• Home
  • »
  • News
  • »
  • lifestyle
  • »
  • Weight Loss: ತೂಕ ನಷ್ಟದ ಪ್ರಯತ್ನದಲ್ಲಿರುವವರು ರಾತ್ರಿ ಊಟ ಬೇಡವೆಂದರೆ ಸಂಜೆ ಈ ತಿಂಡಿ ಸೇವಿಸಿ!

Weight Loss: ತೂಕ ನಷ್ಟದ ಪ್ರಯತ್ನದಲ್ಲಿರುವವರು ರಾತ್ರಿ ಊಟ ಬೇಡವೆಂದರೆ ಸಂಜೆ ಈ ತಿಂಡಿ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ಇಳಿಸುವವರು ಮತ್ತು ರಾತ್ರಿ ಊಟ ಮಾಡಲು ಬಯಸದೇ ಇರುವವರು ಸಾಯಂಕಾಲ ಕೆಲವು ಪದಾರ್ಥಗಳ ಸೇವನೆ ಮಾಡಬಹುದು. ನಾರಿನಂಶವಿರುವ ತಿಂಡಿಗಳನ್ನು ಸಂಜೆ ವೇಳೆ ಸೇವನೆ ಮಾಡಬೇಕು. ಮುಖ್ಯವಾಗಿ ನಾರಿನಂಶವಿರುವ ತಿಂಡಿಗಳ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬುತ್ತದೆ. ಜೊತೆಗೆ ನಿಮಗೆ ಮತ್ತೆ ಮತ್ತೆ ಹಸಿವು ಆಗಲ್ಲ.

ಮುಂದೆ ಓದಿ ...
  • Share this:

    ರಾತ್ರಿ ಊಟ (Night Food) ಮಾಡಿದರೆ ತೂಕ ಹೆಚ್ಚುತ್ತದೆ (Weight Gain) ಎಂಬ ಭಯ ಇರುವವರು ಹೆಚ್ಚಾಗಿ ರಾತ್ರಿ ಊಟ ಮಾಡಲ್ಲ. ತೂಕ ನಷ್ಟಕ್ಕೆ (Weight Loss) ಪ್ರಯತ್ನಿಸುತ್ತಿರುವವರು ಹಾಗೂ ವೇಟ್ ಮ್ಯಾನೇಜ್ ಮೆಂಟ್ (Weight Management) ಮಾಡುವವರು ಹೀಗೆ ಹೆಚ್ಚಾಗಿ ರಾತ್ರಿ ಊಟ ಮಾಡಲ್ಲ. ಆದರೆ ತೂಕ ಹೆಚ್ಚುತ್ತದೆ ಎಂಬ ಭಯ ಇರುವವರು, ರಾತ್ರಿ ಊಟ ಮಾಡಲು ಬಯಸದೇ ಇರುವವರು ಸಾಯಂಕಾಲ ಕೆಲವು ಪದಾರ್ಥಗಳ ಸೇವನೆ ಮಾಡಬಹುದು. ನಾರಿನಂಶವಿರುವ ತಿಂಡಿಗಳನ್ನು ಸಂಜೆ ವೇಳೆ ಸೇವನೆ ಮಾಡಬೇಕು. ಮುಖ್ಯವಾಗಿ ನಾರಿನಂಶವಿರುವ ತಿಂಡಿಗಳ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬುತ್ತದೆ. ಜೊತೆಗೆ ನಿಮಗೆ ಮತ್ತೆ ಮತ್ತೆ ಹಸಿವು ಆಗಲ್ಲ.


    ಅಲ್ಲದೆ ಈ ತಿಂಡಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಸಹ ಆರೋಗ್ಯವಾಗಿ ಇರುತ್ತದೆ. ಮತ್ತು ನಿಮಗೆ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಸಹ ಇರುವುದಿಲ್ಲ.


    ಫೈಬರ್ ಪದಾರ್ಥ ಎಂದರೇನು?


    ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ನಲ್ಲಿ ಪ್ರಕಟವಾದ ಮೆಡ್‌ಲೈನ್ ಪ್ಲಸ್‌ನ ಸಂಶೋಧನೆ ಹೇಳಿರುವ ಪ್ರಕಾರ, ಫೈಬರ್ ಆಹಾರಗಳಲ್ಲಿ ಕಂಡು ಬರುವ ಅಜೀರ್ಣ ಕಾರ್ಬೋಹೈಡ್ರೇಟ್ ಆಗಿದೆ. ಕರಗುವಿಕೆಯ ಆಧಾರದ ಮೇಲೆ ಇದನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಫೈಬರ್ ಭರಿತ ಆಹಾರಗಳಲ್ಲಿ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು ಸೇರಿವೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ದೇಹದಲ್ಲಿ ಫೈಬರ್ ಯಾವ ರೀತಿಯ ಪಾತ್ರ ನಿಭಾಯಿಸುತ್ತದೆ?


    ಮೆಡ್ಲೈನ್ ​​ಪ್ಲಸ್ ಪ್ರಕಾರ, ಫೈಬರ್ ಕರುಳಿನಲ್ಲಿ ಆಹಾರವನ್ನು ಒಟ್ಟಿಗೆ ಹಿಡಿದಿಡಲು ಸಹಾಯ ಮಾಡುತ್ತದೆ. ಫೈಬರ್ ಭರಿತ ಆಹಾರ ಸೇವನೆ ಮಾಡಿದಾಗ ಹಸಿವು ಕಡಿಮೆಯಾಗುತ್ತದೆ. ಹಾಗಾಗಿ ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಶಕ್ತಿ ಬಲಪಡಿಸುತ್ತದೆ.


    ಹಾಗೂ  ಮಲಬದ್ಧತೆ ಸಮಸ್ಯೆ ತಡೆಯುತ್ತದೆ. ಕರುಳಿನಲ್ಲಿ ಉರಿಯೂತ ಅಥವಾ ಸೋಂಕು, ಮಧುಮೇಹ ಮತ್ತು ಹೃದ್ರೋಗದ ವಿರುದ್ಧ ರಕ್ಷಣೆ ಮಾಡಲು ಇದು ಪ್ರಯೋಜನಕಾರಿ ಆಗಿದೆ. ಹಾಗಾಗಿ ಫೈಬರ್ ಸಮೃದ್ಧ ಪದಾರ್ಥ ಸೇವನೆ ಮಾಡಿ, ತೂಕ ನಿಯಂತ್ರಿಸಬಹುದು.


    ಫೈಬರ್ ಸಮೃದ್ಧ ತಿಂಡಿಗಳು ಹೀಗಿವೆ


    ಓಟ್ಸ್ ಟಿಕ್ಕಿ


    ಓಟ್ಸ್ ಟಿಕ್ಕಿ ತೂಕ ಇಳಿಸುವ ಪ್ರಯತ್ನ ಮಾಡುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವದಲ್ಲಿ ಓಟ್ಸ್ ಟಿಕ್ಕಿ ಸೇವನೆ ಹೊಟ್ಟೆಯನ್ನು ತುಂಬಿಸುತ್ತದೆ. ಮತ್ತು ನಿಮ್ಮ ಚಯಾಪಚಯ ಸರಿಯಾಗಿ ಇಡುತ್ತದೆ. ಅಲ್ಲದೇ ಈ ಟಿಕ್ಕಿ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಸಂಜೆ ಓಟ್ಸ್ ಟಿಕ್ಕಿ ಸೇವಿಸಿ.


    ಕ್ವಿನೋವಾ ವೆಜ್ ಉಪ್ಮಾ/ ನುಚ್ಚಿನ ಉಪ್ಪಿಟ್ಟು


    ಕ್ವಿನೋವಾ, ನುಚ್ಚಿನ ಉಪ್ಪಿಟ್ಟು ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರ ಆಗಿದೆ. ಇದರ ಸೇವನೆ ರಾತ್ರಿ ಹಸಿವುಂಟು ಮಾಡಲ್ಲ. ಇದು ನಿಮ್ಮ ಹೊಟ್ಟೆಯ ಚಯಾಪಚಯ ದರ ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತರಕಾರಿ ಸಹ ಬಳಸಬಹುದು. ಇದು ಹೊಟ್ಟೆಗೆ ಅನೇಕ ರೀತಿ ಪ್ರಯೋಜನ ನೀಡುತ್ತದೆ. ಅನೇಕ ಜೀವಸತ್ವಗಳು ಇದರಿಂದ ಸಿಗುತ್ತವೆ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.


    ತರಕಾರಿಯಿಂದ ಸಮೃದ್ಧ ವೆಜ್ ಅಪ್ಪಮ್ ಅಂದ್ರೆ ಪಡ್ಡು


    ತರಕಾರಿಯಿಂದ ತಯಾರಿಸಿದ ವೆಜ್ ಅಪ್ಪಂ ಅಂದ್ರೆ ಪಡ್ಡು ಎಷ್ಟು ಟೇಸ್ಟಿಯೋ ಅಷ್ಟೇ ಸುಲಭವಾಗಿ ಜೀರ್ಣವಾಗುತ್ತದೆ. ತಿಂದ ನಂತರ ಹಸಿವಾಗಲ್ಲ. ನೀವು ರಾತ್ರಿಯಲ್ಲಿ ಹೆಚ್ಚು ಭಾರ ಆಹಾರ ಸೇವನೆ ಮಾಡಲ್ಲ. ಇದು ಹೊಟ್ಟೆ ತುಂಬಿಸುತ್ತದೆ.


    ಅವಲಕ್ಕಿ (ಚಿವ್ಡಾ) ಸ್ನ್ಯಾಕ್ಸ್


    ಅವಲಕ್ಕಿ (ಚಿವ್ಡಾ) ದಲ್ಲಿ ನಾರಿನಂಶ ಹೇರಳವಾಗಿದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಚಿವ್ಡಾ ಸುಲಭವಾಗಿ ಜೀರ್ಣವಾಗುತ್ತದೆ. ಚಯಾಪಚಯ ದರ ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಭಾವನೆ ನೀಡುತ್ತದೆ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಹಣ್ಣಿನ ರೆಸಿಪಿ


    ಹಣ್ಣಿನ ರೆಸಿಪಿ ನಿಮ್ಮ ಹೊಟ್ಟೆ ಮತ್ತು ದೇಹಕ್ಕೆ ಪ್ರಯೋಜನಕಾರಿ. ವಿಟಮಿನ್‌, ಫೈಬರ್ ಮತ್ತು ಅನೇಕ ಪೋಷಕಾಂಶಗಳು ನಿಮ್ಮ ಆರೋಗ್ಯ ಕಾಪಾಡುತ್ತವೆ. ಹಣ್ಣಿನ ಚಾರ್ಟ್‌ ಸೇವನೆ ಭಾರವಾದ ತಿಂಡಿ ಅಲ್ಲ. ಇದು ಹೊಟ್ಟೆ ಸಮಸ್ಯೆ ಕಡಿಮೆ ಮಾಡುತ್ತದೆ. ತಿಂದ ನಂತರ ಉತ್ತಮ ಅನುಭವ ನೀಡುತ್ತದೆ.

    Published by:renukadariyannavar
    First published: