• Home
  • »
  • News
  • »
  • lifestyle
  • »
  • Headphone Side Effect: ಯಾವಾಗಲೂ ಇಯರ್ ಫೋನ್ ಹಾಕೊಂಡೇ ಇರ್ತೀರಾ? ಕಿವುಡುತನ ಬರುತ್ತೆ ಹುಷಾರ್!

Headphone Side Effect: ಯಾವಾಗಲೂ ಇಯರ್ ಫೋನ್ ಹಾಕೊಂಡೇ ಇರ್ತೀರಾ? ಕಿವುಡುತನ ಬರುತ್ತೆ ಹುಷಾರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಯರ್ ಫೋನ್ ಅಥವಾ ಇಯರ್ ಬಡ್ ಇಲ್ಲದೇ ಕೆಲವರು ಮನೆಯಿಂದ ಹೊರಗೆ ಕಾಲಿಡಲ್ಲ. ಯಾವಾಗಲೂ ಕಿವಿಗೆ ಹಾಕಿಕೊಂಡೇ ಇರ್ತಾರೆ. ಕೆಲವು ಜನರು ಬೇರೆ ಜನರ ಮಾತು ಕಿರಿಕಿರಿ ಶಬ್ಧ ಕೇಳಬಾರದು ಆರಾಮಾಗಿ ಹಾಡು ಕೇಳಬೇಕು ಅನ್ನೋ ಉದ್ದೇಶದಿಂದ ಇಯರ್ ಫೋನ್ ಹಾಕಿಕೊಳ್ತಾರೆ. ಹೀಗೆ ನೀವು ಹಾಕಿಕೊಳ್ಳುವ ಇಯರ್ ಫೋನ್‌ಗಳು ಕಿವುಡರನ್ನಾಗಿ ಮಾಡಿ ಬಿಡಬಹುದು!

ಮುಂದೆ ಓದಿ ...
  • Share this:

    ಈಗೇನಿದ್ದರೂ ಸ್ಮಾರ್ಟ್ ಯುಗ (Smart Era). ಸ್ಮಾರ್ಟ್ ಫೋನ್, ಇಯರ್ ಫೋನ್ (Headphone), ಇಯರ್ ಬಡ್ಸ್ (Earbuds), ಸ್ಮಾರ್ಟ್ ಟಿವಿ ಹೀಗೆ ಬಹುತೇಕ ವಸ್ತುಗಳ ಬಳಕೆ ಜೊತೆಗೆ ಜನರೂ (People) ಸಹ ಸ್ಮಾರ್ಟ್ ಆಗ್ತಿದ್ದಾರೆ. ಆದ್ರೆ ಈ ಸ್ಮಾರ್ಟ್ ಎಂಬ ವಸ್ತುಗಳ ಬಳಕೆ ಎಷ್ಟು ಹಾನಿಕರ ಅಂದ್ರೆ ಅವುಗಳಿಂದ ಹಲವು ಕಾಯಿಲೆಗೆ ಜನರು ತುತ್ತಾಗುತ್ತಿದ್ದಾರೆ. ಅಂದ ಹಾಗೇ ಹಾಡು ಕೇಳೋಕೆ, ಆಫೀಸ್ ನಲ್ಲಿ ವಿಡಿಯೋ, ಆಡಿಯೋ ಎಡಿಟಿಂಗ್ ಮಾಡುವಾಗ, ಬಸ್ ನಲ್ಲಿ, ಗಾಡಿ ಮೇಲೆ ಪ್ರಯಾಣ ಮಾಡುವಾಗ, ಬೇಜಾರಾದಾಗ ಫೋನ್ ನಲ್ಲಿ ಗಂಟೆ ಗಟ್ಟಲೇ ಮಾತನಾಡುವಾಗ ಜನರು ಇಯರ್ ಫೋನ್ ಮತ್ತು ಇಯರ್ ಬಡ್ಸ್ ಬಳಸ್ತಾರೆ.


    ಇಯರ್ ಪೋನ್ ಬಳಕೆಯಿಂದ ಬರುತ್ತೆ ಕಿವುಡುತನ


    ಅಂದ ಹಾಗೇ ಇಯರ್‌ ಫೋನ್‌, ಇಯರ್‌ಬಡ್‌ ಅಥವಾ ಹೆಡ್‌ಫೋನ್‌ ಎಲ್ಲವೂ ಒಂದೇ. ಆದರೆ ಆಕಾರ ಬೇರೆ. ಇಯರ್ ಬಡ್ ಇಲ್ಲದೇ ಕೆಲವರು ಮನೆಯಿಂದ ಹೊರಗೆ ಕಾಲಿಡಲ್ಲ. ಯಾವಾಗಲೂ ಕಿವಿಗೆ ಹಾಕಿಕೊಂಡೇ ಇರ್ತಾರೆ. ಕೆಲವು ಜನರು ಬೇರೆ ಜನರ ಮಾತು, ಕಿರಿಕಿರಿ ಕೇಳಬಾರದು, ಆರಾಮಾಗಿ ಹಾಡು ಕೇಳಬೇಕು ಅನ್ನೋ ಉದ್ದೇಶದಿಂದ ಇಯರ್ ಫೋನ್ ಹಾಕಿಕೊಳ್ತಾರೆ.


    ಹೀಗೆ ಕಿವಿಗೆ ಇಯರ್ ಫೋನ್ ಹಾಕಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಬಿಡ್ತಾರೆ. ಯಾರು ಕರೆದದ್ದೂ ಕೇಳುವುದಿಲ್ಲ. ಹೀಗೆ ಹೊರಗಿನ ಶಬ್ದ ಕೇಳದಿರಲೆಂದು ನೀವು ಹಾಕಿಕೊಳ್ಳುವ ಇಯರ್ ಪೋನ್‌ಗಳು ನಿಮ್ಮನ್ನು ಕಿವುಡರನ್ನಾಗಿ ಮಾಡಿ ಬಿಡಬಹುದು ಎಚ್ಚರಿಕೆ ವಹಿಸಿ. ನಿಮ್ಮ ಮೆಚ್ಚಿನ ಇಯರ್ ಫೋನ್ ಸಾಧನವು ನಿಮ್ಮನ್ನು ಶಾಶ್ವತವಾಗಿ ಕಿವುಡರನ್ನಾಗಿ ಮಾಡಬಹುದು.




    ಇಯರ್ ಪೋನ್ ಬಳಸುವ ಜನರಿಗೆ ಬೇಗ ಬರುತ್ತೆ ಕಿವುಡುತನ


    ಇತ್ತೀಚಿನ ಅಧ್ಯಯನದ ಪ್ರಕಾರ ಇಯರ್‌ಫೋನ್‌ ಗಳಂತಹ ಸಾಧನ ಬಳಸುವ ಹೆಚ್ಚಿನ ಸಂಖ್ಯೆಯ ಜನರು ಅಥವಾ ದೊಡ್ಡ ಶಬ್ದದಲ್ಲಿ ಸಂಗೀತ, ಧ್ವನಿ ಕೇಳುವುದರಲ್ಲಿ ಹೆಚ್ಚು ಸಮಯ ಕಳೆಯುವ ಜನರು ಶೀಘ್ರದಲ್ಲೇ ಕಿವುಡರಾಗುತ್ತಾರೆ ಎಂದು ಹೇಳಿದೆ.


    ಅಧ್ಯಯನದಲ್ಲಿ ಹೇಳಿದ್ದೇನು?


    ಬಿಎಂಜೆ ಗ್ಲೋಬಲ್ ಹೆಲ್ತ್  ಜರ್ನಲ್‌ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್‌, ಹೆಡ್‌ಫೋನ್‌ ಮತ್ತು ಇಯರ್‌ಬಡ್‌ ವೈಯಕ್ತಿಕ ಶ್ರವಣ ಸಾಧನ ಬಳಸುವ ಒಂದು ಶತಕೋಟಿಗೂ ಹೆಚ್ಚು ಜನರು ತಮ್ಮ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.


    ಪರಿಮಾಣದ ಮಟ್ಟವು ಕಿವಿಗೆ ಅಪಾಯಕಾರಿ


    ಹಿಂದೆ ಪ್ರಕಟವಾದ ಸಂಶೋಧನೆ ಪ್ರಕಾರ, ಹೆಚ್ಚಿನ ಜನರು ಇಯರ್‌ಫೋನ್‌ ಗಳಲ್ಲಿ 105 dB ವರೆಗಿನ ಪರಿಮಾಣ ಕೇಳುತ್ತಾರೆ. ಮನರಂಜನಾ ಸ್ಥಳಗಳಲ್ಲಿ ಸರಾಸರಿ ವಾಲ್ಯೂಮ್ ಮಟ್ಟವು 104 ರಿಂದ 112 dB ವರೆಗೆ ಇರುತ್ತೆ. ಈ ಮಟ್ಟದ ಪರಿಮಾಣ ಕಿವಿಗೆ ಹಾನಿ ಉಂಟು ಮಾಡುತ್ತದೆ. ಸ್ವಲ್ಪ ಸಮಯ ಅಂತಹ ಜಾಗದಲ್ಲಿದ್ದರೂ ಸಮಸ್ಯೆ ಉಂಟಾಗುತ್ತದೆ.


    ಹೆಡ್ಫೋನ್ಹಾಕಿದಾಗ ವಾಲ್ಯೂಮ್ಕಡಿಮೆ ಇರಿಸಿ


    ನಿಯಮಿತವಾಗಿ ದೀರ್ಘಕಾಲದವರೆಗೆ ದೊಡ್ಡ ಶಬ್ದ ಕೇಳುತ್ತಿದ್ದರೆ ಕಿವಿಗೆ ಹಾನಿ ಆಗುತ್ತದೆ. ಶ್ರವಣಕ್ಕೆ ಹಾನಿ ಆಗದಂತೆ ಹೆಡ್‌ ಫೋನ್ ವಾಲ್ಯೂಮ್ ಕಡಿಮೆ ಮಾಡಿ.


    ಕಿವಿಯ ಮೇಲಿರುವ ಹೆಡ್ಫೋನ್ಬಳಸಿ


    ಕಿವಿಯ ಮೇಲಿರುವ ಹೆಡ್‌ಫೋನ್‌, ಇಯರ್‌ಬಡ್‌, ಇಯರ್‌ ಡ್ರಮ್‌ಗಳಿಂದ ದೂರದಲ್ಲಿರುತ್ತದೆ. ಇದು ಶ್ರವಣ ನಷ್ಟ ಕಡಿಮೆ ಮಾಡಲು ಈ ದೂರವು ಮುಖ್ಯ ಎಂದು ವಿಜ್ಞಾನಿಗಳು ಹೇಳ್ತಾರೆ.


    ಹೊರಗಿನ ಶಬ್ಧ ಕೇಳದಂತೆ ಹೆಡ್ಫೋನ್ವಾಲ್ಯೂಮ್ ಹೆಚ್ಚಿಸುವುದು


    ಇತರೆ ಹೊರಗಿನ ಶಬ್ದ ಕೇಳದಂತೆ ತಡೆಯಲು ಆಗಾಗ್ಗೆ ಹೆಡ್‌ಫೋನ್‌ ವಾಲ್ಯೂಮ್ ಹೆಚ್ಚಿಸುವುದು ಕಿವಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಧ್ವನಿ ರದ್ದುಗೊಳಿಸುವ ಹೆಡ್‌ಫೋನ್‌ ಬಳಸುವುದು ಉತ್ತಮ. ಇದು ಕಡಿಮೆ ಪ್ರಮಾಣದಲ್ಲಿ ಉತ್ತಮ ಅನುಭವ ನೀಡುತ್ತದೆ.


    ಇದನ್ನೂ ಓದಿ: ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ವ್ಯಾಯಾಮ ಮಾಡದಿರಿ!


    ಹೆಡ್ಫೋನ್ಗಳ ಬಳಕೆ ಕಡಿಮೆ ಮಾಡಿ


    ಹೆಡ್‌ಫೋನ್‌ ಬಳಕೆ ಕಡಿಮೆ ಮಾಡಿ. ಇದು ಕಿವಿಗಳಿಗೆ ಆಗುವ ಹಾನಿ ಕಡಿಮೆ ಮಾಡುತ್ತದೆ. ದಿನದ ಹೆಚ್ಚಿನ ಸಮಯ ಹೆಡ್‌ಫೋನ್‌ ಹಾಕಿದರೆ ಅದರ ಅವಧಿಯನ್ನು ಕಡಿಮೆ ಮಾಡಿ.

    Published by:renukadariyannavar
    First published: