Belly Fat: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ

ಅಂಗಿ ಹಾಕಿದಾಗ ಹೊಟ್ಟೆಯ ಬೊಜ್ಜಿನ ಕಾರಣ ಸರಿಯಾಗಿ ಬಟ್ಟೆ ಫಿಟ್ ಆಗಲ್ಲ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನೋಡೋಕೆ ಚೆನ್ನಾಗಿದ್ದು ಹೊಟ್ಟೆ (Stomach) ಇದ್ದರೆ ಎಲ್ಲರ ಕಣ್ಣು (Eye) ಅಲ್ಲೇ ಹೋಗುತ್ತೆ. ಕೈ ಕಾಲು ಸಣ್ಣ, ಹೊಟ್ಟೆ ಮಾತ್ರ ಕಣ್ಣಂಬಾಡಿ ಕಟ್ಟೆ ಇದ್ದಂಗಿದೆ ಅಂತಾ ಹಾಸ್ಯ (Comedy) ಮಾಡ್ತಾರೆ. ಹೊಟ್ಟೆ ಬೊಜ್ಜು (Belly Fat) ಕರಗಿಸೋದು ತುಂಬಾ ಕಷ್ಟ. ಎಷ್ಟೇ ವರ್ಕೌಟ್ (Workout), ಡಯಟ್ ಮಾಡಿದ್ರೂ ಸಹ ಹೊಟ್ಟೆ ಬೊಜ್ಜು ಮಾತ್ರ ಜಪ್ಪಯ್ಯ ಅಂದ್ರೂ ಒಂದಿಂಚೂ ಸಹ ಕರಗಲ್ಲ. ಜಿದ್ದಿ ಹೊಟ್ಟೆ ಪ್ಯಾಟ್ ಕರಗಿಸೋಕೆ ಹಲವಾರು ತಂತ್ರಗಳಿವೆ. ಅಂಗಿ ಹಾಕಿದಾಗ ಹೊಟ್ಟೆಯ ಬೊಜ್ಜಿನ ಕಾರಣ ಸರಿಯಾಗಿ ಬಟ್ಟೆ ಫಿಟ್ ಆಗಲ್ಲ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

  ಹೊಟ್ಟೆ ಬೊಜ್ಜಿನ ಸಮಸ್ಯೆ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆ ಬೊಜ್ಜು ತುಂಬಾ ಹಾನಿಕರ. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬು ಹೃದ್ರೋಗ, ಅಧಿಕ ರಕ್ತದೊತ್ತಡ, ಟೈಪ್-2 ಮಧುಮೇಹ, ಅಸ್ತಮಾ ಮತ್ತು ಸ್ತನ ಕ್ಯಾನ್ಸರ್ ಕಾಯಿಲೆಗೆ ಪ್ರಚೋದನೆ ನೀಡುತ್ತದೆ.

  ಹಾಗಾಗಿ ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ನಿಯಂತ್ರಣ ಮಾಡುವುದು ತುಂಬಾ ಮುಖ್ಯ. ಜಿಮ್ ಮತ್ತು ಫ್ಯಾಟ್ ಬರ್ನರ್ ಇಲ್ಲದೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಅದು ಹೇಗೆ ಎಂದು ಇಂದು ನಾವು ಇಲ್ಲಿ ನೋಡೋಣ.

  ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ

  ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಸೇವನೆ ಮಾಡಬೇಡಿ

  ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಸೇವನೆ ಮಾಡುವುದು ಹೊಟ್ಟೆಯ ಕೊಬ್ಬಿಗೆ ದೊಡ್ಡ ಕಾರಣ ಆಗಿದೆ. ಆದ್ದರಿಂದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಪದಾರ್ಥಗಳಿಂದ ದೂರವಿರಿ. ನಿಮ್ಮ ಆಹಾರದಲ್ಲಿ ಕೆಟ್ಟ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಇರದಂತೆ ನೋಡಿಕೊಳ್ಳಿ.

  ಹೆಚ್ಚುವರಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಆಗುತ್ತದೆ. ಇದು ಹೊಟ್ಟೆಯ ಬೊಜ್ಜು ಬೆಳೆಯಲು ದೊಡ್ಡ ಕಾರಣ ಆಗಿದೆ.

  ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಪ್ರೋಟೀನ್‌ಗಳ ಪ್ರಮಾಣ ಹೆಚ್ಚಿಸಿ

  ಆಹಾರದಿಂದ ಕಾರ್ಬೋಹೈಡ್ರೇಟ್‌ ತೆಗೆದು ಹಾಕಿ ಎಂಬುದರ ಅರ್ಥ ಎಲ್ಲಾ ಉತ್ತಮ ಕೊಬ್ಬನ್ನು ತೊಡೆದು ಹಾಕಬೇಕು ಎಂದಲ್ಲ. ಆಹಾರದಲ್ಲಿ ಆರೋಗ್ಯಕರ ಕಾರ್ಬೋಹೈಡ್ರೇಟ್‌ ಜೊತೆಗೆ ಹಸಿರು ತರಕಾರಿ, ಪ್ರೋಟೀನ್‌ಗಳ ಪ್ರಮಾಣ ಹೆಚ್ಚಿಸಿ. ತೋಫು, ಚಿಕನ್, ಒಂದು ಮೊಟ್ಟೆ, ಸಾಲ್ಮನ್ ಮೀನು ಮತ್ತು ಫೈಬರ್ ಸಮೃದ್ಧ ಹಣ್ಣು ಸೇವನೆ ಮಾಡಿ.

  ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ

  ಮನೆ ಅಥವಾ ಕಚೇರಿಯಲ್ಲಿ ನಿಮ್ಮ ದೈಹಿಕ ಚಟುವಟಿಕೆ ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಪ್ರತಿದಿನ ಸ್ವಲ್ಪ ಯೋಗ, ವ್ಯಾಯಾಮ ಅಭ್ಯಾಸ ಮಾಡಿ. ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಹೋಗಿ. ಅದೇ ರೀತಿ ಕಚೇರಿಯಲ್ಲಿ ಕೆಲಸದ ನಡುವೆ ಸ್ವಲ್ಪ ಹೊತ್ತು ದೇಹವನ್ನು ಸ್ಟ್ರೆಚ್ ಮಾಡುತ್ತಿರಿ.

  ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವು ತೂಕ ಎತ್ತಲು ಪ್ರಯತ್ನಿಸಿ. ಇದರಿಂದ ಕ್ಯಾಲೋರಿ ಹೆಚ್ಚಾಗಲ್ಲ. ದೇಹವು ಫಿಟ್ ಆಗಿರುತ್ತದೆ. ನಿಯಮಿತ ಕ್ರಂಚಸ್, ಬೈಸಿಕಲ್ ಕ್ರಂಚಸ್, ಹೊಟ್ಟೆಯ ನಿರ್ವಾತ ಮತ್ತು ಹಲಗೆ ವ್ಯಾಯಾಮ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುವಂತೆ ಮಾಡುತ್ತದೆ.

  ತಿನ್ನುವುದು ಮತ್ತು ಕುಡಿಯುವುದರ ಮೇಲೆ ಹಿಡಿತವಿರಲಿ

  ನೀವು ತಿನ್ನುವುದು ಮತ್ತು ಕುಡಿಯುವುದರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ನಾಲಿಗೆ ರುಚಿಗೆ ಓಗೊಡಬೇಡಿ. ಆಹಾರದಲ್ಲಿ ಕರಿದ ಮತ್ತು ಜಂಕ್ ಫುಡ್ ನಿಂದ ದೂರವಿರಿ. ನೀವು ವಾರಕ್ಕೊಮ್ಮೆ ರುಚಿಗೆ ತಿನ್ನಬಹುದು. ಆದರೆ ಉಳಿದ 6 ದಿನಗಳು ನಿಮ್ಮ ಆಹಾರದ ಬಗ್ಗೆ ಕಟ್ಟುನಿಟ್ಟಾಗಿರಿ.

  ಸಾಕಷ್ಟು ನೀರು ಕುಡಿಯಿರಿ

  ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ. ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರು ಜೀವಕೋಶ ಮತ್ತು ಸ್ನಾಯುಗಳ ಹೈಡ್ರೀಕರಿಸಲು ಸಹಕಾರಿ ಆಗಿದೆ. ಹೆಚ್ಚು ನೀರು ಕುಡಿಯುವುದು, ಹಸಿವು ಕಡಿಮೆ ಮಾಡುತ್ತದೆ. ಆಗ ದೇಹದಲ್ಲಿನ ಕಾರ್ಬೋಹೈಡ್ರೇಟ್‌ ಪ್ರಮಾಣ ಕಡಿಮೆ ಆಗುತ್ತದೆ.

  ಇದನ್ನೂ ಓದಿ: Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?

  8 ಗಂಟೆಗಳ ಒಳ್ಳೆಯ ನಿದ್ದೆ ಮಾಡಿ

  ಸಾಕಷ್ಟು ನಿದ್ರೆ ಮಾಡುವುದು ತುಂಬಾ ಮುಖ್ಯ. ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ದೇಹದ ಜೀವಕೋಶಗಳು ಮತ್ತು ಸ್ನಾಯುಗಳ ಚೇತರಿಕೆಗೆ ಸಹಕಾರಿ. ಪ್ರತಿದಿನ ಸುಮಾರು 8-10 ಗಂಟೆಗಳ ನಿದ್ದೆ ಮಾಡಿ ಆರೋಗ್ಯವಾಗಿರಿ.
  Published by:renukadariyannavar
  First published: