Hair Care: ಗುಂಗುರು ಕೂದಲು ಆರೈಕೆ ಮಾಡೋಕೆ ಪರದಾಡ್ತಿದ್ರೆ ಇಷ್ಟು ಮಾಡಿ ಸಾಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗುಂಗುರು ಕೂದಲಿನ ಬೆಡಗಿಯರಲ್ಲಿ ಏನೋ ಒಂಥರಾ ವಿಶೇಷ ಲುಕ್ ಇರುತ್ತದೆ. ಎಲ್ಲೆರೆದುರು ಅವರು ಎದ್ದು ಕಾಣುತ್ತಾರೆ. ಅಲ್ಲದೇ ಸ್ಟೈಲಿಶ್ ಆಗಿಯೂ ಕಾಣುತ್ತಾರೆ. ರೇಷ್ಮೆಯಂಥ ಕೂದಲಿದ್ದರೆ ಗುಂಗುರು ಕೂದಲಿನ ಮೇಲೆ ವ್ಯಾಮೋಹ. ಗುಂಗುರು ಕೂದಲಿದ್ದವರಿಗೆ ಅವರದ್ದೇ ಗೋಳು. ನಿರ್ವಹಣೆಯೇ ಕಷ್ವವೆಂಬ ಗೊಣಗಾಟ. ಆದರೆ, ಅದಕ್ಕೂ ಇಲ್ಲಿದೆ ಪರಿಹಾರ

ಮುಂದೆ ಓದಿ ...
  • Share this:

ಗುಂಗುರು ಕೂದಲು (Curly Hair) ಎಂದಿಗೂ ಚಿರ ಯೌವನದ ಸಂಕೇತದ ಫ್ಯಾಷನ್ (Fashion) ಎಂದು ಹೇಳಬಹುದು. ಏಕೆಂದರೆ ಯಾವಾಗಲೂ ಫ್ಯಾಶನ್‌ ಕೇಶ ವಿನ್ಯಾಸದಲ್ಲಿ ಮೊದಲ ಸ್ಥಾನ ಪಡೆಯುವುದು ಈ ಗುಂಗುರು ಕೂದಲು. ಯಾವಾಗಲೂ ಡಿಮ್ಯಾಂಡ್‌  (Demand) ಇರುವ ಅದೆಷ್ಟೊ ಫ್ಯಾಶನ್‌ ಗಳಲ್ಲಿ ಈ ಗುಂಗುರು ಕೂದಲು ಒಂದು. ಈಗ ಅತಿ ಚಾಲ್ತಿಯಲ್ಲಿರುವುದುನೀಳ ಮತ್ತು ನೇರ ಕೂದಲಾದರೂ ಅಂದು ಮತ್ತು ಇಂದು ಚಾಲ್ತಿಯಲ್ಲಿರುವ ಮತ್ತು ಅತಿ ಡಿಮ್ಯಾಂಡ್‌ ಇರುವ, ಮುಂದೆನೂ ಇರುವ ಫ್ಯಾಶನ್‌ ಈ ಗುಂಗುರು ಕೂದಲು. ಕೆಲವರಿಗೆ ಇದು ಸ್ವಾಭಾವಿಕವಾಗಿಯೇ (Naturally) ದೊರಕಿದ್ದರೆ ಇನ್ನೂ ಕೆಲವರು ಗುಂಗುರು ಕೂದಲು ಬೇಕು ಎಂದು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ.


ಅದೇನೆ ಇದ್ದರು ಗುಂಗುರು ಕೂದಲು ಇದ್ದರೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಖಂಡಿತ ಇರುತ್ತದೆ.  ಆದ್ದರಿಂದ, ಗುಂಗುರು ಕೂದಲಿನ ಆರೈಕೆ ಹೇಗೆ ಎಂಬುದೂ ತಿಳಿದಿರಬೇಕು. ಕೂದಲನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವುದೂ ಒಂದು ಕಲೆ.


ಗುಂಗುರು ಕೂದಲಿನ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದೇ  
ಗುಂಗುರು ಕೂದಲಿನ ಆರೈಕೆ ನೇರವಾದ ಕೂದಲಿನ ಆರೈಕೆಯಂತಲ್ಲ. ಇದು ಕಷ್ಟದ ಕೆಲಸ. ಇದಕ್ಕೆ ಗುಂಗುರು ಕೂದಲಿನ ಬಗ್ಗೆ ಸರಿಯಾಗಿ ತಿಳಿದಿರುವುದು ಅಗತ್ಯ. ಹೀಗೆ ಮಾಡಿದರೆ ಆರೋಗ್ಯದ ಜೊತೆಗೆ ಕೂದಲಿನ ಅಂದ ಕೂಡ ಹೆಚ್ಚಾಗುತ್ತದೆ. ಗುಂಗುರು ಕೂದಲಿನ ಬೆಡಗಿಯರಲ್ಲಿ ಏನೋ ಒಂಥರಾ ವಿಶೇಷ ಲುಕ್ ಇರುತ್ತದೆ. ಎಲ್ಲೆರೆದುರು ಅವರು ಎದ್ದು ಕಾಣುತ್ತಾರೆ. ಅಲ್ಲದೇ ಸ್ಟೈಲಿಶ್ ಆಗಿಯೂ ಕಾಣುತ್ತಾರೆ. ರೇಷ್ಮೆಯಂಥ ಕೂದಲಿದ್ದರೆ ಗುಂಗುರು ಕೂದಲಿನ ಮೇಲೆ ವ್ಯಾಮೋಹ. ಗುಂಗುರು ಕೂದಲಿದ್ದವರಿಗೆ ಅವರದ್ದೇ ಗೋಳು. ನಿರ್ವಹಣೆಯೇ ಕಷ್ವವೆಂಬ ಗೊಣಗಾಟ. ಆದರೆ, ಅದಕ್ಕೂ ಇಲ್ಲಿದೆ ಪರಿಹಾರ


ಗುಂಗುರು ಕೂದಲಿನ ಆರೈಕೆ ಹೇಗೆ?
ಅಂಗಡಿಗಳಲ್ಲಿ ವಿಚಾರಿಸಿದರೆ ಹತ್ತಾರು ತರಹದ ಲೇಪನಗಳು ಸಿಗಬಹುದು ಆದರೆ ಕೂದಲಿನ ಆರೋಗ್ಯದ ದೃಷ್ಟಿಯಿಂದ ಸ್ವಾಭಾವಿಕ ವಸ್ತುಗಳು ಉತ್ತಮ. ಎಂಟು ಚಮಚ ಕೆಮೆಲಿಯಾ ಎಣ್ಣೆ, ಒಂದು ಚಮಚ ಹರಳೆಣ್ಣೆ ಹಾಗೂ ಸಂಸ್ಕರಿಸದ ಅವಕಾಡೊ ಎಣ್ಣೆಯನ್ನು ಒಂದು ಬಾಟಲಿಯಲ್ಲಿ ಹಾಕಿ ಮಿಶ್ರಣ ಮಾಡಿಡಿ. ಇದನ್ನುನಿಯಮಿತವಾಗಿ ಬಳಸಿ ಮತ್ತು ನುಣುಪಾದ ಮತ್ತು ಆಕರ್ಷಕ ಕೂದಲನ್ನು ಪಡೆಯಿರಿ.


ನಿಯಮಿತವಾಗಿ ಎಣ್ಣೆ ಹಚ್ಚುವುದು
ನೇರವಾದ ಎಣ್ಣೆಗಿಂತ ಬೇಗನೆ ಗುಂಗುರು ಕೂದಲು ಒಣಗುವ ಕಾರಣ ಇವುಗಳಿಗೆ ಹೆಚ್ಚಿನ ಎಣ್ಣೆಯ ಅಗತ್ಯ ಇದೆ. ಇದಕ್ಕೆ ಕಾರಣ ಗುಂಗುರು ಆಕಾರ ಕೂದಲಿನ ಬುಡದಲ್ಲಿರುವ ಸ್ವಾಭಾವಿಕ ಎಣ್ಣೆಯ ಅಂಶವನ್ನು ಕೂದಲಿನ ತುದಿಯ ತನಕ ಬರಲು ಬಿಡುವುದಿಲ್ಲ. ಒಣ ಕೂದಲು ಯಾವತ್ತೂ ಆರೋಗ್ಯಕರವಲ್ಲ. ಇದು ಬಲಹೀನವಾಗಿರುತ್ತದೆ. ಇದಕ್ಕಾಗಿ ಆಲೀವ್ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಇನ್ನಿತರ ಸ್ವಾಭಾವಿಕ ಎಣ್ಣೆಗಳನ್ನು ಹಚ್ಚಬಹುದು.


ಇದನ್ನೂ ಓದಿ: Beauty Tips: ತ್ವಚೆ ಬಿಗಿಯಾಗಿಸಲು, ಮುಖದ ಸೌಂದರ್ಯ ಹೆಚ್ಚಿಸಲು ಈ ಯೋಗ ಸಹಕಾರಿ


ವಾರಕ್ಕೊಮ್ಮೆ ಹೇರ್ ಪ್ಯಾಕ್ಸ್
ಗುಂಗುರು ಕೂದಲಿನ ಆರೈಕೆಯ ಬಗ್ಗೆ ಹುಡುಕುತ್ತಾ ಹೋದಂತೆ ನಿಮಗೆ ಹೇರ್ ಪ್ಯಾಕ್ಸ್ ಸಿಕ್ಕೇ ಸಿಗುತ್ತದೆ. ಇದು ನಿಮ್ಮ ಅಡುಗೆಯ ಮನೆಯಲ್ಲೇ ಇದೆ. ಮೊಟ್ಟೆ, ಹಾಲು, ಮೊಸರು, ಜೇನು ಮತ್ತು ಲಿಂಬೆ ಬಹಳ ಉತ್ತಮವಾದ ಹೇರ್ ಪ್ಯಾಕ್ಸ್ ಆಗಿದೆ.


ಶಾಂಪೂವನ್ನು ಕಡಿಮೆ ಬಳಸುವುದು
ಆದಷ್ಟೂ ಕಡಿಮೆ ಶಾಂಪೂ ಬಳಸಿ. ಶಾಂಪೂವಿನ ಅಂಶ ನಮ್ಮ ಗುಂಗುರು ಕೂದಲಿನ ನಡುವೆ ಸಿಕ್ಕಿ ಇದು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ಸ್ವಾಭಾವಿಕವಾದ ದಾರಿಗಳಿಂದ ಕೂದಲಿನ ಸ್ವಚ್ಛತೆಗೆ ಮುಂದಾಗಿ.


ಕಂಡೀಷನರ್ ಬಳಕೆ
ಕಂಡೀಷನರ್ ಗುಂಗುರು ಕೂದಲಿಗೆ ಖಂಡಿತವಾಗಿ ಬೇಕಾಗುತ್ತದೆ. ಇಲದಿದ್ದಲ್ಲಿ ಕೂದಲು ಅಂದವಾಗಿಯೂ ಕಾಣುವುದಿಲ್ಲ ನೆತ್ತಿ ಆರೋಗ್ಯವೂ ಸರಿಯಾಗಿರುವುದಿಲ್ಲ. ಇದಕ್ಕಾಗಿ ಸ್ವಾಭಾವಿಕವಾಗಿರುವ ಕೆಲವು ವಸ್ತುಗಳೆಂದರೆ ಜೇನುತುಪ್ಪ, ಮೊಟ್ಟೆಗಳು, ಸೇಬು ಹಣ್ಣಿನಿಂದ ಮಾಡಿದ ವಿನೆಗರ್, ಚಹಾ ಮುಂತಾದವುಗಳನ್ನು ಬಳಕೆ ಮಾಡಬಹುದು.


ಸರಿಯಾಗಿ ಬಾಚುವುದು
ಬಾಚಣಿಗೆಯ ಬಗ್ಗೆಯೂ ಬಹಳಷ್ಟು ಜಾಗೃತೆ ವಹಿಸಬೇಕಾಗುತ್ತದೆ. ದೊಡ್ಡ ಹಲ್ಲಿನ ಬಾಚಣಿಗೆಯನ್ನೇ ಆರಿಸಿಕೊಳ್ಳಿ. ಇದು ಕೂದಲಲ್ಲಿ ಸಿಕ್ಕಿಹಾಕಿಕೊಂಡು ಕೂದಲನ್ನು ಉದುರಿಸುವ ಹಾಗೆ ಇರಬಾರದು.


ಇದನ್ನೂ ಓದಿ:  Health Tips: ಹಣ್ಣುಗಳನ್ನು ತಿನ್ನುವಾಗ ಈ ತಪ್ಪು ಮಾಡಿದ್ರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ


ಅಂತಿಮವಾಗಿ ಗುಂಗುರು ಕೂದಲು ಎಷ್ಟು ಸುಂದರವೋ ಅವುಗಳ ನಿರ್ವಹಣೆ ಸ್ವಲ್ಪ ಕಷ್ಟವೇ ಆದರೂ ಸಹ, ಸೂಕ್ತ ಕಾಳಜಿ ವಹಿಸಿದರೆ ನೀವು ಅದರ ಚಿಂತೆಯಿಂದ ಪಾರಾಗಬಹುದು.

First published: