• Home
 • »
 • News
 • »
 • lifestyle
 • »
 • Blood Cancer: ದುಬಾರಿ ಶಾಂಪೂಗಳ ಬಳಕೆ ಮೊದಲು ಎಚ್ಚರ; ರಕ್ತ ಕ್ಯಾನ್ಸರ್​​ಗೆ ಕಾರಣವಾಗಬಹುದು ಅದರಲ್ಲಿನ ರಾಸಾಯನಿಕ ಅಂಶ

Blood Cancer: ದುಬಾರಿ ಶಾಂಪೂಗಳ ಬಳಕೆ ಮೊದಲು ಎಚ್ಚರ; ರಕ್ತ ಕ್ಯಾನ್ಸರ್​​ಗೆ ಕಾರಣವಾಗಬಹುದು ಅದರಲ್ಲಿನ ರಾಸಾಯನಿಕ ಅಂಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೂದಲನ್ನು ಹೊಳೆಯುವಂತೆ ಮಾಡಲು ಮತ್ತು ಮೃದುಗೊಳಿಸಲು ಮಾರುಕಟ್ಟೆಯಲ್ಲಿ ಹಲವು ತರಹದ ಶಾಂಪೂ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ. ಕೆಲವು ಬ್ರ್ಯಾಂಡೆಡ್ ಮತ್ತು ದುಬಾರಿ ಶಾಂಪೂ ಗಳು ಇತ್ತೀಚೆಗೆ ಸಾಕಷ್ಟು ಜನರನ್ನು ಆಕರ್ಷಣೆ ಮಾಡುತ್ತಿವೆ. ಇವುಗಳು ನಿಮ್ಮ ಆರೋಗ್ಯಕ್ಕೆ ಮಾರಣಾಂತಿಕ ಆಗಬಹುದು.

ಮುಂದೆ ಓದಿ ...
 • Share this:

  ಜನರು (People) ತಮ್ಮ ಒಣಗಿದ (Dry), ನಿರ್ಜೀವ ಮತ್ತು ತೆಳ್ಳಗಿನ ಹಾಗೂ ಉದುರುವ ಕೂದಲನ್ನು (Thin And Falling Hair) ಬಲಪಡಿಸಲು (Strong) ಹಲವು ರೀತಿಯ ಶಾಂಪೂ ಮತ್ತು ಬ್ಯೂಟಿ ಉತ್ಪನ್ನಗಳನ್ನು (Shampoo And Beauty Products) ಬಳಕೆ ಮಾಡುತ್ತಾರೆ. ಕೂದಲನ್ನು ಹೊಳೆಯುವಂತೆ ಮಾಡಲು ಮತ್ತು ಮೃದುಗೊಳಿಸಲು ಮಾರುಕಟ್ಟೆಯಲ್ಲಿ ಹಲವು ತರಹದ ಶಾಂಪೂ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ. ಕೆಲವು ಬ್ರ್ಯಾಂಡೆಡ್ ಮತ್ತು ದುಬಾರಿ ಶಾಂಪೂ ಗಳು ಇತ್ತೀಚೆಗೆ ಸಾಕಷ್ಟು ಜನರನ್ನು ಆಕರ್ಷಣೆ ಮಾಡುತ್ತಿವೆ. ಟ್ರೆಸೆಮ್ಮೆ ಮತ್ತು ಡವ್‌ ನಂತಹ ಡ್ರೈ ಶಾಂಪೂ ತಯಾರಕರು ಹಲವು ದುಬಾರಿ ಬ್ರ್ಯಾಂಡ್‌ ಗಳ ಶಾಂಪೂ ಮಾರುಕಟ್ಟೆಯಿಂದ ಯುನಿಲಿವರ್ ಹಿಂದಕ್ಕೆ ಪಡೆದಿದೆ ಎಂದು ವರದಿ ಆಗಿದೆ.


  ದುಬಾರಿ ಶಾಂಪೂಗಳಲ್ಲಿದೆ ಅಪಾಯಕಾರಿ ರಸಾಯನಿಕ  


  ET ವರದಿ ಪ್ರಕಾರ ಇದನ್ನು ಹೇಳಲಾಗಿದೆ. ಡವ್, ನೆಕ್ಸಸ್, ಸುವೇ, ಟಿಗಿ ಮತ್ತು ಟ್ರೆಸೆಮ್ಮೆ ಮುಂತಾದ ಬ್ರ್ಯಾಂಡ್‌ ಗಳ ಡ್ರೈ ಶಾಂಪೂಗಳಲ್ಲಿ ಬೆಂಜೀನ್ ಎಂಬ ಅಪಾಯಕಾರಿ ರಾಸಾಯನಿಕ ವಸ್ತು ಇರುವುದು ಕಂಡು ಬಂದಿದೆ. ಇದು ರಕ್ತದ ಕ್ಯಾನ್ಸರ್ ನ್ನು ಉಂಟು ಮಾಡುವ ಅಪಾಯ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.


  ಇದನ್ನು ವೈದ್ಯಕೀಯ ಭಾಷೆಯಲ್ಲಿ ಲ್ಯುಕೇಮಿಯಾ ಎಂದು ಕರೆಯಲಾಗುತ್ತದೆ. ಹೀಗಾಗಿ ಅಕ್ಟೋಬರ್ 2021 ರ ಮೊದಲು ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಯೂನಿಲಿವರ್ ಹಿಂದಕ್ಕೆ ಪಡೆದಿದೆ. ಈ ರೀತಿಯ ಶಾಂಪೂಗಳಲ್ಲಿ ಯಾವ ರಾಸಾಯನಿಕ ಬಳಸಲಾಗಿದೆ? ಅದು ನಿಮ್ಮ ದೇಹದಲ್ಲಿ ಕ್ಯಾನ್ಸರ್ ಅನ್ನು ಹೇಗೆ ಉಂಟು ಮಾಡುತ್ತದೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.


  ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


  ಈ ರೀತಿಯ ಶಾಂಪೂಗಳಲ್ಲಿ ಕಂಡು ಬರುವ ರಾಸಾಯನಿಕ ಕೆಲವು ಆಹಾರ ಪದಾರ್ಥಗಳಲ್ಲಿಯೂ ಇದು  ಕಂಡು ಬರುತ್ತದೆ. ಅಂದರೆ ಅವುಗಳ ಸೇವನೆ ನಿಮಗೆ ರಕ್ತದ ಕ್ಯಾನ್ಸರ್ ಉಂಟು ಮಾಡುವ ಹೆಚ್ಚಿನ ಅಪಾಯ ಇದೆ ಎಂದು ವರದಿ ಒಂದು ಹೇಳಿದೆ.


  ರಕ್ತದ ಕ್ಯಾನ್ಸರ್ ಅಪಾಯ


  ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ವರದಿ ಪ್ರಕಾರ, ವಯಸ್ಕರರಲ್ಲಿ ತೀವ್ರತರ ಮೈಲೋಯ್ಡ್ ಲ್ಯುಕೇಮಿಯಾ ಸೇರಿದಂತೆ ತೀವ್ರತರ ನಾನ್ ಲಿಂಫೋಸೈಟಿಕ್ ಲ್ಯುಕೇಮಿಯಾ (AML) ಉಂಟು ಮಾಡುವ ಬೆಂಜೀನ್ ಅಂತಹ ಒಂದು ರಾಸಾಯನಿಕ ಆಗಿದೆ.


  ಬೆಂಜೀನ್ ರಾಸಾಯನಿಕ ಕ್ಯಾನ್ಸರ್‌ ಗೆ ಮೂಲ ಕಾರಣವಾಗಿದೆ


  ಕೂದಲನ್ನು ಒದ್ದೆ ಮಾಡದೆಯೇ ಒಣ ಶಾಂಪೂವನ್ನು ಪೌಡರ್ ಸ್ಪ್ರೇ ಆಗಿ ಬಳಕೆ ಮಾಡಲಾಗುತ್ತದೆ. ಬೆಂಜೀನ್‌ ಗೆ ಅತಿಯಾಗಿ ಒಡ್ಡಿಕೊಳ್ಳುವುದು ಲ್ಯುಕೇಮಿಯಾ ಮತ್ತು ಇತರೆ ರಕ್ತ ಕ್ಯಾನ್ಸರ್‌ ಗೆ ಇದು ಕಾರಣ ಆಗುತ್ತದೆ ಎಂದು ಹೇಳಲಾಗಿದೆ.


  ಬೆಂಜೀನ್ ರಸಾಯನಿಕ ರಕ್ತದ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಎಷ್ಟಿದೆ?


  ಡ್ರಗ್‌ ವಾಚ್‌ ವರದಿ ಪ್ರಕಾರ, ಬೆಂಜೀನ್‌ ರಸಾಯನಿಕ ವಸ್ತುವಿಗೆ ಒಡ್ಡಿಕೊಳ್ಳುವುದು ಕೆಲವು ಕ್ಯಾನ್ಸರ್‌ ಗಳ ಅಪಾಯ 40 ಪ್ರತಿಶತ ಹೆಚ್ಚಿಸಬಹುದು ಎಂದು ಅಧ್ಯಯನ ಹೇಳುತ್ತವೆ. ಇದಕ್ಕೆ ಕಡಿಮೆ ಮಾನ್ಯತೆ ನೀಡುವುದು ಲ್ಯುಕೇಮಿಯಾ ಅಪಾಯ ಹೆಚ್ಚಿಸುತ್ತದೆ ಎಂದು ಸಂಶೋಧನೆ ಒಂದು ಹೇಳಿದೆ ಎಂದು ET ವರದಿ ತಿಳಿಸಿದೆ.


  ಬೆಂಜೀನ್ ರಸಾಯನಿಕ ವಸ್ತು ಯಾವ ರೀತಿಯ ಕ್ಯಾನ್ಸರ್ ಗೆ ಕಾರಣವಾಗುತ್ತದೆ?


  ಕ್ಯಾನ್ಸರ್.ಆರ್ಗ್ ವರದಿ ಹೇಳುವ ಪ್ರಕಾರ, ಬೆಂಜೀನ್ ಎಂಬ ರಾಸಾಯನಿಕ ವಸ್ತು ಜನರಿಗೆ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ ಎಂದು ಹೇಳಲಾಗಿದೆ. ಇದು ತೀವ್ರ ಮೈಲೋಯ್ಡ್ ಲ್ಯುಕೇಮಿಯಾಗೆ ಕಾರಣ ಆಗುತ್ತದೆ.


  ಬೆಂಜೀನ್‌ ರಸಾಯನಿಕ ವಸ್ತುವಿಗೆ ಒಡ್ಡಿಕೊಳ್ಳುವುದು ತೀವ್ರತರ ಲಿಂಫೋಸೈಟಿಕ್ ಲ್ಯುಕೇಮಿಯಾ, ದೀರ್ಘ ಕಾಲದ ಲಿಂಫೋಸೈಟಿಕ್ ಲ್ಯುಕೇಮಿಯಾ, ಮಲ್ಟಿಪಲ್ ಮೈಲೋಮಾ ಮತ್ತು ಹಾಡ್ಗ್‌ ಕಿನ್ ಅಲ್ಲದ ಲಿಂಫೋಮಾ ಕ್ಯಾನ್ಸರ್‌ ಅಪಾಯ ಹೆಚ್ಚು ಮಾಡುತ್ತದೆ.


  ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


  ಬೆಂಜೀನ್ ರಸಾಯನಿಕ ಈ ಆಹಾರ ಪದಾರ್ಥಗಳಲ್ಲಿ ಕಂಡು ಬರುತ್ತದೆ


  IJFS ವರದಿ ಹೇಳುವ ಪ್ರಕಾರ, ಈ ಅಂಶವು ಆರ್ಗನ್ ಮಾಂಸ, ಕೋಳಿ, ಮೀನು, ಕಡಲೆಕಾಯಿ, ಆಲೂಗಡ್ಡೆ, ಸಸ್ಯಜನ್ಯ ಎಣ್ಣೆ, ಹಣ್ಣು, ಚೀಸ್, ಮೊಟ್ಟೆ ಮತ್ತು ಆಲಿವ್ ಸೇರಿದಂತೆ ಕೆಲವು ಸಂಸ್ಕರಿಸಿದ ಆಹಾರಗಳಲ್ಲಿ ಕಂಡು ಬರುತ್ತದೆ. ಹಾಗಾಗಿ ತಜ್ಞರು ಅಂತಹ ಆಹಾರಗಳ ಅತಿಯಾದ ಸೇವನೆ ತಪ್ಪಿಸಲು ಶಿಫಾರಸು ಮಾಡಲಾಗಿದೆ.

  Published by:renukadariyannavar
  First published: