ಉಗುರಿಗೆ ಬಣ್ಣ ಹಚ್ಚುವುದು ಅಂದ್ರೆ ನೇಲ್ ಪೇಂಟ್ (Nail Paint) ಹಾಕುವುದು ಉಗುರುಗಳ ಅಂದ ಹೆಚ್ಚಿಸುತ್ತದೆ. ಜೊತೆಗೆ ಕೈಗಳನ್ನು (Hands) ಸುಂದರವಾಗಿ ಕಾಣುವಂತೆ ಮಾಡುತ್ತದೆ. ದೇಹವು ಆರೋಗ್ಯವಾಗಿರಲು ದೇಹಕ್ಕೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳು (Nutrients) ಬೇಕು. ಇದು ನಮ್ಮ ಉಗುರುಗಳು ನೈಸರ್ಗಿಕವಾಗಿ ಸುಂದರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಉಗುರುಗಳ ಅಂದ ಹೆಚ್ಚಿಸಲು ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಕು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೇಲ್ ಪೇಂಟ್ ಗಳು ಇರುವುದನ್ನು ಕಾಣುತ್ತೇವೆ.
ಉಗುರುಗಳಿಗೆ ನೇಲ್ ಪೇಂಟ್ ಹಚ್ಚುವುದು
ಕೇವಲ ಬಣ್ಣವಲ್ಲ, ಉಗುರುಗಳನ್ನು ನೇಲ್ ಪೇಂಟ್ ಮೂಲಕ ಚಿತ್ರ ಬಿಡಿಸಲಾಗುತ್ತದೆ. ಉಗುರುಗಳಿಗೆ ಹಚ್ಚುವ ರಂಗು ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಾಸ್ತವದಲ್ಲಿ ಉಗುರು ಬಣ್ಣ ಬಳಕೆ ಮಾಡಿದ್ರೆ ಉಗುರುಗಳ ಸೌಂದರ್ಯ ಹೆಚ್ಚುತ್ತದೆ. ಆದರೆ ನೀವು ಹಚ್ಚುವ ನೇಲ್ ಪೇಂಟ್ ಎಷ್ಟು ಆರೋಗ್ಯಕರ ಎಂಬುದನ್ನು ತಿಳಿಯುವುದು ಮುಖ್ಯ.
ನೇಲ್ ಪೇಂಟ್ ಬಳಕೆ ಎಷ್ಟು ಆರೋಗ್ಯಕರ?
ನೀವು ಹಚ್ಚುವ ನೇಲ್ ಪೇಂಟ್ ಉತ್ಪನ್ನವು ಟಾಕ್ಸಿನ್ ಮುಕ್ತವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಹೀಗೆ ಟಾಕ್ಸಿನ್ ಮುಕ್ತ ಎಂದು ಹೇಳಿಕೊಳ್ಳುವ ಅನೇಕ ಉಗುರು ಬಣ್ಣಗಳು ಮಾರುಕಟ್ಟೆಯಲ್ಲಿ ಕಾಣಿಸುತ್ತವೆ. ಇಂತಹ ನೇಲ್ ಪೇಂಟ್ ಬಳಕೆ ಆರೋಗ್ಯಕರವೇ ಅಥವಾ ಅನಾರೋಗ್ಯಕರವೇ ಎಂದು ಇಲ್ಲಿ ತಿಳಿಯಿರಿ.
ವಿಷಕಾರಿಯಲ್ಲದ ಅಥವಾ ವಿಷಕಾರಿ ನೇಲ್ ಪೇಂಟ್
ವಿವಿಧ ರೀತಿಯಲ್ಲಿ ಉಗುರುಗಳ ಮೇಲೆ ಉಗುರು ಬಣ್ಣ ಬಳಕೆ ಮಾಡುವುದನ್ನು ನೀವು ಕಾಣಬಹುದು. ಸೌಂದರ್ಯವರ್ಧಕಗಳ ವಿಷಯಕ್ಕೆ ಬಂದಾಗ, ವಿಷಕಾರಿಯಲ್ಲದ ಪೇಂಟ್ ಬಳಸಬೇಕು ಎಂಬುದನ್ನು ಮೊದಲು ತಿಳಿಯಿರಿ.
ನೇಲ್ ಪಾಲಿಶ್ ಬ್ರ್ಯಾಂಡ್ಗಳು ಸಾಮಾನ್ಯವಾಗಿ ಫೈವ್ ಫ್ರೀಸ್ ಎಂಬ ಪದ ಬಳಸುತ್ತವೆ. ಐದು ಪದಾರ್ಥ ಮುಕ್ತ ನಿರ್ದಿಷ್ಟ ಪದಾರ್ಥಹೊಂದಿರದ ನೇಲ್ ಪಾಲಿಶ್ ಎಂದು ಅರ್ಥೈಸುತ್ತದೆ.
ಫಾರ್ಮಾಲ್ಡಿಹೈಡ್, ಟೊಲುಯೆನ್, ಡೈಬ್ಯುಟೈಲ್ ಥಾಲೇಟ್, ಫಾರ್ಮಾಲ್ಡಿಹೈಡ್ ರೆಸಿನ್ಗಳು ಮತ್ತು ಕೆಂಪ್ಫರ್ ಅಥವಾ ಕರ್ಪೂರ. ಈ ಐದು ಅಂಶಗಳು ಇಲ್ಲದಿರುವ ನೇಲ್ ಪಾಲಿಶ್ ವಿಷಕಾರಿಯಲ್ಲ ಎಂದು ಹೇಳಲಾಗಿದೆ.
ಉಗುರು ಸ್ವಚ್ಛಗೊಳಿಸುವ ವಾರ್ನಿಷ್
ನೇಲ್ ಪಾಲಿಷ್ ಅಥವಾ ನೇಲ್ ಪೇಂಟ್ ಅನ್ನು ನೇಲ್ ಎನಾಮೆಲ್ ಅಥವಾ ನೇಲ್ ವಾರ್ನಿಷ್ ಎಂದೂ ಕರೆಯುತ್ತಾರೆ. ಇದು ದ್ರವ ಪದಾರ್ಥ. ಇದು ಮುಖ್ಯವಾಗಿ ಬೆರಳು, ಉಗುರು ಮತ್ತು ಕಾಲ್ಬೆರಳ ಉಗುರುಗಳ ಉಗುರು ಫಲಕದ ಮೇಲ್ಮೈಗೆ ಅನ್ವಯಿಸುತ್ತದೆ.
ಇದು ನೀರಿನ ನಿರೋಧಕ ಲೇಪನ. ಇದು ಸೌಂದರ್ಯವರ್ಧಕ ಬಳಕೆ ಬಗ್ಗೆ ಹೇಳುತ್ತದೆ. ಉಗುರು ಬಣ್ಣವು ಸಂತಾನೋತ್ಪತ್ತಿ ಅಂಗದಲ್ಲಿ ಸಮಸ್ಯೆ ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ. ಇದರಲ್ಲಿ ಫಾರ್ಮಾಲ್ಡಿಹೈಡ್ ಅನ್ನು ಸಂರಕ್ಷಕವಾಗಿ ಬಳಸುತ್ತಾರೆ.
ಇದು ಅಲರ್ಜಿಯಿಂದ ಉಂಟಾಗುವ ಉರಿಯೂತಕ್ಕೆ ಕಾರಣವಾಗುತ್ತದೆ. ಫಾರ್ಮಾಲ್ಡಿಹೈಡ್ ರಾಳ, ಡೈಬ್ಯುಟೈಲ್ ಥಾಲೇಟ್ ಮತ್ತು ಟೊಲ್ಯೂನ್ ಸಹ ಅಲರ್ಜಿಯ ಚರ್ಮದ ಕಾಯಿಲೆ ಉಂಟು ಮಾಡುತ್ತದೆ. ಕರ್ಪೂರದ ಎಣ್ಣೆ ಬಳಕೆ ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಔಷಧದಲ್ಲಿ ಬಳಸುತ್ತಾರೆ.
ಇದರ ಸೇವನೆಯು ವಿಷಕಾರಿಯಾಗಿದೆ. ನೇಲ್ ಪಾಲಿಶ್ನಲ್ಲಿರುವ ರಾಸಾಯನಿಕಗಳು ದೇಹಕ್ಕೆ ಹೀರಲ್ಪಡುತ್ತವೆ ಅಂತಾ ಹಲವು ಅಧ್ಯಯನಗಳು ಹೇಳಿವೆ. ಉಗುರು ಬಣ್ಣದಲ್ಲಿ ಟಾಕ್ಸಿನ್ ಇದ್ದರೆ ಅದರ ಸಂಪರ್ಕಕ್ಕೆ ಬಂದರೆ ಚರ್ಮದ ಕಿರಿಕಿರಿ, ಅಲರ್ಜಿ ಪ್ರತಿಕ್ರಿಯೆ ಮತ್ತು ವಾಂತಿಗೆ ಕಾರಣ ಆಗುತ್ತದೆ.
ಯಾವ ಸಮಸ್ಯೆ ಕಂಡು ಬರುತ್ತವೆ?
ಉಸಿರಾಟದ ತೊಂದರೆ, ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಅಂಗದಲ್ಲಿ ಗಂಭೀರ ಸಮಸ್ಯೆ ಸಹ ಇರುತ್ತದೆ. ನೇಲ್ ಪೇಂಟ್ ರಿಮೂವರ್ ಕೂಡ ಉಗುರುಗಳಿಗೆ ಹಾನಿ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಉಗುರು ಬಣ್ಣ ತೆಗೆಯುವ ಪ್ರಕ್ರಿಯೆ ಉಗುರುಗಳಿಗೆ ಹಾನಿ ಮಾಡುತ್ತದೆ. ನೇಲ್ ಪೇಂಟ್ ರಿಮೂವರ್ ಅಸಿಟೋನ್ ಹೊಂದಿದೆ. ಇದು ಉಗುರುಗಳಿಗೆ ಹಾನಿ ಮಾಡುತ್ತದೆ. ಉಗುರು ಬಣ್ಣವನ್ನು ಸ್ಕ್ರ್ಯಾಪ್ ಮಾಡಿದರೆ ಅದು ಉಗುರಿಗೆ ಹಾನಿ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತಂತೆ ಈ ಸ್ಟ್ರಾಬೆರಿ ಹಣ್ಣು!
ದೀರ್ಘಕಾಲ ಉಗುರು ಬಣ್ಣ ಹಚ್ಚಿದರೆ ಉಗುರುಗಳ ಮೇಲೆ ಗಂಭೀರ ಕೆಟ್ಟ ಪರಿಣಾಮ ಉಂಟಾಗುತ್ತದೆ. ನೇಲ್ ಪೇಂಟ್ನ ಟ್ರಿಫಿನೈಲ್ ಫಾಸ್ಫೇಟ್ ಅಂಶವು ವಿಷಕಾರಿ ಆಗಿದೆ. ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ಹೊಡೆತ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ