮಂದವಾಗಿ ಒಣಗಿದಂತೆ ಕಾಣುತ್ತವೆ ಎಂದು ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಹೇಳುತ್ತಾರೆ.
“ಆದ್ದರಿಂದ, ನಿಮ್ಮ ಉಗುರುಗಳು ತಮ್ಮ ಬಣ್ಣ, ಹೊಳಪು ಮತ್ತು ಟೋನ್ ಅನ್ನು ಕಳೆದುಕೊಳ್ಳುತ್ತಿದ್ದರೆ, ಅವುಗಳು ನಮ್ಮ ಆರೋಗ್ಯ ಸರಿಯಿಲ್ಲ ಎಂದು ತೋರಿಸುವ ಸೂಚನೆಗಳಾಗಿವೆ. ಅನೇಕ ಮಹಿಳೆಯರು ತಮ್ಮ ಉಗುರುಗಳು ಬಹಳ ಸುಲಭವಾಗಿ ಬಿರುಕು ಬಿಡುವ ಬಗ್ಗೆ ದೂರು ನೀಡುವುದನ್ನು ದಿನನಿತ್ಯ ಕೇಳಿಯೇ ಇರುತ್ತೇವೆ. ಈ ಸಮಸ್ಯೆ ದೊಡ್ಡ ಸಮಸ್ಯೆ ಏನೂ ಅಲ್ಲ ಎಂದುಕೊಂಡಿದ್ದರೆ, ಅದು ತಪ್ಪು. ಈ ಸಂಕೇತಗಳು ನಿಮ್ಮ ಆರೋಗ್ಯವು ತನ್ನ ಹಳಿ ತಪ್ಪುತ್ತಿದೆ, ಎಚ್ಚರಗೊಳ್ಳಿ” ಎಂದು ಅಂಜಲಿ ಅವರು ಎಚ್ಚರಿಸುತ್ತಾರೆ.
ಇದನ್ನೂ ಓದಿ: Monsoon Hair Care: ಮಳೆಗಾಲದಲ್ಲಿ ಕೂದಲು ಉದುರುವ ಚಿಂತೆ ಬಿಡಿ, ಇಷ್ಟು ಮಾಡಿ ನೋಡಿ
ಅವರು ಇಲ್ಲಿ ಆರೋಗ್ಯಕರ ಉಗುರುಗಳ ಸಂಕೇತಗಳನ್ನು ಈ ಲೇಖನದಲ್ಲಿ ತಿಳಿಸಿದ್ಧಾರೆ. ಅವುಗಳನ್ನು ನೋಡೋಣ ಬನ್ನಿ.
ಆರೋಗ್ಯಕರ ಉಗುರುಗಳ ಸಂಕೇತಗಳು ಹೀಗಿವೆ:
“ಕಡಿಮೆ-ಸಕ್ರಿಯ ಥೈರಾಯ್ಡ್ ಸಾಮಾನ್ಯವಾಗಿ ಉಗುರುಗಳಿಗೆ ಸಂಬಂಧಿಸಿದೆ. ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಕೊರತೆಯಿರುವ ಆಹಾರವು ಉಗುರುಗಳು ಮುರಿಯಲು ಅಥವಾ ಸುಲಭವಾಗಿ ಒಡೆಯಲು ಕಾರಣವಾಗುತ್ತವೆ, ಏಕೆಂದರೆ, ಅವುಗಳು ಶಕ್ತಿಯ ಕೊರತೆಯನ್ನು ಹೊಂದಿರುತ್ತವೆ” ಎಂದು ಮುಖರ್ಜಿ ವಿವರಿಸುತ್ತಾರೆ.
ಸುಲಭವಾಗಿ ಉಗುರುಗಳ ಆರೈಕೆ ಮಾಡಬೇಕೆಂದರೆ, ಪೌಷ್ಟಿಕತಜ್ಞರು ಕಬ್ಬಿಣ ಅಂಶ ಸಮೃದ್ಧವಾಗಿರುವ ಮೆಂತ್ಯ, ಮೀನು ಮತ್ತು ಹಸಿರು ತರಕಾರಿಗಳ ಆಹಾರವನ್ನು ಸೇವಿಸುವಂತೆ ಮತ್ತು ಬಯೋಟಿನ್ ಪೂರಕಗಳು ಮತ್ತು ಮೊಟ್ಟೆಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.
ಇದನ್ನೂ ಓದಿ: DIY Hacks: ಮನೆಯಲ್ಲಿಯೇ ಮುಖದ ಕಾಂತಿ ಹೆಚ್ಚಿಸುವ ಸ್ಕ್ರಬ್ ನೀವೂ ಮಾಡ್ಬೋದು, ಎಷ್ಟು ಸುಲಭ ನೋಡಿ
"ಇದಲ್ಲದೆ, ಕೈಗಳು ಬಹಳ ಹೊತ್ತು ನೀರಿನಲ್ಲಿ ಇರುವುದನ್ನು ತಪ್ಪಿಸಬೇಕು. ನೀವು ಹಸಿರು ಎಲೆಗಳ ತರಕಾರಿಗಳು, ಡೈರಿ ಉತ್ಪನ್ನಗಳು, ಎಳ್ಳು ಬೀಜಗಳು ಅಥವಾ ದೈನಂದಿನ ಕ್ಯಾಲ್ಸಿಯಂ ಪೂರಕಗಳ ಮೂಲಕ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಉಗುರುಗಳು ಆರೋಗ್ಯವಾಗಿ ಇರಲು ಸಹಾಯ ಆಗುತ್ತದೆ" ಎಂದು ಮುಖರ್ಜೀ ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ