Vitamin E Capsule: ತ್ವಚೆ, ಕೂದಲಿನ ಆರೋಗ್ಯಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಬಳಸುವ ಮುನ್ನ ಎಚ್ಚರಿಕೆ ವಹಿಸಿ!

ಮೊಡವೆ ಸಮಸ್ಯೆ ಇರುವವರು ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಬಳಸಬೇಕು. ಆದರೆ ನೀವು ವಿಟಮಿನ್ ಇ ಕ್ಯಾಪ್ಸುಲ್ ಬಳಕೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಋಣಾತ್ಮಕ ಪರಿಣಾಮ ಎದುರಿಸಬೇಕಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನೀವು ಚರ್ಮದ ಆರೈಕೆಗಾಗಿ (Skin Care) ಮತ್ತು ಅಂದದ ಹಾಗೂ ಹೊಳೆಯುವ (Beautiful And Brightness) ಮುಖದ ತ್ವಚೆಗಾಗಿ (Face Skin) ವಿಟಮಿನ್ ಇ ಕ್ಯಾಪ್ಸುಲ್ (Vitamin E Capsule) ಬಳಕೆ ಮಾಡುವ ಬಗ್ಗೆ ಕೇಳಿರಬಹುದು. ತುಂಬಾ ಜನರು ತ್ವಚೆಯ ಅಂದಕ್ಕಾಗಿ ವಿಟಮಿನ್ ಇ ಕ್ಯಾಪ್ಸುಲ್ ಬಳಕೆ ಮಾಡುತ್ತಾರೆ. ಚರ್ಮದ ಹೊಳಪು ನೀಡಲು ಹಾಗೂ ಕಪ್ಪು ಕಲೆ ನಿವಾರಿಸಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಇ ಕ್ಯಾಪ್ಸುಲ್ ನಿಮ್ಮ ಚರ್ಮಕ್ಕೆ ಮಾತ್ರವಲ್ಲದೆ ನಿಮ್ಮ ಕೂದಲ ಆರೈಕೆಗೂ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ಇ ಕ್ಯಾಪ್ಸುಲ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ತ್ವಚೆಯ ಮೇಲೆ ಹೊಳಪು ತರುವುದು ಮಾತ್ರವಲ್ಲದೆ ಕೂದಲನ್ನು ಬಲಪಡಿಸುತ್ತದೆ.

    ವಿಟಮಿನ್ ಇ ಕ್ಯಾಪ್ಸುಲ್ ತಪ್ಪಾದ ಬಳಕೆ

    ವಿಟಮಿನ್ ಇ ಕ್ಯಾಪ್ಸಲ್ ಬಳಕೆ ಮಾಡುವುದರಿಂದ ನೀವು ಮುಖದ ಹಾಗೂ ಚರ್ಮದ ಮೇಲಿನ ಕಲೆ, ಮತ್ತು ಕಪ್ಪು ವೃತ್ತಗಳನ್ನು ಸಹ ಕಡಿಮೆ ಮಾಡಬಹುದು. ಜೊತೆಗೆ ಮೊಡವೆ ಸಮಸ್ಯೆ ಇರುವವರು ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಬಳಸಬೇಕು.

    ಆದರೆ ನೀವು ವಿಟಮಿನ್ ಇ ಕ್ಯಾಪ್ಸುಲ್ ಬಳಕೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಋಣಾತ್ಮಕ ಪರಿಣಾಮ ಎದುರಿಸಬೇಕಾಗಬಹುದು.

    ಇದನ್ನೂ ಓದಿ: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

    ನೇರವಾಗಿ ವಿಟಮಿನ್ ಇ ಕ್ಯಾಪ್ಸುಲ್ ಅನ್ವಯಿಸಬೇಡಿ

    ಕಪ್ಪು ಚರ್ಮದ ಮೇಲೆ ಎಣ್ಣೆ ಬಳಸಬಾರದು. ಆದ್ದರಿಂದ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ನೇರವಾಗಿ ಚರ್ಮದ ಮೇಲೆ ಬಳಸಬಾರದು. ಅದರಲ್ಲೂ ಎಣ್ಣೆ ತ್ವಚೆಯಿದ್ದರೆ ನೇರವಾಗಿ ಹಚ್ಚಿಕೊಳ್ಳಬೇಡಿ.

    ಚರ್ಮದ ಮೇಲೆ ದೀರ್ಘಕಾಲ ಇಡಬೇಡಿ

    ನೀವು ಅಲೋವೆರಾದೊಂದಿಗೆ ಈ ಕ್ಯಾಪ್ಸುಲ್ ಅನ್ನು ಬಳಸಿದ್ದರೆ ನಂತರ ಅದನ್ನು ದೀರ್ಘಕಾಲದವರೆಗೆ ಚರ್ಮದ ಮೇಲೆ ಇಡಬೇಡಿ. ಇದು ಮೊಡವೆ ಹೆಚ್ಚಾಗಬಹುದು.

    ಫೇಸ್‌ಪ್ಯಾಕ್‌ನಲ್ಲಿ ಹೆಚ್ಚು ಬಳಸಬೇಡಿ

    ಒಂದು ಬಾರಿಯ ಫೇಸ್ ಪ್ಯಾಕ್‌ಗೆ ಒಂದು ಕ್ಯಾಪ್ಸುಲ್ ಸಾಕು. ಅದೇ ಸಮಯದಲ್ಲಿ ನೀವು ಅದನ್ನು ಕೂದಲಿನ ಮೇಲೆ ಅನ್ವಯಿಸುತ್ತಿದ್ದರೆ ಅದಕ್ಕೆ ಎರಡು ಕ್ಯಾಪ್ಸುಲ್ಗಳು ಸಾಕು. ಪ್ರತಿ ಬಾರಿಯೂ ಅದರ ಪ್ರಮಾಣವನ್ನು ನೆನಪಿನಲ್ಲಿಟ್ಟುಕೊಳ್ಳಲು ಮರೆಯದಿರಿ.

    ವಿಟಮಿನ್ ಇ ಕ್ಯಾಪ್ಸುಲ್ ಬಿಸಿ ಮಾಡಬೇಡಿ

    ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಎಂದಿಗೂ ಬಿಸಿ ಮಾಡಬೇಡಿ. ಉಗುರುಬೆಚ್ಚಗಿನ ನಂತರವೇ, ಆ ಉತ್ಪನ್ನಕ್ಕೆ ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸೇರಿಸಿ. ಬಿಸಿ ಮಾಡುವುದರಿಂದ ಇದು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.

    ವಿಟಮಿನ್ ಇ ಕ್ಯಾಪ್ಸುಲ್ ಪ್ರಯೋಜನಗಳು

    ಕಣ್ಣುಗಳ ಕೆಳಗಿರುವ ಕಪ್ಪು ವಲಯ ತೆಗೆಯುತ್ತದೆ.

    ವಿಟಮಿನ್-ಇ ಕೂದಲನ್ನು ಬಲಪಡಿಸುತ್ತದೆ. ಒಡೆದ ತುದಿಗಳ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಕಣ್ಣುಗಳ ಕೆಳಗೆ ಕಲೆಗಳು, ಕಪ್ಪು ವೃತ್ತಗಳನ್ನು ತೆಗೆದು ಹಾಕುತ್ತದೆ.

    ಚರ್ಮಕ್ಕೆ ಕೆನೆ ಅನ್ವಯಿಸಿ

    ಶುಷ್ಕ ಚರ್ಮಕ್ಕೆ ತೇವಾಂಶ ತರಲು ಜನರು ಸಾಮಾನ್ಯವಾಗಿ ವಿಟಮಿನ್-ಇ ಕ್ಯಾಪ್ಸುಲ್ಗಳನ್ನು ಕ್ರೀಮ್ನಲ್ಲಿ ಅನ್ವಯಿಸುತ್ತಾರೆ. ಅದು ಉತ್ತಮವಲ್ಲ. ಇದಕ್ಕಾಗಿ, ವಿಟಮಿನ್ ಇ ಹೊಂದಿರುವ ಕ್ಯಾಪ್ಸುಲ್ಗಳನ್ನು ಸೇವಿಸಿ.

    ವಿಟಮಿನ್ ಇ ಕ್ಯಾಪ್ಸುಲ್ ಅಥವಾ ಸೀರಮ್ ಅನ್ನು ನೇರವಾಗಿ ಮುಖದ ಮೇಲೆ ಅನ್ವಯಿಸಬಹುದು. ವಿಟಮಿನ್ ಇ ಎಣ್ಣೆಯನ್ನು ಫೇಸ್ ಸ್ಕ್ರಬ್‌ಗಳಿಗೆ ಸೇರಿಸಬಹುದು.

    ಅಲೋವೆರಾ ಜೆಲ್ ಚರ್ಮಕ್ಕೆ ಒಳ್ಳೆಯದು. ಅಲೋವೆರಾ ಜೆಲ್ನಲ್ಲಿ ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸುಮಾರು 15 ನಿಮಿಷಗಳ ಕಾಲ ಮುಖದ ಮೇಲೆ ಇರಿಸಿ ಮತ್ತು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.

    ಇದನ್ನೂ ಓದಿ: ನಿತ್ಯ ಕಾಡೋ ಒತ್ತಡ, ಸುಸ್ತನ್ನು ಕಡಿಮೆ ಮಾಡಲು ಈ ಚಹಾ ಕುಡಿಯಿರಿ

    ನಿಮ್ಮ ತುಟಿಗಳು ಬಿರುಕು ಬಿಟ್ಟಿದ್ದರೆ, ನೀವು ವಿಟಮಿನ್ ಇ ಎಣ್ಣೆಯನ್ನು ನೇರವಾಗಿ ತುಟಿಗಳ ಮೇಲೆ ಅಥವಾ ನಿಮ್ಮ ಲಿಪ್ ಬಾಮ್ನೊಂದಿಗೆ ಮಿಶ್ರಣ ಮಾಡುವ ಮೂಲಕ ಅನ್ವಯಿಸಬಹುದು.
    Published by:renukadariyannavar
    First published: