• Home
 • »
 • News
 • »
 • lifestyle
 • »
 • Medicine: ಔಷಧಿ ಕೊಳ್ಳುವಾಗ ಅಸಲಿಯಾ, ನಕಲಿಯಾ ಎಂಬ ಆತಂಕವೇ? ಕಂಡು ಹಿಡಿಯೋಕೆ ಇಲ್ಲಿದೆ ಸುಲಭ ದಾರಿ

Medicine: ಔಷಧಿ ಕೊಳ್ಳುವಾಗ ಅಸಲಿಯಾ, ನಕಲಿಯಾ ಎಂಬ ಆತಂಕವೇ? ಕಂಡು ಹಿಡಿಯೋಕೆ ಇಲ್ಲಿದೆ ಸುಲಭ ದಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳನ್ನು ಮಾರಾಟ ಮಾಡುವುದನ್ನು ಪತ್ತೆಹಚ್ಚಲು ಭಾರತ ಸರ್ಕಾರವು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಏನಿದು ಹೊಸ ತಂತ್ರಜ್ಞಾನ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

 • Share this:

  ಇದು ಆಧುನಿಕ (Modern) ಜಗತ್ತು. ಪ್ರತಿಯೊಂದನ್ನು ನಾವು ಇಲ್ಲಿ ಸುಲಭದಲ್ಲೇ ಗಳಿಸಬಹುದಾಗಿದೆ. ಆದರೆ ಎಲ್ಲವೂ ಸಕರಾತ್ಮಕವಾಗಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು (Technology) ಅಳವಡಿಕೆ ಮಾಡುತ್ತಾರೆ. ಆದರೆ ಇದು ಬಳಕೆದಾರರಿಗೆ ಬಹಳಷ್ಟು ಉಪಯೋಗವಾಗುತ್ತದೆ. ಈಗಿನ ಕಾಲದಲ್ಲಿ ಯಾವುದು ಬೇಕೋ ಅವೆಲ್ಲವೂ ಮಾರುಕಟ್ಟೆಗಳಲ್ಲಿ ಬೇಗನೆ ಲಭ್ಯವಿರುತ್ತದೆ. ಅದರೆ ಎಲ್ಲವನ್ನು ಒಮ್ಮೆಲೆ ನಂಬಲು ಸಾಧ್ಯವಿಲ್ಲ. ಏಕೆಂದರೆ ಎಲ್ಲವೂ ಅಸಲಿಯಂತೆ ಕಂಡರೂ ಕೆಲವೊಮ್ಮೆ ನಕಲಿಯಾಗಿ (Fake) ತಯಾರಿಸಿರುತ್ತಾರೆ. ನಾವು ಈ ಸಮಸ್ಯೆಗಳನ್ನು ಹೆಚ್ಚಾಗಿ ಔಷಧಿಗಳಲ್ಲಿ (Medicines) ಕಾಣಬಹುದಾಗಿದೆ. ಆದರೆ ಪ್ರತಿyoದನ್ನೂ ನಾವು ಪರೀಕ್ಷೆ (Test) ಮಾಡಿಯೇ ಖರೀದಿಸಬೇಕು. ಇಲ್ಲದಿದ್ದರೆ ನಮ್ಮದೇ ಆರೋಗ್ಯಕ್ಕೆ (Health) ತೊಂದರೆಯಾಗುತ್ತದೆ.  ಹಾಗಂತ ಆರೋಗ್ಯದ ವಿಚಾರ ಬಂದಾಗ ರಿಸ್ಕ್‌ ತೆಗೆದುಕೊಳ್ಳೋಕೆ ಆಗಲ್ಲ. ಹೀಗಾಗಿ ಸರ್ಕಾರ ಮೆಡಿಸಿನ್‌ಗಳ ಅಸಲೀಯಎಂದು ಚೆಕ್‌ ಮಾಡಲು ಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನವನ್ನು ಪ್ರಾರಂಭಿಸಲು ಯೋಜಿಸಿದೆ. ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳನ್ನು ಮಾರಾಟ ಮಾಡುವುದನ್ನು ಪತ್ತೆಹಚ್ಚಲು ಮತ್ತು ನಿಭಾಯಿಸಲು ಭಾರತ ಸರ್ಕಾರವು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


  ಸರ್ಕಾರ ಕೈಗೊಂಡ ಯೋಜನೆ:


  ಮೆಡಿಸಿನ್ ಪ್ಯಾಕ್‌ನಲ್ಲಿ ಬಾರ್‌ಕೋಡ್‌ಗಳು ಅಥವಾ ಕ್ಯೂಆರ್ ಕೋಡ್‌ಗಳನ್ನು ಮುದ್ರಿಸುವ ಮೂಲಕ ಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಆಯ್ದ ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು ತದನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ. ಒಂದು ದಶಕದ ಹಿಂದೆ ಪರಿಕಲ್ಪನೆ ಮಾಡಲಾದ ಈ ಕ್ರಮವು ಔಷಧಿಗಳ ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದು ತಿಳಿದುಬಂದಿದೆ.


  ಇದನ್ನೂ ಓದಿ: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?   ಫೇಕ್‌ ಮೆಡಿಸಿನ್ಸ್ ಪತ್ತೆ ಹಚ್ಚಲು ಕ್ಯೂ ಆರ್‌ ಕೋಡ್


  ಇಂದಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದೆ. ಕೇವಲ ಮೊಬೈಲ್‌ನ ಒಂದು ಕ್ಲಿಕ್‌ನಿಂದ ದಿನಸಿ, ಆಹಾರ, ತರಕಾರಿ, ಪೀಠೋಪಕರಣ ಎಲ್ಲವೂ ಮನೆ ಮುಂದಿರುತ್ತದೆ. ಮಾತ್ರವಲ್ಲ ಆನ್‌ಲೈನ್ ಮೂಲಕ ಮೆಡಿಸಿನ್‌ಗಳನ್ನು ಸಹ ತರಿಸಿಕೊಳ್ಳಬಹುದು.

  ಆದರೆ ಈ ಈಡಿಯಾವನ್ನು ಗಮನದಲ್ಲಿಟ್ಟುಕೊಂಡು ಕೆಲವೊಬ್ಬರು ನಕಲಿ ಹೆಸರನ್ನು ನೀಡಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರು ಔಷಧಿಗಳನ್ನು ಕೊಳ್ಳಲು ಭಯಪಡುತ್ತಿದ್ದಾರೆ.  Are you worried about genuine or fake medicine while buying it Here s the easy way
  ಸಾಂದರ್ಭಿಕ ಚಿತ್ರ
  ಅದಕ್ಕಾಗಿಯೇ ಈ ಕ್ಯೂ ಆರ್‌ ಕೋಡ್ ಹಲವರಿಗೆ ನೆರವಾಗಲಿದೆ. ಇದೀಗ ಕೇಂದ್ರವು ಸಾಕಷ್ಟು ಬೇಡಿಕೆಯಲ್ಲಿರುವ, ಹೆಚ್ಚು ಖರೀದಿಸಲ್ಪಡುವ ಸುಮಾರು 300 ಔಷಧಿಗಳ ತಯಾರಕರಿಗೆ ಅವರು ಉತ್ಪಾದಿಸುವ ಔಷಧಿಗಳ ಮೇಲೆ ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ನಮೂದಿಸುವಂತೆ ಶೀಘ್ರದಲ್ಲೇ ಸೂಚಿಸಲಿದೆ ಎಂದು ವರದಿಯಾಗಿದೆ.


  ಔಷಧದ ನೈಜತೆಯನ್ನು ಪರಿಶೀಲಿಸಲು ಅವಕಾಶ

  ಜನರು ಸತ್ಯತೆಯನ್ನು ತಿಳಿಯಲು ಸುಲಭವಾಗುವಂತೆ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳೊಂದಿಗೆ ಸ್ಪಷ್ಟವಾದ ಡೇಟಾವನ್ನು ನೀಡುವ ಔಷಧಿ ಪ್ಯಾಕೇಜ್ ಲೇಬಲ್‌ನಲ್ಲಿ ಬಾರ್‌ಕೋಡ್‌ಗಳು ಅಥವಾ ಕ್ಯೂಆರ್ ಕೋಡ್‌ಗಳನ್ನು ಅಂಟಿಸುವಂತೆ ಕೇಂದ್ರವು ಜೂನ್‌ನಲ್ಲಿ ಫಾರ್ಮಾ ಕಂಪನಿಗಳಿಗೆ ವಿನಂತಿಸಿತ್ತು.


  ಒಮ್ಮೆ ಈ ಕಾರ್ಯವಿಧಾನವು ಜಾರಿಗೆ ಬಂದರೆ, ಸಚಿವಾಲಯವು ಅಭಿವೃದ್ಧಿಪಡಿಸಿದ  ವೆಬ್‌ಸೈಟ್‌ನಲ್ಲಿ ಗ್ರಾಹಕರು ID ಕೋಡ್ ಅನ್ನು ನಮೂದಿಸುವ ಮೂಲಕ ಔಷಧದ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ನಂತರ ಅದನ್ನು ಮೊಬೈಲ್ ಫೋನ್  ಬಳಸಿಕೊಂಡು ಟ್ರ್ಯಾಕ್ ಮಾಡಬಹುದಾಗಿದೆ. ನಂತರ ನಿಮಗೆ ಔಷಧಿಯ ಸತ್ಯತೆಯನ್ನು ತಿಳಿಯಬಹುದು ಎಂದು ಸರ್ಕಾರದ ಚಿಂತನೆಯಾಗಿದೆ.
  Are you worried about genuine or fake medicine while buying it Here s the easy way
  ಸಾಂದರ್ಬಿಕ ಚಿತ್ರ
  ವಿಶ್ವಸಂಸ್ಥೆಯ ವರದಿ


  ಈ ಯೋಜನೆಯು ಭಾರತದಲ್ಲಿ ಸದ್ಯಕ್ಕೆ ಮಾರಾಟವಾಗುತ್ತಿರುವ ಫೇಕ್‌ ಔಷಧಿಗಳನ್ನು ನಿಲ್ಲಿಸುವ ಕಾರ್ಯವನ್ನು ಮಾಡುತ್ತದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯೊಂದರಲ್ಲಿ, ಜಾಗತಿಕವಾಗಿ ಮಾರಾಟವಾಗುವ ನಕಲಿ ಔಷಧಿಗಳಲ್ಲಿ ಸುಮಾರು 35 ಪ್ರತಿಶತದಷ್ಟು ಭಾರತದಿಂದ ಬರುತ್ತವೆ ಎಂದು ಉಲ್ಲೇಖಿಸಿದೆ.


  ಇದನ್ನೂ ಓದಿ: ಐಫೋನ್ ಹರಾಜಿನ ಕಥೆ ಕೇಳಿದ್ರೆ ಗಾಬರಿ ಆಗ್ತಿರಾ!  ಈ ಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಈ ಕ್ರಮವನ್ನು ಕಡ್ಡಾಯ ಮಾಡುವ ಕುರಿತು ನಿರ್ಧರಿಸಲಾಗಿದ್ದು ಮೊದಲಿಗೆ ಕೆಲವು ಆಯ್ದ ಔಷಧಿಗಳಿಗೆ ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು, ನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

  Published by:Harshith AS
  First published: