Face Care: ನಿಮ್ಮ ಮುಖ ಚಂದ್ರನಂತೆ ಹೊಳೆಯಬೇಕೇ? ದುಬಾರಿ ವಸ್ತು ಬಿಟ್ಟಾಕಿ, ನೈಸರ್ಗಿಕ ಫೇಸ್ ವಾಶ್ ಬಳಸಿ!

ಮುಖ ಹೊಳೆಯುವಂತೆ ಮಾಡಲು ದುಬಾರಿ ವಸ್ತುಗಳನ್ನು ಬಳಕೆ ಮಾಡಿದ ಮೇಲೂ ಯಾವುದೇ ಬದಲಾವಣೆ ಅಥವಾ ಪ್ರಯೋಜನ ಸಿಗುವುದಿಲ್ಲ. ಈ ವಸ್ತುಗಳನ್ನು ದೀರ್ಘ ಕಾಲದವರೆಗೆ ಬಳಸುವುದರಿಂದ ಮುಖವು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಹಾಗಿದ್ರೆ ಇದಕ್ಕೆ ಪರಿಹಾರವೇನು? ಇಲ್ಲಿದೆ ಕೆಲವು ಟಿಪ್ಸ್...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ (Now a Days) ಜನರು (People) ಮುಖ (Face) ತೊಳೆಯೋಕೆ (Wash) ಮಾರುಕಟ್ಟೆಯಲ್ಲಿ (Market) ಸಿಗುವ ಹತ್ತು ಹಲವು ಸೋಪ್, ಫೇಸ್ ವಾಶ್ (Face Wash), ರಾಸಾಯನಿಕ ವಸ್ತುವಿನಿಂದ ತುಂಬಿಕೊಂಡ ಇಂತಹ ಸಾಮಾನುಗಳನ್ನು ತರಿಸಿ ಅನ್ವಯಿಸುತ್ತಾರೆ. ಉತ್ಪನ್ನಗಳ ಕಂಪನಿಯ ಬಣ್ಣ ಬಣ್ಣದ ಜಾಹೀರಾತು, ಅಂಶಗಳನ್ನು ನೋಡಿ ಮರಳಾಗುವ ಜನರು ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ, ತಮ್ಮ ಮುಖ ಹೊಳೆಯುವಂತೆ ಆದರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಅಷ್ಟು ದುಬಾರಿ ವಸ್ತುಗಳನ್ನು ಬಳಕೆ ಮಾಡಿದ ಮೇಲೂ ಯಾವುದೇ ಬದಲಾವಣೆ ಅಥವಾ ಪ್ರಯೋಜನ ಸಿಗುವುದಿಲ್ಲ. ಈ ವಸ್ತುಗಳನ್ನು ದೀರ್ಘ ಕಾಲದವರೆಗೆ ಬಳಸುವುದರಿಂದ ಮುಖವು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ.

    ನೈಸರ್ಗಿಕ ವಸ್ತುಗಳ ಫೇಸ್ ಪ್ಯಾಕ್ ಟ್ರೈ ಮಾಡಿ

    ಅಂತಹ ಸ್ಥಿತಿಯಲ್ಲಿ, ನೀವು ಈ ವಸ್ತುಗಳ ಅತಿಯಾದ ಬಳಕೆ ಮಾಡುವುದನ್ನು ಆದಷ್ಟು ತಪ್ಪಿಸುವುದು ಸೂಕ್ತ. ಯಾಕೆಂದರೆ ಕೆಮಿಕಲ್ ಭರಿತ ಆ ವಸ್ತುಗಳು ನಿಮ್ಮ ಮುಖ ಮತ್ತು ಚರ್ಮದ ಅಂದವನ್ನು ಹಾಳು ಮಾಡುತ್ತವೆ. ನೀವು ಹೊಳೆಯುವ ಮುಖಕ್ಕಾಗಿ ನಿಮ್ಮ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಬಹುದು.

    ನೈಸರ್ಗಿಕ ವಸ್ತುಗಳ ಫೇಸ್ ಪ್ಯಾಕ್ ಮಾಡಿ ಅನ್ವಯಿಸುವುದರಿಂದ ನಿಮ್ಮ ಮುಖ ಗ್ಲೋ ಆಗುವುದರ ಜೊತೆಗೆ ಮುಖದ ಕೊಳೆ, ಗುಳ್ಳೆ, ಮೊಡವೆ ಹೋಗುತ್ತದೆ. ನೈಸರ್ಗಿಕ ವಸ್ತುಗಳು ನಿಮ್ಮ ಮುಖದ ಚರ್ಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಮತ್ತು ಇವುಗಳ ಬಳಕೆಯಿಂದ ಮೈಬಣ್ಣವು ಸುಧಾರಿಸುತ್ತದೆ.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ

    ಮತ್ತು ನಿಮ್ಮ ಮುಖವು ಹೊಳೆಯಲು ಪ್ರಾರಂಭಿಸುತ್ತದೆ. ಹಾಗಿದ್ದರೆ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಲು ಯಾವ ನೈಸರ್ಗಿಕ ವಸ್ತುಗಳನ್ನು ಬಳಸಿ ನಿಮ್ಮ ಮುಖವನ್ನು ತೊಳೆಯಬಹುದು ಎಂಬುದನ್ನು ಇಲ್ಲಿ ನೋಡೋಣ.

    ಹಸಿ ಹಾಲು

    ನಿಮ್ಮ ಮುಖದಲ್ಲಿ ಕೊಳೆ ಇದ್ದರೆ ನೀವು ಹಸಿ ಹಾಲನ್ನು ಬಳಸಿ. ಇದರಿಂದ ತ್ವಚೆಯಲ್ಲಿ ಸಂಗ್ರಹವಾಗಿರುವ ಕೊಳೆ ನಿವಾರಣೆಯಾಗುತ್ತದೆ. ನೀವು ಮಾಡಬೇಕಾಗಿರುವುದು ಹಸಿ ಹಾಲನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ.

    ಒಣಗಿದ ನಂತರ, ಅದನ್ನು ಒಮ್ಮೆ ಅಥವಾ ಎರಡು ಬಾರಿ ಮತ್ತೆ ಅನ್ವಯಿಸಿ ನಂತರ ನೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ.

    ರೋಸ್ ವಾಟರ್

    ರಾತ್ರಿ ಮಲಗುವ ಮುನ್ನ ರೋಸ್ ವಾಟರ್ ಬಳಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚುವುದರಿಂದ ಕೊಳೆ ಸ್ವಚ್ಛವಾಗುತ್ತದೆ. ಇದರ ನಂತರ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖ ತೊಳೆಯಿರಿ. ಇದರೊಂದಿಗೆ ನಿಮಗೆ ಫೇಸ್ ವಾಶ್ ಅಥವಾ ಸೋಪ್ ಅಗತ್ಯವಿಲ್ಲ.

    ಸೌತೆಕಾಯಿ

    ನೀವು ಮುಖಕ್ಕೆ ಫೇಸ್ ವಾಶ್ ಅಥವಾ ಸೋಪ್ ಅನ್ನು ಬಳಸಲು ಬಯಸದಿದ್ದರೆ, ಸೌತೆಕಾಯಿ ರಸದಿಂದ ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ. ನೀವು ಸೌತೆಕಾಯಿ ತೆಗೆದುಕೊಳ್ಳಬೇಕು. ಅದನ್ನು ತುರಿ ಮಾಡಿ. ಈಗ ಇದರ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳಿ.

    ಬೇಕಿದ್ದರೆ ಸೌತೆಕಾಯಿ ರಸದಲ್ಲಿ ಮೊಸರನ್ನು ಕೂಡ ಬೆರೆಸಬಹುದು. ಇದನ್ನು ಹಚ್ಚಿದ ಸುಮಾರು 10 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.

    ಮೊಸರು ಮತ್ತು ಜೇನುತುಪ್ಪ

    ಮುಖವನ್ನು ಸ್ವಚ್ಛಗೊಳಿಸಲು ಮೊಸರು ಮತ್ತು ಜೇನುತುಪ್ಪ ಬಳಕೆ ಮಾಡಿ. ಇದರಿಂದ ಮುಖಕ್ಕೆ ಹೊಳಪು ಬರುತ್ತದೆ. 1 ಚಮಚ ಮೊಸರನ್ನು ತೆಗೆದುಕೊಂಡು, ಅದಕ್ಕೆ ಜೇನುತುಪ್ಪ ಬೆರೆಸಿ. ಪೇಸ್ಟ್‌ನಂತೆ ಮಾಡಿ. ಈಗ ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 5 ನಿಮಿಷಗಳ ನಂತರ ತೊಳೆಯಿರಿ.

    ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

    ಟೊಮೇಟೊ

    ಟೊಮೆಟೊದಿಂದ ಮುಖ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಒಂದು ಚಮಚ ಹಾಲು ಮತ್ತು ನಿಂಬೆ ರಸದೊಂದಿಗೆ ಟೊಮೆಟೊ ಬೆರೆಸಿ ಪೇಸ್ಟ್ ಮಾಡಿ. ಈಗ ಅದನ್ನು ಮುಖಕ್ಕೆ ಮೃದುವಾಗಿ ಉಜ್ಜಿ. ಮುಖವನ್ನು ತೊಳೆಯಿರಿ. ಇದರಿಂದ ಮುಖಕ್ಕೆ ಹೊಳಪು ಬರುತ್ತದೆ.
    Published by:renukadariyannavar
    First published: