• Home
  • »
  • News
  • »
  • lifestyle
  • »
  • Eye Care: ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್‌ ಬಳಸುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಮೊದಲು ಈ ಟಿಪ್ಸ್ ಫಾಲೋ ಮಾಡಿ

Eye Care: ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್‌ ಬಳಸುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಲೆನ್ಸ್‌ ಗಳನ್ನು ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸುವುದು ಬಹಳ ಮುಖ್ಯ. ಸ್ವಲ್ಪ ಯಾಮಾರಿದರೂ ಕಣ್ಣಿಗೆ (Eyes) ಅಪಾಯವಾಗೋ ಸಾಧ್ಯತೆ ಇರುತ್ತೆ. ಕಣ್ಣಿನ ವೈದ್ಯರ ಪ್ರಕಾರ, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ (Health) ಮತ್ತು ಸೋಂಕು ಮುಕ್ತವಾಗಿಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಮುಂದೆ ಓದಿ ...
  • Share this:

ಮೊದಲೆಲ್ಲ ಜನರು ದೃಷ್ಟಿಯ ಸಮಸ್ಯೆಗೆ ಕನ್ನಡಕ (Glasses) ಧರಿಸ್ತಿದ್ದರು. ಆದ್ರೆ ಕಾಂಟಾಕ್ಟ್‌ ಲೆನ್ಸ್‌ ಗಳು ಬಂದ ಮೇಲೆ ಬಹಳಷ್ಟು ಜನರು ಕನ್ನಡಕವನ್ನು ಮರೆತೇ ಬಿಟ್ಟಿದ್ದಾರೆ. ಯಾವುದೇ ಕಿರಿಕಿರಿ ಇಲ್ಲದೇ ಬಳಸಬಹುದಾದ ಲೆನ್ಸ್‌ ನಿಂದ (Lenses) ಉಪಯೋಗಗಳು ಅನೇಕ. ಜೊತೆಗೆ ಸೌಂದರ್ಯಕ್ಕೆ ಯಾವುದೇ ಧಕ್ಕೆ ಬಾರದೇ ಇರೋ ಕಾರಣಕ್ಕೆ ಬಹಳಷ್ಟು ಜನರು ಲೆನ್ಸ್‌ ಬಳಸುತ್ತಾರೆ. ಆದ್ರೆ ಈ ಲೆನ್ಸ್‌ ಗಳನ್ನು ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸುವುದು ಬಹಳ ಮುಖ್ಯ. ಸ್ವಲ್ಪ ಯಾಮಾರಿದರೂ ಕಣ್ಣಿಗೆ (Eyes) ಅಪಾಯವಾಗೋ ಸಾಧ್ಯತೆ ಇರುತ್ತೆ. ಕಣ್ಣಿನ ವೈದ್ಯರ ಪ್ರಕಾರ, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ (Health) ಮತ್ತು ಸೋಂಕು ಮುಕ್ತವಾಗಿಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


ಆದ್ರೆ ನಿಮಗೆ ಗೊತ್ತಿರಲಿ, ಇಂದು ಜಗತ್ತಿನಲ್ಲಿ ಸಹಸ್ರಾರು ಜನರು ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್‌ ಬಳಸುತ್ತಾರೆ. ಆದರೆ ಅದರಲ್ಲಿ ಶೇ.99 ರಷ್ಟು ಜನರು ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್‌ ಅನ್ನು ತಪ್ಪಾಗಿ ಉಪಯೋಗಿಸ್ತಿದ್ದಾರೆ.


ಇದನ್ನೂ ಓದಿ: Nails Biting: ನಿಮ್ಮ ಮಕ್ಕಳು ಪದೇ ಪದೇ ಉಗುರು ಕಚ್ಚೋದು ಬಿಡಬೇಕು ಅಂದ್ರೆ ಹೀಗೆ ಮಾಡಿ


ಕಾಂಟ್ಯಾಕ್ಟ್ ಲೆನ್ಸ್‌ ನಿಮ್ಮ ದೃಷ್ಟಿಯನ್ನು ಸರಿಪಡಿಸಲು ಹಾಗೂ ಮತ್ತು ಸ್ಪಷ್ಟವಾಗಿ ಕಾಣಲು ಸಹಾಯ ಮಾಡುತ್ತವೆ. ಅಲ್ಲದೇ ಇದು ಅತ್ಯಂತ ಆತ್ಮವಿಶ್ವಾಸದಿಂದ ನೋಡಲು ಅತ್ಯಂತ ಸುರಕ್ಷಿತ ಮತ್ತು ಅತ್ಯಂತ ಅನುಕೂಲಕರ ಮಾರ್ಗ ಕೂಡ ಹೌದು. ಆದಾಗ್ಯೂ ಅವುಗಳನ್ನು ಸರಿಯಾಗಿ ಧರಿಸದಿದ್ದರೆ ಅಥವಾ ಸರಿಯಾಗಿ ಕಾಳಜಿ ವಹಿಸದಿದ್ದರೆ ಕಣ್ಣಿಗೆ ಸಾಕಷ್ಟು ಹಾನಿಯಾಗುವ ಸಾಧ್ಯತೆ ಇದೆ.


ಕಾಂಟ್ಯಾಕ್ಟ್ ಲೆನ್ಸ್‌ ಬಳಸುವಾಗಿ ಈ ವಿಷಯಗಳು ನೆನಪಿರಲಿ:
1. ನಿಮ್ಮ ಕಣ್ಣುಗಳು ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸ್ಪರ್ಶಿಸುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ಸಾಬೂನು ಹಾಕಿ ಶುದ್ಧ ನೀರಿನಿಂದ ಸರಿಯಾಗಿ ತೊಳೆಯಿರಿ.


2. ತೊಳೆಯುವ ನಂತರ, ಅವುಗಳನ್ನು ಲಿಂಟ್-ಫ್ರೀ ಟವೆಲ್ನಿಂದ ಒಣಗಿಸಲು ಮರೆಯದಿರಿ. ಇಲ್ಲದಿದ್ದರೆ ಕಾಂಟ್ಯಾಕ್ಟ್ ಲೆನ್ಸ್‌ ಹಾನಿಗೊಳಗಾಗಬಹುದು.


3. ನಿಮ್ಮ ಕಣ್ಣುಗಳಿಂದ ಲೆನ್ಸ್‌ ತೆಗೆದ ನಂತರ, ಅವುಗಳನ್ನು ಒಂದೆಡೆ ಇಡುವ ಮೊದಲು ಶುಚಿಗೊಳಿಸಲು ಮರೆಯಬೇಡಿ.


4. ಪ್ರತಿ ಮೂರು ತಿಂಗಳಿಗೊಮ್ಮೆ, ಬೆಚ್ಚಗಿನ ಮತ್ತು ಸಾಬೂನು ನೀರಿನಿಂದ ಲೆನ್ಸ್‌ ಗಳನ್ನು ತೊಳೆದು ಸ್ವಚ್ಛಗೊಳಿಸಿ ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಸೊಲ್ಯುಶನ್‌ ಬದಲಿಸಿ.


5. ಈಜುವಾಗ ಅಥವಾ ಸ್ನಾನ ಮಾಡುವಾಗ ಯಾವಾಗಲೂ ನಿಮ್ಮ ಕಣ್ಣುಗಳಿಂದ ಲೆನ್ಸ್‌ ಗಳನ್ನು ತೆಗೆದುಹಾಕಿ.


ಇದನ್ನೂ ಓದಿ:  Health Care: ವಯಸ್ಸಾದಂತೆ ಕಾಡುವ ಈ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ


6. ಲೆನ್ಸ್‌ ಗಳನ್ನು ಧರಿಸಿ ಎಂದಿಗೂ ಮಲಗಬೇಡಿ. ಇದು ಕಣ್ಣಿನ ಕಿರಿಕಿರಿ ಮತ್ತು ಸೋಂಕಿಗೆ ಕಾರಣವಾಗಬಹುದು.


7. ನೀವು ಲೆನ್ಸ್‌ ಗಳನ್ನು ತೆಗೆದುಹಾಕಬೇಕಾದ ಸಂದರ್ಭ ಬಂದಾಗ ಕನ್ನಡಕ ನಿಮ್ಮ ಜೊತೆ ಇರಲಿ.


8. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕಾಂಟ್ಯಾಕ್ಟ್ ಲೆನ್ಸ್‌ ಗಳನ್ನು ಎಂದಿಗೂ ಖರೀದಿಸಬೇಡಿ.


ಕಾಂಟ್ಯಾಕ್ಟ್ ಲೆನ್ಸ್‌ ವಿಷಯದಲ್ಲಿ ನೀವು ಮಾಡಲೇಬಾರದ ಕೆಲಸಗಳಿವು:
1. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕಣ್ಣಿಗೆ ಧರಿಸಬಹುದಾದ ಗರಿಷ್ಠ ಸಮಯದ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ. ಹೆಚ್ಚು ಸಮಯ ಲೆನ್ಸ್‌ ಧರಿಸುವುದು ಅಷ್ಟಾಗಿ ಒಳ್ಳೆಯದಲ್ಲ.


2. ಲೆನ್ಸ್‌ ಧರಿಸಿದ್ದಾಗ ನೀವು ಕಣ್ಣುಗಳನ್ನು ಉಜ್ಜಬೇಡಿ. ಏಕೆಂದರೆ ಅದು ಕಾರ್ನಿಯಾವನ್ನು ಹಾನಿಗೊಳಿಸುತ್ತದೆ.


3. ಟ್ಯಾಪ್ ನೀರಿನಲ್ಲಿ ಲೆನ್ಸ್‌ಗಳನ್ನು ಎಂದಿಗೂ ತೊಳೆಯಬೇಡಿ ಮತ್ತು ನೀರಿನಲ್ಲಿನ ಕಲ್ಮಶಗಳು ಲೆನ್ಸ್‌ ಗೆ ಹಾನಿ ಉಂಟು ಮಾಡಬಹುದು.


ಇದನ್ನೂ ಓದಿ: Storytelling: ಮಕ್ಕಳಿಗೆ ಕಥೆ ಹೇಳಿ, ಯಾಕಂದ್ರೆ ಅದರಿಂದ ಈ ಅದ್ಭುತ ಪ್ರಯೋಜನಗಳು ಸಿಗುತ್ತವೆ


4. ಲೆನ್ಸ್‌ಗಳನ್ನು ಧರಿಸಿದಾಗ ಕಣ್ಣಿನ ಮೇಕಪ್ ಮಾಡುವುದನ್ನು ಅವಾಯ್ಡ್‌ ಮಾಡಿ. ಏಕೆಂದರೆ ಇದು ಕಣ್ಣಿನ ಒಳಗೆ ಹಾನಿ ಉಂಟು ಮಾಡಬಹುದು. ಅಲ್ಲದೇ, ಇದು ಕಣ್ಣು ಕೆಂಪಾಗುವಿಕೆ, ಕಣ್ಣಿನ ಊತ ಮತ್ತು ತುರಿಕೆಗೆ ಕಾರಣವಾಗುತ್ತದೆ.


ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗ. ಹಾಗಾಗಿ ಕಣ್ಣಿಗೆ ಉಪಯೋಗಿಸುವ ಕಾಂಟಾಕ್ಟ್‌ ಲೆನ್ಸ್‌ ಬಗ್ಗೆ ತಿಳಿದುಕೊಂಡು ವೈದ್ಯರ ಸಲಹೆಯಂತೆ ನಡೆಯುವುದು ಸೂಕ್ತ.

Published by:Ashwini Prabhu
First published: