Fitness Gadgets: ಫಿಟ್ನೆಸ್​ಗಾಗಿ ಬಳಸುವ ಪರಿಕರಗಳು ಒತ್ತಡ ಹೆಚ್ಚಿಸಲು ಕಾರಣವಾದೀತು, ಎಚ್ಚರವಿರಲಿ!

ತೂಕ ಇಳಿಸುವಾಗ ಹಾಗೂ ಫಿಟ್‌ನೆಸ್ ಗಾಗಿ ಬಳಸುವ ಪರಿಕರಗಳು ನಿಮ್ಮ ಒತ್ತಡ ಹೆಚ್ಚಿಸಬಹುದು. ಅನೇಕ ಸಂಶೋಧನೆಗಳ ಪ್ರಕಾರ, ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಅಥವಾ ಹೃದಯ ಬಡಿತ ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಒತ್ತಡ ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ ಒತ್ತಡ (Stress) ಮತ್ತು ಆತಂಕ (Anxiety) ಜೀವನದ (Life) ಅವಿಭಾಜ್ಯ ಅಂಗಗಳಾಗಿವೆ. ಆರೋಗ್ಯ (Health) ಸಮಸ್ಯೆಗಳಲ್ಲಿ (Problem) ಒಂದಾಗಿರುವ ಒತ್ತಡದ ಜೊತೆ ಜೊತೆಗೆ ಹಲವರು ಬದುಕುತ್ತಿದ್ದಾರೆ. ಕೆಲವೊಮ್ಮೆ ಈ ಒತ್ತಡದ ಬದುಕು ಜೀವವನ್ನೇ ಕೊನೆಗೊಳಿಸುವ ಅಪಾಯವಿದೆ. ಮನುಷ್ಯ ತನ್ನ ಧಾವಂತದ ಜೀವನದಲ್ಲಿ ಪ್ರತಿ ವಿಷಯದಲ್ಲೂ ಆತುರತೆ ಹೊಂದಿದ್ದಾನೆ. ಎಲ್ಲಾ ಕೆಲಸ ಹಾಗೂ ದೈಹಿಕ ಕಾಯಿಲೆ, ಸ್ಥೂಲಕಾಯ ಎಲ್ಲವೂ ಬೇಗನೆ ಕೊನೆಯಾಗಬೇಕು ಎಂದು ಬಯಸುತ್ತಾನೆ. ಹೆಚ್ಚುವ ತೂಕ ಇಳಿಕೆ ಪ್ರಯಾಣ ಮತ್ತು ಪ್ರಯಾಸವೂ ಕೂಡ ಸಾಕಷ್ಟು ಒತ್ತಡ ಉಂಟು ಮಾಡುತ್ತದೆ. ಇಂತಹ ಒತ್ತಡವನ್ನು ಸಕಾಲಕ್ಕೆ ಗುರುತಿಸಿ ಕಡಿಮೆ ಮಾಡಬೇಕು. ಇಲ್ಲದಿದ್ದರೆ ದೊಡ್ಡ ತೊಂದರೆ ಉಂಟು ಮಾಡುತ್ತದೆ.

  ಆರೋಗ್ಯದ ಹಿತ ಕಾಯುವ ಭರದಲ್ಲಿ ಒತ್ತಡ ಸಮಸ್ಯೆ ಉಂಟಾದೀತು!

  ಜೊತೆಗೆ ನಿಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ನೀವು ಮಾಡುವ ಸ್ಲೀಪ್ ಮಾನಿಟರಿಂಗ್, ಒತ್ತಡದ ಮೇಲ್ವಿಚಾರಣೆ ಮತ್ತು ಹೃದಯ ಬಡಿತದ 24X7 ಮಾನಿಟರಿಂಗ್ ನಿಮ್ಮಲ್ಲಿ ಒತ್ತಡ ಸಮಸ್ಯೆ ಕಡಿಮೆ ಮಾಡುವ ಬದಲು ಕೆಲವೊಮ್ಮೆ ಹೆಚ್ಚಿಸಬಹುದು.

  ತೂಕ ಇಳಿಸುವಾಗ ಹಾಗೂ ಫಿಟ್‌ನೆಸ್ ಗಾಗಿ ಬಳಸುವ ಪರಿಕರಗಳು ನಿಮ್ಮ ಒತ್ತಡ ಹೆಚ್ಚಿಸಬಹುದು. ಹಾಗೇನಾದರೂ ಇದ್ದರೆ ಅವುಗಳನ್ನು ಮಿತವಾಗಿ ಬಳಸಿ.

  ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

  ಒತ್ತಡ ತಡೆಗೆ ಏನು ಮಾಡಬೇಕು?

  ಸ್ಮಾರ್ಟ್ ವಾಚ್ ನೊಸೆಬೊ ಪರಿಣಾಮ

  ನೊಸೆಬೊ ಎಫೆಕ್ಟ್ ಎಂಬುದು ಒಂದು ಪದವಾಗಿದ್ದು, ಇದರಲ್ಲಿ ಅನೇಕ ಬಾರಿ ಒಂದು ವಿಷಯ, ಘಟನೆ ಅಥವಾ ಆಲೋಚನೆಯು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ BP ಸ್ವಲ್ಪ ಲೋ ಆಗುತ್ತದೆ. ಆದರೆ ಇದು ನಿಮಗೆ ತಿಳಿಯಲ್ಲ.

  ಸ್ಮಾರ್ಟ್ ವಾಚ್ ಎಲ್ಲಾ ಸಮಯದಲ್ಲೂ BP ನವೀಕರಣ ಪಡೆಯುತ್ತಲೇ ಇರುತ್ತದೆ. ಮತ್ತು ಅದು ಹೆಚ್ಚು ಅಥವಾ ಕಡಿಮೆಯಾದರೆ ನೀವು ಟೆನ್ಷನ್‌ಗೆ ಒಳಗಾಗುತ್ತಿದ್ದರೆ ಅದನ್ನು nosibo ಪರಿಣಾಮ ಎಂದು ಕರೆಯುತ್ತಾರೆ.

  ಎಲ್ಲಾ ಸಮಯದಲ್ಲೂ ಸ್ಮಾರ್ಟ್ ವಾಚ್ ಧರಿಸಬೇಡಿ

  ಅನೇಕ ಸಂಶೋಧನೆಗಳ ಪ್ರಕಾರ, ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಅಥವಾ ಹೃದಯ ಬಡಿತ ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಒತ್ತಡ ಹೆಚ್ಚಿಸುತ್ತದೆ. ಕೆಲವೊಮ್ಮೆ ಹೃದಯ ಬಡಿತವು ಹೆಚ್ಚು ಅಥವಾ ಕಡಿಮೆ ಇರುತ್ತದೆ. ಆದರೆ ಇದೆಲ್ಲವೂ ನಿಮಗೆ ತಿಳಿಯುವುದಿಲ್ಲ. ಆದರೆ ಮೇಲ್ವಿಚಾರಣೆಯ ಮೂಲಕ ನೀವು ಈ ವಿಷಯಗಳ ಬಗ್ಗೆ ತಿಳಿಯಬಹುದು.

  ನಿಮ್ಮ ನಿದ್ರೆಯ ಮಾದರಿ ತಿಳಿಯಿರಿ

  ನೀವು ಮೇಲ್ವಿಚಾರಣೆಯಲ್ಲಿ 8 ಗಂಟೆಗಳ ಕಾಲ ನಿದ್ರಿಸಬೇಕೆಂದು ಹೇಳಿದರೆ, ಆಗ ನೀವು ಸಾಮಾನ್ಯ ನಿದ್ರೆ ಪಡೆಯದೇ ಒತ್ತಡಕ್ಕೆ ಒಳಗಾಗಬಹುದು. ನಿಮ್ಮ ನಿದ್ದೆಯ ಮೇಲೆ ನಿಗಾ ಇಡಲು ಸ್ಮಾರ್ಟ್ ವಾಚ್ ಹಾಕಿ ಮಲಗಿದರೆ ಅಷ್ಟು ಗಾಢ ನಿದ್ದೆ ಬರುವುದಿಲ್ಲ. ಹಾಗಾಗಿ ಯಾವುದೇ ಯೋಚನೆ ಮಾಡದೇ, ಸಾಧನ ಬಳಸದೇ ಆರಾಮವಾಗಿ ನಿದ್ರಿಸಿ.

  ಒತ್ತಡ ಹೆಚ್ಚಾಗಲು ಬಿಡಬೇಡಿ

  ಬಿಪಿ ರೋಗಿ ಅಲ್ಲದೇ ಹೋದರೆ ದಿನಕ್ಕೆ ಹಲವು ಬಾರಿ ಬಿಪಿ ಏರುತ್ತದೆ ಮತ್ತು ಇಳಿಯುತ್ತದೆ. ಇದರತ್ತ ನೀವು ಗಮನ ಕೊಡದಿದ್ದರೆ ಅದು ನಿಮಗೆ ಉತ್ತಮ. ಒಂದು ವೇಳೆ ಇದು ನಿಮಗೆ ಗೊತ್ತಾದರೆ, ನೀವು ಬಿಪಿ ಮಾನಿಟರ್ ಮಾಡುವುದು, ಅದು ಹೆಚ್ಚು ಅಥವಾ ಕಡಿಮೆ ಆದಾಗ ನಿಮ್ಮನ್ನು ಆತಂಕಕ್ಕೆ ನೂಕುತ್ತದೆ. ಬಿಪಿ ಸ್ವಲ್ಪ ಕಡಿಮೆಯಾದರೆ ನೋಟಿಫಿಕೇಶನ್ ಬರುತ್ತದೆ. ಹೀಗಾಗಿ ಬಿಪಿಯನ್ನು ಸದಾ ಮಾನಿಟರ್ ಮಾಡಬೇಡಿ.

  ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

  ಹೃದಯ ಬಡಿತ ಹೆಚ್ಚುವುದು

  ಸ್ಮಾರ್ಟ್ ವಾಚ್‌ನಲ್ಲಿ ಸಾರ್ವಕಾಲಿಕ ಹೃದಯ ಬಡಿತ ಮೇಲ್ವಿಚಾರಣೆ ಮಾಡುವುದು ಒಳ್ಳೆಯದಲ್ಲ. ಕ್ರೀಡೆ ಅಥವಾ ಇತರ ಯಾವುದೇ ಚಟುವಟಿಕೆಯಲ್ಲಿ ಹೃದಯ ಬಡಿತ ಹೆಚ್ಚಾದರೆ, ಅದರ ಸೂಚನೆ  ಸ್ಮಾರ್ಟ್ ವಾಚ್‌ನಲ್ಲಿ ಕಾಣಿಸುತ್ತದೆ. ಇದು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು.
  Published by:renukadariyannavar
  First published: