Ghee And Health: ಅಡುಗೆ ಮಾಡಲು ಹೆಚ್ಚು ತುಪ್ಪ ಬಳಸುತ್ತಿದ್ದೀರಾ? ಹಾಗಿದ್ರೆ ಈ ತೊಂದರೆಗಳು ಎದುರಾಗಬಹುದು ಎಚ್ಚರ!

ತುಪ್ಪದಲ್ಲಿ ಬೇಯಿಸಿದ ಆಹಾರ ತಿನ್ನಲು ಇಷ್ಟ ಪಡುತ್ತಿದ್ದರೆ ಪೌಷ್ಟಿಕತಜ್ಞರು ಹೇಳಿದ ಈ ವಿಷಯದ ಬಗ್ಗೆ ಮೊದಲು ತಿಳಿದುಕೊಳ್ಳಿ. ಕರುಳಿನ ಆರೋಗ್ಯ ಮತ್ತು ಪೌಷ್ಟಿಕ ತಜ್ಞೆ ಅವಂತಿ ದೇಶಪಾಂಡೆ, ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್‌ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದ (Indian) ಪ್ರತಿಯೊಂದು ಮನೆಯಲ್ಲೂ (Home) ತುಪ್ಪ (Ghee) ಇದ್ದೇ ಇರುತ್ತದೆ. ತುಪ್ಪವನ್ನು ಸಿಹಿ ಅಡುಗೆ (Sweet Recipe) ಮಾಡಿದಾಗ ತಿನ್ನಲು ಬಳಸುತ್ತಾರೆ. ಜೊತೆಗೆ ಕೆಲವರು ಮನೆಯಲ್ಲಿ ತುಪ್ಪವನ್ನು ದೇವರಿಗೆ ದೀಪ ಹಚ್ಚಲು ಬಳಸುತ್ತಾರೆ. ತುಪ್ಪದ ಆಯುರ್ವೇದ ಗುಣಲಕ್ಷಣಗಳಿಂದಾಗಿ, ಕೆಮ್ಮು, ಜ್ವರ, ಕ್ಷಯ, ದೌರ್ಬಲ್ಯ ಮತ್ತು ಜೀರ್ಣಕ್ರಿಯೆ ಮುಂತಾದ ಅನೇಕ ರೋಗಗಳ ಚಿಕಿತ್ಸೆಗೂ ಇದನ್ನು ಬಳಕೆ ಮಾಡುತ್ತಾರೆ. ಎಣ್ಣೆಯುಕ್ತ ಪದಾರ್ಥಗಳಲ್ಲಿ ತುಪ್ಪವು ಅತ್ಯುತ್ತಮ ಎಂದು ನಂಬಲಾಗಿದೆ. ಹಾಗಾಗಿ ಜನರು ಆಹಾರದ ಜೊತೆಗೆ ತುಪ್ಪದ ಸೇವನೆ ಇಷ್ಟ ಪಡುತ್ತಾರೆ. ಪ್ರತ್ಯೇಕವಾಗಿಯೂ ಕೆಲವರು ತುಪ್ಪ ಸೇವನೆ ಮಾಡುತ್ತಾರೆ. ಕೆಲವರು ತುಪ್ಪದಲ್ಲಿ ಆಹಾರ ತಯಾರಿಸಿ ಸೇವನೆ ಮಾಡುತ್ತಾರೆ.

    ನೀವೂ ಕೂಡ ತುಪ್ಪದಲ್ಲಿ ಬೇಯಿಸಿದ ಆಹಾರ ತಿನ್ನಲು ಇಷ್ಟ ಪಡುತ್ತಿದ್ದರೆ ಪೌಷ್ಟಿಕತಜ್ಞರು ಹೇಳಿದ ಈ ವಿಷಯದ ಬಗ್ಗೆ ಮೊದಲು ತಿಳಿದುಕೊಳ್ಳಿ. ಕರುಳಿನ ಆರೋಗ್ಯ ಮತ್ತು ಪೌಷ್ಟಿಕ ತಜ್ಞೆ ಅವಂತಿ ದೇಶಪಾಂಡೆ, ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್‌ ಶೇರ್ ಮಾಡಿದ್ದಾರೆ. ದೇಹಕ್ಕೆ ಅಗತ್ಯ ಕೊಬ್ಬನ್ನು ತುಪ್ಪದಲ್ಲಿ ಬೇಯಿಸಿದರೆ ಅದು ಹಾನಿ ಉಂಟು ಮಾಡುತ್ತದೆ ಎಂದಿದ್ದಾರೆ.

    ಕೇವಲ ಅಡುಗೆಗೆ ತುಪ್ಪ ಬಳಸಬೇಡಿ. ತುಪ್ಪವನ್ನು ರೊಟ್ಟಿ ಮತ್ತು ಅಕ್ಕಿ ಬೇಳೆಯೊಂದಿಗೆ ಪ್ರತ್ಯೇಕವಾಗಿ ತಿನ್ನುವುದು ಉತ್ತಮ. ಉತ್ತಮ ಆರೋಗ್ಯ ಪ್ರಯೋಜನಕ್ಕೆ ಆಹಾರದಲ್ಲಿ ತುಪ್ಪ ಕೋಲ್ಡ್ ಪ್ರೆಸ್ಡ್ ಸಸ್ಯಜನ್ಯ ಎಣ್ಣೆಯ ಮಿಶ್ರಣ ಬಳಸುವುದು ಉತ್ತಮ ಎಂದು ಪೌಷ್ಟಿಕ ತಜ್ಞೆ ಅವಂತಿ ದೇಶಪಾಂಡೆ ಹೇಳಿದ್ದಾರೆ.

    ಇದನ್ನೂ ಓದಿ: ಸರಿಯಾಗಿ ನೆನಪಿಡಿ, ನೀವು ಮಾಡೋ ಈ ತಪ್ಪುಗಳು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುತ್ತೆ

    ಆಹಾರವನ್ನು ಏಕೆ ತುಪ್ಪದಲ್ಲಿ ಬೇಯಿಸಬಾರದು?

    ತುಪ್ಪ ಮತ್ತು ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಂಡು ಬರುತ್ತದೆ. ಮತ್ತೊಂದೆಡೆ, ಕಡಲೆಕಾಯಿ, ಎಳ್ಳು ಅಥವಾ ಸಾಸಿವೆ ಅಡುಗೆ ಎಣ್ಣೆಗಳು ಹೆಚ್ಚಿನ ಪ್ರಮಾಣದ ಏಕ ಪರ್ಯಾಪ್ತ ಕೊಬ್ಬಿನಾಮ್ಲ ಹೊಂದಿರುತ್ತವೆ.

    ಆದರೆ ಕುಸುಬೆ ಬೀಜದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯು ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಯಾವುದು ದೇಹಕ್ಕೆ ಪ್ರಯೋಜನಕಾರಿ. ಆದರೆ ದೇಹದಲ್ಲಿ ಅಧಿಕ ಸ್ಯಾಚುರೇಟೆಡ್ ಕೊಬ್ಬು ಅನೇಕ ಸಮಸ್ಯೆ ಉಂಟು ಮಾಡಬಹುದು.

    ಸ್ಯಾಚುರೇಟೆಡ್ ಮತ್ತು ಅನ್‌ಸ್ಯಾಚುರೇಟೆಡ್ ಫ್ಯಾಟ್ ಎಂದರೇನು?

    ಸ್ಯಾಚುರೇಟೆಡ್ ಕೊಬ್ಬು ದೇಹದಲ್ಲಿ ಕೆಟ್ಟ ಅಥವಾ ಎಲ್ಡಿಎಲ್ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುವ ಮೂಲಕ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹವನ್ನು ಸದೃಢವಾಗಿಡಲು ಅಪರ್ಯಾಪ್ತ ಕೊಬ್ಬನ್ನು ಹೊಂದಿರುವ ಆಹಾರ ಸೇವಿಸಬೇಕು. ಇದು LDL ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವ ಗುಣ ಹೊಂದಿದೆ. ಅಪರ್ಯಾಪ್ತ ಕೊಬ್ಬು ಹೃದಯದ ಆರೋಗ್ಯಕ್ಕೆ ಸಹಕಾರಿ.

    ಆಹಾರದಲ್ಲಿ ತುಪ್ಪವನ್ನು ಸೇರಿಸುವ ಆರೋಗ್ಯಕರ ವಿಧಾನ

    ಆಹಾರದಲ್ಲಿ ತುಪ್ಪವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವಂತೆ ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ. ತುಪ್ಪ ಆರೋಗ್ಯಕರ ರೀತಿಯಲ್ಲಿ ಬಳಸಲು, ರೊಟ್ಟಿಗಳಿಗೆ ಅನ್ವಯಿಸಿ ತಿನ್ನಿರಿ. ಅಕ್ಕಿ ಮತ್ತು ದಾಲ್‌ನಲ್ಲಿ ಪ್ರತ್ಯೇಕವಾಗಿ ತೆಗೆದುಕೊಳ್ಳಬಹುದು.

    ನೀವು ಇತರ ಖಾದ್ಯ ಎಣ್ಣೆಯೊಂದಿಗೆ ತುಪ್ಪ ಬೆರೆಸಿ ಆಹಾರ ಬೇಯಿಸಬಹುದು. ತುಪ್ಪದಲ್ಲಿ ಕಂಡುಬರುವ ಸ್ಯಾಚುರೇಟೆಡ್ ಕೊಬ್ಬಿನೊಂದಿಗೆ ಖಾದ್ಯ ತೈಲಗಳಲ್ಲಿ ಇರುವ ಏಕಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳ ಸರಿಯಾದ ಅನುಪಾತವು ಹೃದಯಕ್ಕೆ ಒಳ್ಳೆಯದು.

    ಇದನ್ನೂ ಓದಿ: ಹಾರ್ಟ್​ ಫೇಲ್ ತಡೆಗೆ ವೈದ್ಯರು ಸೂಚಿಸಿದ ಪ್ರಮುಖ ಸಲಹೆಗಳು! ತಿಳಿದಿರುವುದು ಅಗತ್ಯ

    ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿ

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸಲು ಅವಂತಿ ಸಲಹೆ ನೀಡುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ತುಪ್ಪ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರ ಮತ್ತು ಬಲವಾಗಿರುತ್ತದೆ. ಇದರ ಸೇವನೆಯು ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆ ನಿವಾರಿಸುತ್ತದೆ.
    Published by:renukadariyannavar
    First published: